ಜನಸ್ಪಂದನ ನ್ಯೂಸ್, ಡೆಸ್ಕ್ : ಕಾಂಗ್ರೆಸ್ ಮುಖಂಡನೋರ್ವ (Congress leader) ತಾಲೂಕು ಅಭಿವೃದ್ಧಿ ಅಧಿಕಾರಿಗೆ ಥಳಿಸಿ, ಬೆದರಿಕೆ ಹಾಕಿದ ಆರೋಪದ ಮೇಲೆ ಅವರನ್ನು ಅರೆಸ್ಟ್ ಮಾಡಿದ ಘಟನೆ ಭಾನುವಾರ ನಡೆದಿದೆ ಎಂದು ವರದಿಯಾಗಿದೆ.
ಇದನ್ನು ಓದಿ : ಮರಕ್ಕೆ Car ಡಿಕ್ಕಿ: ಬಿಮ್ಸ್ ಆಸ್ಪತ್ರೆಯ ಇಬ್ಬರು ವೈದ್ಯರು ಸೇರಿ ಮೂವರ ಸಾವು.!
ಮಹುವಾ ತಾಲೂಕು ಅಭಿವೃದ್ಧಿ ಅಧಿಕಾರಿ (Taluk Development Officer) ಪ್ರಕಾಶ ಮಹಾಲ ಅವರು, ಮಹುವಾ ತಾಲೂಕಿನ ಕುಮಕೋಟಾರ ಗ್ರಾಮದಲ್ಲಿ ಆಯೋಜಿಸಿದ್ದ ಸರ್ಕಾರಿ ಕಾರ್ಯಕ್ರಮದಲ್ಲಿ (Government programme) ಭಾಗವಹಿಸಿ ಬಳಿಕ ತಮ್ಮ ಕಾರಿನಲ್ಲಿ ಕಚೇರಿಗೆ ಹೋಗುತ್ತಿದ್ದ ಸಂದರ್ಭ ಅವರ ಮೇಲೆ ದಾಳಿ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಕುರಿತು ಕಾಂಗ್ರೆಸ್ ಮುಖಂಡ ಪರಿಮಳ ಪಟೇಲ್ ವಿರುದ್ಧ ದೂರು (complain) ದಾಖಲಾಗಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಅಧಿಕಾರಿ ಪ್ರಕಾಶ್ ಮಹಾಲ ಅವರ ಕಾರನ್ನು, ಸೂರತ್ ನ ಅನವಲ್ ಮಹುವಾ ರಸ್ತೆಯಲ್ಲಿ ತಡೆದ ಕಾಂಗ್ರೆಸ್ ಮುಖಂಡ ಹಾಗೂ ತಾಲೂಕು ಪಂಚಾಯತಿ ಸದಸ್ಯ ಪರಿಮಳ ಪಟೇಲ್, ಅವಾಚ್ಯ ಶಬ್ದದಿಂದ (unspoken sound) ನಿಂದಿಸಿದ್ದಾರೆ ಎನ್ನಲಾಗಿದೆ.
ಇದನ್ನು ಓದಿ : Health : ಈ ಎಲೆಯ ನೀರು ಸೇವಿಸಿದರೆ ಸಾಕು ನಿಮ್ಮ ಬಿಳಿ ಕೂದಲು ಕಪ್ಪಾಗುವುದು.!
ಅಲ್ಲದೇ ಕಾಲನಿಯೊಂದರಲ್ಲಿ ಸರ್ಕಾರಿ ಯೋಜನೆಗೆ ಸಂಬಂಧಪಟ್ಟಂತೆ ಪರಿಶೀಲನೆಗೆ ಪ್ರಕಾಶ ಮಹಾಲ ಅವರು ಹೊರ ಬಂದ ವೇಳೆ ಮತ್ತೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಥಳಿಸಿ ಬೆದರಿಕೆ ಹಾಕಿದ್ದಾರೆ (Threatened) ಎಂಬ ಆರೋಪ ಕೇಳಿ ಬಂದಿದೆ.
