ಜನಸ್ಪಂದನ ನ್ಯೂಸ್, ಬೆಳಗಾವಿ : ಬೆಳಗಾವಿ (Belagavi) ತಾಲೂಕಿನ ಹಿರೇಬಾಗೇವಾಡಿ ಬಳಿಯ ಬಡೇಕೊಳ್ಳ ಮಠದ ಘಾಟ್‌ನಲ್ಲಿ ಇಂದು ಮುಂಜಾನೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ.
ಬೆಳಗಾವಿ (Belagavi) ಸಮೀಪ ನಿಯಂತ್ರಣ ತಪ್ಪಿ ಪಲ್ಟಿಯಾದ ಬಸ್ :
ಹುಬ್ಬಳ್ಳಿಯಿಂದ ಪುಣೆಯ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ, ಮಹಿಳೆ ಸೇರಿದಂತೆ ಇಬ್ಬರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ ಒಂಬತ್ತು ಮಂದಿ ಗಾಯಗೊಂಡಿದ್ದಾರೆ.
Health : ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಜಾಸ್ತಿ ನೀರು ಕುಡಿದರೆ ಏನಾಗುತ್ತದೆ.?
ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಈ ಘಟನೆ ನಡೆದಿದೆ. ‘ಗೋಗಟೆ’ ಸಂಸ್ಥೆಗೆ ಸೇರಿದ ಬಸ್ ಬೆಳಗಾವಿ (Belagavi) ತಾಲೂಕಿನ ಹಿರೇಬಾಗೇವಾಡಿ ಬಳಿಯ ಬಡೇಕೊಳ್ಳ ಮಠದ ಘಾಟ್‌ನಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾದುದಾಗಿ ತಿಳಿದುಬಂದಿದೆ.
ಅಪಘಾತ ಸಂಭವಿಸಿದ ಸಂದರ್ಭದಲ್ಲಿ ವಾಹನದಲ್ಲಿ ಒಟ್ಟು 12 ಮಂದಿ ಪ್ರಯಾಣಿಕರು ಇದ್ದರು. ಅಪಘಾತದ ನಂತರಹಿರೇಬಾಗೇವಾಡಿ (Belagavi) ಪೊಲೀಸ್ ಠಾಣಾ ಸಿಬ್ಬಂದಿ ಹಾಗೂ ಸ್ಥಳೀಯರು ತಕ್ಷಣವೇ ರಕ್ಷಣಾ ಕಾರ್ಯಾಚರಣೆಗೆ ಧಾವಿಸಿದರು.
harassing : ಯುವತಿಯರನ್ನು ಅಸಭ್ಯವಾಗಿ ಸ್ಪರ್ಶಿಸಲು ಯತ್ನಿಸಿದ 2 ಜನ ಯುವಕರು ; ಮುಂದೆನಾಯ್ತು.?
ಬಸ್‌ನಲ್ಲಿ ಸಿಲುಕಿದ್ದವರನ್ನು ಸುರಕ್ಷಿತವಾಗಿ ಹೊರತೆಗೆದು, ಗಾಯಾಳುಗಳನ್ನು ತಕ್ಷಣವೇ ಬೆಳಗಾವಿ (Belagavi) ಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ದುರಂತದಿಂದ ಕೆಲಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಬಳಿಕ ಪೊಲೀಸರು ಸಂಚಾರವನ್ನು ಸರಾಗಗೊಳಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಚಾಲಕನ ಅಜಾಗರೂಕ ಚಾಲನೆಯೇ ಅಪಘಾತಕ್ಕೆ ಕಾರಣವೆಂದು ತಿಳಿದುಬಂದಿದೆ.
ಈ ಘಟನೆ ಹಿನ್ನೆಲೆಯಲ್ಲಿ ಹೆದ್ದಾರಿ ಸುರಕ್ಷತಾ ಕ್ರಮಗಳ ಕುರಿತು ಮತ್ತೆ ಚರ್ಚೆ ಶುರುವಾಗಿದೆ.
Liver : ಹಾಳಾದ ಲಿವರ್ ಗುಣಪಡಿಸಲು ನಿತ್ಯ 1 ಗ್ಲಾಸ್ ಈ ಪಾನೀಯ ಕುಡಿಯಿರಿ.!
ಜನಸ್ಪಂದನ ನ್ಯೂಸ್, ಆರೋಗ್ಯ : ಯಕೃತ್ತು (Liver) ದೇಹದ ಪ್ರಮುಖ ಅಂಗ. ದೇಹದಿಂದ ವಿಷಗಳನ್ನು ಹೊರಹಾಕಿ ಆರೋಗ್ಯವನ್ನು ಕಾಪಾಡುತ್ತದೆ. ಆದರೆ ಕೆಲವೊಮ್ಮೆ ಲಿವರ್ (Liver) ನಲ್ಲೂ ಕೊಳೆ ಮತ್ತು ವಿಷದ ಅಂಶಗಳು ಜಮಾಗುತ್ತವೆ. ಇದನ್ನು ಶುದ್ಧೀಕರಿಸಲು ಸರಳವಾದ ಮನೆಮದ್ದು ಶುಂಠಿ-ಪುದೀನಾ ನೀರು ಉತ್ತಮ ಆಯ್ಕೆ.
ಶುಂಠಿಯ ಲಾಭಗಳು :
- ಶುಂಠಿಯಲ್ಲಿ ಜಿಂಜರಾಲ್ ಮತ್ತು ಶೋಗೋಲ್ ಎಂಬ ಜೈವಿಕ ಅಂಶಗಳಿವೆ.
