ಜನಸ್ಪಂದನ ನ್ಯೂಸ್, ಯಾದಗಿರಿ : ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ (Shahapur) ಅರಳಹಳ್ಳಿ ಕ್ರಾಸ್ ಸಮೀಪ ಚಲಿಸುತ್ತಿದ್ದ ಬೈಕ್ಗೆ ಕಾರು ಡಿಕ್ಕಿ (A car collided with a bike) ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವಿಗೀಡಾದ ಘಟನೆ ನಡೆದಿದೆ.
ಇದನ್ನು ಓದಿ : Video : ಚಂಡಮಾರುತದ ಹೊಡೆತಕ್ಕೆ ಉರುಳಿ ಬಿದ್ದ ಬೃಹದಾಕಾರದ ಮೊಬೈಲ್ ಟವರ್.!
ಈ ಅಪಘಾತದಲ್ಲಿ ಸುರಪುರ ತಾಲ್ಲೂಕಿನ ತಿಪ್ಪನಟಗಿ ಗ್ರಾಮದ ಹಳ್ಳೆಪ್ಪ ದೊಡ್ಡ ನಂದಪ್ಪ (42) ಹಾಗೂ ಶಹಾಪುರ ತಾಲ್ಲೂಕಿನ ವನದುರ್ಗ ಗ್ರಾಮದ ಮಲ್ಲಯ್ಯ ಹಣಮಂತ (28) ಎಂಬುವವರು ಮೃತಪಟ್ಟಿದ್ದಾರೆ.
ಜೇವರ್ಗಿ ತಾಲ್ಲೂಕಿನ ಚಿಕ್ಕ ಮುಧೋಳದಲ್ಲಿ ಜಮೀನಿನ ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದರು.
ಜೇವರ್ಗಿ ಕಡೆಯಿಂದ ಶಹಾಪುರದತ್ತ ಕಾರು ಚಾಲಕ ಹೊರಟಿದ್ದ ವೇಳೆ ಈ ರಸ್ತೆ ಅಪಘಾತವಾಗಿದೆ.
ಇದನ್ನು ಓದಿ : ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸರ್ಕಾರಿ ಕೆಲಸಕ್ಕೆ ಅನರ್ಹ : Supreme Court ಮಹತ್ವದ ತೀರ್ಪು
ಭೀಮರಾಯನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದ್ದು, ದೂರು ದಾಖಲಾಗಿದೆ.
ಹಿಂದಿನ ಸುದ್ದಿ : ಈ ವಿಷಯದಲ್ಲಿ ಮಹಿಳೆಯರಿಗಿಂತ ಪುರುಷರು ಉತ್ತಮರಂತೆ.!
ಜನಸ್ಪಂದನ ನ್ಯೂಸ್, ಆರೋಗ್ಯ : ಇತ್ತೀಚಿಗೆ ನಡೆಸಿದ ಅಧ್ಯಯನವೊಂದು ಮಹಿಳೆಯರಿಗಿಂತ ಪುರುಷರು ಹೆಚ್ಚು ನಿದ್ದೆ ಮಾಡುತ್ತಾರೆ (Men sleep more than women) ಎಂದು ಬಹಿರಂಗ ಪಡಿಸಿದೆ. ಪುರುಷರ ಮತ್ತು ಮಹಿಳೆಯರ ನಿದ್ರೆಯ ಮಾದರಿಗಳನ್ನು (Sleep patterns) ಗಮನಿಸಿದ್ದು, ಇದರಲ್ಲಿ ಹಲವು ವ್ಯತ್ಯಾಸಗಳನ್ನು ಈ ಅಧ್ಯಯನದಲ್ಲಿ ಸಂಶೋಧಕರು ಕಂಡುಕೊಂಡಿದ್ದಾರೆ (Researchers found in the study).
ಯಾಕೆ ಮಹಿಳೆಯರು ಪುರುಷರಿಗಿಂತ ಕಡಿಮೆ ನಿದ್ರೆ ಮಾಡುತ್ತಾರೆ?
ಇದನ್ನು ಓದಿ : ಮಹಿಳೆಯರ ಒಳ ಉಡುಪು ಧರಿಸಿ ಮಾರ್ಕೆಟ್ ನಲ್ಲಿ ರೀಲ್ಸ್; ಮುಂದೆನಾಯ್ತು? Video ನೋಡಿ.!
ನಿದ್ರೆಯು ಮಾನವನ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದು ಈ ಸಂಶೋಧನೆಯ ಮುಖ್ಯ ಉದ್ದೇಶವಾಗಿದೆ (main objective of the research is). ಪುರುಷರು ಮತ್ತು ಮಹಿಳೆಯರಲ್ಲಿ ನಿದ್ರೆಯ ಬಗ್ಗೆ ಸಂಶೋಧನೆ ನಡೆಸಲಾಗಿದೆ.
