Saturday, March 15, 2025
HomeBelagavi Newsಬೆಳಗಾವಿ : ಅನೈತಿಕ ಸಂಬಂಧಕ್ಕೆ ಅಡ್ಡಿ ; Lover ಜೊತೆ ಸೇರಿ ಗಂಡನನ್ನು ಕೊಂದು ನದಿಗೆ...
spot_img
spot_img
spot_img
spot_img
spot_img

ಬೆಳಗಾವಿ : ಅನೈತಿಕ ಸಂಬಂಧಕ್ಕೆ ಅಡ್ಡಿ ; Lover ಜೊತೆ ಸೇರಿ ಗಂಡನನ್ನು ಕೊಂದು ನದಿಗೆ ಎಸೆದ ಪತ್ನಿ.!

WhatsApp Channel Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಬೆಳಗಾವಿ : ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬಾವನಸೌದತ್ತಿ (Bawanasudatti of Raibag Taluk) ಗ್ರಾಮದಲ್ಲಿ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಪ್ರಿಯಕರನ (lover) ಜೊತೆಗೆ ಸೇರಿಕೊಂಡು ಪತ್ನಿ ಹತ್ಯೆ ಮಾಡಿ ಕೃಷ್ಣಾ ನದಿಗೆ ಬಿಸಾಕಿದ ಘಟನೆ ನಡೆದಿದೆ.

ಕೊಲೆಯಾದ ವ್ಯಕ್ತಿ ಬಸ್ತವಾಡ ಗ್ರಾಮದ ಅಪ್ಪಾಸಾಬ ಅಲಿಯಾಸ್ ಮಚ್ಚೇಂದ್ರ (45) ಎಂದು ತಿಳಿದು ಬಂದಿದೆ.

ಇದನ್ನು ಓದಿ : ಕುಡಿದ ನಶೆಯಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್‌ ಮೇಲೆ ಕುಡುಕರಿಂದ ಹಲ್ಲೆ ; ಮುಂದೆನಾಯ್ತು.? ಈ Video ನೋಡಿ.!

ಮೃತನ ಹೆಂಡತಿ ಸಿದ್ದವ್ವ ಮತ್ತು ಆಕೆಯ ಪ್ರಿಯಕರ ಗಣಪತಿಯನ್ನು ಸದ್ಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಜ. 5ರಂದು ದೇವಿಯ ಗುಡಿಗೆ ಹೋಗಿ ಬರೋಣ ಎಂದು ಸಿದ್ದವ್ವ ತನ್ನ ಗಂಡನನ್ನು ಕರೆದುಕೊಂಡು ಬಂದಿದ್ದಾಳೆ. ಬಳಿಕ ಕೃಷ್ಣಾ ನದಿ ದಂಡೆ ಮೇಲೆ ಸ್ನಾನ ಮಾಡುವ ವೇಳೆ ಪತ್ನಿ ಸಿದ್ದವ್ವ ಮತ್ತು ಗಣಪತಿ ಕಲ್ಲಿನಿಂದ ಹೊಡೆದು ಮಚ್ಚೇಂದ್ರನನ್ನು ಕೊಲೆ ಮಾಡಿದ್ದಾರೆ. ಕೊಂದ ಬಳಿಕ ಶವವನ್ನು ಕೃಷ್ಣಾ ನದಿಗೆ ಎಸೆದು ಎಸ್ಕೇಪ್ ಆಗಿದ್ದಾರೆ.

ಇದನ್ನು ಓದಿ : ಮಹಾಕುಂಭ ಮೇಳಕ್ಕೆ ಹೋಗಿದ್ದ Belagavi ನಾಲ್ವರು ಸೇರಿ ಆರು ಜನ ರಸ್ತೆ ಅಪಘಾತದಲ್ಲಿ ಸಾವು.!

ನದಿಯಲ್ಲಿ ಶವ ಸಿಕ್ಕ ಕೇಸ್ ದಾಖಲಿಸಿಕೊಂಡಿದ್ದ ರಾಯಬಾಗ ಪೊಲೀಸರು, ತನಿಖೆ ವೇಳೆ ಹೆಂಡತಿ ಮತ್ತು ಪ್ರಿಯಕರ ಸೇರಿ ಈ ಕೃತ್ಯವೆಸಗಿರುವುದು ಗೊತ್ತಾಗಿದೆ.

ಇಬ್ಬರ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಆತನನ್ನು ಕೊಲೆ ಮಾಡಲಾಗಿದೆ ಎಂದು ವಿಚಾರಣೆ ಸಂದರ್ಭ ಆರೋಪಿಗಳು ಸತ್ಯ ಬಾಯಿಬಿಟ್ಟಿದ್ದಾರೆ.

ಹಿಂದಿನ ಸುದ್ದಿ : Health : ಕುಂಬಳಕಾಯಿ ಬೀಜದಿಂದ ನಿವಾರಣೆಯಾಗುತ್ತೆ ಈ ಸಮಸ್ಯೆಗಳು.!

ಜನಸ್ಪಂದನ ನ್ಯೂಸ್, ಆರೋಗ್ಯ : ಭಾರತದಲ್ಲಿ ತರಕಾರಿಗಳಲ್ಲಿ ಪ್ರಸಿದ್ಧಿ ಪಡೆದ ಒಂದು ವಿಶಿಷ್ಠವಾದ ತರಕಾರಿ ಎಂದರೆ ಅದು ಕುಂಬಳಕಾಯಿ (Pumpkin). ವಿಶೇಷವಾಗಿ ಚಳಿಗಾಲದಲ್ಲಿ ಇದನ್ನು ಹೆಚ್ಚಾಗಿ ಉತ್ಪಾದನೆ ಮಾಡಲಾಗುತ್ತದೆ.

ಕುಂಬಳಕಾಯಿ ಬಳಸಿ ಅಡುಗೆ ಮಾಡುವಾಗ ಬಹಳಷ್ಟು ‌ಜನರು ಅದರ ಬೀಜಗಳನ್ನು ಎಸೆಯುತ್ತಾರೆ. ಆದರೆ ವಿಶ್ವದ 100 ಅತ್ಯಂತ ಶಕ್ತಿಶಾಲಿ ಆಹಾರಗಳ ಪಟ್ಟಿಯಲ್ಲಿ ಕುಂಬಳಕಾಯಿ ಬೀಜ ಆರನೇ ಸ್ಥಾನವನ್ನು ಪಡೆದಿದೆ.

ಇದನ್ನು ಓದಿ : ನೀವೂ ಎಂದಾದರೂ ಭೂಮಿ ತಿರುಗುವುದನ್ನು ನೋಡಿದ್ದೀರಾ.? ಇಲ್ವಾ, ಹಾಗಾದರೆ ಈ Vedio ನೋಡಿ.!

ಇನ್ನೊಂದು ಅಚ್ಚರಿಯ ಸಂಗತಿಯೆಂದರೆ ಕುಂಬಳಕಾಯಿ ಬೀಜಗಳು ಪೌಷ್ಠಿಕಾಂಶದ ವಿಷಯದಲ್ಲಿ ಮೀನಿಗಿಂತಲೂ ಹೆಚ್ಚು ಶಕ್ತಿಯುತವಾಗಿವೆ.

* ರಂಜಕ,‌ ಮೆಗ್ನೀಸಿಯಮ್ ಮತ್ತು ಸತುವನ್ನು (phosphorus, Magnesium and zinc) ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವ ಕುಂಬಳಕಾಯಿ ಬೀಜಗಳು, ಮೂಳೆ ಸಾಂದ್ರತೆಯನ್ನು ಕಾಪಾಡಿಕೊಳ್ಳಲು ಮತ್ತು ಆಸ್ಟಿಯೊಪೊರೋಸಿಸ್ ಅನ್ನು ತಡೆಯಲು ಸಹಾಯಕವಾಗಿವೆ.

