Friday, July 11, 2025

Janaspandhan News

HomeAstrologyAstrology : ಹೇಗಿದೆ ಗೊತ್ತಾ.? ಜುಲೈ 04 ರ ದ್ವಾದಶ ರಾಶಿಗಳ ಫಲಾಫಲ.!
spot_img
spot_img

Astrology : ಹೇಗಿದೆ ಗೊತ್ತಾ.? ಜುಲೈ 04 ರ ದ್ವಾದಶ ರಾಶಿಗಳ ಫಲಾಫಲ.!

- Advertisement -

ಜನಸ್ಪಂದನ ನ್ಯೂಸ್, ಜೋತಿಷ್ಯ (Astrology) : 2025 ಜುಲೈ 04 ರ ಶುಕ್ರವಾರ ದಿನವಾದ ಇಂದು, ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಎಚ್ಚರಿಕೆ.? ಇಂದಿನ ದ್ವಾದಶ ರಾಶಿಗಳ ಫಲಾಫಲ (Astrology) ಹೇಗಿದೆ ನೋಡಿ.

ದೈನಂದಿನ ದ್ವಾದಶ ರಾಶಿಗಳ ಫಲಾಫಲ (ಜಾತಕ) ದ ಮೂಲಕ ಭವಿಷ್ಯ (Astrology) ವನ್ನು ಊಹಿಸುವುದು ಪ್ರಾಚೀನ ಕಾಲದಿಂದಲೂ ಇಂದಿನವರೆಗೆ ಪ್ರಸ್ತುತವಾಗಿದೆ. ಗ್ರಹಗಳ ಸ್ಥಾನಗಳು, ನಕ್ಷತ್ರಗಳು, ತಿಥಿ ಮತ್ತು ಇತರ ಜ್ಯೋತಿಷ್ಯ (Astrology) ಅಂಶಗಳ ಆಧಾರದ ಮೇಲೆ ರಾಶಿಗಳ ಫಲಾಫಲ (ಜಾತಕ) ವು ವ್ಯಕ್ತಿಯ ಭವಿಷ್ಯ (Astrology) ವನ್ನು ಮುನ್ಸೂಚಿಸುತ್ತದೆ.

ಇಂದಿನ ದ್ವಾದಶ ರಾಶಿಗಳ ಫಲಾಫಲ (Astrology) ಹೇಗಿದೆ :

results of the twelve zodiac signs

*ಮೇಷ ರಾಶಿ*

ಮೇಷರಾಶಿಯವರು ಭೂಮಿಯ ವ್ಯವಹಾರವನ್ನು ಒಬ್ಬರೇ ಮಾಡಬೇಡಿ. ಸ್ಥಳದ ಕುರಿತೂ ಮಾಹಿತಿಯನ್ನು ಸಂಗ್ರಹಿಸಿ. ನಿಮ್ಮ ಶಿಫಾರಸ್ಸು ಕೆಲವರಿಗೆ ಒಪ್ಪಿಗೆಯಾಗದು. ಮನೋರಂಜನೆಯ ಕಾರ್ಯದಲ್ಲಿ ತೊಡಗುವಿರಿ. ಕೆಲಸವನ್ನು ಕಳೆದುಕೊಂಡಿದ್ದರೆ ಸ್ನೇಹಿತರಿಂದ ಸಹಾಯ ಪಡೆಯುವಿರಿ. ಅಮೂಲ್ಯ ವಸ್ತುಗಳನ್ನು ಕಳೆದುಕೊಳ್ಳುವಿರಿ. ಹೊಸತನ್ನು ಕಲಿಯಬೇಕು ಎನ್ನುವ ಬಯಕೆ ಇರಲಿದೆ. ಉದ್ಯೋಗದ ನಿಮಿತ್ತ ಮನೆಯಿಂದ ದೂರವಿರಬೇಕಾಗುದು.

