ಜನಸ್ಪಂದನ ನ್ಯೂಸ್, ಕೊಪ್ಪಳ : ಬೆಂಗಳೂರಿನಲ್ಲಿ ಶಾಸಕ ಜನಾರ್ದನ ರೆಡ್ಡಿಯವರ ಕಾರು ಸೇರಿ ಮೂರು ಕಾರುಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಕಾರನ್ನು ಸೀಜ್ ಮಾಡಿ, ಗಂಗಾವತಿಗೆ ಟ್ರಾಫಿಕ್ ಪೊಲೀಸರು ಕೊಂಡೊಯ್ದಿದ್ದಾರೆ.
ಸಿಎಂ ಕಾನ್ವೆ ರೂಲ್ಸ್ ಬ್ರೇಕ್ ಮಾಡಿದ್ದ ಹಿನ್ನೆಲೆಯಲ್ಲಿ ಶಾಸಕ ಜನಾರ್ದನ ರೆಡ್ಡಿಯವರ ಕಾರು ಸೇರಿ ಮೂರು ಕಾರುಗಳನ್ನು ಸೀಜ್ ಮಾಡಿದ್ದಾರೆ.
ಇದನ್ನು ಓದಿ : 2 ಗಂಟೆಗಳಲ್ಲಿ ಫೋನ್ ನಂಬರ್ ಬ್ಲಾಕ್ ಆಗುತ್ತೆ, 9 ಒತ್ತಿ; ಈ call ಬಂದ್ರೆ ಹುಷಾರ್.!
ಜನಾರ್ದನ ರೆಡ್ಡಿಯವರ ರೇಂಜ್ ರೋವರ್ ಸೇರಿ ಬೆಂಬಲಿಗರ ಸ್ಕಾರ್ಪಿಯೋ ಹಾಗೂ ಫಾರ್ಚೂನರ್ ಕಾರುಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಅ. 5ರ ರಾತ್ರಿ ರಾಯಚೂರಿನಿಂದ ಜಿಂದಾಲ್ ವಿಮಾನ ನಿಲ್ದಾಣಕ್ಕೆ ಸಿಎಂ ಸಿದ್ದರಾಮಯ್ಯ ತೆರಳುತ್ತಿದ್ದಾಗ ನಿಯಮ ಉಲ್ಲಂಘಿಸಲಾಗಿತ್ತು. ಡಿವೈಡರ್ ಮೇಲೆಯೇ ಕಾರು ಹತ್ತಿಸಿ ಸಿಎಂ ಬರುತ್ತಿದ್ದ ಮಾರ್ಗದಲ್ಲೇ ಕಾರು ಚಲಾಯಿಸಿಕೊಂಡು ತೆರಳಿದ್ದರು.
ನಿಯಮ ಉಲ್ಲಂಘಿಸಿದ್ದರ ಹಿನ್ನೆಲೆ ಕಾರು ಚಾಲಕ ಹುಸೇನ್ ಸೇರಿದಂತೆ ಮೂವರ ಮೇಲೆ ಪ್ರಕರಣ ದಾಖಲಾಗಿತ್ತು.
ಇದನ್ನು ಓದಿ : ಇನ್ಮುಂದೆ ಅಪ್ರಾಪ್ತರು e-scooter ಓಡಿಸಬಹುದು : ಕೇಂದ್ರ ಸರ್ಕಾರದ ನಿರ್ಧಾರ ; condition apply.!
ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ದರು.
ಕಾರಿನಲ್ಲಿ ಜನಾರ್ದನರಡ್ಡಿ ಇದ್ದರು. ಆ ಕಾರು ಹಾಗೂ ಇನ್ನೆರೆಡು ಕಾರುಗಳ ಮೇಲೆ ಗಂಗಾವತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಎಂ ಕಾನ್ ವೇಗಾಗಿ ಸ್ವಲ್ಪ ಸಮಯ ಝಿರೋ ಟ್ರಾಫಿಕ್ ಮಾಡಲಾಗಿತ್ತು. ಆದರೆ ಕೆಲವೊಮ್ಮೆ ಸಮಯ ಹೆಚ್ಚು ಕಡಿಮೆಯಾಗುತ್ತದೆ. ಆದರೆ ಡಿವೈಡರ್ ದಾಟಿ ವೇಗದಲ್ಲಿ ಕಾರನ್ನು ಓಡಿಸಲಾಗಿದೆ, ಈ ಪ್ರಕರಣದ ವಿಚಾರಣೆಯಲ್ಲಿ ನಡೆಯುತ್ತಿದೆ ಎಂದು ಎಸ್ಪಿ ಡಾ. ರಾಮ ಅರಸಿದ್ದಿ ತಿಳಿಸಿದ್ದರು.