Monday, July 14, 2025

Janaspandhan News

HomeAstrologyAstrology : ಹೇಗಿದೆ ಗೊತ್ತಾ.? ಜುಲೈ 12 ರ ದ್ವಾದಶ ರಾಶಿಗಳ ಫಲಾಫಲ.!
spot_img
spot_img

Astrology : ಹೇಗಿದೆ ಗೊತ್ತಾ.? ಜುಲೈ 12 ರ ದ್ವಾದಶ ರಾಶಿಗಳ ಫಲಾಫಲ.!

- Advertisement -

ಜನಸ್ಪಂದನ ನ್ಯೂಸ್, ಜೋತಿಷ್ಯ (Astrology) : 2025 ಜುಲೈ 12 ರ ಶನಿವಾರ ದಿನವಾದ ಇಂದು, ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಎಚ್ಚರಿಕೆ.? ಇಂದಿನ ದ್ವಾದಶ ರಾಶಿಗಳ ಫಲಾಫಲ (Astrology) ಹೇಗಿದೆ ನೋಡಿ.

ದೈನಂದಿನ ದ್ವಾದಶ ರಾಶಿಗಳ ಫಲಾಫಲ (ಜಾತಕ) ದ ಮೂಲಕ ಭವಿಷ್ಯ (Astrology) ವನ್ನು ಊಹಿಸುವುದು ಪ್ರಾಚೀನ ಕಾಲದಿಂದಲೂ ಇಂದಿನವರೆಗೆ ಪ್ರಸ್ತುತವಾಗಿದೆ. ಗ್ರಹಗಳ ಸ್ಥಾನಗಳು, ನಕ್ಷತ್ರಗಳು, ತಿಥಿ ಮತ್ತು ಇತರ ಜ್ಯೋತಿಷ್ಯ (Astrology) ಅಂಶಗಳ ಆಧಾರದ ಮೇಲೆ ರಾಶಿಗಳ ಫಲಾಫಲ (ಜಾತಕ) ವು ವ್ಯಕ್ತಿಯ ಭವಿಷ್ಯ (Astrology) ವನ್ನು ಮುನ್ಸೂಚಿಸುತ್ತದೆ.

ಇದನ್ನು ಓದಿ : Savadatti-Belagavi ಯಲ್ಲಮ್ಮ ದೇಗುಲದಲ್ಲಿ ದಾಖಲೆ ಕಾಣಿಕೆ ಸಂಗ್ರಹ ; 3 ತಿಂಗಳಲ್ಲಿ ರೂ.3.81 ಕೋಟಿ.!
ಇಂದಿನ ದ್ವಾದಶ ರಾಶಿಗಳ ಫಲಾಫಲ (Astrology) ಹೇಗಿದೆ :

results of the twelve zodiac signs

*ಮೇಷ ರಾಶಿ*

ಕುಟುಂಬದೊಂದಿಗೆ ಸಂತೋಷದಿಂದ ಕಾಲ ಕಳೆಯುತ್ತೀರಿ. ಬಾಲ್ಯದ ಸ್ನೇಹಿತರೊಂದಿಗೆ ಸೇವಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೀರಿ. ಕೈಗೊಂಡ ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತವೆ. ವ್ಯಾಪಾರದಲ್ಲಿ ಆರ್ಥಿಕ ಪ್ರಗತಿ ಉಂಟಾಗುತ್ತದೆ. ವೃತ್ತಿ ಮತ್ತು ಉದ್ಯೋಗದಲ್ಲಿ ಅನುಕೂಲಕರ ವಾತಾವರಣ ಇರುತ್ತದೆ. ಬೆಲೆಬಾಳುವ ವಸ್ತುಗಳನ್ನು ಖರೀದಿಸುತ್ತೀರಿ.

