Friday, July 11, 2025

Janaspandhan News

HomeAstrologyAstrology : ಹೇಗಿದೆ ಗೊತ್ತಾ.? ಜುಲೈ 10 ರ ದ್ವಾದಶ ರಾಶಿಗಳ ಫಲಾಫಲ.!
spot_img
spot_img

Astrology : ಹೇಗಿದೆ ಗೊತ್ತಾ.? ಜುಲೈ 10 ರ ದ್ವಾದಶ ರಾಶಿಗಳ ಫಲಾಫಲ.!

- Advertisement -

ಜನಸ್ಪಂದನ ನ್ಯೂಸ್, ಜೋತಿಷ್ಯ (Astrology) : 2025 ಜುಲೈ 10 ರ ಗುರುವಾರ ದಿನವಾದ ಇಂದು, ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಎಚ್ಚರಿಕೆ.? ಇಂದಿನ ದ್ವಾದಶ ರಾಶಿಗಳ ಫಲಾಫಲ (Astrology) ಹೇಗಿದೆ ನೋಡಿ.

ದೈನಂದಿನ ದ್ವಾದಶ ರಾಶಿಗಳ ಫಲಾಫಲ (ಜಾತಕ) ದ ಮೂಲಕ ಭವಿಷ್ಯ (Astrology) ವನ್ನು ಊಹಿಸುವುದು ಪ್ರಾಚೀನ ಕಾಲದಿಂದಲೂ ಇಂದಿನವರೆಗೆ ಪ್ರಸ್ತುತವಾಗಿದೆ. ಗ್ರಹಗಳ ಸ್ಥಾನಗಳು, ನಕ್ಷತ್ರಗಳು, ತಿಥಿ ಮತ್ತು ಇತರ ಜ್ಯೋತಿಷ್ಯ (Astrology) ಅಂಶಗಳ ಆಧಾರದ ಮೇಲೆ ರಾಶಿಗಳ ಫಲಾಫಲ (ಜಾತಕ) ವು ವ್ಯಕ್ತಿಯ ಭವಿಷ್ಯ (Astrology) ವನ್ನು ಮುನ್ಸೂಚಿಸುತ್ತದೆ.

ಇದನ್ನು ಓದಿ :  ಜಲಪಾತದ ಬಂಡೆ ಮೇಲೆ Proposing ಮಾಡುತ್ತಿದ್ದ ಯುವಕ ; ಮುಂದೆ.?
ಇಂದಿನ ದ್ವಾದಶ ರಾಶಿಗಳ ಫಲಾಫಲ (Astrology) ಹೇಗಿದೆ :

results of the twelve zodiac signs

*ಮೇಷ ರಾಶಿ*

ಕೈಗೊಂಡ ಕೆಲಸಗಳು ಮಂದಗತಿಯಲ್ಲಿ ಸಾಗುತ್ತವೆ. ಮಕ್ಕಳ ವಿದ್ಯಾ ವಿಷಯಗಳು ನಿರಾಶೆ ಉಂಟುಮಾಡುತ್ತವೆ. ಆರೋಗ್ಯದ ವಿಷಯದಲ್ಲಿ ಎಚ್ಚರಿಕೆಯಿಂದ ವರ್ತಿಸಬೇಕು. ತಾಯಿ ವರ್ಗದ ಸಂಬಂಧಿಕರೊಂದಿಗೆ ಭಿನ್ನಾಭಿಪ್ರಾಯಗಳು ಉಂಟಾಗುತ್ತವೆ . ವಾಹನ ಪ್ರಯಾಣಗಳನ್ನು ಮುಂದೂಡುವುದು ಒಳ್ಳೆಯದು. ವೃತ್ತಿ ವ್ಯಾಪಾರಗಳು ನಿದಾನವಾಗಿ ಸಾಗುತ್ತವೆ.