ಇದನ್ನು ಓದಿ : ಮೊದಲ ಗಂಡನಿಂದ ಡಿವೋರ್ಸ್ ಪಡೆಯದಿದ್ದರೂ 2ನೇ ಪತಿಯಿಂದ ಹೆಂಡತಿ ಜೀವನಾಂಶ ಪಡೆಯಬಹುದು : ಸುಪ್ರೀಂ ಕೋರ್ಟ್

* ಇದರಲ್ಲಿರುವ ಫೈಬರ್ ಮತ್ತು ಪ್ರೋಟೀನ್ ಹಸಿವು ಮತ್ತು ತೂಕವನ್ನು ನಿಯಂತ್ರಿಸುತ್ತದೆ (Controls hungry and weight). ಇನ್ನೂ 100 ಗ್ರಾಂ ಕುಂಬಳಕಾಯಿ ಬೀಜಗಳು ಕೇವಲ 164 ಕ್ಯಾಲೊರಿಗಳನ್ನು ಹೊಂದಿವೆ (100 grams of pumpkin seeds has only 164 calories) ಎಂದು ವರದಿಗಳು ತಿಳಿಸಿವೆ.

* ಕುಂಬಳಕಾಯಿ ಬೀಜಗಳಲ್ಲಿನ ಫೈಟೊಕೆಮಿಕಲ್ ಸಂಯುಕ್ತಗಳು (Phytochemical compounds) ಕೂದಲು ಉದುರುವಿಕೆಗೆ ಕಾರಣವಾಗುವ ಹಾರ್ಮೋನ್ ಡೈಹೈಡ್ರೊಟೆಸ್ಟೊಸ್ಟೆರಾನ್ (ಡಿಎಚ್ ಟಿ) ಉತ್ಪಾದನೆಯನ್ನು ತಡೆಗಟ್ಟಲು ಸಹಾಯ ಮಾಡುತ್ತವೆ. ಇದರಿಂದಾಗಿ ಕೂದಲು ಉದುರುವ ಸಮಸ್ಯೆ ಕ್ರಮೇಣವಾಗಿ ಕಡಿಮೆಯಾಗುವುದು.

ಇದನ್ನು ಓದಿ : ಸಸ್ಪೆಂಡ್ ಮಾಡಿದ ಹಿರಿಯ ಅಧಿಕಾರಿಯ ಕಚೇರಿ ಮುಂದೆಯೇ Tea Shop ಇಟ್ಟ ಇನ್ಸ್‌ಪೆಕ್ಟರ್‌ ; ವಿಡಿಯೋ ವೈರಲ್.!

ಕುಂಬಳಕಾಯಿ ಬೀಜಗಳಲ್ಲಿನ ಡಿಎಚ್ ಟಿ ಮಟ್ಟವನ್ನು ಕಡಿಮೆ ಮಾಡಿ ಕೂದಲು ಉದುರುವಿಕೆ ನಿಧಾನಗೊಳಿಸಿ, ಇರುವ ಕೂದಲನ್ನು ಸಂರಕ್ಷಿಸಲು (To preserve existing hair) ಸಹಾಯ ಮಾಡುತ್ತದೆ.

* ಈ ಬೀಜಗಳಲ್ಲಿ ಇರುವ ಸತುವು ದೇಹವನ್ನು ಸೋಂಕುಗಳ ವಿರುದ್ಧ ಹೋರಾಡುವ ಸಾಮರ್ಥ್ಯ ನೀಡುತ್ತದೆ. ಪ್ರತಿರಕ್ಷಣಾ ವ್ಯವಸ್ಥೆಯನ್ನು (The immune system) ಬಲಪಡಿಸುತ್ತದೆ.

ಇದನ್ನು ಓದಿ : ಮಹಾಕುಂಭ ಮೇಳಕ್ಕೆ ಮತ್ತೇ ವಿಶೇಷ ಎಕ್ಸ್‌ಪ್ರೆಸ್ Railway ಸಂಚಾರ ; ಇಲ್ಲದೇ ಸಂಪೂರ್ಣ ಮಾಹಿತಿ.!

* ಇದರಲ್ಲಿರುವ ಕ್ಯಾರೊಟಿನಾಯ್ಡ್‌ಗಳು ಮತ್ತು ಆಂಟಿಆಕ್ಸಿಡೆಂಟ್‌ಗಳು ದೇಹದಲ್ಲಿನ ಸ್ವತಂತ್ರ ರಾಡಿಕಲ್‌ಗಳ ವಿರುದ್ಧ ಕೆಲಸ (Work against free radicals) ಮಾಡುತ್ತವೆ.

* ಹೃದಯದ ಲಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ.

