Sunday, September 8, 2024
spot_img
spot_img
spot_img
spot_img
spot_img
spot_img
spot_img

ಅಂಚೆ ಇಲಾಖೆಯಲ್ಲಿ ನೇಮಕಾತಿ : ಆನ್‌ಲೈನ್‌ನಲ್ಲಿಯೇ ಅರ್ಜಿ ಸಲ್ಲಿಸಿ ; ಅಧಿಸೂಚನೆ, ಖಾಲಿ ಹುದ್ದೆ, ಕೊನೆ ದಿನಾಂಕ ಪರಿಶೀಲಿಸಿ.!

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್‌, ನೌಕರಿ : ಭಾರತೀಯ ಅಂಚೆ ಇಲಾಖೆ (Post Office Recruitment 2024) ಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಿದೆ. ದೇಶಾದ್ಯಂತ ಬರೋಬ್ಬರಿ 98,083 ಹುದ್ದೆಗಳು ಖಾಲಿ ಇದ್ದು, 10ನೇ ತರಗತಿ ಮತ್ತು 12ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಸದ್ಯ ಅಧಿಕೃತ ಅಧಿಸೂಚನೆ ಇನ್ನೂ ಬಿಡುಗಡೆಯಾಗಿಲ್ಲ. ಅದಾದ ಬಳಿಕವಷ್ಟೇ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕದ ಬಗ್ಗೆ ಮಾಹಿತಿ ಲಭಿಸಲಿದೆ. ಪರೀಕ್ಷೆ ಮೂಲಕ ಈ ನೇಮಕಾತಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ವಿದ್ಯಾರ್ಥಿಗಳಿಗೆ Good News : ರಾಜ್ಯ ಸರ್ಕಾರದಿಂದ ಸ್ಕಾಲರ್ಶಿಪ್.!

ಹುದ್ದೆಗಳ ವಿವರ :

ಜಿಡಿಎಸ್‌ (Gramin Dak Sevak), ಪೋಸ್ಟ್‌ಮ್ಯಾನ್‌, ಎಂಟಿಎಸ್‌, ಪೋಸ್ಟಲ್‌ ಅಸಿಸ್ಟಂಟ್‌, ಮೇಲ್‌ ಗಾರ್ಡ್‌, ಸೋರ್ಟಿಂಗ್‌ ಅಸಿಸ್ಟಂಟ್‌ ಸೇರಿದಂತೆ ವಿವಿಧ ಹುದ್ದೆಗಳಿವೆ.

ಕರ್ನಾಟಕದಲ್ಲಿ ಒಟ್ಟು 5,731 ಹುದ್ದೆಗಳಿವೆ. ರಾಜ್ಯದಲ್ಲಿ ಎಂಟಿಎಸ್‌ : 1,754, ಪೋಸ್ಟ್‌ಮ್ಯಾನ್ : 3,887 ಮತ್ತು ಮೇಲ್ ಗಾರ್ಡ್ : 90 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. 

ಅರ್ಜಿ ಶುಲ್ಕ : 

ಸಾಮಾನ್ಯ/ಒಬಿಸಿ/ಇಡಬ್ಲ್ಯುಎಸ್‌ ವಿಭಾಗದ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 100 ರೂ. ಪಾವತಿಸಬೇಕು. ಮಹಿಳಾ/ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇಲ್ಲ.

ವಯೋಮಿತಿ : 

  • 18ರಿಂದ 40 ವರ್ಷದೊಳಗಿನ ಆಸಕ್ತರು ಅರ್ಜಿ ಸಲ್ಲಿಸಬಹುದು.
  • ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ.
  • ಒಬಿಸಿ : 3 ವರ್ಷ, ಎಸ್‌ಸಿ/ಎಸ್‌ಟಿ : 5 ವರ್ಷ ಮತ್ತು ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ 10 ವರ್ಷಗಳ ಸಡಿಲಿಕೆ ಇದೆ.

Apex : ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್‌ನಲ್ಲಿ ಖಾಲಿಯಿರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಆಯ್ಕೆಯ ವಿಧಾನ : 

ಲಿಖಿತ ಪರೀಕ್ಷೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. 3 ಗಂಟೆಗಳ ಈ ಪರೀಕ್ಷೆ 100 ಅಂಕಗಳನ್ನು ಒಳಗೊಂಡಿದೆ. ಗಣಿತ, ರೀಸನಿಂಗ್‌, ಹಿಂದಿ, ಇಂಗ್ಲಿಷ್‌ ವಿಷಯಗಳ ತಲಾ 25 ಅಂಕಗಳ ಪ್ರಶ್ನೆಗಳಿರುತ್ತವೆ. ಅಭ್ಯರ್ಥಿಗಳು ಸ್ಥಳೀಯ ಭಾಷೆಯ ಮೇಲಿನ ಹಿಡಿತ ಹೊಂದಿರುವುದು ಕಡ್ಡಾಯ. ಜತೆಗೆ ಕಂಪ್ಯೂಟರ್‌ ಜ್ಞಾನ ಮತ್ತು ಕಂಪ್ಯೂಟರ್‌ ಕಲಿಕೆಯ ಪ್ರಮಾಣ ಪತ್ರ ಹೊಂದಿರಬೇಕು.

ಅರ್ಜಿ ಸಲ್ಲಿಸುವ ವಿಧಾನ :

  • ಲಿಂಕ್‌ ಓಪನ್‌ ಆದ ನಂತರ ಪುಟದ ಬಲಭಾಗದ ಮೇಲೆ ಇರುವ Registration ಮೇಲೆ ಕ್ಲಿಕ್‌ ಮಾಡಿ ಹೆಸರು ನೋಂದಾಯಿಸಿ. ಇದಕ್ಕಾಗಿ ನಿಮ್ಮ ಹೆಸರು, ಲಿಂಗ, ಫೋನ್‌ ನಂಬರ್‌, ಡೇಟ್‌ ಆಫ್‌ ಬರ್ತ್‌, ಇಮೇಲ್‌ ವಿಳಾಸ ಇತ್ಯಾದಿ ವಿವರ ನೀಡಬೇಕಾಗುತ್ತದೆ.
  • ಒಟಿಪಿ ನಮೂದಿಸಿದ ಮೇಲೆ ಲಭಿಸುವ ರಿಜಿಸ್ಟ್ರೇಷನ್‌ ನಂಬರ್‌ ಬಳಸಿ ಲಾಗಿನ್‌ ಆಗಿ.
  • ಸರಿಯಾದ ಮಾಹಿತಿ ನೀಡಿ ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ.
  • ಅಗತ್ಯವಾದ ಡಾಕ್ಯುಮೆಂಟ್‌, ಫೋಟೋ, ಸಹಿಗಳನ್ನು ಸರಿಯಾದ ಗಾತ್ರದಲ್ಲಿ ಅಪ್‌ಲೋಡ್‌ ಮಾಡಿ.
  • ಆನ್‌ಲೈನ್‌ ಮೂಲಕ (ಅಗತ್ಯವಿದ್ದವರು ಮಾತ್ರ) ಅರ್ಜಿ ಶುಲ್ಕ ಪಾವತಿಸಿ.
  • ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದೆ ಎನ್ನುವುದನ್ನು ಖಾತ್ರಿಪಡಿಸಿ Submit ಬಟನ್‌ ಮೇಲೆ ಕ್ಲಿಕ್‌ ಮಾಡಿ.
  • ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್‌ ಫಾರಂನ ಪ್ರಿಂಟ್‌ಔಟ್‌ ತೆಗೆದಿಟ್ಟುಕೊಳ್ಳಿ.

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ/Click here to apply

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img