*ವೃಷಭ ರಾಶಿ*

ಇನ್ನೊಬ್ಬರನ್ನು ಕಂಡು ಅಸೂಯೆಪಡುವಿರಿ. ಅನ್ಯರ ಸಮಸ್ಯೆಯನ್ನು ನಿಮ್ಮ ಸಮಸ್ಯೆ ಎಂದುಕೊಳ್ಳುವಿರಿ. ಅಧಿಕಾರಿವರ್ಗದಿಂದ ನಿಮ್ಮ‌ ಮೇಲೆ ಒತ್ತಡ ಬರಬಹುದು. ಪರ್ಯಾಯ ವ್ಯವಸ್ಥೆ ಇಲ್ಲದೇ ದೀಢರನೆ ಕೆಲಸಕ್ಕೆ ಮುಂದಾಗುವಿರಿ. ನಿಮ್ಮ ಜನರು ಕಡೆಗಣಿಸುವ ಜನರೆದುರು ನೀವು ಎದ್ದು ನಿಲ್ಲಬೇಕು ಎನ್ನುವ ಹಠ ಇರಲಿದೆ. ಯಾವ ಕೆಲಸವು ಮುಕ್ತಾಯವಾಗದೇ ಅಸಮಾಧಾನವು ಇರಲಿದೆ. ಆಗಬೇಕಾದುದು ಆಗುತ್ತದೆ ಎಂದು ಕೊಂಡು ನಿಮ್ಮ ಕರ್ತವ್ಯವನ್ನು ಮಾಡುವಿರಿ.

*ಮಿಥುನ ರಾಶಿ*

ಹೆಸರಾಂತ ವ್ಯಕ್ತಿಗಳ ಸಹವಾಸವು ನಿಮಗೆ ಸಿಗಲಿದೆ. ದೂರಪ್ರಯಾಣದಲ್ಲಿ‌ ನಿಮಗೆ ನಾನಾ ತೊಂದರೆಗಳು ಎದುರಾಗಬಹುದು. ಕಲಹವು ಸಣ್ಣದೇ ಆಗಿರಬಹುದು ಆ‌ ಸಮಯಕ್ಕೆ ಬಿರುಕು ಬರುವಷ್ಟು ಸಾಕು. ಮಾತಿನ ಮೇಲೆ ಎಚ್ಚರವಿರಲಿ. ಯಾರಾದರೂ ನಿಮ್ಮ ಬಳಿ ಇರುವ ವಸ್ತುವನ್ನು ಕೇಳಬಂದರೆ ಇಲ್ಲ ಎನಬೇಡಿ. ಅಸೂಯೆಯಿಂದ ನಿಮ್ಮನ್ನು ಸಹೋದ್ಯೋಗಿಗಳು ಹಿಮ್ಮೆಟ್ಟಿಸಬಹುದು. ನಿಮ್ಮನ್ನೇ ನೀವು ವೈಭವೀಕರಿಸುವುದು ಚೆನ್ನಾಗಿ ಕಾಣಿಸದು. ಮಹಿಳೆಯರು ತಮ್ಮದೇ ಆದ ಉದ್ಯೋಗವನ್ನು ನಡೆಸಲು ಚಿಂತಿಸಬಹುದು.

*ಕಟಕ ರಾಶಿ*

ಲಲಿತಕಲೆಗಳಲ್ಲಿ ಆಸಕ್ತಿ ಇದ್ದರೆ ನಿಮಗೆ ಗೌರವ, ಸಮ್ಮಾನಗಳು ಸಿಗುವುದು. ಮೇಲಿನಿಂದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ. ನೀವು ಇಂದು ನಿಮ್ಮ ಸ್ಥಿತಿಯನ್ನು ನೋಡಿ ಪಶ್ಚಾತ್ತಾಪ ಪಡಬೇಕಿಲ್ಲ. ಮನಸ್ತಾಪದಿಂದ ಒಳ್ಳೆಯ ಸಮಯ ಹಾಳಾಗಬಹುದು. ಮನಸ್ಸಿಗೆ ಸಮಾಧಾನವಾದೀತು.

