ಜನಸ್ಪಂದನ ನ್ಯೂಸ್, ಡೆಸ್ಕ್ : ಇತ್ತೀಚಿನ ದಿನಗಳಲ್ಲಿ ಪತಿ ಪತ್ನಿಯರ ಅನೈತಿಕ ಸಂಬಂಧದ (illegal relationship) ಪ್ರಕರಣಗಳು ಹೆಚ್ಚು ಹೆಚ್ಚು ವರದಿಯಾಗುತ್ತಲೇ ಇವೆ. ತನ್ನ ಗಂಡ /ಹೆಂಡತಿಗೆ ತಿಳಿಯದಂತೆ ಬೇರೊಬ್ಬರ ಜೊತೆ ಸಂಬಂಧ ಬೆಳೆಸುವ ಪ್ರಕರಣಗಳು ದಿನ ಕಳೆದಂತೆ ಹೆಚ್ಚುತ್ತಿವೆ.
ಇಂಥ ಸಂಬಂಧಗಳು ಸುಂದರ ಸುಖಮಯ ಸಂಸಾರವನ್ನು ಹಾಳು ಮಾಡುತ್ತವೆ. ಅದೆಷ್ಟೋ ಗಂಡ ಹೆಂಡತಿಯನ್ನು ದೂರ ಮಾಡಿದ್ದು, ಅನೋನ್ಯವಾದ ಸಂಸಾರಗಳನ್ನು ಒಡೆದು ಹಾಕುತ್ತವೆ (Families that are inseparable break up).
ಇದನ್ನು ಓದಿ : ಕೇಂದ್ರ ಸರ್ಕಾರಿ ವ್ಯಾಪ್ತಿಯಲ್ಲಿ ಭರ್ಜರಿ ಉದ್ಯೋಗವಕಾಶ : 67000 ರೂ. ಸಂಬಳ.!
ಸದ್ಯ ಉತ್ತರ ಪ್ರದೇಶದ ಆಗ್ರಾದಲ್ಲಿ (Agra, Uttar Pradesh) ಇಂತಹದ್ದೊಂದು ಘಟನೆ ನಡೆದಿದೆ ಎಂದು ವರದಿಯಾಗಿದೆ. ವಿವಾಹಿತ ಮಹಿಳೆಯನ್ನು ಭೇಟಿಯಾಗಲು ಹೋದ ಪ್ರಿಯಕರ, ಬೆತ್ತಲೆಯಾಗಿ ಗಂಡನ ಕುಟುಂಬದವರ ಕೈಗೆ ಸಿಕ್ಕಿಬಿದ್ದ ಘಟನೆ ನಡೆದಿದೆ.
ವಿವಾಹಿತ ಪ್ರೇಯಸಿಯನ್ನು (Married lover) ನೋಡಲು ಹೋದ ಯುವಕ ಆಕೆಯ ಮನೆಯಲ್ಲಿ ಬಟ್ಟೆಯಿಲ್ಲದೆ ಟ್ರಂಕ್‌ನಲ್ಲಿ ಅಡಗಿಕೊಂಡಿದ್ದು, ಈ ವಿಷಯ ತಿಳಿದು ಅವಳ ಕುಟುಂಬ ಸದಸ್ಯರು ಆತನನ್ನು ರೆಡ್ ಹ್ಯಾಂಡ್ಆಗಿ ಹಿಡಿದಿದ್ದಾರೆ.
ಇದನ್ನು ಓದಿ : Health : ಕಲ್ಲಂಗಡಿ ತಿಂದ ಬಳಿಕ ಇವುಗಳನ್ನು ಸೇವಿಸಲೇಬೇಡಿ.!
ಅಲ್ಲದೇ ಮಹಿಳೆಯ ಗಂಡ ಮತ್ತು ಕುಟುಂಬಸ್ಥರು ಕೋಲಿನಿಂದ ಪತ್ನಿಯ ಪ್ರಿಯತಮನನ್ನು ಹೊಡೆದಿದ್ದಾರೆ. ಈ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಹೆಂಡತಿಯ ನಡವಳಿಕೆಯ (Suspicion of wife’s behavior) ಕುರಿತು ವ್ಯಕ್ತಿ ಹಾಗೂ ಕುಟುಂಬದವರಿಗೆ ಅನುಮಾನ ಹುಟ್ಟಿಸಿದೆ. ಹೀಗಾಗಿ ಆಕೆಯ ಮೇಲೆ ಕಣ್ಣಿಟ್ಟಿದ್ದರು. ಅದರಂತೆ ಆಕೆಯನ್ನು ರೆಡ್ ಹ್ಯಾಂಡ್ಆಗಿ ಹಿಡಿದಿದ್ದಾರೆ.
