Sunday, December 8, 2024
HomeNational NewsShocking Incident : ಹೃದಯಾಘಾತಕ್ಕೆ ಬಲಿಯಾದ 10 ವರ್ಷದ ಬಾಲಕಿ.!
spot_img

Shocking Incident : ಹೃದಯಾಘಾತಕ್ಕೆ ಬಲಿಯಾದ 10 ವರ್ಷದ ಬಾಲಕಿ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಇತ್ತೀಚೆಗೆ ಯುವಕರು ಹೃದಯಾಘಾತಕ್ಕೆ (heart attack) ಬಲಿಯಾಗುತ್ತಿದ್ದಾರೆ. ಆದರೆ ಈಗ ಮಕ್ಕಳಿಗೂ ಈ ಸಮಸ್ಯೆ ಎದುರಾಗುತ್ತಿದೆ. ಸದ್ಯ ಅಂತದ್ದೆ ಒಂದು ಆಘಾತಕಾರಿ ಘಟನೆ (shocking incident) ನಡೆದಿದೆ.

ಇದನ್ನು ಓದಿ : Special news : ಈ ವಿಷಯದಲ್ಲಿ ಮಹಿಳೆಯರಿಗಿಂತ ಪುರುಷರು ಉತ್ತಮರಂತೆ.!

ಶಾಲೆಗೆ ತೆರಳಲು ತಯಾರಾಗುತ್ತಿದ್ದ ವೇಳೆ 10 ವರ್ಷದ ಬಾಲಕಿ ಹೃದಯಾಘಾತದಿಂದ ಮೃತಪಟ್ಟ ಘಟನೆ ತೆಲಂಗಾಣದ ಮಂಚಿರ್ಯಾಲ ಜಿಲ್ಲೆಯ (Manchiryala district of Telangana) ಜನ್ನಾರಂ ಮಂಡಲದ ರೋಟಿಗುಡ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಹೃದಯಾಘಾತದಿಂದ ಸಾವಿಗೀಡಾದ ಬಾಲಕಿ ಸಮನ್ವಿತಾ ಎಂದು ವರದಿ ತಿಳಿಸಿದೆ.

ಲಕ್ಷೆಟ್ಟಿಪೇಟೆ ಮಂಡಲದ ಕೃಷ್ಣವೇಣಿ ಶಾಲೆಯಲ್ಲಿ ನಾಲ್ಕನೇ ತರಗತಿ ಓದುತ್ತಿರುವ ಸಮನ್ವಿತಾ, ಎಂದಿನಂತೆ ಬೆಳಿಗ್ಗೆ ಶಾಲೆಗೆ ಹೋಗಲು ರೆಡಿಯಾಗುತ್ತಿದ್ದಳು. ಈ ವೇಳೆ ಬಾಲಕಿ ಏಕಾಏಕಿ (suddenly) ಕುಸಿದು ಬಿದ್ದಿದ್ದಾಳೆ.

ಇದನ್ನು ಓದಿ : Video : ಚಂಡಮಾರುತದ ಹೊಡೆತಕ್ಕೆ ಉರುಳಿ ಬಿದ್ದ ಬೃಹದಾಕಾರದ ಮೊಬೈಲ್ ಟವರ್.!

ಇದನ್ನು ಗಮನಿಸಿದ ತಂದೆ ನಾಗರಾಜು ಮಗುವನ್ನು ಸ್ಥಳೀಯ ಆಸ್ಪತ್ರೆಗೆ (Local hospital) ದಾಖಲಿಸಿದ್ದಾರೆ. ಆದರೆ ವೈದ್ಯರು ಚಿಕಿತ್ಸೆ ನೀಡಿದರೂ ಮಗುವಿನ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಮಗು ಹೃದಯಾಘಾತದಿಂದ ಸಾವಿಗೀಡಾಗಿದ್ದಾಳೆ ಎಂದು ವೈದ್ಯರು ಖಚಿತಪಡಿಸಿದ್ದಾರೆ (confirm) ಎಂದು ವರದಿ ತಿಳಿಸಿದೆ.

ಹಿಂದಿನ ಸುದ್ದಿ : ಈ ವಿಷಯದಲ್ಲಿ ಮಹಿಳೆಯರಿಗಿಂತ ಪುರುಷರು ಉತ್ತಮರಂತೆ.!

ಜನಸ್ಪಂದನ ನ್ಯೂಸ್, ಆರೋಗ್ಯ : ಇತ್ತೀಚಿಗೆ ನಡೆಸಿದ ಅಧ್ಯಯನವೊಂದು ಮಹಿಳೆಯರಿಗಿಂತ ಪುರುಷರು ಹೆಚ್ಚು ನಿದ್ದೆ ಮಾಡುತ್ತಾರೆ (Men sleep more than women) ಎಂದು ಬಹಿರಂಗ ಪಡಿಸಿದೆ. ಪುರುಷರ ಮತ್ತು ಮಹಿಳೆಯರ ನಿದ್ರೆಯ ಮಾದರಿಗಳನ್ನು (Sleep patterns) ಗಮನಿಸಿದ್ದು, ಇದರಲ್ಲಿ ಹಲವು ವ್ಯತ್ಯಾಸಗಳನ್ನು ಈ ಅಧ್ಯಯನದಲ್ಲಿ ಸಂಶೋಧಕರು ಕಂಡುಕೊಂಡಿದ್ದಾರೆ (Researchers found in the study).

ಇದನ್ನು ಓದಿ : ಎರಡಕ್ಕಿಂತ ಹೆಚ್ಚು ಮಕ್ಕಳಿದ್ದರೆ ಸರ್ಕಾರಿ ಕೆಲಸಕ್ಕೆ ಅನರ್ಹ : Supreme Court ಮಹತ್ವದ ತೀರ್ಪು

ಯಾಕೆ ಮಹಿಳೆಯರು ಪುರುಷರಿಗಿಂತ ಕಡಿಮೆ ನಿದ್ರೆ ಮಾಡುತ್ತಾರೆ?

