ಜನಸ್ಪಂದನ ನ್ಯೂಸ್, ಡೆಸ್ಕ್ : ಬಸ್, ಟ್ರೇನ್, ಮೆಟ್ರೋ ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಮರ್ಯಾದೆ ಇಲ್ಲದೇ ಜೋಡಿಗಳು ಚುಂಬಿಸುತ್ತಿರುವ ಘಟನೆಗಳು ಸಾಮಾನ್ಯವಾಗಿ ಬಿಟ್ಟಿವೆ.
ಆದರೆ ಇಲ್ಲೊಂದು ಜೋಡಿ ಸವಾಲನ್ನು ಸ್ವೀಕರಿಸಿ ಜಾತ್ರೆಯಲ್ಲಿ ಎಲ್ಲರ ಮುಂದೆ ತಬ್ಬಿಕೊಂಡು ಚುಂಬಿಸಿದ ದೃಶ್ಯಗಳು ಹಲವರ ಮೊಬೈಲ್ನಲ್ಲಿ ಸೆರೆಯಾಗಿವೆ.
ಇದನ್ನು ಓದಿ : ನೀವು ಜೀವಮಾನ ಪೂರ್ತಿ ಒಂಟಿಯಾಗಿಯೇ ಕಳೀಬಾರದು ಅಂದ್ರೆ ಹೀಗೆ ಮಾಡಲೇ ಬೇಡಿ.!
ಇದೀಗ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲೂ ವೈರಲ್ ಆಗುತ್ತಿದೆ.
ಉತ್ತರ ಪ್ರದೇಶದ ಮೀರತ್ನ ಈ ಯುವ ಜೋಡಿಯನ್ನು ನೋಡಿದ ಪರಿಯಚಸ್ಥರು, ಸ್ಥಳೀಯರು ಇವರ ಸಂಬಂಧವನ್ನು ಪ್ರಶ್ನೆ ಮಾಡುತ್ತಿದ್ದರಂತೆ ನಿಮ್ಮಬ್ಬರ ನಡುವೆ ಏನಿದೆ? ಎಲ್ಲಾ ಕಡೆ ಜೊತೆಯಾಗಿ ಕೈ ಕೈ ಹಿಡಿದುಕೊಂಡು ಸುತ್ತಾಡ್ತೀರಾ ಎಂದು ಹಲವು ಪ್ರಶ್ನೆಗಳನ್ನು ಈ ಜೋಡಿ ಎದುರಿಸಿದೆ.
ಮೀರತ್ನ ನೌಚಂಡಿ ಮೇಳದಲ್ಲೂ ಈ ಜೋಡಿ ಜೊತೆಯಾಗಿ ಕಾಣಿಸಿಕೊಂಡಿದೆ. ಈ ವೇಳೆ ಸಿಕ್ಕ ಪರಿಚಯಸ್ಥರೂ ಮತ್ತೆ ಪ್ರಶ್ನಿಸಿ ಇವರನ್ನು ಹಂಗಿಸಿದ್ದಾರೆ. ಚುಚ್ಚು ಮಾತು, ಪ್ರಶ್ನೆಗಳಿಂದ ರೋಸಿ ಹೋದ ಜೋಡಿ ಇದನ್ನು ಸವಾಲಾಗಿ ಸ್ವೀಕರಿಸಿದೆ.
ಇದನ್ನು ಓದಿ : ಖಾಸಗಿ video ವೈರಲ್ ಮಾಡುವ ಬೆದರಿಕೆ ; ನಕಲಿ ಪೊಲೀಸಪ್ಪನ ವಿರುದ್ಧ ಲವ್, ಸೆಕ್ಸ್, ದೋಖಾ ಆರೋಪ.!
ಜಾತ್ರೆಯಲ್ಲಿ ಎಲ್ಲರ ಮುಂದೆಯೇ ಸುದೀರ್ಘವಾಗಿ ಕಿಸ್ ಮಾಡಿದ್ದಾರೆ. ಈ ಮೂಲಕ ತಮ್ಮ ಸಂಬಂಧವನ್ನು ಎಲ್ಲರ ಮುಂದೆ ಸಾಬೀತುಪಡಿಸಿದ್ದಾರೆ. ಈ ಜೋಡಿಗಳು ಚುಂಬಿಸುತ್ತಿದ್ದಂತೆ ಸುತ್ತ ಮುತ್ತ ನೆರೆದಿದ್ದವರು ಚಪ್ಪಾಳೆ, ಶಿಳ್ಳೆ ಹೊಡೆದು ಕುಣಿದು ಕುಪ್ಪಳಿಸಿದ್ದಾರೆ.
ಅಲ್ಲಿದ್ದ ಕೆಲವರು ಜೋಡಿಯ ಈ ಚುಂಬನ ದೃಶ್ಯಗಳನ್ನು ರೆಕಾರ್ಡ್ ಮಾಡದಂತೆ ಸೂಚಿಸಿದ್ದಾರೆ. ಅಷ್ಟರಲ್ಲೇ ಹಲವರ ಮೊಬೈಲ್ನಲ್ಲಿ ಈ ದೃಶ್ಯ ಸೆರೆಯಾಗಿದೆ. ಬಳಿಕ ಅಷ್ಟೇ ವೇಗದಲ್ಲಿ ಈ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿದೆ.
ಇದನ್ನು ಓದಿ : ಸೀರೆಯುಟ್ಟ ನಾರಿಯಿಂದ ‘ತೌಬಾ ತೌಬಾ’ ಸಾಂಗ್ ಗೆ ಸಖತ್ ಸ್ಟೆಪ್ಸ್ ; Video ಪುಲ್ ವೈರಲ್..!
ಈ ವಿಡಿಯೋ ವೈರಲ್ ಬಳಿಕ ಜೋಡಿಗೆ ಸಂಕಷ್ಟ ಎದುರಾಗಿದೆ. ಸಾರ್ವಜನಿಕ ಪ್ರದೇಶ, ಅದರಲ್ಲೂ ಜಾತ್ರೆಯಲ್ಲಿ ಈ ರೀತಿ ವರ್ತಿಸಿರುವುದು ಆಕ್ರೋಶಕ್ಕೆ ಗುರಿಯಾಗಿದೆ. ನೌಚಂಡಿ ಮೇಳ 1672ರಿಂದ ನಡೆಯುತ್ತಿದೆ. ಸಾಮಾನ್ಯವಾಗಿ ಜುಲೈ ತಿಂಗಳಲ್ಲಿ ಈ ಮೇಳ ನಡೆಯುತ್ತದೆ. ಈ ವೇಳೆ ಕೃಷಿ ಚಟುವಟಿಕೆಗಳಿಗೆ ಬ್ರೇಕ್ ಬಿದ್ದಿರುತ್ತದೆ. ಎತ್ತುಗಳ ಓಟದಿಂದ ಆರಂಭಗೊಂಡ ಈ ಜಾತ್ರೆಯಲ್ಲಿ ಹಲವು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತೆ ಎಂದು ವರದಿಯಾಗಿದೆ.
मेले में खुलेआम किसिंग का ये वीडियो फिलहाल मेरठ के नौचंदी मेले का बताया जा रहा है। कपल को खुलेआम kiss करने का चैलेंज मिला। कपल ने भी चैलेंज मानकर एकदूसरे को kiss कर मेले का माहौल बिगाड़ा।
Note: sensitive content pic.twitter.com/jnLAOEsh4S— shalu agrawal (@shaluagrawal3) July 21, 2024