ಜನಸ್ಪಂದನ ನ್ಯೂಸ್, ಚಿಕ್ಕಮಗಳೂರು : ಚಿಕ್ಕಮಗಳೂರು ಕೆಎಸ್ಆರ್ಟಿಸಿ ವಿಭಾಗ ನಿಯಂತ್ರಣಾಧಿಕಾರಿ (Controller) ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ.
ಚಿಕ್ಕಮಗಳೂರು ಕೆಎಸ್ಆರ್ಟಿಸಿ ವಿಭಾಗ ನಿಯಂತ್ರಣಾಧಿಕಾರಿ ಬಸವರಾಜು ಎಂಬುವವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಇದನ್ನು ಓದಿ : ವಿದ್ಯುದ್ದೀಕರಣ ಮುಗಿದ ತಕ್ಷಣ ಬೆಳಗಾವಿ-ಪುಣೆ ನಡುವೆ ವಂದೇ ಭಾರತ್ ರೈಲು : ಈರಣ್ಣ ಕಡಾಡಿ.!
ಇನಗನು ಈ ಅಧಿಕಾರಿ ಚಿಕ್ಕಮಗಳೂರಿನಿಂದ ಕಡೂರು ಡಿಪೋಗೆ ವರ್ಗಾವಣೆ ಮಾಡಲು ಲಂಚಕ್ಕೆ (bribe) ಬೇಡಿಕೆ ಇಟ್ಟಿದ್ದರು.
ಬಸ್ ಚಾಲಕನಿಂದ ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿಯಲ್ಲೇ (office) 10 ಸಾವಿರ ರೂ. ಲಂಚ ಸ್ವೀಕರಿಸುವಾಗ ಬಸವರಾಜು ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಇದನ್ನು ಓದಿ : ಪ್ರಿಯಕರನ ಜೊತೆ ಓಡ್ಹೋದ 2 ಮಕ್ಕಳ ತಾಯಿ ; ಸಿಟ್ಟಿಗೆದ್ದ ಗಂಡನಿಂದ ಲವರ್ ಮನೆ ಧ್ವಂಸ.!
ಈ ಹಿನ್ನಲೆ ಚಾಲಕ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು.
ಚಾಲಕ (driver) ನೀಡಿದ ದೂರಿನ ಮೇರೆಗೆ ದಾಳಿ ನಡೆಸಿದ್ದ ಲೋಕಾಯುಕ್ತ ಅಧಿಕಾರಿಗಳು ಬಸವರಾಜುನನ್ನು ಅರೆಸ್ಟ್ ಮಾಡಿದ್ದಾರೆ.