ಜನಸ್ಪಂದನ ನ್ಯೂಸ್, ಧಾರವಾಡ : ಭೂಮಿಯಿಂದ ಹೊರಬರುವ ವಿಷಜಂತುಗಳು ಮನುಕುಲ ನಾಶ ಮಾಡಲಿವೆ ಎಂದು ಅರಸೀಕೆರೆ ಕೋಡಿಮಠ ಸಂಸ್ಥಾನದ ಡಾ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭಯಾನಕ ಭವಿಷ್ಯವನ್ನು ನುಡಿದಿದ್ದಾರೆ.
ಇದನ್ನು ಓದಿ : ಮುಡಾ ಹಗರಣ : ಲೋಕಾಯುಕ್ತದಲ್ಲಿ CM ಸಿದ್ಧರಾಮಯ್ಯ ವಿರುದ್ಧ FIR ದಾಖಲು.!
ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಾಗತಿಕ ಮಟ್ಟದಲ್ಲಿ ಯುದ್ಧ ಭೀತಿ ಇದೆ. ಜನರ ಶಾಂತಿ, ಸಹನೆ, ಆರೋಗ್ಯ ಕೆಡುತ್ತದೆ. ಜಾಗತಿಕ ಮಟ್ಟದಲ್ಲಿ ದೊಡ್ಡ ದೊಡ್ಡ ನಗರಗಳಿಗೆ ಆಪತ್ತು ಇದೆ.
ಭೂಮಿಯಿಂದ ವಿಷ ಜಂತುಗಳು ಹೊರಗೆ ಬರುತ್ತವೆ. ಅವುಗಳಿಂದ ಮನುಷ್ಯ ಕುಲ ನಾಶವಾಗುತ್ತದೆ. ಈ ವಿಷ ಜಂತುಗಳು ಮನುಷ್ಯರನ್ನ ನಾಶ ಮಾಡುತ್ತವೆ. ಇದಕ್ಕೆ ಪೂರಕ ಎಂಬಂತೆ ಈಗಾಗಲೇ ಕಾಡಿನಿಂದ ಪ್ರಾಣಿಗಳು ಊರಿಗೆ ನುಗ್ಗುವುದು ನಡೆದಿದೆ. ಮುಂದಿನ ದಿನಗಳಲ್ಲಿ ಇದು ಹೆಚ್ಚಾಗುತ್ತದೆ ಎಂದು ಹೇಳಿದರು.
ವಿಷ ವಾಯು ಬೀಸಿದ್ದರಿಂದ ಜನರ ಆರೋಗ್ಯದ ಮೇಲೆ ತೊಂದರೆಯಾಗುತ್ತಿದೆ. ಆಕಸ್ಮಿಕ ಮೃತ್ಯುಗಳು ಹೆಚ್ಚಾಗುತ್ತವೆ ಎಂದು ತಿಳಿಸಿದ್ದಾರೆ.
ಇದನ್ನು ಓದಿ : ರಾಜ್ಯದ ಮತ್ತೋರ್ವ ಸ್ವಾಮೀಜಿ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ; ಶ್ರೀಗಳಿಂದ ಸ್ಪಷ್ಟೀಕರಣ.!
ರಾಜ್ಯದಲ್ಲಿ ಇನ್ನೂ ಮುಂದೆ ಹಿಂಗಾರು ಮಳೆ ಹೆಚ್ಚಿದೆ. ಅದರಿಂದ ತೊಂದರೆ ಆಗುವುದು ತಪ್ಪಿದ್ದಲ್ಲ ಎಂದು ತಾವು ಹೇಳಿದ್ದ ಭವಿಷ್ಯವನ್ನು ಪುನರುಚ್ಚರಿಸಿದ್ದಾರೆ.
ಈ ಹಿಂದೆ ರಾಜ್ಯ ರಾಜಕಾರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜಕೀಯದ ಬಗ್ಗೆ ಭವಿಷ್ಯ ನುಡಿದ ಕೋಡಿಶ್ರೀಗಳು ಇದೀಗ ಜೀವರಾಶಿಗಳ ಮೇಲೆ ಉಂಟಾಗುವ ತೊಂದರೆಯ ಬಗ್ಗೆ ಸ್ಪೋಟಕ ಭವಿಷ್ಯ ನುಡಿದಿದ್ದಾರೆ.