ನಿದ್ರೆಯು ಮಾನವನ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದು ಈ ಸಂಶೋಧನೆಯ ಮುಖ್ಯ ಉದ್ದೇಶವಾಗಿದೆ (main objective of the research is). ಪುರುಷರು ಮತ್ತು ಮಹಿಳೆಯರಲ್ಲಿ ನಿದ್ರೆಯ ಬಗ್ಗೆ ಸಂಶೋಧನೆ ನಡೆಸಲಾಗಿದೆ.

ಅಲ್ಟ್ರಾ- ಸೆನ್ಸಿಟಿವ್ ಸೆನ್ಸರ್ ಗಳನ್ನು (Ultra- sensitive sensors) ಈ ಅಧ್ಯಯನದಲ್ಲಿ ಬಳಸಲಾಗಿದ್ದು, ವಿಶೇಷ ಪಂಜರಗಳಲ್ಲಿ 267 ಇಲಿಗಳ ಮೇಲೆ ಈ ಸಂಶೋಧನೆ ನಡೆಸಲಾಯಿತು. ಪೂರ್ತಿ ದಿನ ಅಥವಾ 24 ಗಂಟೆಗಳಲ್ಲಿ, ಗಂಡು ಇಲಿಗಳು (Male rats) ಸುಮಾರು 670 ನಿಮಿಷಗಳ ಕಾಲ ನಿದ್ರಿಸಿದವು. ಆದರೆ ಹೆಣ್ಣು ಇಲಿಗಳು (female rats) 1 ಗಂಟೆಗಿಂತಲೂ ಕಡಿಮೆ ಸಮಯ ಮಲಗಿರುವುದನ್ನು ಸಂಶೋಧಕರು ಕಂಡುಕೊಂಡರು.

ಇದನ್ನು ಓದಿ : Special news : ಮುಖಕ್ಕೆ ಬ್ಲಾಂಕೆಟ್ ಹೊದ್ದಿಕೊಂಡು ಮಲಗುತ್ತೀರಾ.? ಹಾಗಿದ್ರೆ ಈ ಸುದ್ದಿ ಓದಿ.!

ಮಹಿಳೆಯರಲ್ಲಿ ಹಾರ್ಮೋನುಗಳು ತಿಂಗಳಿನಿಂದ ತಿಂಗಳಿಗೆ ಬದಲಾಗುತ್ತವೆ (Hormones in women change from month to month). ಹೀಗಾಗಿ ಮಹಿಳೆಯರು ನಿದ್ರೆಯನ್ನು ಸರಿಯಾಗಿ ಮಾಡುವುದಿಲ್ಲ. ಇದರಿಂದಾಗಿ ಅತಿಯಾದ ನಿದ್ರೆಯ ಕೊರತೆಗೆ ಕಾರಣವಾಗುತ್ತದೆ ಎಂದು ಸಂಶೋಧನೆಯು ತನ್ನ ವರದಿಯಲ್ಲಿ ತಿಳಿಸಿದೆ.

ಋತುಚಕ್ರದ ವೇಳೆ ಮಹಿಳೆಯರು ನಿದ್ರೆಗೆ ಸಂಬಂಧಿಸಿದಂತೆ ಅನೇಕ ರೀತಿಯ ತೊಂದರೆಯನ್ನು ಅನುಭವಿಸುತ್ತಾರೆ ಎಂಬುದು ಅಧ್ಯಯನದಲ್ಲಿ ಕಂಡು ಬಂದಿದೆ. ಈ ಸಮಯದಲ್ಲಿ ಉಂಟಾಗುವ ಹಾರ್ಮೋನುಗಳ ಬದಲಾವಣೆಗಳು ನಿದ್ರೆಗೆ ಭಂಗ ತರಬಹುದು.

ಇದನ್ನು ಓದಿ : Health : ಮಾನವನ ಮೆದುಳಿನ ನರ ಸಿಡಿಯುವಂತೆ ಮಾಡುತ್ತದೆ ಈ ತರಕಾರಿಯಲ್ಲಿನ ಹುಳು.!

ಈ ಋತು ಚಕ್ರದ ಸಮಯದಲ್ಲಿ ಮಹಿಳೆಯರಲ್ಲಿ ಹೊಟ್ಟೆನೋವು, ಸೆಳೆತ ಮತ್ತು ಬೆವರುವಿಕೆಯಂತಹ (Abdominal pain, cramps and sweating) ಕೆಲವು ಅಹಿತಕರ ದೈಹಿಕ ರೋಗ ಲಕ್ಷಣಗಳನ್ನು ಅನುಭವಿಸುತ್ತಾರೆ. ಈ ಅಹಿತಕರ ದೈಹಿಕ ರೋಗ ಲಕ್ಷಣಗಳ ಕಾರಣಗಳಿಗಾಗಿ, ಮಹಿಳೆಯರು ಜೀವನದ ಈ ಹಂತಗಳಲ್ಲಿ ನಿದ್ರಾಹೀನತೆ, ರೆಸ್ಟ್ಲೆಸ್ ಲೆಗ್ಸ್ ಸಿಂಡ್ರೋಮ್, ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾದಂತಹ ಕೆಲವು ನಿದ್ರೆಯ ಅಸ್ವಸ್ಥತೆಗಳಿಂದ (from sleep disorders) ಬಳಲುತ್ತಾರೆ ಎಂದು ಸಂಶೋಧನೆಯು ತಿಳಿಸಿದೆ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments