ಜನಸ್ಪಂದನ ನ್ಯೂಸ್, ಡೆಸ್ಕ್ : ಪಾನಿಪುರಿ ಯಾರಿಗಿಷ್ಟ ಇಲ್ಲ ಹೇಳಿ, ಮಕ್ಕಳಿಂದೂ ಹಿಡಿದು ವಯಸ್ಸಾದವರ ತನಕ ಹಲವರು ಈ ಪುಡ್ ನ್ನು ಇಷ್ಟಾಪಟ್ಟು ಬಾಯಿ ಚಪ್ಪರಿಸಿ ತಿನ್ನುತ್ತಾರೆ.
ಆದರೆ ಇನ್ಮುಂದೆ ಪಾನಿಪುರಿಯನ್ನು ಬಾಯಿ ಚಪ್ಪರಿಸಿ ತಿನ್ನುವುದಕ್ಕಿಂತ ಮುಂಚೆ ಈ ವಿಡಿಯೋ ನೋಡಿದ್ರೆ ಆರೋಗ್ಯ ದೃಷ್ಟಿಯಿಂದ ನಿಮಗೆ ಒಳ್ಳೆಯದು.
ಇದನ್ನು ಓದಿ : Special news : ಈ ರಕ್ತದ ಗುಂಪು ಹೊಂದಿದವರಲ್ಲಿ ಪಾರ್ಶ್ವವಾಯು ಅಪಾಯ ಹೆಚ್ಚು.!
ಪಾನಿಪುರಿಯ ಕುರಿತಾದ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದ ದೃಶ್ಯ ಜಾರ್ಖಂಡ್ನ ಗರ್ವಾ ಜಿಲ್ಲೆಯದ್ದು ಎಂದು ವರದಿಯಾಗಿದೆ.
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಇಬ್ಬರು ಪಾನಿಪೂರಿಗಳನ್ನು ಮಾಡುವ ಮೊದಲು ಹಿಟ್ಟನ್ನು ಕಾಲಿನಿಂದ ತುಳಿಯುತ್ತಿದ್ದಾರೆ. ಅಲ್ಲೇ ಇದ್ದ ವ್ಯಕ್ತಿಯೊಬ್ಬರು ಈ ವಿಡಿಯೋವನ್ನು ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಪಾನಿಪುರಿ ಮಾರುವ ಅರವಿಂದ್ ಯಾದವ್ ತನ್ನ ಸೋದರಳಿಯ ಯಾದವ್ ಜೊತೆ ಜಗಳ ಮಾಡಿಕೊಂಡಿದ್ದ. ಇಬ್ಬರ ನಡುವೆ ಗಲಾಟೆ ಬಳಿಕ ಯಾದವ್ ಈ ವಿಡಿಯೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಸ್ಥಳೀಯ ಅಧಿಕಾರಿಗಳು ಅರವಿಂದ್ ಯಾದವ್ ಮತ್ತು ಅವರ ಸಹಾಯಕ ಸತೀಶ್ ಅವರನ್ನು ಅರೆಸ್ಟ್ ಮಾಡಿದ್ದಾರೆ.
ಇದನ್ನು ಓದಿ : Job : ಲಿಖಿತ ಪರೀಕ್ಷೆಯಿಲ್ಲದೇ ರೈಲ್ವೆ ಇಲಾಖೆಯಲ್ಲಿದೆ ಭರ್ಜರಿ ಉದ್ಯೋಗವಕಾಶ; 2 ಲಕ್ಷದವರೆಗೆ ಸಂಬಳ.!
ಪಾನಿಪುರಿ ರುಚಿ ಹೆಚ್ಚಿಸಲು ಹಿಟ್ಟಿನಲ್ಲಿ ಯೂರಿಯಾ ಮತ್ತು ಹಾರ್ಪಿಕ್ ಬೆರೆಸಿದ್ದಾಗಿ ಅರವಿಂದ್ ಪೊಲೀಸರ ಮುಂದೆ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಇವರಿಂದ ಹರಳೆಣ್ಣೆಯನ್ನು ಹೋಲುವ ಬಿಳಿ ದ್ರವದ ಬಾಟಲ್ವವೊಂದನ್ನೂ ಪೊಲೀಸರು ಪತ್ತೆ ಮಾಡಿದ್ದಾರೆ. ಅದನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಇವರ ಪಾನಿಪುರಿ ತಯಾರಿಕಾ ಕೇಂದ್ರವನ್ನು ಸೀಲ್ ಮಾಡಲಾಗಿದೆ.
गुपचुप खाने वाले हो जाएं सावधान! झारखण्ड के गढ़वा का वीडियो सोशल मीडिया पर वायरल
पुलिस ने किया है गिरफ्तार.. जांच जारी #JharkhandNews #Gadwa #Jharkhand pic.twitter.com/0hvOL1tVvT— Dhananjay Mandal (@dhananjaynews) October 17, 2024