Friday, October 18, 2024
spot_img
spot_img
spot_img
spot_img
spot_img
spot_img
spot_img

ಇಂದು “ಪುರಿ ಜಗನ್ನಾಥ”ನ “ರತ್ನ ಭಂಡಾರ”ದ ರಹಸ್ಯ ಬಯಲು ; ಭಂಡಾರಕ್ಕೆ ಇದೆಯಾ “ಸರ್ಪಗಳ ರಕ್ಷಣೆ”.?

spot_img
WhatsApp Group Join Now
Telegram Group Join Now
Instagram Account Follow Now

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಭಾರತವು ಪ್ರಸಿದ್ಧ ತೀರ್ಥ ಕ್ಷೇತ್ರಗಳಿಗೆ ಹೆಸರುವಾಸಿ. ಇಲ್ಲಿರುವ ದೇವಾಲಯಗಳು ವಿಭಿನ್ನ ವಾಸ್ತುಶಿಲ್ಪಗಳು, ಕೆತ್ತನೆಗಳು ಹಾಗೂ ಪುರಾಣ ಇತಿಹಾಸಗಳಿಂದ ಕೂಡಿದ್ದು, ಜನರನ್ನು ತನ್ನೆಡೆಗೆ ಸುಲಭವಾಗಿ ಸೆಳೆದುಕೊಳ್ಳುವ ಶಕ್ತಿಯನ್ನು ಪಡೆದುಕೊಂಡಿದೆ. ಅದರಲ್ಲೂ ದೇಶದ ಶ್ರೀಮಂತ ದೇವಾಲಯಗಳಲ್ಲಿ ಒಡಿಶಾದ ಪುರಿ ಜಗನ್ನಾಥ ದೇವಾಲಯ ಕೂಡ ಒಂದಾಗಿದೆ.

ಇತಿಹಾಸ ಪ್ರಸಿದ್ಧ ಪುರಿ ಜಗನ್ನಾಥ ದೇಗುಲದ ರತ್ನ ಭಂಡಾರವನ್ನು ಒಳಗೊಂಡಿದ್ದ ರಹಸ್ಯ ಕೋಣೆಯನ್ನು ಇಂದು ತೆರೆಯಲು ದೇವಾಲಯದ ಸಮಿತಿ ನಿರ್ಧರಿಸಿದೆ. ಈ ಹಿಂದೆ ದೇವಾಲಯದ ನೆಲಮಾಳಿಗೆಯನ್ನು ತೆರೆಯಬೇಕೇ ಅಥವಾ ಬೇಡವೇ ಎನ್ನುವುದರ ಬಗ್ಗೆ ಚರ್ಚೆ ನಡೆಯುತ್ತಿತ್ತು.

ಇದನ್ನೂ ಓದಿ : ಫೋಸ್ಟ್‌ ಆಫೀಸ್‌ ನಲ್ಲಿ 30,000ಕ್ಕೂ ಅಧಿಕ ಗ್ರಾಮೀಣ ಡಾಕ್ ಸೇವಕ ಹುದ್ದೆಗಳ ಭರ್ತಿ ; 10ನೇ ತರಗತಿ ಪಾಸಾಗಿದ್ದರೆ ಸಾಕು.!

2018ರಲ್ಲಿ ವಿಫಲವಾಗಿದ್ದ ಬಳಿಕ ಕೋರ್ಟ್​ ಅನುಮತಿ ಮೇರೆಗೆ ಒಡಿಶಾ ಸರ್ಕಾರವು ಮತ್ತೊಮ್ಮೆ ಜಗನ್ನಾಥ ದೇಗುಲದ ರತ್ನ ಭಂಡಾರವನ್ನು ಒಳಗೊಂಡ ರಹಸ್ಯ ಕೋಣೆಯನ್ನು ತೆರೆಯುವ ನಿರ್ಧರಿಸಲಾಗಿದೆ.

ಆ ರತ್ನ ಭಂಡಾರದಲ್ಲಿ ಪುರಾತನವಾದ ವಜ್ರ, ಚಿನ್ನ, ರತ್ನಗಳು, ರತ್ನ,  ರಾಜರ ಕಿರೀಟಗಳು ಮತ್ತು ಸಿಂಹಾಸನಗಳು ಸೇರಿದಂತೆ ಬೆಲೆಬಾಳುವ ವಸ್ತುಗಳು ಇವೆ ಎಂದು ಅಂದಾಜಿಸಲಾಗಿದೆ. ಅಲ್ಲದೆ ವಿಶ್ವದ ಅತ್ಯಂತ ಶ್ರೀಮಂತ  ದೇವಾಲಯದ ರಹಸ್ಯ ಕೋಣೆಯ ಅವಶೇಷಗಳ ಅಡಿಯಲ್ಲಿ ಹಾವುಗಳು ಇರುವ ಸಾಧ್ಯತೆ ಇದೆಯಂತೆ.