* ಒಮೆಗಾ -3 ಮತ್ತು ಒಮೆಗಾ -6 ಕೊಬ್ಬಿನಾಮ್ಲಗಳು ಕೆಟ್ಟ ಕೊಲೆಸ್ಟ್ರಾಲ್ (LDL), ಉರಿಯೂತವನ್ನು ಕಡಿಮೆ ಮಾಡುತ್ತವೆ.

ಇದನ್ನು ಓದಿ : Strange Tradition : ಈ ರಾಜ್ಯದಲ್ಲಿ ಅಣ್ಣನನ್ನೇ ಮದುವೆಯಾಗ್ತಾಳೆ ತಂಗಿ ; ತಪ್ಪಿದರೆ ಕಟ್ಟಬೇಕಾಗುತ್ತದೆ ಭಾರೀ ದಂಡ.!

* ವಿಟಮಿನ್ ಇ ಹೊಂದಿರುವುದರಿಂದ ಉರಿಯೂತವನ್ನು ಕಡಿಮೆ ಮಾಡುವ ಗುಣ (Anti- inflammatory properties) ಹೊಂದಿದೆ.

* ಕುಂಬಳಕಾಯಿ ಬೀಜವು ಕಬ್ಬಿಣ, ಸೆಲೆನಿಯಂ, ವಿಟಮಿನ್ ಇ ಮತ್ತು ಉತ್ಕರ್ಷಣ ನಿರೋಧಕಗಳಿಂದ (Antioxidant) ಸಮೃದ್ಧವಾಗಿದೆ. ಇವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಉತ್ತಮವಾಗಿವೆ.

* ಈ ಬೀಜಗಳ ನಿಯಮಿತ ಸೇವನೆಯಿಂದ ಮೂಳೆಗಳು ಬಲಗೊಳ್ಳುತ್ತವೆ.

* ಕುಂಬಳಕಾಯಿ ಬೀಜಗಳು ಇನ್ಸುಲಿನ್ ಅನ್ನು ಸುಧಾರಿಸಿ, ಮಧುಮೇಹದಿಂದಾಗುವ ತೊಂದರೆಗಳನ್ನು ತಡೆಯುತ್ತವೆ (Improve insulin, prevent complications of diabetes).

ಇದನ್ನು ಓದಿ : ಕೇಂದ್ರ ಬಜೆಟ್​ – 2025 : ರೈಲ್ವೆಗೆ ರೂ. 2.60 ಲಕ್ಷ ಕೋಟಿ ಮೀಸಲು ; ಕರ್ನಾಟಕಕ್ಕೆ ಬಂಪರ್​, ಇಲ್ಲಿದೆ ಮಾಹಿತಿ.!

* ನ್ಯೂಟ್ರಿಷನ್ ರಿಸರ್ಚ್ ನಡೆಸಿದ ಅಧ್ಯಯನದ ಪ್ರಕಾರ, ಕುಂಬಳಕಾಯಿ ಬೀಜಗಳನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಂಡಿದ್ದ ಜನರು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಿಕೊಂಡಿದ್ದಾರೆ (Lower sugar levels) ಎನ್ನಲಾಗಿದೆ.

* ಕುಂಬಳಕಾಯಿ ಬೀಜಗಳು ಕಬ್ಬಿಣ ಮತ್ತು ಮ್ಯಾಂಗನೀಸ್‌ನ ಮೂಲವಾಗಿವೆ. ಕಬ್ಬಿಣವು ದೇಹದಲ್ಲಿನ ರಕ್ತಹೀನತೆಯನ್ನು (Anemia) ತೆಗೆದು ಹಾಕುವಲ್ಲಿ ಸಹಾಯ ಮಾಡುತ್ತದೆ. ಇನ್ನೂ ಮ್ಯಾಂಗನೀಸ್ ದೇಹ ಮತ್ತು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಕುಂಬಳಕಾಯಿ ಬೀಜಗಳು ಕ್ಯಾನ್ಸರ್ ಮೇಲೆ ಸಕಾರಾತ್ಮಕ ಪರಿಣಾಮಗಳನ್ನು (positive effects) ಬೀರುತ್ತವೆ ಎಂಬ ಅಂಶವನ್ನು ಅಧ್ಯಯನಗಳು ಕಂಡು ಹಿಡಿದಿವೆ.

WhatsApp Channel Join Now
Telegram Group Join Now
Instagram Account Follow Now
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments

error: Content is protected !!