ಇದನ್ನು ಓದಿ : Hukkeri : ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣ ; ಪಿಎಸ್‌ಐ ಸಸ್ಪೆಂಡ್.!
*ಸಿಂಹ ರಾಶಿ*

ಎಲ್ಲ ಕೆಲಸಗಳನ್ನೂ ನೀವು ಒಬ್ಬರೇ ಮಾಡಬೇಕು ಎನ್ನುವ ನಿರ್ಧಾರವನ್ನು ಮಾಡಿಕೊಂಡು ಕೆಲಸಗಳು ಅಪೂರ್ಣವಾಗಲಿದೆ. ವಸ್ತ್ರಗಳನ್ನು ಮಾರಾಟ ಮಾಡುವವರು ನೀವು ಆಗಿದ್ದರೆ ಅಲ್ಪ‌ ಲಾಭವನ್ನೂ ಪಡೆಯುವಿರಿ. ಮಾತು ಕೆಲವು ಬಾರಿ ಕಹಿಯಾದರೂ, ಮನಸ್ಸು ಕಹಿಯಾಗದೇ ಇರಲಿ. ಉದ್ಯೋಗದಲ್ಲಿ ನಿಮ್ಮ ಸಮೂಹದ ಜೊತೆ ಕಲಹ ಮಾಡಿಕೊಳ್ಳುವಿರಿ.

*ಕನ್ಯಾ ರಾಶಿ*

ನೀವು ಮೇಲಧಿಕಾರಿಗಳನ್ನು ಚೆನ್ನಾಗಿ ಇರಿಸಿಕೊಂಡು ಅನುಕೂಲತೆಯನ್ನು ಇಟ್ಟುಕೊಳ್ಳುವಿರಿ.‌ ಧಾರ್ಮಿಕ ಕಾರ್ಯಗಳನ್ನು ಮಾಡಲು‌ ಮನಸ್ಸಾಗಲಿದೆ. ಅಪರಿಚಿತ ಕರೆಗೆ ನೀವು ಸ್ಪಂದಿಸಬೇಕಾಗಿಲ್ಲ. ಸಮಸ್ಯೆಯನ್ನು ಸೃಷ್ಟಿಸಿಕೊಳ್ಳುವುದು ನಿಮ್ಮ ಸ್ವಭಾವವಾಗಬಹುದು. ದ್ವಷದಿಂದ ಒಳ್ಳೆಯ ಸಂಬಂಧ ದೂರಾಗಲಿದೆ. ನಿಮ್ಮ ಇಷ್ಟದವರನ್ನು ನೀವು ಭೇಟಿಯಾಗಲಿದ್ದೀರಿ. ಅಶಿಸ್ತಿನ ವಿಚಾರಕ್ಕೆ ಕೋಪಗೊಳ್ಳುವಿರಿ.

*ತುಲಾ ರಾಶಿ*

ನಿಮಗೆ ಅನ್ನಿಸಿದ್ದನ್ನು ಮಾಡುವುದಾದರೂ ಹಿರಿಯರ ಒಪ್ಪಿಗೆ ಪಡೆಯಿರಿ. ಕೃಷಿಗೆ ಸಂಬಂಧಪಟ್ಟ ಚಟುವಟಿಯಲ್ಲಿ ಭಾಗವಹಿಸುವಿರಿ. ನಿಮ್ಮ ಸೋಲಿನ ಜೊತೆ ನೀವೇ ಇರಬೇಕಾಗುವುದು. ಭೂಮಿಯ ಖರೀದಿಯಲ್ಲಿ ನಿಮ್ಮ ಪಾಲೂ ಇರುವುದು. ನಿಮ್ಮವರ ಮೇಲೆ ಅನುಮಾನ ಬೇಡ. ನಂಬಿಕೆಯಿಂದಲೇ ಮಾತನಾಡಿ.‌

*ವೃಶ್ಚಿಕ ರಾಶಿ*

ಉದ್ಯೋಗದ ನಿಮಿತ್ತ ದೂರ ಇದ್ದವರಿಗೆ ತೊಂದರೆಗಳು ಬರಬಹುದು. ನಿಮ್ಮ ತಿಳಿವಳಿಕೆಯ ಹಂತವು ಗೊತ್ತಾದೀತು. ಹೂಡಿಕೆಯ ಬಗ್ಗೆ ಸ್ವತಂತ್ರ ಆಲೋಚನೆ ಇರಲಿ. ನಿಮ್ಮನ್ನು ಗುಂಪಿನಿಂದ ಹೊರಗಿಡುವ ಯೋಚನೆಯನ್ನು ಮಾಡಿಯಾರು. ನಿಮಗೆ ಸಿಕ್ಕಷ್ಟರಲ್ಲಿಯೇ ಸುಖವನ್ನು ಅನುಭವಿಸಿ. ದೂರ ಪ್ರಯಾಣಕ್ಕೆ ಹೋಗಿದ್ದರೆ ತೊಂದರೆಯಾಗಬಹುದು.