ಇದನ್ನು ಓದಿ : Video : ಶ್ರೀಕೃಷ್ಣ ದೇವರಾಯನ ಸಮಾಧಿಯ ಮೇಲೆ ಮಾಂಸ ಕಟ್ ; ಭಾರೀ ಆಕ್ರೋಶ.!
ಮಹಿಳೆ ಪ್ರಿಯತಮನನ್ನು ಟ್ರಂಕ್‌ನಲ್ಲಿ ಅಡಗಿಸಿಟ್ಟಿದ್ದಳು. ಆದರೆ ಕುಟುಂಬದವರಿಗೆ ಟ್ರಂಕ್‌ನಲ್ಲಿ ಯಾರೋ ಅಡಗಿ ಕುಳಿತಿದ್ದಾರೆಂದು ಅನುಮಾನ ಬಂದಿದೆ. ಟ್ರಂಕ್ ಒಪನ್ ಮಾಡಿ ನೋಡಿದ್ರೆ ಯುವಕನೋರ್ವ ಬಟ್ಟೆಯಿಲ್ಲದೆ ಬೆತ್ತಲೆಯಾಗಿ ಅವರ ಕೈಗೆ ಸಿಕ್ಕಿಬಿದ್ದಿದ್ದಾನೆ.
ವಿಡಿಯೋದಲ್ಲಿ ಸಿಕ್ಕಿಬಿದ್ದ ಯುವಕ ತನ್ನನ್ನು ಬಿಟ್ಟುಬಿಡಿ ಎಂದು ಕೈಮುಗಿದು ಪರಿಪರಿಯಾಗಿ ಬೇಡಿಕೊಂಡರೂ, ಮಹಿಳೆಯ ಕುಟುಂಬ ಸದಸ್ಯರು ಆತನನ್ನು ಥಳಿಸುತ್ತಲೇ ಇದ್ದಾರೆ. ಇವರ ಗಲಾಟೆ ಗದ್ದಲ ಕೇಳಿದ ಸ್ಥಳೀಯರು ಕೂಡ ಸ್ಥಳಕ್ಕೆ ಧಾವಿಸಿದ್ದಾರೆ.
ವಿಡಿಯೋ ನೋಡಿ :
आगरा में अपनी शादीशुदा प्रेमिका से मिलने पहुंचा युवकl
परिवार के लोगों को देखकर नंगी हालत में संदूक में घुस बैठाl
बाद में पकड़ कर उसकी पिटाई की गई l pic.twitter.com/PuTpxH7wLh
— Pravesh Pal (@pal_pravesh) April 22, 2025
ಹಿಂದಿನ ಸುದ್ದಿ : ಮನೆ ಬಿಟ್ಟು ಓಡಿಹೋಗಿ ಮದುವೆಯಾದ ಸರಿಗಮಪ ಖ್ಯಾತಿಯ Singer ಪೃಥ್ವಿ ಭಟ್.!
ಜನಸ್ಪಂದನ ನ್ಯೂಸ್, ಬೆಂಗಳೂರು : ಜೀ ಕನ್ನಡ ಸರಿಗಮಪ ಖ್ಯಾತಿಯ ಗಾಯಕಿ ಪೃಥ್ವಿ ಭಟ್ ಮನೆ ಬಿಟ್ಟು ಓಡಿಹೋಗಿ ಮದುವೆಯಾಗಿದ್ದಾರೆ ಎಂದು ಆಕೆಯ ಮನೆಯವರು ಗಂಭೀರ ಆರೋಪ ಮಾಡಿದ್ದಾರೆ.
ಜೀ ಕನ್ನಡದ ಸರಿಗಮಪ ರಿಯಾಲಿಟಿ ಶೋ (Sarigamapa reality show) ಮೂಲಕ ಪೃಥ್ವಿ ಭಟ್ ಬೆಳಕಿಗೆ ಬಂದ ಗಾಯಕಿಯಾಗಿದ್ದು, ಇವರು ಗಡಿನಾಡು ಕಾಸರಗೋಡು ಮೂಲದವರು.
ಇದನ್ನು ಓದಿ : Ex ಲವರ್‌ನಿಂದ ಬ್ಲ್ಯಾಕ್‌ಮೇಲ್ ; ಮದುವೆ ಸಂಭ್ರಮದಲ್ಲಿದ್ದ ಯುವತಿ ಆತ್ಮಹತ್ಯೆ.!
ಕನ್ನಡ ಸಿನಿಮಾಗಳು, ಸಾಕಷ್ಟು ಸ್ಟೇಜ್ ಶೋಗಳಲ್ಲಿ ಹಾಡಿರುವ ಪೃಥ್ವಿ ಭಟ್ ಈಗ ದಿಢೀರ್ ಆಗಿ ಮದುವೆಯಾಗಿದ್ದಾರೆ.