*ವೃಷಭ ರಾಶಿ*

ಕುಟುಂಬ ಸದಸ್ಯರೊಂದಿಗೆ ಕಠಿಣವಾಗಿ ಮಾತನಾಡುವುದನ್ನು ತಪ್ಪಿಸುವುದು ಉತ್ತಮ. ಆರ್ಥಿಕ ವಿಚಾರಗಳು ನಿರಾಸೆ ಉಂಟುಮಾಡುತ್ತದೆ. ಪ್ರಾರಂಭಿಸಿದ ಕಾರ್ಯಗಳು ನಿಧಾನವಾಗಿ ಸಾಗುತ್ತವೆ. ದೂರ ಪ್ರಯಾಣವನ್ನು ಮುಂದೂಡುವ ಸಾಧ್ಯತೆ . ಸಣ್ಣ ಆರೋಗ್ಯ ತೊಂದರೆಗಳು ಉಂಟಾಗುತ್ತದೆ. ವ್ಯಾಪಾರ ನಿಧಾನಗತಿಯಲ್ಲಿ ಸಾಗುತ್ತದೆ. ಸಹೋದ್ಯೋಗಿಗಳೊಂದಿಗೆ ವಿವಾದ ಉಂಟಾಗುತ್ತದೆ.

*ಮಿಥುನ ರಾಶಿ*

ಆಧ್ಯಾತ್ಮಿಕ ಕಾರ್ಯಕ್ರಮಗಳತ್ತ ಗಮನ ಹರಿಸುತ್ತೀರಿ. ದೂರ ಪ್ರಯಾಣವನ್ನು ಮುಂದೂಡುವುದು ಉತ್ತಮ. ಕೈಗೊಂಡ ಕೆಲಸಗಳಲ್ಲಿ ವಿಘ್ನಗಳು ಎದುರಾಗುತ್ತವೆ. ಮನೆಯ ಹೊರೆಗೆ ಹೆಚ್ಚಿನ ಶ್ರಮ ಬೇಕಾಗುತ್ತದೆ. ವ್ಯಾಪಾರ ವ್ಯವಹಾರಗಳು ನಿಧಾನಗತಿಯಲ್ಲಿ ಸಾಗುತ್ತವೆ. ನಿರುದ್ಯೋಗಿಗಳ ಪ್ರಯತ್ನಗಳು ಫಲಿಸುವುದಿಲ್ಲ.

*ಕಟಕ ರಾಶಿ*

ಕೈಗೊಂಡ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳುತ್ತವೆ. ವೃತ್ತಿ ಮತ್ತು ವ್ಯಾಪಾರದಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸುತ್ತೀರಿ. ಪ್ರಮುಖ ವಿಚಾರಗಳಲ್ಲಿ ಆತ್ಮೀಯರ ಬಂಬಲ ಸಿಗುತ್ತದೆ. ನಿಮ್ಮ ಕೆಲಸದ ನೈಪುಣ್ಯತೆಯಿಂದ ಅಧಿಕಾರಿ ವರ್ಗದಿಂದ ಪ್ರಶಂಸೆ ಪಡೆಯುತ್ತೀರಿ. ಕುಟುಂಬದೊಂದಿಗೆ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ.

ಇದನ್ನು ಓದಿ : Vulture : ಜಿಂಕೆಯನ್ನೇ ಹೊತ್ತೊಯ್ದ ರಣಹದ್ದು ; ಅಚ್ಚರಿಯ ವಿಡಿಯೋ ವೈರಲ್.!
*ಸಿಂಹ ರಾಶಿ*

ಆರ್ಥಿಕ ಅವಶ್ಯಕತೆಗಾಗಿ ಹಣದ ಕೊರತೆ ಎದುರಾಗುತ್ತದೆ. ಹೊಸ ಸಾಲದ ಪ್ರಯತ್ನ ಮಾಡಬೇಕಾಗುತ್ತದೆ. ಆತ್ಮೀಯರೊಂದಿಗೆ ಮಾತಿನ ಭಿನ್ನಾಭಿಪ್ರಾಯಗಳಿರುತ್ತವೆ. ಕುಟುಂಬ ಸದಸ್ಯರ ಆರೋಗ್ಯ ಸಮಸ್ಯೆಗಳು ಹೆಚ್ಚು ಕಿರಿಕಿರಿ ಉಂಟುಮಾಡುತ್ತವೆ. ವ್ಯಾಪಾರಗಳು ನಿಧಾನವಾಗಿ ಸಾಗುತ್ತದೆ. ಉದ್ಯೋಗದಲ್ಲಿ ಹೆಚ್ಚುವರಿ ಜವಾಬ್ದಾರಿಗಳಿಂದ ವಿಶ್ರಾಂತಿಗೆ ಅವಕಾಶ ಇರುವುದಿಲ್ಲ.

