Friday, October 18, 2024
spot_img
spot_img
spot_img
spot_img
spot_img
spot_img
spot_img

ಸಂವಿಧಾನಕ್ಕಿಂತ ಯಾವುದೇ ಧಾರ್ಮಿಕ ನಂಬಿಕೆ ದೊಡ್ಡದಲ್ಲ : ಹೈಕೋರ್ಟ್ ಮಹತ್ವದ ತೀರ್ಪು

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ನಂಬಿಕೆಯ ವಿಷಯಗಳಲ್ಲಿ ವೈಯಕ್ತಿಕ ಸ್ವಾತಂತ್ರ್ಯದ ಮಹತ್ವವನ್ನು ಒತ್ತಿ ಹೇಳಿರುವ ಕೇರಳ ಹೈಕೋರ್ಟ್, ಸಂವಿಧಾನಕ್ಕಿಂತ ಯಾವುದೇ ಧಾರ್ಮಿಕ ನಂಬಿಕೆ ಶ್ರೇಷ್ಠವಲ್ಲ ಎಂದು ಮಹತ್ವದ ತೀರ್ಪು ನೀಡಿದೆ.

ಕೇರಳದ ಮಾಜಿ ವಿತ್ತ ಸಚಿವ ಥಾಮಸ್‌ ಐಸಾಕ್‌ ಅವರು ಮಾರ್ಕಸ್‌ ಲಾ ಕಾಲೇಜಿಗೆ ಭೇಟಿ ನೀಡಿದ್ದ ಸಮಯದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯೊಬ್ಬರು ಅವರ ಕೈ ಕುಲುಕಿದ್ದರು.

ಇದನ್ನು ಓದಿ : Video : ನಾಲ್ಕು ದೈತ್ಯಾಕಾರದ ಹೆಬ್ಬಾವುಗಳೊಂದಿಗೆ ಆಟವಾಡಲು ಹೋದ ಯುವಕ; ಮುಂದೆನಾಯ್ತು.?

ಈ ಘಟನೆಯನ್ನು ಖಂಡಿಸಿದ್ದ ಅಬ್ದುಲ್‌ ನೌಶಾದ್‌ ಮತ್ತೂಬ್ಬ ಗಂಡಸಿನ ಕೈ ಮುಟ್ಟುವುದು ಶರಿಯಾ ಕಾನೂನಿನ ಪ್ರಕಾರ ಅಪರಾಧ ಎಂದು ಟೀಕೆ ಮಾಡಿದ್ದರು.

ಘಟನೆಯ ನಂತರ, ನೌಶಾದ್ ವಿದ್ಯಾರ್ಥಿನಿಯನ್ನು ಖಂಡಿಸುವ ವಿಡಿಯೋವನ್ನು ಪೋಸ್ಟ್ ಮಾಡಿ, ಇನ್ನೊಬ್ಬ ವ್ಯಕ್ತಿಯನ್ನು ಸ್ಪರ್ಶಿಸುವ ಮೂಲಕ ವ್ಯಭಿಚಾರ ಎಸಗಿದ್ದಾಳೆ ಎಂದು ಆರೋಪಿಸಿದ್ದಾರೆ.

ಇದನ್ನು ಓದಿ : Special news : ಮನೆಯಲ್ಲಿ ಸಂಗ್ರಹಿಸಿಟ್ಟ ನೀರನ್ನು ಎಷ್ಟು ದಿನ ಬಳಸಬಹುದು.?

ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯ ಕುಟುಂಬದವರು ತನ್ನ ವಿರುದ್ಧ ದಾಖಲಿಸಿದ್ದ ಪ್ರಕರಣದ ರದ್ದು ಕೋರಿ ನೌಶಾದ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ನ್ಯಾಯಾಲಯವು ತನ್ನ ತೀರ್ಪಿನಲ್ಲಿ ವಿದ್ಯಾರ್ಥಿಗಳ ಹಕ್ಕುಗಳನ್ನು ಎತ್ತಿಹಿಡಿದಿದೆ, ಧರ್ಮದಲ್ಲಿ, ವಿಶೇಷವಾಗಿ ಇಸ್ಲಾಂನಲ್ಲಿ ಯಾವುದೇ ಬಲವಂತವಿಲ್ಲ ಎಂದು ಹೇಳಿದೆ. ತಮ್ಮ ನಂಬಿಕೆಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ವ್ಯಕ್ತಿಗಳ ಹಿತಾಸಕ್ತಿಗಳನ್ನು ಸಂವಿಧಾನವು ರಕ್ಷಿಸುತ್ತದೆ ಎಂದು ನ್ಯಾಯಾಲಯ ಒತ್ತಿಹೇಳಿದೆ.

ಇದನ್ನು ಓದಿ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ನೌಶಾದ್ ಅವರ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯ, ಧಾರ್ಮಿಕ ಆಚರಣೆಗಳು ವೈಯಕ್ತಿಕ ಆಯ್ಕೆಗಳಾಗಿವೆ ಮತ್ತು ಅವುಗಳನ್ನು ಇತರರ ಮೇಲೆ ಹೇರಲಾಗುವುದಿಲ್ಲ ಎಂದು ಹೇಳಿದೆ.

ಭಾರತದಲ್ಲಿ ಸಂವಿಧಾನವೇ ಶ್ರೇಷ್ಠವಾಗಿದ್ದು, ಯಾವುದೇ ಧಾರ್ಮಿಕ ನಂಬಿಕೆಗಳು ಇದಕ್ಕಿಂತ ಮಿಗಿಲಲ್ಲ. ಅಲ್ಲದೆ ಈ ಪ್ರಕರಣವನ್ನು ರದ್ದು ಮಾಡಲು ಸಾಧ್ಯವಿಲ್ಲ. ಏಕೆಂದರೆ ಭಾರತದಲ್ಲಿ ಧಾರ್ಮಿಕ ನಂಬಿಕೆಯನ್ನು ಹೇರುವುದು ಸರಿಯಲ್ಲ ಎಂದು ನ್ಯಾಯಪೀಠ ತನ್ನ ತೀರ್ಪು ನೀಡಿದೆ ಎಂದು ವರದಿಯಿಂದ ತಿಳಿದು ಬಂದಿದೆ.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img