ಗಾಯಕಿ ಪೃಥ್ವಿ ಭಟ್, ಅಭಿಷೇಕ್ ಎನ್ನುವ ಯುವಕನೊಂದಿಗೆ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದಾರೆ (Married in a temple) ಎಂದು ತಿಳಿದುಬಂದಿದೆ. ಮಗಳ ಮದುವೆ ವಿಚಾರ ತಿಳಿದು ಪೋಷಕರು ಆಘಾತಗೊಂಡಿದ್ದಾರೆ.
ಇದನ್ನು ಓದಿ : Special news : ಪ್ರೀತಿಸಿದವರಿಗೆ ಮೋಸ ಮಾಡ್ತಾರಂತೆ ಈ 5 ರಾಶಿಯವರು.!
ಆ ಹುಡುಗನನ್ನು ಮದುವೆಯಾಗುವುದಿಲ್ಲ ಎಂದು ದೇವರ ಮುಂದೆ ನಿಂತು ಪ್ರಮಾಣ ಮಾಡಿದ್ದ ಮಗಳು, ಇದ್ದಕ್ಕಿದ್ದಂತೆ ಮನೆ ಬಿಟ್ಟು ಓಡಿ ಹೋಗಿದ್ದಾಳೆ. ನನ್ನ ಮಗಳ ಮೇಲೆ ವಶೀಕರಣ ವಿದ್ಯೆ ಪ್ರಯೋಗಿಸಲಾಗಿದೆ (Vashikaran Vidya Experiment). ಇದರ ಹಿಂದೆ ಜೀ ಕನ್ನಡ ರಿಯಾಲಿಟಿ ಜ್ಯೂರಿ ನರಹರಿ ದೀಕ್ಷಿತ್ ಕೈವಾಡವಿದೆ ಎಂದು ಪೃಥ್ವಿ ಭಟ್ ತಂದೆ ಆರೋಪ ಮಾಡಿದ್ದಾರೆ.
ಮಾರ್ಚ್ 27 ರಂದು ಇಬ್ಬರ ವಿವಾಹವಾಗಿದೆ. ಮದುವೆಯಾಗಿ 20 ದಿನಗಳಾಗಿದ್ದು, ಇಲ್ಲಿಯವರೆಗೆ ಅವಳಿಗೆ ನಮ್ಮ ನೆನಪಾಗಲಿಲ್ಲ. ರೆಕಾರ್ಡಿಂಗ್ ಗೆ ಅಂತ ನಾನೇ ಅವಳನ್ನು ಸ್ಟುಡಿಯೋಗೆ ಬಿಟ್ಟು ಬಂದಿದ್ದೆ. ಮಧ್ಯಾಹ್ನದ ಹೊತ್ತಿಗೆ ಪೊಲೀಸರು ಕಾಲ್ ಮಾಡಿ ಹೇಳಿದ್ರು ಪೃಥ್ವಿ ಭಟ್ ನಿಮ್ಮ ಮಗಳಾ? ಅವಳು ಅಭಿಷೇಕ್ ಎನ್ನುವವರನ್ನು ಮದುವೆಯಾಗಿ ಇಲ್ಲಿಗೆ ಬಂದಿದ್ದಾರೆ. ನಿಮ್ಮ ಮನೆಗೆ ಬರ್ತಾರಂತೆ ಅಂತ ಹೇಳಿದ್ರು. ಆಗ ನಾವು ಮನೆಗೆ ಬರುವುದು ಬೇಡ. ಇಲ್ಲಿಗೆ ಬಂದರೆ ಗಲಾಟೆಯಾಗುತ್ತದೆ ಎಂದೆವು.
ಇದನ್ನು ಓದಿ : Health : ಮುಖದ ಮೇಲಿನ ಮೊಡವೆಗಳೇ ತಿಳಿಸುತ್ತವೆ ನಿಮ್ಮ ಆರೋಗ್ಯ ಸಮಸ್ಯೆ ಕುರಿತು.!
ಅದಾದ ಬಳಿಕ ಒಂದೆರಡು ಸಲ ಕಾಲ್ ಮಾಡಿ ತಪ್ಪಾಯ್ತು ಅಪ್ಪ, ಅಮ್ಮ ಎಂದು ಹೇಳಿದ್ದಳು. ಅದು ಬಿಟ್ಟರೆ ಆಕೆ ನಮ್ಮ ಸಂಪರ್ಕದಲ್ಲಿಲ್ಲ ಎಂದು ಪೃಥ್ವಿ ಭಟ್ ತಂದೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಈಗ ವೈರಲ್ ಆಗಿದೆ.