1985ರ ನಂತರ ಮೊದಲ ಬಾರಿಗೆ ಭಂಡಾರ ಅಥವಾ ಆಂತರಿಕ ರಹಸ್ಯ ಕೋಣೆಯನ್ನು ತೆರೆಯಲು ಮುಂದಾಗಿದ್ದಾರೆ. ಹೀಗಾಗಿ ಹಾವು ಹಿಡಿಯುವ ತಜ್ಞರನ್ನು ಕರೆಸಿಲಾಗುತ್ತಿದೆ. ಜೊತೆಗೆ ವೈದ್ಯರ ತಂಡವು ಔಷಧಿ ಕಿಟ್‌ನೊಂದಿಗೆ ಸ್ಟ್ಯಾಂಡ್‌ಬೈನಲ್ಲಿ ಇರುತ್ತದೆ. ಯಾವುದೇ ತುರ್ತು ಪರಿಸ್ಥಿತಿಯಲ್ಲಿ ವೈದ್ಯರು ದೌಡಾಯಿಸಲಿದ್ದಾರೆ.

ಇದನ್ನೂ ಓದಿ : ಬೆಂಗಳೂರು-ಹುಬ್ಬಳ್ಳಿ-ಪಂಢರಪುರ (via ಬೆಳಗಾವಿ) ನಡುವೆ ವಿಶೇಷ ರೈಲು ; ಇಲ್ಲಿದೆ ವೇಳಾಪಟ್ಟಿ.!

ಇನ್ನು, ರತ್ನ ಭಂಡಾರದಲ್ಲಿರುವ ಪುರಾತನ ಬೆಲೆಬಾಳುವ ವಸ್ತುಗಳ ವಿಧಗಳನ್ನು ತಿಳಿದುಕೊಳ್ಳುವ ಕುತೂಹಲವಿದೆ. ಇದು ಪುರಾತನವಾದ ದೇವಾಲಯವಾಗಿರುವುದರಿಂದ ಹಲವೆಡೆ ಸಣ್ಣ ರಂಧ್ರಗಳು ಮತ್ತು ಬಿರುಕುಗಳಿದ್ದು, ರಂಧ್ರಗಳ ಮೂಲಕ ಹಾವುಗಳು ರತ್ನಾ ಭಂಡಾರಕ್ಕೆ ನುಗ್ಗುವ ಸಾಧ್ಯತೆಯಿದೆ. ಆದರೆ ಆ ಭಂಡಾರದ ಬಳಿ ಹಾವುಗಳ ವಿಷಪೂರಿತ ಹಾವುಗಳ ಬಗ್ಗೆ ನಮಗೆ ಭಯವಿದೆ ಎಂದು ಸೇವಕರೊಬ್ಬರು ಹೇಳಿದ್ದಾರೆ.

ಆದರೆ ಇವುಗಳ ಕೇವಲ ವದಂತಿಗಳು ಮತ್ತು ರತ್ನ ಭಂಡಾರದಲ್ಲಿ ಈ ರೀತಿಯ ಏನೂ ಇಲ್ಲ ಎಂದು ದೇವಸ್ಥಾನದ ಮಾಜಿ ಆಡಳಿತಾಧಿಕಾರಿ ಭಾಸ್ಕರ್ ಮಿಶ್ರಾ ತಿಳಿಸಿದ್ದಾರೆ. ಜೊತೆಗೆ ರಂಧ್ರಗಳ ಮೂಲಕ ಹಾವುಗಳು ರತ್ನಾ ಭಂಡಾರಕ್ಕೆ ನುಗ್ಗುವ ಸಾಧ್ಯತೆ ಇದೆ. ರತ್ನ ಭಂಡಾರವನ್ನು ತೆರೆಯುವಾಗ ಸಾಕಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.  (ಎಜೇನ್ಸಿಸ್)

WhatsApp Group Join Now
Telegram Group Join Now
Instagram Account Follow Now
spot_img
spot_img
- Advertisment -spot_img