ಅಲ್ಟ್ರಾ- ಸೆನ್ಸಿಟಿವ್ ಸೆನ್ಸರ್ ಗಳನ್ನು (Ultra- sensitive sensors) ಈ ಅಧ್ಯಯನದಲ್ಲಿ ಬಳಸಲಾಗಿದ್ದು, ವಿಶೇಷ ಪಂಜರಗಳಲ್ಲಿ 267 ಇಲಿಗಳ ಮೇಲೆ ಈ ಸಂಶೋಧನೆ ನಡೆಸಲಾಯಿತು. ಪೂರ್ತಿ ದಿನ ಅಥವಾ 24 ಗಂಟೆಗಳಲ್ಲಿ, ಗಂಡು ಇಲಿಗಳು (Male rats) ಸುಮಾರು 670 ನಿಮಿಷಗಳ ಕಾಲ ನಿದ್ರಿಸಿದವು. ಆದರೆ ಹೆಣ್ಣು ಇಲಿಗಳು (female rats) 1 ಗಂಟೆಗಿಂತಲೂ ಕಡಿಮೆ ಸಮಯ ಮಲಗಿರುವುದನ್ನು ಸಂಶೋಧಕರು ಕಂಡುಕೊಂಡರು.
ಇದನ್ನು ಓದಿ : Health : ಮಾನವನ ಮೆದುಳಿನ ನರ ಸಿಡಿಯುವಂತೆ ಮಾಡುತ್ತದೆ ಈ ತರಕಾರಿಯಲ್ಲಿನ ಹುಳು.!
ಮಹಿಳೆಯರಲ್ಲಿ ಹಾರ್ಮೋನುಗಳು ತಿಂಗಳಿನಿಂದ ತಿಂಗಳಿಗೆ ಬದಲಾಗುತ್ತವೆ (Hormones in women change from month to month). ಹೀಗಾಗಿ ಮಹಿಳೆಯರು ನಿದ್ರೆಯನ್ನು ಸರಿಯಾಗಿ ಮಾಡುವುದಿಲ್ಲ. ಇದರಿಂದಾಗಿ ಅತಿಯಾದ ನಿದ್ರೆಯ ಕೊರತೆಗೆ ಕಾರಣವಾಗುತ್ತದೆ ಎಂದು ಸಂಶೋಧನೆಯು ತನ್ನ ವರದಿಯಲ್ಲಿ ತಿಳಿಸಿದೆ.
ಋತುಚಕ್ರದ ವೇಳೆ ಮಹಿಳೆಯರು ನಿದ್ರೆಗೆ ಸಂಬಂಧಿಸಿದಂತೆ ಅನೇಕ ರೀತಿಯ ತೊಂದರೆಯನ್ನು ಅನುಭವಿಸುತ್ತಾರೆ ಎಂಬುದು ಅಧ್ಯಯನದಲ್ಲಿ ಕಂಡು ಬಂದಿದೆ. ಈ ಸಮಯದಲ್ಲಿ ಉಂಟಾಗುವ ಹಾರ್ಮೋನುಗಳ ಬದಲಾವಣೆಗಳು ನಿದ್ರೆಗೆ ಭಂಗ ತರಬಹುದು.
ಇದನ್ನು ಓದಿ : ಚಳಿಗಾಲದಲ್ಲಿ Brain ಸ್ಟ್ರೋಕ್ ಮತ್ತು ಹೃದಯಾಘಾತವಾಗುವ ಸಾಧ್ಯತೆ ಹೆಚ್ಚು; ಕಾರಣ.?
ಈ ಋತು ಚಕ್ರದ ಸಮಯದಲ್ಲಿ ಮಹಿಳೆಯರಲ್ಲಿ ಹೊಟ್ಟೆನೋವು, ಸೆಳೆತ ಮತ್ತು ಬೆವರುವಿಕೆಯಂತಹ (Abdominal pain, cramps and sweating) ಕೆಲವು ಅಹಿತಕರ ದೈಹಿಕ ರೋಗ ಲಕ್ಷಣಗಳನ್ನು ಅನುಭವಿಸುತ್ತಾರೆ. ಈ ಅಹಿತಕರ ದೈಹಿಕ ರೋಗ ಲಕ್ಷಣಗಳ ಕಾರಣಗಳಿಗಾಗಿ, ಮಹಿಳೆಯರು ಜೀವನದ ಈ ಹಂತಗಳಲ್ಲಿ ನಿದ್ರಾಹೀನತೆ, ರೆಸ್ಟ್ಲೆಸ್ ಲೆಗ್ಸ್ ಸಿಂಡ್ರೋಮ್, ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾದಂತಹ ಕೆಲವು ನಿದ್ರೆಯ ಅಸ್ವಸ್ಥತೆಗಳಿಂದ (from sleep disorders) ಬಳಲುತ್ತಾರೆ ಎಂದು ಸಂಶೋಧನೆಯು ತಿಳಿಸಿದೆ.