*ಕನ್ಯಾ ರಾಶಿ*

ಕೈಗೊಂಡ ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತವೆ. ಸಮಾಜದಲ್ಲಿ ಪ್ರಮುಖರೊಂದಿಗೆ ಪರಿಚಯ ಹೆಚ್ಚಾಗುತ್ತದೆ. ಭೂ ಸಂಬಂಧಿತ ವ್ಯವಹಾರಗಳಲ್ಲಿ ಲಾಭ ದೊರೆಯುತ್ತದೆ. ವೃತ್ತಿ ಮತ್ತು ವ್ಯಾಪಾರದಲ್ಲಿ ಅನುಕೂಲಕರ ವಾತಾವರಣ ಇರುತ್ತದೆ. ಕುಟುಂಬದವರು ಆಕಸ್ಮಿಕವಾಗಿ ಹಣ ಸಹಾಯ ಮಾಡುತ್ತೀರಿ. ನಿರುದ್ಯೋಗಿಗಳಿಗೆ ಹೊಸ ಅವಕಾಶಗಳು ಲಭಿಸುತ್ತವೆ.

*ತುಲಾ ರಾಶಿ*

ದೀರ್ಘಕಾಲದ ಒತ್ತಡ ಹೆಚ್ಚಾಗುತ್ತದೆ. ಪ್ರಯಾಣದಲ್ಲಿ ವಾಹನ ಅಪಘಾತದ ಸೂಚನೆಗಳಿವೆ. ವ್ಯಾಪಾರ ವ್ಯವಹಾರಗಳಲ್ಲಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ಮನೆಯ ಹೊರಗೆ ಕೆಲವರ ವರ್ತನೆ ಆಶ್ಚರ್ಯ ಉಂಟುಮಾಡುತ್ತದೆ. ಉದ್ಯೋಗದಲ್ಲಿ ಪ್ರಯತ್ನಗಳು ಫಲ ನೀಡುವುದಿಲ್ಲ. ಬಾಲ್ಯದ ಸ್ನೇಹಿತರೊಂದಿಗೆ ಪವಿತ್ರ ಸ್ಥಳಗಳ ಭೇಟಿ ಮಾಡುತ್ತೀರಿ.

*ವೃಶ್ಚಿಕ ರಾಶಿ*

ಮನೆಯಲ್ಲಿಗೆ ಬಾಲ್ಯದ ಸ್ನೇಹಿತರ ಭೇಟಿ ಸಂತೋಷ ಉಂಟಾಗುತ್ತದೆ. ಸಹೋದರರೊಂದಿಗೆ ವಿವಾದ ಪರಿಹಾರದತ್ತ ಸಾಗುತ್ತದೆ. ಸಮಾಜದಲ್ಲಿ ಹಿರಿಯರ ಪರಿಚಯ ಹೆಚ್ಚಾಗುತ್ತದೆ. ವೃತ್ತಿ ಹಾಗೂ ವ್ಯಾಪಾರದಲ್ಲಿ ಪ್ರಮುಖ ಮಾಹಿತಿಯನ್ನು ಪಡೆಯುತ್ತೀರಿ. ಉದ್ಯೋಗದಲ್ಲಿ ಉತ್ತಮ ಪರಿಸ್ಥಿತಿಗಳಿರುತ್ತವೆ. ಹೊಸ ವಾಹನ ಖರೀದಿಯ ಯೋಗವಿದೆ.

ಇದನ್ನು ಓದಿ : ಜಲಪಾತದ ಬಂಡೆ ಮೇಲೆ Proposing ಮಾಡುತ್ತಿದ್ದ ಯುವಕ ; ಮುಂದೆ.?
*ಧನುಸ್ಸು ರಾಶಿ*

ಪ್ರಯಾಣಗಳಲ್ಲಿ ಹೊಸ ವ್ಯಕ್ತಿಗಳ ಪರಿಚಯವಾಗುತ್ತದೆ. ಆತ್ಮೀಯರಿಂದ ಅಪರೂಪದ ಆಹ್ವಾನಗಳು ಸಿಗುತ್ತವೆ. ನಿರುದ್ಯೋಗಿಗಳ ಯತ್ನಗಳು ವೇಗಗೊಳ್ಳುತ್ತವೆ. ಕೈಗೊಂಡ ಕಾರ್ಯಗಳಲ್ಲಿ ಯಶಸ್ಸು ದೊರೆಯುತ್ತದೆ. ವೃತ್ತಿ ಮತ್ತು ವ್ಯಾಪಾರ ಲಾಭದ ದಾರಿಯಲ್ಲಿ ಸಾಗುತ್ತದೆ. ಉದ್ಯೋಗದಲ್ಲಿ ಹೆಚ್ಚುವರಿ ಹೊರೆಗಳಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ.

*ಮಕರ ರಾಶಿ*

ಜೀವನ ಸಂಗಾತಿಯೊಂದಿಗೆ ಪವಿತ್ರ ಸ್ಥಳಗಳಿಗೆ ಭೇಟಿ ನೀಡುತ್ತೀರಿ. ಅನಗತ್ಯ ಖರ್ಚು ಹೆಚ್ಚಾಗುತ್ತದೆ. ಮುಖ್ಯ ಕೆಲಸಗಳು ಮುಂದೂಡಲ್ಪಡುತ್ತವೆ. ಆರೋಗ್ಯದ ವಿಷಯದಲ್ಲಿ ಹೆಚ್ಚು ಎಚ್ಚರಿಕೆ ಅಗತ್ಯ. ವೃತ್ತಿ ಮತ್ತು ವ್ಯಾಪಾರದಲ್ಲಿ ತೊಂದರೆಗಳು ಎದುರಾಗುತ್ತವೆ. ನಿರುದ್ಯೋಗದ ಪ್ರಯತ್ನಗಳು ನಿರಾಸೆ ಉಂಟಾಗುತ್ತದೆ.

*ಕುಂಭ ರಾಶಿ*

ದೂರದ ಸಂಬಂಧಿಗಳೊಂದಿಗೆ ಸ್ವಲ್ಪ ಭಿನ್ನಾಭಿಪ್ರಾಯ ಉಂಟಾಗುತ್ತದೆ. ವ್ಯಾಪಾರದಲ್ಲಿ ಹೊಸ ಬಂಡವಾಳ ಹೂಡಿಕಗಳ ವಿಚಾರದಲ್ಲಿ ಪುಣ್ಯರಾಲೋಚನೆ ಮಾಡುವುದು ಉತ್ತಮ. ಕೈಗೊಂಡ ಕಾರ್ಯಗಳು ನಿಧಾನಗತಿಯಲ್ಲಿ ಸಾಗುತ್ತವೆ. ವೃತ್ತಿ ಹಾಗೂ ವ್ಯಾಪಾರದಲ್ಲಿ ಆಕಸ್ಮಿಕವಾಗಿ ನಿರ್ಧಾರ ಬದಲಾಗುತ್ತದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೆಚ್ಚು ಶ್ರಮವಹಿಸಬೇಕಾಗುತ್ತದೆ.

*ಮೀನ ರಾಶಿ*

ವೃತ್ತಿ ಮತ್ತು ಉದ್ಯೋಗದಲ್ಲಿ ಹೊಸ ಉತ್ಸಾಹ ದೊರೆಯುತ್ತದೆ. ಆರ್ಥಿಕ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ. ಆತ್ಮೀಯರೊಂದಿಗೆ ಸೌಹಾರ್ದದಿಂದ ವರ್ತಿಸುತ್ತೀರಿ. ಹೊಸ ವಸ್ತು ಹಾಗೂ ವಾಹನದ ಲಾಭದ ಯೋಗವಿದೆ. ಸಹೋದರರಿಂದ ಅಪರೂಪದ ಆಹ್ವಾನಗಳು ಸಿಗುತ್ತವೆ. ವ್ಯಾಪಾರ ಲಾಭದಾಯಕವಾಗಿರುತ್ತದೆ. ಉದ್ಯೋಗದಲ್ಲಿ ಪದೋನ್ನತಿಯ ಸಾಧ್ಯತೆ ಇದೆ.

Astrology

Disclaimer : ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು ಮತ್ತು ಮಾಹಿತಿಗಳನ್ನು ಆಧರಿಸಿ ಈ ಲೇಖನವನ್ನು ಬರೆಯಲಾಗಿದೆ. ಹೀಗಾಗಿ ಜನಸ್ಪಂದನ ನ್ಯೂಸ್‌ಗೂ, ಈ ಲೇಖನಕ್ಕೂ (Astrology) ಸಂಬಂಧವಿಲ್ಲ ಮತ್ತು ಇದಕ್ಕೆ ನಾವು ಜವಾಬ್ದಾರಿಯಲ್ಲ.

- Advertisement -
spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments