Thursday, April 25, 2024
spot_img
spot_img
spot_img
spot_img
spot_img
spot_img

ಮಲಗಿದ್ದ ನಾಯಿಯನ್ನು ಕ್ರೂ*ರವಾಗಿ ಹ*ತ್ಯೆ ಮಾಡಿದ ಪಾಪಿ ; ಅ*ಮಾನುಷ್ಯ ವಿಡಿಯೋ Virul.!

spot_img

ಜನಸ್ಪಂದನ ನ್ಯೂಸ್, ಡೆಸ್ಕ್ : ಜಗತ್ತಿನಲ್ಲಿ ಅದೆಷ್ಟೋ ಜನರು ತಮ್ಮ ನೆಚ್ಚಿನ ಪ್ರಾಣಿಗಳನ್ನು ಸಾಕುತ್ತಾರೆ. ಸಾಕಿದ ಆ ಪ್ರಾಣಿಯನ್ನು ತಮ್ಮ ಮನೆಯ (House) ಸದಸ್ಯೆರೆಂದೆ ತಿಳಿದು ನಡೆದುಕೊಳ್ಳುತ್ತಾರೆ. ಇನ್ನು ಕೆಲವರಿದ್ದಾರೆ ಅವರಿಗೆ ಪ್ರಾಣಿಗಳೆಂದರೆ ಆಗಿ ಬರುವುದಿಲ್ಲೇನೋ ಅನಿಸುತ್ತೇ.

ಈ ಮುನುಷ್ಯರು ಒಮ್ಮೋಮ್ಮೆ ಮೃಗ (Animal) ಗಳಿಗಿಂತ ಕೀಳಾಗಿ ವರ್ತಿಸುತ್ತಾನೆ. ಇದಕ್ಕೆ ನಿದರ್ಶನ ಎಂಬಂತೆ ಇಲ್ಲೊಂದು ಘಟನೆಯನ್ನು ಕಾಣಬಹುದಾಗಿದೆ.

ಸದ್ಯ ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದ್ದು, ಉತ್ತರ ಪ್ರದೇಶದ ಕಾನ್ಪುರದ ಶ್ಯಾಮ್ ನಗರ ಪ್ರದೇಶದಲ್ಲಿ ಕ್ರೂರ ಘಟನೆ ನಡೆದಿದೆ ಎಂದು ಹೇಳಲಾಗಿದೆ.

ವಿಡಿಯೋದಲ್ಲೆನಿದೆ :

ರಸ್ತೆ ಬದಿಯಲ್ಲೊಂದು ನಾಯಿ ಮಲಗಿದೆ, ಆ ವೇಳೆ ಎಲ್ಲಿಂದಲ್ಲೋ ಬಂದ ಓರ್ವ ವ್ಯಕ್ತಿ ಆ ನಾಯಿಯನ್ನು ಅಮಾನುಷ್ಯವಾಗಿ ಹೊಡೆದು ಸಾಯಿಸುತ್ತಾನೆ. ಅವನು ಕೈಯಲ್ಲಿ ಕೋಲು ತಂದಿದ್ದ ಅಂದರೆ ನಾಯಿಯನ್ನು ಕೊಲ್ಲಲೆಂದೆ ಬಂದಿದ್ದ ಅನಿಸುತ್ತೇ. ಕೋಲಿ (Stick) ನಿಂದ ನಾಯಿಗೆ ಹೊಡೆದ ನಂತರ, ಆ ವ್ಯಕ್ತಿ ಏನು ನಡೆದೆ ಇಲ್ಲೋ ಏನೋ ಅನುವ ರೀತಿಯಲ್ಲಿ ಆ ಸ್ಥಳದಿಂದ ಹೊರಟು ಹೋಗಿದ್ದಾನೆ.

ಪಾಪ ಆ ನಾಯಿ ತನ್ನ ಎರಡು ನಾಯಿಮರಿಗಳೊಂದಿಗೆ ರಸ್ತೆ ಬದಿಯಲ್ಲಿ ಮಲಗಿದ್ದಾಗ ಈ ಘೋರ ಕೃತ್ಯ ನಡೆದಿದ್ದು, ಪಾಪಿ ಹೊಡೆದ ಒಂದೇ ಒಂದು ಹೊಡೆತಕ್ಕೆ ನಾಯಿ (Dog) ತನ್ನ ಪ್ರಾಣ ಕಳೆದುಕೊಂಡಿರುವುದನ್ನು ನಾವು ಸಿಸಿಟಿವಿ ದೃಶ್ಯಾವಳಿಯಲ್ಲಿ ನೋಡಬಹುದಾಗಿದೆ.

ಇನ್ನು ಗಮನಿಸಬೇಕಾದ ಅಂಶವೇನೆಂದರೆ, ನಾಯಿಯನ್ನು ಹೊಡೆದ ವೇಳೆ ಅಕ್ಕ-ಪಕ್ಕದಲ್ಲಿ ಜನರಿದ್ದರು, ಆದರೆ ಅವರ್ಯಾರು ಆತನನ್ನು ಪ್ರಶ್ನೆ ಮಾಡುವ ಗೋಜಿಗೆ ಹೋಗಲೇ ಇಲ್ಲ. ಇದು ದುರ್ದೈವದ ಸಂಗತಿಯೇ ಸರಿ. ಆದರೆ ಅಲ್ಲೆ ಇದ್ದ ಯುವತಿ (Young lady) ಮಾತ್ರ ಘಟನೆಯಿಂದ ವಿಚಲಿತವಾಗಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಮನುಷ್ಯರು ಅಂತ ಕರೆಸಿಕೊಳ್ಳುವ ನಾವು ಇನ್ನಾದರೂ ಇಂತ ಘಟನೆ ನಡೆಯದಂತೆ ನೋಡಿಕೊಳ್ಳೋಣ ಮತ್ತು ಆಕಸ್ಮಿಕ ಇಂತ ಘಟನೆ ನಡೆದಾಗ ಪ್ರತಿಭಟಿಸೋಣ.

spot_img
spot_img
spot_img
- Advertisment -spot_img