- ಲಿವರ್ (Liver) ನಲ್ಲಿ ಉರಿಯೂತ ಕಡಿಮೆ ಮಾಡಲು ಮತ್ತು ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ.
- ಜೀರ್ಣಕ್ರಿಯೆಯನ್ನು ಸುಧಾರಿಸಿ ದೇಹವನ್ನು ಡಿಟಾಕ್ಸ್ ಮಾಡುತ್ತದೆ.
RRB : ಭಾರತೀಯ ರೈಲ್ವೆ ಇಲಾಖೆಯಲ್ಲಿ ಸ್ಟೇಷನ್ ಮಾಸ್ಟರ್ ಸೇರಿ 30,307 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಪುದೀನದ ಲಾಭಗಳು :
- ಪುದೀನಾದಲ್ಲಿ ಇರುವ ಮೆಂಥಾಲ್ ಜೀರ್ಣಾಂಗ ವ್ಯವಸ್ಥೆಗೆ ಶಾಂತಿ ನೀಡುತ್ತದೆ.
- ಲಿವರ್ (Liver) ನಲ್ಲಿ ಪಿತ್ತರಸ ಉತ್ಪಾದನೆ ಹೆಚ್ಚಿಸಿ ಕೊಬ್ಬು ಕರಗಿಸಲು ನೆರವಾಗುತ್ತದೆ.
- ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವುದರಿಂದ ಲಿವರ್ ಕಾರ್ಯ ಸುಧಾರಿಸುತ್ತದೆ.
ಪ್ರತಿದಿನ ಕುಡಿಯುವುದರಿಂದ ಲಾಭ :
- ಲಿವರ್ (Liver) ಶುದ್ಧೀಕರಣ : ವಿಷ ಮತ್ತು ಕೊಳೆಯ ನಿವಾರಣೆ, ಕೊಬ್ಬಿನ ಲಿವರ್ ತಡೆಯಲು ಸಹಕಾರಿ.
- ಜೀರ್ಣಕ್ರಿಯೆ ಸುಧಾರಣೆ : ಅಜೀರ್ಣ, ಅನಿಲ, ಹೊಟ್ಟೆ ನೋವು ನಿವಾರಣೆ.
- ತೂಕ ನಿಯಂತ್ರಣ : ಚಯಾಪಚಯ ಕ್ರಿಯೆ ವೇಗಗೊಳಿಸಿ ತೂಕ ಇಳಿಸಲು ಸಹಾಯ.
- ರೋಗನಿರೋಧಕ ಶಕ್ತಿ ಹೆಚ್ಚಳ : ವಿಟಮಿನ್ ಮತ್ತು ಆಂಟಿಆಕ್ಸಿಡೆಂಟ್‌ಗಳಿಂದ ದೇಹ ಬಲಪಡುತ್ತದೆ.
- ಹೈಡ್ರೇಷನ್ : ದೇಹ ತಂಪಾಗಿ, ಬೇಸಿಗೆಯಲ್ಲಿ ತಾಜಾತನ ನೀಡುತ್ತದೆ.
harassing : ಯುವತಿಯರನ್ನು ಅಸಭ್ಯವಾಗಿ ಸ್ಪರ್ಶಿಸಲು ಯತ್ನಿಸಿದ 2 ಜನ ಯುವಕರು ; ಮುಂದೆನಾಯ್ತು.?
ಶುಂಠಿ-ಪುದೀನಾ ನೀರು ತಯಾರಿಸುವ ವಿಧಾನ :
ಬೇಕಾಗುವ ಸಾಮಗ್ರಿಗಳು :
- 1 ಇಂಚಿನ ಶುಂಠಿ ತುಂಡು.
- 10–15 ಪುದೀನ ಎಲೆಗಳು.
- 1 ಗ್ಲಾಸ್ ನೀರು.
- ½ ನಿಂಬೆ ರಸ.
- ಸ್ವಲ್ಪ ಕಪ್ಪು ಉಪ್ಪು.
ತಯಾರಿಸುವ ವಿಧಾನ :
- ಒಂದು ಪಾತ್ರೆಯಲ್ಲಿ ನೀರಿಗೆ ಶುಂಠಿ ತುಂಡು ಮತ್ತು ಪುದೀನ ಎಲೆ ಹಾಕಿ ಕುದಿಸಿ.
- ಅರ್ಧ ನೀರು ಉಳಿದಾಗ ಉರಿ ಆರಿಸಿ, ತಣ್ಣಗಾಗಲು ಬಿಡಿ.
- ಸೋಸಿ ಲೋಟಕ್ಕೆ ಸುರಿದು, ಬೇಕಿದ್ದರೆ ನಿಂಬೆ ರಸ ಮತ್ತು ಕಪ್ಪು ಉಪ್ಪು ಸೇರಿಸಿ.
- ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಉತ್ತಮ.
Murder :ವಿವಾಹಿತೆ ಮತ್ತು ಆಕೆಯ ಪ್ರೇಮಿಯನ್ನು ಕೊಂದು ಬಾವಿಗೆ ಎಸೆದ ಕುಟುಂಬ.!
👉 ಗಮನಿಸಿ : ಇದು ಮನೆಮದ್ದು ಮತ್ತು ಸಾಮಾನ್ಯ ಮಾಹಿತಿ ಆಧಾರಿತವಾಗಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ಪಡೆಯುವುದು ಮುಖ್ಯ.