ಜನಸ್ಪಂದನ ನ್ಯೂಸ್, ಡೆಸ್ಕ್ : ವ್ಯಕ್ತಿಯೋರ್ವ ತಾನು ನಿಜವಾದ ಕಾಡು ಮನುಷ್ಯ ಎಂದು ಹೇಳಿಕೊಂಡು ಕಾಡಿನಲ್ಲಿ ನಾಲ್ಕು ಹೆಬ್ಬಾವುಗಳೊಂದಿಗೆ ಸರಸವಾಡಲು ಮುಂದಾಗಿ ಪೇಚಿಗೆ ಸಿಲುಕಿದ ಘಟನೆ ನಡೆದಿದೆ.
ಇದನ್ನು ಓದಿ : ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಮಸಾಜ್ ಮಾಡಿಕೊಂಡ ಶಿಕ್ಷಕಿ; ವಿಡಿಯೋ Viral.!
ಸಾಮಾಜಿಕ ಜಾಲತಾಣದಲ್ಲಿ ತಾನು ನಿಜವಾದ ಕಾಡು ಮನುಷ್ಯ ಎಂದು ಹೇಳಿಕೊಂಡಿದ್ದು, ಸ್ಥಳೀಯರಿಗೆ ಎಲ್ಲಿಯೇ ಹಾವು ಕಂಡರೂ ಈತನಿಗೆ ಕರೆ ಮಾಡಿ ಹಾವು ಹಿಡಿದುಕೊಂಡು ಹೋಗಿ ಎಂದು ಹೇಳುತ್ತಾರೆ.
ಹೀಗೆ ಹಿಡಿದ ಹಾವುಗಳೆಲ್ಲವನ್ನೂ ಒಂದು ಸ್ಥಳದಲ್ಲಿ ಕೂಡಿ ಹಾಕಿ ಅವುಗಳಿಗೆ ಆಹಾರ ನೀಡುತ್ತಾನೆ. ಒಟ್ಟಿಗೆ ಹಾವುಗಳ ಸಂಖ್ಯೆ ಅಧಿಕವಾದ ನಂತರ ಅವುಗಳನ್ನು ಹೋಗಿ ಕಾಡಿಗೆ ಬಿಟ್ಟು ಬರುತ್ತಾನೆ.
ಇದನ್ನು ಓದಿ : ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಈತನಿಗೆ ವಿಚಿತ್ರ ಅಭ್ಯಾಸವೊಂದಿದೆ. ಅದೇನೆಂದರೆ ಈತ ಹಾವುಗಳು ವಾಸವಿರುವ ಕಾಡಿಗೆ ಹೋಗಿ ವಿಷಕಾರಿ, ದೊಡ್ಡ ಗಾತ್ರದ ಹಾವುಗಳನ್ನು ಹಿಡಿದು ಅವುಗಳೊಂದಿಗೆ ಆಟವಾಡುತ್ತಾನೆ.
ವೈರಲ್ ವಿಡಿಯೋದಲ್ಲಿರುವ ದೃಶ್ಯ :
ಹೀಗೆ ತಾನು ಮನೆಯಲ್ಲಿ ಇಟ್ಟುಕೊಂಡಿದ್ದ ಸುಮಾರು 10 ಅಡಿ ಉದ್ದದ ಅಪಾಯಕಾರಿ ನಾಲ್ಕು ಹೆಬ್ಬಾವುಗಳನ್ನು ಕಾಡಿಗೆ ಬಿಡಲು ಹೋಗಿದ್ದಾನೆ. ಈ ವೇಳೆ ಎಲ್ಲ ಹಾವುಗಳ ತಲೆಯನ್ನು ಒಟ್ಟಿಗೆ ಹಿಡಿದುಕೊಂಡು ಎಲ್ಲ ನನ್ನ ಶಕ್ತಿ ನಾಲ್ಕು ಹೆಬ್ಬಾವುಗಳಿಗೆ ಸಮವಿದೆ ಎಂದು ಶಕ್ತಿ ಪ್ರದರ್ಶನ ಮಾಡಲು ಮುಂದಾಗಿದ್ದಾನೆ.
ಇದನ್ನು ಓದಿ : Health : ಬಿದ್ದ ಜಾಗದಲ್ಲಿ ಮತ್ತೆ ಹುಟ್ಟುತ್ತೆ ಹೊಸ ಹಲ್ಲು ; ಅದ್ಭುತ ಔಷಧ ಕಂಡುಹಿಡಿದ ಸಂಶೋಧಕರು.!
ಆದರೆ ನಾಲ್ಕು ಹೆಬ್ಬಾವುಗಳು ಒಂದೊಂದಾಗಿ ಆತನ ಕಾಲು ಹಾಗೂ ಕೈಗಳಿಗೆ ಸುತ್ತಿಕೊಂಡಿವೆ. ಕಾಲಿಗೆ ಸುತ್ತಿಕೊಳ್ಳುತ್ತಿದ್ದ ಹೆಬ್ಬಾವುಗಳ ಹಿಡಿತವನ್ನು ತಪ್ಪಿಸಿಕೊಂಡಿದ್ದಾನೆ. ಕಾಲಿನಿಂದ ಹಿಡಿತ ಬಿಡಿಸಿದಾಕ್ಷಣ ಆತನ ಕೈಗಳನ್ನು ಹಾವುಗಳು ಸುತ್ತಿಕೊಂಡಿವೆ. ಆತನ ಎರಡೂ ಕೈಗಳ ಭುಜದವರೆಗೆ ಹಾವುಗಳು ಸುತ್ತಿಕೊಂಡಿವೆ.
ಈ ವೇಳೆ ಹೆಬ್ಬಾವುಗಳ ಬಾಯಿಯ ಹಿಡಿತವನ್ನು ಬಿಟ್ಟರೆ ಆತನನ್ನು ಸುಲಭವಾಗಿ ನುಂಗಿ ನೀರು ಕುಡಿಯುತ್ತಿದ್ದವು. ಆದರೆ, ಆತ ಕಷ್ಟಪಟ್ಟು ಹಾವಿನ ಹಿಡಿತದಿಂದ ಬಿಡಿಸಿಕೊಳ್ಳಲು ಒದ್ದಾಡಿದ್ದಾನೆ. ಕೊನೆಗೆ ನಾಲ್ಕು ಹೆಬ್ಬಾವುಗಳ ಪೈಕಿ ಎರಡು ಹೆಬ್ಬಾವು ಆತನ ಕೈಗಳಿಂದ ತಪ್ಪಿಸಿಕೊಂಡು ಆತನಿಗೆ ಕಚ್ಚಿವೆ.
View this post on Instagram