Friday, October 18, 2024
spot_img
spot_img
spot_img
spot_img
spot_img
spot_img
spot_img

Special news : ಮಧ್ಯಾಹ್ನ ಊಟ ಮಾಡಿ ಗಂಟೆಗಟ್ಟಲೆ ನಿದ್ದೆ ಮಾಡ್ತೀರಾ.?

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್, ಡೆಸ್ಕ್ : ಮನುಷ್ಯನಿಗೆ ಊಟ ಹೇಗೆ ಮುಖ್ಯವೋ, ಅದೇ ರೀತಿ ವಿಶ್ರಾಂತಿಯೂ ಮುಖ್ಯ. ಪ್ರತೀ ಆರೋಗ್ಯವಂತ ವ್ಯಕ್ತಿಗೆ 7 ರಿಂದ 8 ಗಂಟೆಗಳ ನಿದ್ದೆ ಅವಶ್ಯಕವಾಗಿರುತ್ತದೆ.

ಆದರೆ ಮಧ್ಯಾಹ್ನ ಊಟದ ಮಾಡಿದ ಬಳಿಕ ಮಲಗುವುದು ಹಲವರಿಗೆ ಅಭ್ಯಾಸ. ಪ್ರತಿದಿನ ಊಟವಾದ ಮೇಲೆ ಮಲಗದೇ ಇದ್ದರೆ ಏನೋ ಕಳೆದುಕೊಂಡ ಭಾವ ಆವರಿಸುತ್ತದೆ.

ಇದನ್ನು ಓದಿ : 2 ಗಂಟೆಗಳಲ್ಲಿ ಫೋನ್​ ನಂಬರ್‌ ಬ್ಲಾ‌ಕ್‌ ಆಗುತ್ತೆ, 9 ಒತ್ತಿ; ಈ call ಬಂದ್ರೆ ಹುಷಾರ್.!

ಹಲವು ಅಧ್ಯಯನಗಳ ಪ್ರಕಾರ, ಮಧ್ಯಾಹ್ನದ ನಿದ್ದೆ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಪ್ರತಿದಿನ ಊಟವಾದ ಬಳಿಕ 10 ರಿಂದ 15 ನಿಮಿಷ ನಿದ್ದೆ ಮಾಡುವುದರಿಂದ ಬಹಳಷ್ಟು ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಆದರೆ ಮಧ್ಯಾಹ್ನ ಗಂಟೆಗಟ್ಟಲೆ ಮಲಗಿದರೆ ಏನಾಗುತ್ತದೆ ಗೊತ್ತಾ.?

ನ್ಯಾಷನಲ್ ಸ್ಲೀಪ್ ಫೌಂಡೇಶನ್ ಪ್ರಕಾರ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ವಯಸ್ಕರು ಮಧ್ಯಾಹ್ನದ ಸಮಯದಲ್ಲಿ ಚಿಕ್ಕ ನಿದ್ರೆ ಮಾಡುತ್ತಾರೆ. ಜಾಗರೂಕತೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು ಸಣ್ಣ ನಿದ್ರೆ ಸಹಾಯ ಮಾಡುತ್ತದೆ ಎಂದು ಹೇಳಿದೆ‌.

ಆರೋಗ್ಯ ತಜ್ಞರ ಪ್ರಕಾರ ನಾವು ಮಧ್ಯಾಹ್ನ ಆಹಾರವನ್ನು ಸೇವಿಸಿದಾಗ, ಜೀರ್ಣಾಂಗ ವ್ಯವಸ್ಥೆಯಲ್ಲಿ ರಕ್ತ ಪರಿಚಲನೆಯಲ್ಲಿ ವ್ಯತ್ಯಾಸ ಆಗುತ್ತದೆ.

ಈ ಕಾರಣದಿಂದಾಗಿ ಮೆದುಳಿಗೆ ರಕ್ತ ಪೂರೈಕೆಯು ಕಡಿಮೆ ಆಗಬಹುದು. ಈ ಕಾರಣದಿಂದ ನಿದ್ರೆ ಮತ್ತು ಆಯಾಸ ಆಗಬಹುದು.

ಇದನ್ನು ಓದಿ : ಇನ್ಮುಂದೆ ಅಪ್ರಾಪ್ತರು e-scooter ಓಡಿಸಬಹುದು : ಕೇಂದ್ರ ಸರ್ಕಾರದ ನಿರ್ಧಾರ ; condition apply.!

ಮಧ್ಯಾಹ್ನ ಊಟದ ನಂತರ ದೇಹದಲ್ಲಿ ಗ್ಲೂಕೋಸ್ ಪ್ರಮಾಣ ಹೆಚ್ಚುತ್ತದೆ. ಇದರಿಂದ ಹೆಚ್ಚು ನಿದ್ರೆ ಮಾಡುತ್ತಾರೆ. ಇದು ಸಾಮಾನ್ಯ ಪ್ರಕ್ರಿಯೆ, ಆತಂಕ ಪಡುವ ಅಗತ್ಯವಿಲ್ಲ.

ಆದರೆ ಇದು ಅಭ್ಯಾಸವಾದರೆ ದೀರ್ಘಾವಧಿಯಲ್ಲಿ ಅನೇಕ ನಷ್ಟಗಳನ್ನು ಉಂಟು ಮಾಡಬಹುದು.

ಹಗಲಿನಲ್ಲಿ ಹೆಚ್ಚು ಹೊತ್ತು ನಿದ್ದೆ ಮಾಡಿದರೆ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img