ಈ ಕುರಿತು ತಾಲೂಕು ಅಭಿವೃದ್ಧಿ ಅಧಿಕಾರಿ ಪ್ರಕಾಶ ಮಹಾಲ ಅವರು ಪರಿಮಳ ಪಟೇಲ್ ವಿರುದ್ಧ, ಭಾರತೀಯ ನ್ಯಾಯಸಂಹಿತೆ (Indian Judiciary Code) 121, 115, 281, 132, 221, 321(3), 352 ಮತ್ತು 333 ಸೆಕ್ಷನ್ಗಳಡಿ ದೂರು ದಾಖಲಿಸಿದ್ದಾರೆ. ಈ ಹಿನ್ನೆಲೆ ಕಾಂಗ್ರೆಸ್ ಮುಖಂಡನನ್ನು ಬಂಧಿಸಲಾಗಿದೆ (arrested) ಎಂದು ವರದಿಯಿಂದ ತಿಳಿದು ಬಂದಿದೆ.
ಹಿಂದಿನ ಸುದ್ದಿ : ದೇಶದ ಅತಿ ದೊಡ್ಡ ಐಟಿ ದಾಳಿ; ಹಣ ಎಣಿಕೆಗಾಗಿ 36 ಯಂತ್ರಗಳ ಬಳಕೆ.!
ಜನಸ್ಪಂದನ ನ್ಯೂಸ್, ಡೆಸ್ಕ್ : ಭ್ರಷ್ಟ ಅಧಿಕಾರಿಗಳ ಮನೆ, ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು (Income Tax Department Officers) ದಾಳಿ ಮಾಡಿ ಚಿನ್ನಾಭರಣ ಮತ್ತು ಕೋಟ್ಯಂತರ ಹಣವನ್ನು ವಶಕ್ಕೆ (Seize the money) ಪಡೆದುಕೊಂಡಿರುತ್ತಾರೆ.
ಇದನ್ನು ಓದಿ : Vitamin B Complex ಸೇರಿ ಈ 90 ಔಷಧಿಗಳು ಗುಣಮಟ್ಟದ ಪರೀಕ್ಷೆಗಳಲ್ಲಿ ಫೇಲ್.!
ಇವರು ವಶಕ್ಕೆ ಪಡೆದ ಚಿನ್ನಾಭರಣ, ಹಣದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ.
ದೇಶದ ಇತಿಹಾಸದಲ್ಲಿ ಐಟಿ ದಾಳಿಯಲ್ಲಿ ಇದು ಅತ್ಯಂತ ದೊಡ್ಡದಾಗಿದ್ದು (biggest IT attack in the country’s history), ಬರೋಬ್ಬರಿ 10 ದಿನ ಕಾರ್ಯಾಚರಣೆ (10 days operation) ನಡೆದಿದೆ ಎಂದು ವರದಿಯಾಗಿದೆ. 10 ದಿನದಲ್ಲಿ ಅಧಿಕಾರಿಗಳಿಗೆ ಸಿಕ್ಕ ಹಣ ಎಷ್ಟು ಅಂತ ಕೇಳಿದ್ರೆ ನಿಮ್ಮ ತಲೆ ತಿರುಗುವುದಂತು ಗ್ಯಾರಂಟಿ.
ಇದನ್ನು ಓದಿ : Special news : ಯಾವುದೇ ಪ್ರಯೋಗಗಳನ್ನು ಮನುಷ್ಯರಿಗಿಂತ ಮುಂಚೆ ಇಲಿಗಳ ಮೇಲೆ ಮಾಡುವುದೇಕೆ.?
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದೇಶದ ಅತಿ ದೊಡ್ಡ ದಾಳಿಯನ್ನು ಒಡಿಶಾ ರಾಜ್ಯದಲ್ಲಿ (State of Odisha) ನಡೆಸಿದ್ದಾರೆ. ಒಡಿಶಾ ರಾಜ್ಯದ ಮದ್ಯ ತಯಾರಿಕಾ ಕಂಪನಿ (A liquor manufacturing company) ಬೌದ್ ಡಿಸ್ಟಿಲರೀಸ್ ಪ್ರೈವೇಟ್ ಲಿಮಿಟೆಡ್‌ನ (Baud Distilleries Pvt) ಬಹುತೇಕ ಎಲ್ಲಾ ಬ್ರಾಂಚ್ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ವರದಿಯಿಂದ ತಿಳಿದು ಬಂದಿದೆ.
ಅಧಿಕಾರಿಗಳು ಬರೋಬ್ಬರಿ 10 ದಿನ ದಾಳಿ ನಡೆಸಿ 352 ಕೋಟಿ ರೂ. ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ (352 crore Rs. The money has been seized) ಎನ್ನಲಾಗಿದೆ. ಬೆಲೆಬಾಳುವ ವಸ್ತುಗಳನ್ನು ನೆಲದಡಿಯಲ್ಲಿ ಸಂಗ್ರಹಿಸಿದ್ದು, ಅವುಗಳನ್ನು ಪತ್ತೆ ಮಾಡಲು ವಿಶೇಷ ಸ್ಕ್ಯಾನಿಂಗ್ ವ್ಹೀಲ್ ಎಂಬ ಯಂತ್ರವನ್ನು (A machine called a special scanning wheel) ಅಧಿಕಾರಿಗಳು ಬಳಸಿಕೊಂಡಿದ್ದರು ಎಂದು ವರದಿಯಿಂದ ತಿಳಿದು ಬಂದಿದೆ.
