Thursday, September 19, 2024
spot_img
spot_img
spot_img
spot_img
spot_img
spot_img
spot_img

ಮಗುವಿನ ಮೇಲೆ ಬೀದಿ ನಾಯಿಯಿಂದ ದಾಳಿ : ಹಿರೋನಂತೆ ಎಂಟ್ರಿ ಕೊಟ್ಟು ರಕ್ಷಿಸಿದ ಸಾಕು ನಾಯಿ, ವಿಡಿಯೋ Viral.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಪ್ರಾಣಿಗಳಲ್ಲಿ ನಾಯಿಯೂ ನಿಯತ್ತಿಗೆ ಹೆಸರಾದ ಪ್ರಾಣಿಯಾಗಿದೆ. ಈ ಕಾಲದಲ್ಲಿ ನಾಯಿಗಿರುವ ನಿಯತ್ತು ಮನುಷ್ಯನಿಗೂ ಕೂಡ ಇಲ್ಲ. ನಾಯಿ ಅನ್ನ ಹಾಕಿ ಸಾಕಿದ ಮಾಲೀಕನ ಮನೆ ಕಾಯುವುದರ ಜೊತೆಗೆ ಮಾಲೀಕ ಹಾಗೂ ಅವರ ಕುಟುಂಬದ ರಕ್ಷಣೆ ಮಾಡುತ್ತವೆ.

ಇದೀಗ ನಾಯಿ ನಿಯತ್ತಿಗೆ ಉತ್ತಮ ಉದಾಹರಣೆ ಎಂಬಂತೆ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದನ್ನು ಓದಿ : ವರ್ಷಕ್ಕೊಬ್ಬ ಗಂಡನಿಗೆ ಡಿವೋರ್ಸ್ ಕೊಡ್ತಾಳೆ ಈ lady ; ಇಲ್ಲಿಯವರೆಗೆ ಎಷ್ಟು ಡಿವೋರ್ಸ್ ಪಡೆದಿದ್ದಾಳೆ ಗೊತ್ತಾ.?

ಎಲ್ಲಿಂದಾನೋ ಬಂದ ಬೀದಿ ನಾಯಿಯೊಂದು ಬೀದಿಯಲ್ಲಿ ಆಡುತ್ತಿದ್ದ ಮಗುವಿನ ಮೇಲೆ ದಾಳಿ ನಡೆಸಿದೆ. ಈ ವೇಳೆ ಅಲ್ಲೇ ಮನೆಯ ಪಕ್ಕದಲ್ಲಿ ಮಲಗಿದ್ದ ಸಾಕು ನಾಯಿ ಬೀದಿ ನಾಯಿಯ ಮೇಲೆ ದಾಳಿ ಮಾಡಿ ಮಗುವನ್ನು ಕಾಪಾಡುವುದನ್ನು ವಿಡಿಯೋದಲ್ಲಿ ನೋಡಬಹುದು.

ಹೃದಯವನ್ನೇ ನಡುಗಿಸುವಂತಹ ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಇದನ್ನು ಓದಿ : ಮದುವೆಯೇ ಆಗಿಲ್ಲ ಎಂದ ಸಂಸದರು KAS ಅಧಿಕಾರಿ ಹಣೆಗೆ ಕುಂಕುಮ ಇಟ್ಟರು ; ಪೋಟೋ ವೈರಲ್.!

ವೈರಲ್ ವಿಡಿಯೋದಲ್ಲಿರುವ ದೃಶ್ಯ :
ಇಬ್ಬರು ಮಹಿಳೆಯರು ತಮ್ಮ ಮೂವರು ಮಕ್ಕಳ ಜೊತೆ ಮಾತನಾಡುತ್ತಾ ಬೀದಿಯ ಬದಿಯಲ್ಲಿ ಕುಳಿತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಅವರ ಪಕ್ಕದಲ್ಲಿ ಅವರ ಸಾಕು ನಾಯಿ ಕೂಡ ಕುಳಿತಿದೆ. ಆಗ ಅದರಲ್ಲಿ ಒಂದು ಮಗು ರಸ್ತೆಯ ಕಡೆ ಹೋಗಿದೆ.

ಆಗ ನಾಯಿಯೊಂದು ಬಂದು ಒಂದೇ ಸಮನೆ ಮಗುವಿನ ಮೇಲೆ ಎರಗಿ ದಾಳಿ ನಡೆಸಿ ಮಗುವನ್ನು ಕೆಳಗೆ ಬೀಳಿಸಿದೆ. ಆಗ ಅಲ್ಲಿದ್ದವರೆಲ್ಲಾ ಭಯಗೊಂಡು ಮಗುವನ್ನು ಕಾಪಾಡಲು ಓಡಿ ಬಂದಿದ್ದಾರೆ. ಅಲ್ಲಿ ಕುಳಿತಿದ್ದ ಸಾಕು ನಾಯಿ ಬೀದಿ ನಾಯಿಯ ಮೇಲೆ ಪ್ರತಿದಾಳಿ ನಡೆಸಿ ಮಗುವನ್ನು ರಕ್ಷಿಸಿದೆ.

ಇದನ್ನು ಓದಿ : ಪ್ರವಾಹ ಪರಿಸ್ಥಿತಿ ವೀಕ್ಷಿಸಲು ಅಧಿಕಾರಿಯ ಹೆಗಲೇರಿದ ಉಪ ಮೇಯರ್ ; ಪೋಟೋ Viral.!

ಈ ದೃಶ್ಯ ಅಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆ ನಡೆದ ಸ್ಥಳ ಮತ್ತು ಸಮಯದ ಬಗ್ಗೆ ಮಾಹಿತಿ ಇಲ್ಲ. ಆದರೆ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅನೇಕರು ಕಾಮೆಂಟ್ ಮಾಡಿದ್ದಾರೆ.

ಪುಟ್ಟ ಕಂದನನ್ನು ಬೀದಿ ನಾಯಿಯ ದಾಳಿಯಿಂದ ರಕ್ಷಿಸಿದ ಸಾಕು ನಾಯಿಗೆ ಜನರು ಚಪ್ಪಾಳೆ ಹಾಗೂ ಹಾರ್ಟ್ ಎಮೋಜಿಯೊಂದಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img