ಜನಸ್ಪಂದನ ನ್ಯೂಸ್, ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಪುಡಿ ರೌಡಿಗಳ (of rowdy) ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈ ಪುಡಿ ರೌಡಿಗಳು ಸಣ್ಣ ಸಣ್ಣ ಅಂಗಡಿಗಳಿಗೆ ಹೋಗೋದು ಪುಕ್ಕಟೆ ಬೀಡಿ ಸಿಗರೇಟ್‌ಗಾಗಿ (Free beedi cigarettes) ಅಂಗಡಿ ಮಾಲೀಕರನ್ನು ಹೆದರಿಸಿ ಬೆದರಿಸುವ ಕಾಯಕ ಮಾಡೋದೆ ಆಗಿದೆ.
ಇಂತಹದೇ ಘಟನೆಯೊಂದು ಬೆಂಗಳೂರಿನಲ್ಲಿ ಮೊನ್ನೆಯಷ್ಟೇ ನಡೆದಿದ್ದು, ಅಂಗಡಿ ಮಾಲೀಕನಿಗೆ ಲಾಂಗ್ Long) ತೋರಿಸಿ ಬೆದರಿಕೆ ಹಾಕಿ ಪುಡಿ ರೌಡಿ ಆತಂಕ ಸೃಷ್ಟಿಸಿದ್ದ.
ಇದನ್ನು ಓದಿ : ಬೆಳಗಾವಿ : ಅನೈತಿಕ ಸಂಬಂಧಕ್ಕೆ ಅಡ್ಡಿ ; Lover ಜೊತೆ ಸೇರಿ ಗಂಡನನ್ನು ಕೊಂದು ನದಿಗೆ ಎಸೆದ ಪತ್ನಿ.!
ಪುಡಿ ರೌಡಿಯ ಈ ವಿಡಿಯೋ ವೈರಲ್ ಆಗ್ತಾ ಇದ್ದಂತೆ ಬೆಂಗಳೂರು ಪೊಲೀಸರು ಈ ಪುಡಿ ರೌಡಿಯ ರೌಡಿಸಂ (rowdyism) ಗೆ ಬ್ರೇಕ್ ಹಾಕಿದಲ್ಲದೇ ಕೈಯಲ್ಲಿ ಸ್ಲೇಟು ಕೊಟ್ಟಿದ್ದಾರೆ.
ಬೆಂಗಳೂರಿನ ಕೋರಮಂಗಲ 80 ಅಡಿ ರಸ್ತೆಯ ಎರಡನೇ stage ನಲ್ಲಿ ಅಂಗಡಿಯ ಮಾಲೀಕನಿಗೆ ಪುಡಿ ರೌಡಿ ಲಾಂಗ್ ತೋರಿಸಿ ಬೆದರಿಕೆ ಹಾಕಿದ್ದಲ್ಲದೆ ತನಗೆ ಏನು ಬೇಕೋ ಅದೆಲ್ಲಾ free ಯಾಗಿ ತೆಗೆದುಕೊಂಡು ಹೋಗಿದ್ದ.
ಇದನ್ನು ಓದಿ : CIL : ಕೋಲ್ ಇಂಡಿಯಾ ಲಿಮಿಟೆಡ್‌ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
ಹಾಡಹಗಲೇ (day time) ಅಂಗಡಿಗೆ ನುಗ್ಗಿ ಲಾಂಗ್ ತೋರಿಸಿ ಅಂಗಡಿ ಮಾಲೀಕನಿಗೆ ಲಾಂಗ್ ತೋರಿಸಿದ್ದಲ್ಲದೇ ತಾನು ಕೇಳಿದ್ದನ್ನೆಲ್ಲಾ ಬಿಟ್ಟಿಯಾಗಿ ಕೊಡಬೇಕು ಎಂದು ಆವಾಜ್ ಹಾಕಿದ್ದ.
ಈ ಹಿನ್ನೆಲೆಯಲ್ಲಿ ಈ ಪುಡಿ ರೌಡಿಗೆ ಪೊಲೀಸರು ಏನ ಕೊಡಬೇಕೋ ಅದನ್ನು ಕೊಟ್ಟಿದ್ದಾರೆ. ಸ್ವತಃ ಬೆಂಗಳೂರು ಪೊಲೀಸರು ಈ ವಿಡಿಯೋವನ್ನು ತಮ್ಮ “X” ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇದನ್ನು ಓದಿ : ಅನ್ಯಜಾತಿಯ ಯುವಕನನ್ನು ಪ್ರೀತಿಸಿದ ಪುತ್ರಿಯ ಹತ್ಯೆ ಮಾಡಿದ Father.!
ಅಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಂಗಡಿ ಮಾಲೀಕನಿಗೆ ಲಾಂಗ್ ತೋರಿಸುವ ದೃಶ್ಯ CCTV ಯಲ್ಲಿ ಸೆರೆಯಾಗಿತ್ತು.
ಈ ಸಿಸಿಟಿವಿಯಲ್ಲಿ ದೃಶ್ಯ Viral ಆಗ್ತಾ ಇದ್ದಂತೆ ಪೊಲೀಸರು ತಮ್ಮ ಯೂನಿಫಾರಂ ಖದರ್ ತೋರಿಸಿ ಪುಡಿ ರೌಡಿ ಅಟ್ಟಹಾಸಕ್ಕೆ ಬ್ರೇಕ್ ಹಾಕಿದ್ದಾರೆ.
When you think wielding a knife will get you free smokes, but all it gets you is a free ride to the station! #police #WeServeWeProtect pic.twitter.com/P9pFoy8DUO
— ಬೆಂಗಳೂರು ನಗರ ಪೊಲೀಸ್ BengaluruCityPolice (@BlrCityPolice) February 8, 2025