ಜನಸ್ಪಂದನ ನ್ಯೂಸ್, ನೌಕರಿ : ಅಖಿಲ ಭಾರತ ಮೆಡಿಕಲ್ ಸೈನ್ಸ್ ಸಂಸ್ಥೆ (AIIMS) ಯಲ್ಲಿ ಖಾಲಿ ಇರುವ 3,500 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ (Online) ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ AIIMS ಅಧಿಕೃತ ವೆಬ್‌ಸೈಟ್ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.
ಇದನ್ನು ಓದಿ : ಆರೋಗ್ಯಕ್ಕೆ ವರದಾನವಾಗಿರುವ Dragon fruit : ಇಲ್ಲಿವೆ ಅದ್ಭುತ ಪ್ರಯೋಜನಗಳು.!
All India Institute of Medical Sciences ಹುದ್ದೆಗಳ ವಿವರ :
- ವಿಭಾಗದ ಹೆಸರು : ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS)
- ಒಟ್ಟು ಹುದ್ದೆಗಳು : 3,500.
- ಹುದ್ದೆಯ ಹೆಸರು : ನರ್ಸಿಂಗ್ ಅಧಿಕಾರಿ.
- ಉದ್ಯೋಗ ಸ್ಥಳ : ಭಾರತದೆಲ್ಲೆಡೆ.
- ಅಪ್ಲಿಕೇಶನ್ ಮೋಡ್ : ಆನ್‌ಲೈನ್.
ಸಂಬಳದ ವಿವರ :
ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ. 34,800/- ವೇತನ ನೀಡಲಾಗುತ್ತದೆ.
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 29 ರ ದ್ವಾದಶ ರಾಶಿಗಳ ಫಲಾಫಲ.!
ವಯೋಮಿತಿ :
ಅರ್ಜಿ ಸಲ್ಲಿಸುವ ಅಭ್ಯರ್ಥಿಯು,
- ಕನಿಷ್ಠ 18 ವರ್ಷ ಮತ್ತು
- ಗರಿಷ್ಠ 30 ವರ್ಷ ವಯಸ್ಸು ಹೊಂದಿರಬೇಕು.
- Note : ಮೀಸಲಾತಿ ನಿಯಮಗಳ ಅನ್ವಯ ವಯೋಮಿತಿ ಸಡಿಲಿಕೆ ದೊರೆಯುತ್ತದೆ.
ಶೈಕ್ಷಣಿಕ ಅರ್ಹತೆ :
AIIMS ಅಧಿಕೃತ ಅಧಿಸೂಚನೆಯ ಪ್ರಕಾರ,
- ಅಭ್ಯರ್ಥಿಯು ಪದವಿ (Degree) ಅಥವಾ ಸಮಾನ ಶಿಕ್ಷಣ (Equal education) ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
- ಅರ್ಹತಾ ವಿವರಗಳಿಗೆ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸುವುದು ಸೂಕ್ತ.
ಇದನ್ನು ಓದಿ : Married-woman : ಇನ್‌ಸ್ಟಾಗ್ರಾಂ ಪರಿಚಯದಿಂದ ಪ್ರೀತಿ, ಬಳಿಕ ದೈಹಿಕ ಸಂಬಂಧ ; ಮದುವೆಗೆ ನಿರಾಕರಣೆ, ನದಿಗೆ ಹಾರಿದ ವಿವಾಹಿತೆ.!
ಅರ್ಜಿ ಶುಲ್ಕ :
- ಸಾಮಾನ್ಯ/OBC ಅಭ್ಯರ್ಥಿಗಳು : ರೂ. 3000/-
- SC/ST/EWS ಅಭ್ಯರ್ಥಿಗಳು : ರೂ. 2400/-
ಆಯ್ಕೆ ವಿಧಾನ :
ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯು ಲಿಖಿತ ಪರೀಕ್ಷೆ ಮತ್ತು ಇತರ ಹಂತಗಳ ಆಧಾರವಾಗಿ ನಡೆಯಲಿದೆ. ಆಯ್ಕೆ ವಿಧಾನಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ AIIMS ಅಧಿಕೃತ ನೋಟಿಫಿಕೇಶನ್ ಓದಬೇಕು.
ಅರ್ಜಿ ಸಲ್ಲಿಸುವ ವಿಧಾನ :
- ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
- AIIMS ನ ನೇಮಕಾತಿ ಅಧಿಸೂಚನೆಯನ್ನು ಡೌನ್‌ಲೋಡ್ (Download) ಮಾಡಿ ಮತ್ತು ಸಂಪೂರ್ಣವಾಗಿ ಓದಿ.
- ಆನ್‌ಲೈನ್ ಲಿಂಕ್ (Online link) ಮೂಲಕ ಅರ್ಜಿ ನಮೂದಿಸಿ.
- ಅಗತ್ಯವಿದ್ದರೆ ಅರ್ಜಿ ಶುಲ್ಕ ಪಾವತಿಸಿ.
- ಫೋಟೋ ಮತ್ತು ಸಹಿ ಸೇರಿಸಿ.
- ಅರ್ಜಿಯನ್ನು ಪರಿಶೀಲಿಸಿ ಮತ್ತು ಸಲ್ಲಿಸಿ.
- ಮುದ್ರಣ (Print) ಪ್ರತಿಯನ್ನು ಭದ್ರವಾಗಿ ಇಟ್ಟುಕೊಳ್ಳಿ.
ಇದನ್ನು ಓದಿ : ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ambulance ನಲ್ಲಿ ಯುವತಿಯ ಮೇಲೆ ದೌರ್ಜನ್ಯ ; ಇಬ್ಬರ ಬಂಧನ.!
ಪ್ರಮುಖ ದಿನಾಂಕಗಳು :
- ಅರ್ಜಿ ಸಲ್ಲಿಕೆ ಆರಂಭ : 22 ಜುಲೈ 2025.
- ಅರ್ಜಿ ಸಲ್ಲಿಕೆ ಕೊನೆ : 11 ಆಗಸ್ಟ್ 2025 (ಸಂಜೆ 5 ಗಂಟೆ).
ಪ್ರಮುಖ ಲಿಂಕ್‌ಗಳು :
- ಅಧಿಕೃತ ಅಧಿಸೂಚನೆ PDF : ಇಲ್ಲಿ ಕ್ಲಿಕ್ ಮಾಡಿ.
- ಅರ್ಜಿ ಸಲ್ಲಿಸಲು ಲಿಂಕ್ : ಇಲ್ಲಿ ಕ್ಲಿಕ್ ಮಾಡಿ.
- ಅಧಿಕೃತ ವೆಬ್‌ಸೈಟ್ : https://aiimsexams.ac.in/
Disclaimer : The above given information is available On online, candidates should check it properly before applying. This is for information only.
Shooting attack : ಪೊಲೀಸ್ ಅಧಿಕಾರಿ ಸೇರಿದಂತೆ 4 ಸಾವು ; ದಾಳಿಕೋರ ಆತ್ಮಹತ್ಯೆಗೆ ಶರಣು.!
ಜನಸ್ಪಂದನ ನ್ಯೂಸ್, ಡೆಸ್ಕ್ : ದಾಳಿಕೋರ ನಡೆದ ಭೀಕರ ಗುಂಡಿನ ದಾಳಿ (Shooting attack) ಯಲ್ಲಿ ಕನಿಷ್ಠ ನಾಲ್ವರು ಮೃತಪಟ್ಟಿರುವ ಘಟನೆಯೊಂದು ನ್ಯೂಯಾರ್ಕ್ ನಗರ ಕೇಂದ್ರದ ಮ್ಯಾನ್‌ಹ್ಯಾಟನ್‌ನಲ್ಲಿ ಜುಲೈ 28 (ಸ್ಥಳೀಯ ಸಮಯ) ರಂದು ನಡೆದಿದೆ. ಮೃತರಲ್ಲಿ ನ್ಯೂಯಾರ್ಕ್ ಪೊಲೀಸ್ ಇಲಾಖೆ(NSPD)ಯ ಅಧಿಕಾರಿಯೊಬ್ಬರೂ ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೋಲಿಸ್ ಇಲಾಖೆಯ ಉನ್ನತ ಅಧಿಕಾರಿಗಳ ಪ್ರಕಾರ, ಗುಂಡಿನ ದಾಳಿ (Shooting attack) ಯಲ್ಲಿ ಮೃತ ಪೊಲೀಸ್ ಅಧಿಕಾರಿಯನ್ನು ದಿದರುಲ್ ಇಸ್ಲಾಂ (36) ಎಂದು ಗುರುತಿಸಲಾಗಿದೆ. ಬಾಂಗ್ಲಾದೇಶ ಮೂಲದ ಇಸ್ಲಾಂ, ಕಳೆದ ಮೂರುೂವರೆ ವರ್ಷಗಳಿಂದ NYPDಯಲ್ಲಿ ಸೇವೆ ಸಲ್ಲಿಸುತ್ತಿದ್ದರು ಎಂದು ಪೊಲೀಸ್ ಆಯುಕ್ತ ಜೆಸ್ಸಿಕಾ ಟಿಶ್ ಅವರು ಮಾಹಿತಿ ನೀಡಿದ್ದಾರೆ.
ಇದನ್ನು ಓದಿ : Plane AA3023 : ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನದಲ್ಲಿ ಬೆಂಕಿ : ವಿಡಿಯೋ.!
ಈ ಘಟನೆಗೆ ಕಾರಣಕಾರಿಯಾದ ಶಂಕಿತ (Shooting attack man) ದಾಳಿಕೋರನನ್ನು ಶೇನ್ ಟಮುರಾ (27) ಎಂದು ಗುರುತಿಸಲಾಗಿದೆ. ಲಾಸ್ ವೇಗಾಸ್ ಮೂಲದ ಟಮುರಾ, ದಾಳಿಯ ನಂತರ ತನಗೆ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ದಾಳಿ ನಡೆದಿದ್ದಾದರೂ ಹೇಗೆ.?
ನೈಟ್‌ಕ್ಲಬ್‌ನ ಹೊರಗೆ ಗುಂಡಿನ ದಾಳಿ (Shooting attack) ಯಿಂದ 10 ಮಂದಿಗೆ ಗಾಯ ಶಂಕಿತ ಶೂಟರ್ ಮೊದಲು ಸಂಜೆ 6:40 ರ ಸುಮಾರಿಗೆ 345 ಪಾರ್ಕ್ ಅವೆನ್ಯೂದ ಲಾಬಿಯಲ್ಲಿ NYPD ಅಧಿಕಾರಿಯೊಂದಿಗೆ ಗುಂಡಿನ ಚಕಮಕಿ ನಡೆಸಿದ. ನಂತರ ಅವನು 33 ನೇ ಮಹಡಿಗೆ ಹೋಗಿ, ಕಚೇರಿ ಗೋಪುರದೊಳಗೆ ಕಟ್ಟಡದ 32 ನೇ ಮಹಡಿಯಲ್ಲಿ, ಲಾಕ್ ಮಾಡಿಕೊಂಡ. ಬಳಿಕ ಆತ ತನಗೆ ತಾನೇ ಗುಂಡು ಹಾರಿಸಿಕೊಂಡಿದ್ದು, ಇದರಿಂದ ಸ್ಥಳದಲ್ಲೇ ಸಾವನ್ನಪ್ಪಿದ ಎಂದು ತಿಳಿದುಬಂದಿದೆ.
ಇದನ್ನು ಓದಿ : Married-woman : ಇನ್‌ಸ್ಟಾಗ್ರಾಂ ಪರಿಚಯದಿಂದ ಪ್ರೀತಿ, ಬಳಿಕ ದೈಹಿಕ ಸಂಬಂಧ ; ಮದುವೆಗೆ ನಿರಾಕರಣೆ, ನದಿಗೆ ಹಾರಿದ ವಿವಾಹಿತೆ.!
ಶಂಕಿತನು ಸಂಜೆ 6:40ರ ಸುಮಾರಿಗೆ ನೈಟ್‌ಕ್ಲಬ್‌ನ ಹೊರಗೆ ಗುಂಡಿನ ದಾಳಿ (Shooting attack) ನಡೆಸಿ, ಮ್ಯಾನ್‌ಹ್ಯಾಟನ್‌ನ 345 ಪಾರ್ಕ್ ಅವೆನ್ಯೂದ ಲಾಬಿಯಲ್ಲಿ NYPD ಅಧಿಕಾರಿಯೊಂದಿಗಿನ ಗುಂಡಿನ ಚಕಮಕಿ (Shooting attack) ಯಲ್ಲಿ ತೊಡಗಿದ್ದ. ಬಳಿಕ ಆತ ಕಟ್ಟಡದ 33ನೇ ಮಹಡಿಗೆ ನುಗ್ಗಿ, 32ನೇ ಮಹಡಿಯಲ್ಲಿ ಲಾಕ್ ಮಾಡಿಕೊಂಡು ಕೊನೆಗೆ ತನ್ನಷ್ಟಕ್ಕೆ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಈ ದಾಳಿಯಲ್ಲಿ ಒಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು, ಪ್ರಸ್ತುತ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೆ, ಸ್ಥಳದಿಂದ ಪರಾರಿಯಾಗಲು ಯತ್ನಿಸಿದ ನಾಲ್ಕು ಮಂದಿ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ನ್ಯೂಯಾರ್ಕ್ ಮೇಯರ್ ಎರಿಕ್ ಆಡಮ್ಸ್ ಮಾಹಿತಿ ನೀಡಿದ್ದಾರೆ.
Shooting attack ಎಫ್‌ಬಿಐ ಸ್ಥಳಕ್ಕೆ :
ಈ ಅಪರಾಧದ ತೀವ್ರತೆಯನ್ನು ಗಮನಿಸಿದ ಎಫ್‌ಬಿಐ ತಂಡ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದು, ಎಫ್‌ಬಿಐ ಉಪನಿರ್ದೇಶಕ ಡ್ಯಾನ್ ಬೊಂಜಿನೊ ಅವರ ಪ್ರಕಾರ, ತಮ್ಮ ತಂಡವು ಸಕ್ರಿಯವಾಗಿ NYPDಗೆ ಬೆಂಬಲ ನೀಡುತ್ತಿದೆ.
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 28 ರ ದ್ವಾದಶ ರಾಶಿಗಳ ಫಲಾಫಲ.!
ಹೆಚ್ಚುವರಿ ಮಾಹಿತಿ ಪ್ರಕಾರ, ಶಂಕಿತ ಟಮುರಾ ಈ ದಾಳಿಯನ್ನು ಏಕೆ ನಡೆಸಿದ? ಅವನು ಒಬ್ಬನೇ ಕಾರ್ಯನಿರ್ವಹಿಸಿದ್ದನೋ? ಅಥವಾ ಈ ಹಿಂದೆ ಯಾವುದೇ ಸಂಘಟನೆ ಅಥವಾ ನೆಟ್‌ವರ್ಕ್‌ನೊಂದಿಗೆ ಸಂಪರ್ಕ ಹೊಂದಿದ್ದನಾ ಎಂಬುದರ ಬಗ್ಗೆ NYPD ಮತ್ತು ಎಫ್‌ಬಿಐ ಜಂಟಿಯಾಗಿ ತನಿಖೆ ಮುಂದುವರಿಸುತ್ತಿವೆ.