ಇದನ್ನು ಓದಿ : ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸರ್ಕಾರಿ ಕೆಲಸಕ್ಕೆ ಅನರ್ಹ : Supreme Court ಮಹತ್ವದ ತೀರ್ಪು
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ವೇಳೆ ಸಿಕ್ಕ ಹಣವನ್ನು ಎಣಿಸಲು ಬರೋಬ್ಬರಿ 36 ಹಣ ಎಣಿಕೆಯ ಯಂತ್ರಗಳನ್ನು (36 cash counting machines) ತರಿಸಿಕೊಂಡಿದ್ದರು. ಹಣ ಎಣಿಸಲು ವಿವಿಧ ಬ್ಯಾಂಕ್‌ಗಳ ನೌಕರರನ್ನು ಕೂಡ ಬಳಸಿಕೊಳ್ಳಲಾಗಿತ್ತಂತೆ. ದಾಳಿ ವೇಳೆ ಸಿಕ್ಕ ಹಣದ ಕೆಲ ಫೋಟೋಗಳು ಸಹ ಸೋಶಿಯಲ್ ಮೀಡಿಯಾದಲ್ಲಿ ಬೇರೆ ಬೇರೆ ಶೀರ್ಷಿಕೆಯಡಿಯಲ್ಲಿ ವೈರಲ್ ಆಗುತ್ತಿವೆ.
ದಾಳಿಯಲ್ಲಿ ವಶಕ್ಕೆ ಪಡೆಯಲಾದ ಹಣವನ್ನು ಭಾರೀ ಭದ್ರತೆಯಲ್ಲಿ ಮೂಟೆಗಳಲ್ಲಿ ತುಂಬಿಸಿ ಸಾಗಿಸಲಾಯಿತು (It was packed in sacks under heavy security and transported). ಇನ್ನೂ ಆದಾಯ ತೆರಿಗೆ ಅಧಿಕಾರಿಗಳು ದಾಳಿಯ ಪ್ರತಿಯೊಂದು ಕ್ಷಣವನ್ನು ರೆಕಾರ್ಡ್ ಮಾಡಿಕೊಂಡಿದ್ದರು. ಸದ್ಯ ಈ ಹಣವನ್ನು ಆದಾಯ ತೆರಿಗೆ ಇಲಾಖೆಯಲ್ಲಿ ಬಿಗಿ ಭದ್ರತೆಯಲ್ಲಿ ಠೇವಣಿ ಇರಿಸಲಾಗಿದೆ (Deposited under tight security) ಎಂದು ವರದಿಯಾಗಿದೆ.
ಇದನ್ನು ಓದಿ : Health : ದೇಹದ ಮೇಲೆ ಕಂಡು ಬರುವ ಮುದ್ದೆಯಂತಹ ಈ ಗುಳ್ಳೆಗಳನ್ನು ಹೋಗಲಾಡಿಸುವುದು ಹೇಗೆ.?
ಆಗಸ್ಟ್‌ನಲ್ಲಿ ಈ ಐಟಿ ದಾಳಿ ನಡೆದಿತ್ತು. ದಾಳಿ ನಡೆಸಿದ ಅಧಿಕಾರಿಗಳನ್ನು ಕೇಂದ್ರ ಸರ್ಕಾರ (central government) ಗೌರವಿಸಿದೆ. ಈ ಮಹಾ ಐಟಿ ದಾಳಿ ಆದಾಯ ತೆರಿಗೆ ತನಿಖಾ ಅಧಿಕಾರಿ ಎಸ್‌ಕೆ ಝಾ ಮತ್ತು ಹೆಚ್ಚುವರಿ ನಿರ್ದೇಶಕ ಗುರುಪ್ರೀತ್ ಸಿಂಗ್ ಅವರ ನೇತೃತ್ವದಲ್ಲಿ (Headed by Income Tax Investigation Officer SK Jha and Additional Director Gurpreet Singh) ನಡೆದಿತ್ತು ಎಂದು ವರದಿ ತಿಳಿಸಿದೆ.