*ವೃಷಭ ರಾಶಿ*

ನೂತನ ವಸ್ತ್ರಾಭರಣಗಳನ್ನು ಖರೀದಿಸುತ್ತೀರಿ. ಸಹೋದರರ ಸಹಾಯ ಸಹಕಾರಗಳು ದೊರೆಯುತ್ತವೆ. ಮನೆಯ ಹೊರಗೆ ಸಂತೋಷಕರ ವಾತಾವರಣ ಇರುತ್ತದೆ. ಉದ್ಯೋಗ ವಾತಾವರಣ ತೃಪ್ತಿಕರವಾಗಿರುತ್ತದೆ. ಎಲ್ಲಾ ಕಡೆಯಿಂದ ಆದಾಯ ಸಿಗುತ್ತದೆ. ವೃತ್ತಿ ವ್ಯಾಪಾರಗಳು ಅನುಕೂಲಕರವಾಗಿರುತ್ತವೆ. ವಾಹನ ಯೋಗವಿದೆ.

*ಮಿಥುನ ರಾಶಿ*

ವೃತ್ತಿ ವ್ಯಾಪಾರಗಳಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಆಗುವುದಿಲ್ಲ. ಇತರರೊಂದಿಗೆ ಆತುರದಲ್ಲಿ ಮಾತನಾಡುವುದು ಉತ್ತಮವಲ್ಲ. ಕೆಲವು ವಿಷಯಗಳಲ್ಲಿ ಮಾನಸಿಕ ಆಲೋಚನೆಗಳು ತೊಂದರೆಗೆ ಒಳಗಾಗಿಸುತ್ತವೆ. ಆದಾಯಕ್ಕೆ ಮೀರಿದ ಖರ್ಚುಗಳಿರುತ್ತವೆ . ಆಧ್ಯಾತ್ಮಿಕ,ಸೇವಾ ಕಾರ್ಯಕ್ರಮಗಳಲ್ಲಿ ವಿಶೇಷವಾಗಿ ಭಾಗವಹಿಸುತ್ತೀರಿ. ಹೊಸ ಋಣಯತ್ನವನ್ನು ಮಾಡದಿರುವುದು ಒಳ್ಳೆಯದು.

*ಕಟಕ ರಾಶಿ*

ಕುಟುಂಬ ವಿಷಯದಲ್ಲಿ ಪ್ರಮುಖ ಆಲೋಚನೆಗಳನ್ನು ಜಾರಿಗೊಳಿಸುತ್ತೀರಿ. ಆರ್ಥಿಕ ಪರಿಸ್ಥಿತಿ ನಿರೀಕ್ಷಿಸಿದ ರೀತಿಯಲ್ಲಿ ಇರುತ್ತದೆ. ಕೈಗೊಂಡ ಕೆಲಸಗಳಲ್ಲಿ ಪ್ರಯತ್ನ ಕಾರ್ಯಸಿದ್ಧಿ ಉಂಟಾಗುತ್ತದೆ. ವೃತ್ತಿ ವ್ಯಾಪಾರಗಳಲ್ಲಿ ಆತ್ಮ ವಿಶ್ವಾಸದಿಂದ ನಿರ್ಧಾರ ತೆಗೆದುಕೊಳ್ಳುತ್ತೀರಿ. ನಿರುದ್ಯೋಗಿಗಳಿಗೆ ಹೊಸ ಅವಕಾಶಗಳು ದೊರೆಯುತ್ತವೆ. ಉದ್ಯೋಗದಲ್ಲಿ ಹುದ್ದೆಗಳು ಹೆಚ್ಚಾಗುತ್ತವೆ.

ಇದನ್ನು ಓದಿ : Sugar : ಸಕ್ಕರೆ ಕಾಯಿಲೆ ವಾಸಿ ಮಾಡುವ ಏಕೈಕ ದೇಗುಲ ಎಲ್ಲಿದೆ ಗೊತ್ತಾ.?
*ಸಿಂಹ ರಾಶಿ*