ಇದನ್ನು ಓದಿ : Forest guard Missing : 6 ದಿನಗಳಿಂದ ನಿಗೂಢವಾಗಿ ನಾಪತ್ತೆಯಾದ ಫಾರೆಸ್ಟ್ ಗಾರ್ಡ್.!
*ಧನುಸ್ಸು ರಾಶಿ*

ಜವಾಬ್ದಾರಿಯನ್ನು ವಹಿಸಿ ನಿರಾಳತೆಯಲ್ಲಿ ಇರುವಿರಿ. ವಿದ್ಯಾರ್ಥಿಗಳು ಸಂತೋಷದಿಂದ ಈ ದಿನವನ್ನು ಕಳೆಯುವರು. ನಿಮಗೆ ಯಾರಾದರೂ ಕೆಟ್ಟವರು ಎಂದು ಅನಿಸಿದರೆ ಅವರ ಸಹವಾಸದಿಂದ ದೂರವಿರಿ.‌ ಇಲ್ಲವಾದರೆ ಅಪತ್ತು ತಂದುಕೊಳ್ಳಬಹುದು. ನಿಮ್ಮ ಕೆಲಸಗಳಲ್ಲಿ ನೀವು ನಿಷ್ಠೆಯಿಂದ ತೊಡಗಿಕೊಳ್ಳಿ. ಗೃಹನಿರ್ಮಾಣ ಖರ್ಚು ಅಧಿಕವಾಗುತ್ತ ಹೋಗಲಿದೆ.

*ಮಕರ ರಾಶಿ*

ನೀವು ಇಷ್ಟಪಡುವ ಜನರು ನಿಮಗೆ ಸಹಾಯ ಮಾಡುವರು. ಹೆತ್ತವರಿಂದ ನಿಮಗೆ ಅನಿರೀಕ್ಷಿತ ಉಡುಗೊರೆ ಸಿಗಲಿದೆ. ನಿಮಗೆ ಕೋಪಗೊಳ್ಳಲು ಕಾರಣ ಸಿಗದು. ಸಾಲವನ್ನು ಮಾಡಲು ಹಿಂಜರಿದರೂ ಅನಿವಾರ್ಯವಾಗಿ ಮಾಡಬೇಕಾಗಬಹುದು. ಹಳೆ ಕೆಲಸವನ್ನು ನವೀಕರಣ ಮಾಡಿಕೊಳ್ಳುವಿರಿ. ಬೇಕಾದ ವಸ್ತುಗಳ ಖರೀದಿಯನ್ನು ನೀವಿಂದು ಮಾಡಲಿದ್ದೀರಿ.

*ಕುಂಭ ರಾಶಿ*

ಅತಿಯಾದ ನಿದ್ರೆಯಯನ್ನು ಮಾಡುವ ಮನಸ್ಸು ಮಾಡುವಿರಿ. ಆಲಸ್ಯವು ಒಳ್ಳೆಯದಲ್ಲ‌. ಹೊಸ ವಸ್ತ್ರಗಳಿಂದ ನೀವು ಬಹಳ ಶೋಭಿಸುವಿರಿ. ಬಾಕಿ ಇರುವ ಕೆಲಸಗಳನ್ನು ಇಂದು ಮಾಡಿ ಮುಗಿಸುವಿರಿ. ಓದಿನಲ್ಲಿ ಆಸಕ್ತಿ‌ಯು ಕಡಿಮೆಯಾದೀತು. ಹಾಳಾದ ವಸ್ತುವಿನ ಮೇಲೆ ಮೋಹ‌ ಕಡಿಮೆ ಆಗದು. ತಂದೆಯ ಆರೋಗ್ಯವು ಹದ ತಪ್ಪಬಹುದು.

*ಮೀನ ರಾಶಿ*

ಜವಾಬ್ದಾರಿಯ ವೈಫಲ್ಯವನ್ನೂ ಯಾರೂ ಹೊರಲಾರರು. ಆರ್ಥಿಕವಾದ ತೊಂದರೆಯಲ್ಲಿ ಇರುವಾಗ ಅಕಸ್ಮಾತ್ ಸಂಪತ್ತು ನಿಮ್ಮ ಕೈ ಸೇರಬಹುದು. ಎಲ್ಲಿಗಾದರೂ ದೂರ ಹೋಗಲು ಮನಸ್ಸು ಮಾಡುವಿರಿ. ತಾಯಿಯ ಕಡೆಯಿಂದ ನಿಮಗೆ ಸಹಾಯ ಸಿಗಬಹುದು. ಧಾರ್ಮಿಕ ಕಾರ್ಯದಲ್ಲಿ ನೀವಿಂದು ತೊಡಗಿಕೊಳ್ಳಬಹುದು. ನಿಮಗೆ ಬರಬೇಕಾದ ಆಸ್ತಿಯ ಬಗ್ಗೆ ಮಾತು ನಡೆಯುವುದು.

Disclaimer : ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು ಮತ್ತು ಮಾಹಿತಿಗಳನ್ನು ಆಧರಿಸಿ ಈ ಲೇಖನವನ್ನು ಬರೆಯಲಾಗಿದೆ. ಹೀಗಾಗಿ ಜನಸ್ಪಂದನ ನ್ಯೂಸ್‌ಗೂ, ಈ ಲೇಖನಕ್ಕೂ (Astrology) ಸಂಬಂಧವಿಲ್ಲ ಮತ್ತು ಇದಕ್ಕೆ ನಾವು ಜವಾಬ್ದಾರಿಯಲ್ಲ.

Hukkeri : ಶ್ರೀರಾಮ ಸೇನೆ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣ ; ಪಿಎಸ್‌ಐ ಸಸ್ಪೆಂಡ್.!

ಜನಸ್ಪಂದನ ನ್ಯೂಸ್, ಬೆಳಗಾವಿ : ಕಳೆದ 3-4 ದಿನಗಳ ಹಿಂದೆ ಶ್ರೀರಾಮ ಸೇನೆ ಕಾರ್ಯಕರ್ತರನ್ನು ಮರಕ್ಕೆ ಕಟ್ಟಿ ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಕ್ಕೇರಿ (Hukkeri) ಪಿಎಸ್‌ಐ ಅವರನ್ನು ಅಮಾನತು ಮಾಡಲಾಗಿದೆ.

ಅಕ್ರಮವಾಗಿ ಗೋವು ಸಾಗಣೆ ಸಂಬಂಧ ಆರೋಪಿಗಳ ವಿರುದ್ಧ ಕೇಸ್ ದಾಖಲಿಸದೆ ಹುಕ್ಕೇರಿ (Hukkeri) ಪೊಲೀಸರು ಬಿಟ್ಟು ಕಳುಹಿಸಿದ್ದರು. ಈ ವಿಷಯದ ಕುರಿತು ಹುಕ್ಕೇರಿ (Hukkeri) ಪಿಎಸ್ಐ ಮೇಲಧಿಕಾರಿಗಳ ಗಮನಕ್ಕೂ ತಂದಿರಲಿಲ್ಲ.

ಇನ್ನು ಬೆಳಗಾವಿ ಜಿಲ್ಲೆಯಿಂದ ಕಲಬುರಗಿ ಜಿಲ್ಲೆಗೆ ಗಡೀಪಾರಾಗಿದ್ದ ಶ್ರೀರಾಮ ಸೇನೆಯ ಕಾರ್ಯಕರ್ತ ರೌಡಿಶೀಟರ್ ಮಹಾವೀರ ಎಂಬಾತನನ್ನು ಹಾಗೇ ಬಿಟ್ಟು ಕಳಿಸಿದ್ದಾರೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಹುಕ್ಕೇರಿ (Hukkeri) ಪಿಎಸ್‌ಐ ನಿಖಿಲ್​ ಕಾಂಬ್ಳೆ ಅವರನ್ನು ಕರ್ತವ್ಯ ಲೋಪದ ಆರೋಪದ ಮೇರೆಗೆ ಅಮಾನತು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

- Advertisement -
spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments