Saturday, March 2, 2024
spot_img
spot_img
spot_img
spot_img
spot_img

Belagavi : ವಕೀಲನ ಮೇಲೆ ಮಾರಣಾಂತಿಕ ಹಲ್ಲೆ ; ಇಬ್ಬರು ಪೊಲೀಸ್ ವಶಕ್ಕೆ.!

spot_img

ಜನಸ್ಪಂದನ ನ್ಯೂಸ್, ಬೆಳಗಾವಿ : ಬೆಳಗಾವಿ ಜಿಲ್ಲೆಯ ಹುಕ್ಕೇರಿ (Hukkeri) ತಾಲೂಕಿನ ಸೊಲ್ಲಾಪುರ ಗ್ರಾಮದಲ್ಲಿ ಯುವ ನ್ಯಾಯವಾದಿ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದ್ದು, ಹಲ್ಲೆಗೆ ಸಂಬಂಧಿಸಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಹಲ್ಲೆಗೊಳಗಾದ ನ್ಯಾಯವಾದಿ ಸಾಗರ ಮಾನೆ ಎಂದು ತಿಳಿದು ಬಂದಿದ್ದು, ಇವರು ಸಂಕೇಶ್ವರದ ನ್ಯಾಯಾಲಯದಲ್ಲಿ (Sankeshwar Court) ಕಾರ್ಯ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಇದನ್ನು ಓದಿ : ಮಾಜಿ ಉಪಮುಖ್ಯಮಂತ್ರಿ ಮಾತನಾಡುತ್ತಿದ್ದ ವೇಳೆ ತಂಬಾಕು ತಿಂದ ಶಾಸಕ ; Video Viral.!

ಕಳೆದ ದಿ. 11 ರಂದು ತಮ್ಮ ಸ್ವಗ್ರಾಮವಾದ ಸೊಲ್ಲಾಪುರ ಗ್ರಾಮದ ಹತ್ತಿರ ಸುಮಾರು 10 ಜನರು ಸೇರಿ ಮಾರಣಾಂತಿಕ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿರುವ ಬಗ್ಗೆ ಸಂಕೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ.

ಒಂದು ಕಡೆಯ ಗುಂಪಿನ ಕಕ್ಷಿದಾರನಿಗೆ ಬೆಂಬಲ ನೀಡುತ್ತಿದ್ದಾರೆ ಎನ್ನುವ ಕಾರಣದ ಹಿನ್ನೆಲೆಯಲ್ಲಿ ಈ ಹಲ್ಲೆಯನ್ನು ಮಾಡಲಾಗಿದೆ ಎಂದು ಪೊಲೀಸರಿಗೆ ನೀಡಲಾಗಿರುವ ದೂರಿನಲ್ಲಿ ವಿವರಿಸಲಾಗಿದೆ.

ಇದನ್ನು ಓದಿ : resignation : ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್‍ಗೆ ರಾಜೀನಾಮೆ.!

ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಸಂಕೇಶ್ವರ ಪೊಲೀಸರು ‌ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಇನ್ನುಳಿದವರು ಪತ್ತೆಗಾಗಿ ಶೋಧ ನಡೆಸಿದ್ದಾರೆ.

spot_img
spot_img
- Advertisment -spot_img