ವೃತ್ತಿ ವ್ಯವಹಾರದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಮನ್ನಣೆ ದೊರೆಯುವುದಿಲ್ಲ. ಹಣಕಾಸಿನ ವ್ಯವಹಾರಗಳು ಸಾಮಾನ್ಯವಾಗಿ ಸಾಗುತ್ತವೆ. ಕೈಗೆತ್ತಿಕೊಂಡ ಕೆಲಸಗಳಲ್ಲಿ ವಿಳಂಬ ಉಂಟಾಗುತ್ತದೆ. ಉದ್ಯೋಗದಲ್ಲಿ ಅಧಿಕಾರಿಗಳೊಂದಿಗೆ ಜಾಗರೂಕರಾಗಿರಿ. ಕುಟುಂಬದ ಕೆಲವರ ವರ್ತನೆ ಅಚ್ಚರಿ ಮೂಡಿಸುತ್ತದೆ. ಆಧ್ಯಾತ್ಮಿಕ ವಿಷಯಗಳತ್ತ ಗಮನ ಹರಿಸುತ್ತೀರಿ.

*ಕನ್ಯಾ ರಾಶಿ*

ಕುಟುಂಬ ಸದಸ್ಯರ ಸಹಕಾರದಿಂದ ಕೆಲವು ಕೆಲಸಗಳು ಸಕಾಲದಲ್ಲಿ ಪೂರ್ಣಗೊಳ್ಳುತ್ತವೆ. ಆರ್ಥಿಕ ತೊಡಕುಗಳಿಂದ ಮುಕ್ತಿ ದೊರೆಯುತ್ತದೆ. ಹೊಸ ಉಪಕ್ರಮಗಳನ್ನು ಪ್ರಾರಂಭಿಸಿ ಯಶಸ್ವಿಯಾಗುತ್ತೀರಿ. ವೃತ್ತಿ ಮತ್ತು ಉದ್ಯೋಗಗಳಲ್ಲಿ ಹೆಚ್ಚುವರಿ ಜವಾಬ್ದಾರಿಗಳಿದ್ದರು ನಿಧಾನವಾಗಿ ಪೂರ್ಣಗೊಳಿಸುತ್ತೀರಿ. ವ್ಯಾಪಾರ ವಿಸ್ತರಣೆಯ ಪ್ರಯತ್ನಗಳು ಫಲ ನೀಡುತ್ತವೆ.

*ತುಲಾ ರಾಶಿ*

ಕುಟುಂಬ ಸದಸ್ಯರ ಸಹಕಾರದಿಂದ ಕೆಲವು ಕೆಲಸಗಳು ಸಕಾಲದಲ್ಲಿ ಪೂರ್ಣಗೊಳ್ಳುತ್ತವೆ. ಆರ್ಥಿಕ ತೊಡಕುಗಳಿಂದ ಮುಕ್ತಿ ದೊರೆಯುತ್ತದೆ. ಹೊಸ ಉಪಕ್ರಮಗಳನ್ನು ಪ್ರಾರಂಭಿಸಿ ಯಶಸ್ವಿಯಾಗುತ್ತೀರಿ. ವೃತ್ತಿ ಮತ್ತು ಉದ್ಯೋಗಗಳಲ್ಲಿ ಹೆಚ್ಚುವರಿ ಜವಾಬ್ದಾರಿಗಳಿದ್ದರು ನಿಧಾನವಾಗಿ ಪೂರ್ಣಗೊಳಿಸುತ್ತೀರಿ. ವ್ಯಾಪಾರ ವಿಸ್ತರಣೆಯ ಪ್ರಯತ್ನಗಳು ಫಲ ನೀಡುತ್ತವೆ.

*ವೃಶ್ಚಿಕ ರಾಶಿ*

ಮಕ್ಕಳ ವಿದ್ಯಾಭ್ಯಾಸದ ವಿಚಾರದಲ್ಲಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುತ್ತೀರಿ. ವಿಶೇಷವಾಗಿ ಕುಟುಂಬ ಸದಸ್ಯರೊಂದಿಗೆ ಆಧ್ಯಾತ್ಮಿಕ ಸೇವಾ ಕಾರ್ಯಗಳಲ್ಲಿ ಭಾಗವಹಿಸುತ್ತೀರಿ. ಸಮಾಜದಲ್ಲಿ ಖ್ಯಾತಿ ಹೆಚ್ಚಾಗುತ್ತದೆ. ವೃತ್ತಿಪರ ಉದ್ಯೋಗಗಳಲ್ಲಿ ಸೌಲಭ್ಯಗಳು ಹೆಚ್ಚಾಗುತ್ತವೆ. ವೃತ್ತಿಪರ ವ್ಯವಹಾರಗಳು ಅನುಕೂಲಕರವಾಗಿರುತ್ತವೆ. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ದೊರೆಯುತ್ತದೆ.

ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 09 ರ ದ್ವಾದಶ ರಾಶಿಗಳ ಫಲಾಫಲ.!
*ಧನುಸ್ಸು ರಾಶಿ*

ಶಾರೀರಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಇತರರ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಬದಲಾಯಿಸುವುದು ಒಳ್ಳೆಯದು. ಮನೆಯ ಹೊರಗೆ ಕಿರಿಕಿರಿ ಹೆಚ್ಚಾಗುತ್ತದೆ. ನಿಗದಿತ ಸಮಯಕ್ಕೆ ಸರಿಯಾಗಿ ಕೆಲಸಗಳು ಪೂರ್ಣಗೊಳ್ಳುವುದಿಲ್ಲ. ಬಂಧು ಮಿತ್ರರೊಂದಿಗೆ ವಿವಾದಗಳು ನಡೆಯುತ್ತವೆ. ವೃತ್ತಿಪರ ಉದ್ಯೋಗಗಳಲ್ಲಿ ನಿಮ್ಮ ಶ್ರಮ ವ್ಯರ್ಥವಾಗುತ್ತದೆ.

*ಮಕರ ರಾಶಿ*

ಹಣಕಾಸಿನ ಪ್ರಯತ್ನಗಳು ಅನುಕೂಲಕರವಾಗಿರುತ್ತವೆ. ಮನೆಗೆ ಬಂಧುಗಳ ಆಗಮನ ಸಂತಸ ತರುತ್ತದೆ. ನಿಯೋಜಿಸಲಾದ ಕರ್ತವ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತೀರಿ. ಹೊಸ ವಾಹನಗಳನ್ನು ಖರೀದಿಸಲಾಗುತ್ತದೆ. ದೂರ ಪ್ರಯಾಣದ ಸೂಚನೆಗಳಿವೆ. ವ್ಯಾಪಾರದಲ್ಲಿ ಹೊಸ ಲಾಭ ಪಡೆಯುತ್ತೀರಿ.

*ಕುಂಭ ರಾಶಿ*

ಕೈಗೊಂಡ ಕೆಲಸಗಳಲ್ಲಿ ವಿಳಂಬ ಉಂಟಾದರೂ ನಿಧಾನವಾಗಿ ಪೂರ್ಣಗೊಳಿಸುತ್ತೀರಿ. ಪ್ರಮುಖ ವಿಷಯಗಳಲ್ಲಿ ಕುಟುಂಬದ ಹಿರಿಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ. ಮನೆಯ ಹೊರಗೆ ನಿಮ್ಮ ಮಾತಿಗೆ ಮೌಲ್ಯ ಹೆಚ್ಚಾಗುತ್ತದೆ. ಮಕ್ಕಳಿಗೆ ಶೈಕ್ಷಣಿಕ ವಿಷಯಗಳಲ್ಲಿ ಶುಭ ಸುದ್ದಿ ದೊರೆಯುತ್ತದೆ. ಉದ್ಯೋಗದ ವಾತಾವರಣವು ಶಾಂತಿಯುತವಾಗಿರುತ್ತದೆ. ದೈವಿಕ ಚಿಂತನೆ ಹೆಚ್ಚಾಗುತ್ತದೆ.

*ಮೀನ ರಾಶಿ*

ಹಣಕಾಸಿನ ವಿಚಾರದಲ್ಲಿ ಇತರರಿಗೆ ಮಾತು ಕೊಡುವುದು ಒಳ್ಳೆಯದಲ್ಲ. ವೃತ್ತಿಪರ ವ್ಯಾಪಾರಗಳಲ್ಲಿ ಶ್ರಮ ಶೀಲತೆ ಹೆಚ್ಚಾಗುತ್ತದೆ. ದೀರ್ಘಕಾಲದ ಆರೋಗ್ಯ ಸಮಸ್ಯೆಗಳು ನೋವುಂಟು ಮಾಡುತ್ತದೆ. ಆರಂಭಿಸಿದ ಕೆಲಸಗಳು ನಿಧಾನವಾಗಿ ಪೂರ್ಣಗೊಳ್ಳು ತ್ತವೆ. ಸಹೋದ್ಯೋಗಿಗಳ ವರ್ತನೆಯಿಂದ ತಲೆನೋವು ಹೆಚ್ಚಾಗಬಹುದು. ವಾಹನ ಪ್ರಯಾಣವನ್ನು ಮುಂದೂಡುವುದು ಉತ್ತಮ.

ಮಹಿಳೆಯರಲ್ಲಿ ಹೆಚ್ಚುತ್ತಿರುವ heart attack ಪ್ರಕರಣಗಳು : ತಕ್ಷಣ ಗಮನ ಕೊಡುವ ಅಗತ್ಯ!

ಜನಸ್ಪಂದನ ನ್ಯೂಸ್‌, ಆರೋಗ್ಯ : ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಮಹಿಳೆಯರಲ್ಲಿ ಹೃದಯ (heart attack) ಸಂಬಂಧಿತ ಕಾಯಿಲೆಗಳ ಸಂಖ್ಯೆ ಆತಂಕಕಾರಿ ಮಟ್ಟದಲ್ಲಿ ಏರಿಕೆಯಾಗುತ್ತಿದೆ. ಅಮೇರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿಯ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಭಾರತೀಯ ಮಹಿಳೆಯರಲ್ಲಿ 3% ರಿಂದ 13% ರಷ್ಟು ಜನರು ತಮ್ಮ ವಯಸ್ಸಿಗೆ ಅನುಗುಣವಾಗಿ ಪರಿಧಮನಿಯ ಕಾಯಿಲೆಯಿಂದ ಬಳಲುತ್ತಿದ್ದಾರೆ.

heart attack

ಅದಕ್ಕಿಂತಲೂ ಭಯಾನಕ ಸಂಗತಿಯೆಂದರೆ, ಕಳೆದ ಎರಡು ದಶಕಗಳಲ್ಲಿ ಹೃದಯ (heart attack) ಸಂಬಂಧಿತ ಕಾಯಿಲೆಗಳ ಪ್ರಮಾಣ ಸುಮಾರು 300% ರಷ್ಟು ಏರಿಕೆಯಾಗಿದೆ. ಇದು ಆರೋಗ್ಯತಜ್ಞರ ಮತ್ತು ಮಹಿಳೆಯರ ದೈನಂದಿನ ಜೀವನದ ಮೇಲೆ ಭಾರೀ ಪರಿಣಾಮ ಬೀರುತ್ತಿದೆ.

ಹೃದಯಾಘಾತದ ಲಕ್ಷಣಗಳು ಪುರುಷರು ಅನುಭವಿಸುವ ಲಕ್ಷಣಗಳಿಗೆ ಹೋಲಿಸಿದರೆ ಮಹಿಳೆಯರಲ್ಲಿ ಸಂಪೂರ್ಣವಾಗಿ ವಿಭಿನ್ನವಾಗಿರುತ್ತವೆ. ಪುರುಷರು ಸಾಮಾನ್ಯವಾಗಿ ತೀವ್ರ ಎದೆ ನೋವಿಗೆ ತುತ್ತಾಗುವರೆ, ಮಹಿಳೆಯರು ಹೃದಯಾಘಾತ (heart attack) ದ ವೇಳೆ ಬೆನ್ನು ನೋವು, ದವಡೆ ನೋವು, ಹೊಟ್ಟೆಯಲ್ಲಿ ಅಸ್ವಸ್ಥತೆ, ಉಸಿರಾಟದ ತೊಂದರೆ, ತಲೆ ತಿರುಗುವುದು, ವಾಕರಿಕೆ ಮತ್ತು ಆಯಾಸ ಅನುಭವಿಸುತ್ತಾರೆ.

ಇದನ್ನು ಓದಿ : Fake SI : 2 ವರ್ಷಗಳಿಂದ ಅಸಲಿ ಪೊಲೀಸರನ್ನೇ ಯಾಮಾರಿಸಿದ್ದ ನಕಲಿ SI.!

ಬಹುತೇಕ ಮಹಿಳೆಯರು ಈ ಲಕ್ಷಣಗಳನ್ನು ಗಂಭೀರವಾಗಿ ಪರಿಗಣಿಸದೇ, ದೈನಂದಿನ ಒತ್ತಡ ಅಥವಾ ದೌರ್ಬಲ್ಯ ಎಂಬ ದೃಷ್ಠಿಯಿಂದ ನಿರ್ಲಕ್ಷಿಸುತ್ತಾರೆ. ಇದರ ಪರಿಣಾಮವಾಗಿ, ಅವರಿಗೆ ಸಮಯಕ್ಕೆ ಸರಿಯಾದ ಚಿಕಿತ್ಸೆ ಸಿಗದ ಸ್ಥಿತಿಯು ನಿರ್ಮಾಣವಾಗುತ್ತಿದೆ.

ಮಹಿಳೆಯರಿಗೆ ಋತುಬಂಧ ತಲುಪಿದ ನಂತರ ದೇಹದ ಹಾರ್ಮೋನು ಸಮತೋಲನದಲ್ಲಿ ಬದಲಾವಣೆ ಆಗುತ್ತದೆ. ಇದು ಹೃದಯ ಸಂಬಂಧಿತ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಗರ್ಭಾವಸ್ಥೆಯಲ್ಲಿ ರಕ್ತದೊತ್ತಡ ಅಥವಾ ಮಧುಮೇಹ ಸಮಸ್ಯೆ ಬಂದಿದ್ದರೆ, ಭವಿಷ್ಯದಲ್ಲಿ ಹೃದಯಾಘಾತ (heart attack) ದ ಸಾಧ್ಯತೆ ಹೆಚ್ಚಾಗುತ್ತದೆ. ಅದರಂತೆ, ಪಿಸಿಓಎಸ್ (PCOS)‌ನಿಂದ ಬಳಲುತ್ತಿರುವ ಮಹಿಳೆಯರು ಕೂಡ ಹೃದಯಸಂಬಂಧಿ ಸಮಸ್ಯೆಗಳ ಅಪಾಯದಲ್ಲಿದ್ದಾರೆ.

ಮಹಿಳೆಯರು ತಮ್ಮ ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಮುಂದಿನಂತೆ ಎಚ್ಚರಿಕೆ ವಹಿಸಬೇಕು:

  • ಆರೋಗ್ಯಕರ ಆಹಾರ : ಸಿಹಿ ಹಾಗೂ ಉಪ್ಪು ಹೆಚ್ಚಿನ ಆಹಾರ ಸೇವನೆಯನ್ನು ತಗ್ಗಿಸಿ, ಸಮತೋಲಿತ ಆಹಾರ ಸೇವನೆ ಮಾಡಬೇಕು.
  • ವ್ಯಾಯಾಮ : ದಿನನಿತ್ಯ ಸ್ವಲ್ಪ ಸಮಯ ನಡಿಗೆ ಅಥವಾ ಯೋಗ ಮಾಡುವುದು ಬಹುಪಯುಕ್ತ.
  • ಆರೋಗ್ಯ ತಪಾಸಣೆ : 40-50ರ ವಯಸ್ಸಿನ ನಂತರ ನಿಯಮಿತವಾಗಿ ರಕ್ತದೊತ್ತಡ, ಶುಗರ್ ಹಾಗೂ ಕೊಲೆಸ್ಟ್ರಾಲ್ ಮಟ್ಟವನ್ನು ಪರೀಕ್ಷಿಸಿಕೊಳ್ಳಬೇಕು.
  • ಮಾನಸಿಕ ಶಾಂತಿ : ಯೋಗ, ಧ್ಯಾನ ಮತ್ತು ಹವ್ಯಾಸಗಳ ಮೂಲಕ ಒತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅವಶ್ಯಕ.
- Advertisement -
spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments