ಜನಸ್ಪಂದನ ನ್ಯೂಸ್, ಬೆಂಗಳೂರು : ಗುಪ್ತಚರ ಬ್ಯೂರೋ (IB) ನಲ್ಲಿ ಉದ್ಯೋಗದ ಕನಸು ಕಾಣುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶ. ಗೃಹ ಸಚಿವಾಲಯವು ಮಲ್ಟಿ-ಟಾಸ್ಕಿಂಗ್ ಸ್ಟಾಫ್ (MTS) ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಅಧಿಕೃತವಾಗಿ ಪ್ರಕಟಿಸಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಹತ್ತನೇ ತರಗತಿ ತೇರ್ಗಡೆಯಾಗಿರುವ ಅಭ್ಯರ್ಥಿಗಳು ಅರ್ಹರಾಗಿದ್ದಾರೆ. ಅಭ್ಯರ್ಥಿಗಳು ಗೃಹ ಸಚಿವಾಲಯದ ಅಧಿಕೃತ ವೆಬ್‌ಸೈಟ್ mha.gov.in ಗೆ ಭೇಟಿ ನೀಡಿ ಅರ್ಜಿ ನಮೂನೆ ಭರ್ತಿ ಮಾಡಬಹುದು.
ಇದನ್ನು ಓದಿ : KVS & NVS ನಲ್ಲಿ 14,937 ಹುದ್ದೆಗಳಿಗೆ ನೇಮಕಾತಿ ಅರ್ಜಿ ಆಹ್ವಾನ.!
IB ವಿದ್ಯಾರ್ಹತೆಗಳು :
- ಕನಿಷ್ಠ ಅರ್ಹತೆ: 10ನೇ ತರಗತಿ ಪಾಸ್.
ವಯೋಮಿತಿ :
- ಕನಿಷ್ಠ 18 ಮತ್ತು ಗರಿಷ್ಠ 25 ವರ್ಷ.
- ವಯಸ್ಸು ಲೆಕ್ಕಹಾಕುವ ದಿನಾಂಕ : ಡಿಸೆಂಬರ್ 14, 2025.
ವಯೋಮಿತಿ ಸಡಿಲಿಕೆ :
- ಮೀಸಲು ವರ್ಗಗಳಿಗೆ ಸರ್ಕಾರದ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಇದೆ.
ಅರ್ಜಿಯ ಶುಲ್ಕ :
- ಸಾಮಾನ್ಯ, ಒಬಿಸಿ, ಇಡಬ್ಲ್ಯೂಎಸ್ : ರೂ.650/- (ಪ್ರಕ್ರಿಯಾ ಶುಲ್ಕ ರೂ.550 + ಪರೀಕ್ಷಾ ಶುಲ್ಕ ರೂ.100)
- ಎಸ್‌ಸಿ, ಎಸ್‌ಟಿ, ಅಂಗವಿಕಲರು, ಮಹಿಳೆಯರು, ಮಾಜಿ ಸೈನಿಕರು : ರೂ.550/- (ಪರೀಕ್ಷಾ ಶುಲ್ಕ ಮನ್ನಾ)
ಇದನ್ನು ಓದಿ : ಬೆಂಗಳೂರು Water Board ದಲ್ಲಿ ಖಾಲಿ ಇರುವ 224 ಹುದ್ದೆಗಳಿಗೆ ಅರ್ಜಿ ಆಹ್ವಾನ.
IB ಪ್ರಮುಖ ದಿನಾಂಕ :
- ಆನ್‌ಲೈನ್ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : ನವೆಂಬರ್ 22, 2025.
- ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಡಿಸೆಂಬರ್ 14, 2025.
IB ಅರ್ಜಿ ಸಲ್ಲಿಸುವ ವಿಧಾನ :
- ಅಧಿಕೃತ ವೆಬ್‌ಸೈಟ್ mha.gov.in ಗೆ ಭೇಟಿ ನೀಡಿ
- “Recruitment” ಲಿಂಕ್ ಮೇಲೆ ಕ್ಲಿಕ್ ಮಾಡಿ
- ‘To Register’ ಆಯ್ಕೆ ಮಾಡಿ ಹೊಸ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿ
- Already Registered ನಲ್ಲಿ ಲಾಗಿನ್ ಮಾಡಿ
- ಎಲ್ಲಾ ವಿವರಗಳನ್ನು ಭರ್ತಿ ಮಾಡಿ ಮತ್ತು ಫಾರ್ಮ್ ಸಲ್ಲಿಸಿ
- ಶುಲ್ಕ ಪಾವತಿಸಿ, ಪಾವತಿ ರಶೀದಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ
ಈ ನೇಮಕಾತಿ ಕೇಂದ್ರ ಭದ್ರತಾ ಸಂಸ್ಥೆಗಳಲ್ಲಿ ವೃತ್ತಿಜೀವನವನ್ನು ಬಯಸುವ ಹತ್ತನೇ ತರಗತಿ ಪಾಸ್ ಅಭ್ಯರ್ಥಿಗಳಗಾಗಿ ಅತ್ಯುತ್ತಮ ಅವಕಾಶವಾಗಿದೆ.
ಚಳಿಗಾಲದಲ್ಲಿ ಒಡೆಯುವ Heels ಸಮಸ್ಯೆಯೇ? ಇಲ್ಲಿದೆ ಸುಲಭ ಪರಿಹಾರ.!

ಜನಸ್ಪಂದನ ನ್ಯೂಸ್, ಆರೋಗ್ಯ : ಸೌಂದರ್ಯವು ಕೇವಲ ಮುಖದ ಮೇಲೆ ಸೀಮಿತವಾಗಿರುವುದಿಲ್ಲ. ಕೈಕಾಲುಗಳು, ಪಾದಗಳು ಕೂಡ ಶರೀರದ ಸೌಂದರ್ಯಕ್ಕೆ ಮಹತ್ವ ನೀಡುತ್ತವೆ.
ಆದರೆ ಹೆಚ್ಚಿನವರು ಮುಖದ ಆರೈಕೆಗೆ ಹೆಚ್ಚು ಗಮನ ಕೊಡುವುದರಿಂದ ಪಾದಗಳ ಆರೈಕೆ ಅನಾಗರಿಕವಾಗಿ ಕಡೆಗಣಿಸಲಾಗುತ್ತದೆ. ಪರಿಣಾಮವಾಗಿ ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವ ಸಮಸ್ಯೆ ಹೆಚ್ಚಾಗುತ್ತದೆ. ಒಡೆಯುವ ಹಿಮ್ಮಡಿ (Heels) ನೋವನ್ನುಂಟು ಮಾಡುತ್ತದೆ ಮತ್ತು ಪಾದದ ರೂಪವನ್ನು ಹಾಳು ಮಾಡಬಹುದು.
Kiwi ಹಣ್ಣು ತಿಂದರೆ ಎಷ್ಟೇ ಮಂದ ದೃಷ್ಟಿಯಿದ್ದರೂ ಶಾರ್ಪ್ ಆಗುತ್ತೆ ; ಬರುವುದೇ ಇಲ್ಲ ಪೊರೆ ಸಮಸ್ಯೆ.
ಒಡೆಯುವ ಹಿಮ್ಮಡಿ (Heels) ಸಮಸ್ಯೆ ತಡೆಯಲು ಇಲ್ಲಿವೆ ಕೆಲವು ಸರಳ ಮನೆಮದ್ದು :
- ಬೆಚ್ಚಗಿನ ನೀರಿನ ನೆನೆಪ : ಪಾದಗಳನ್ನು 10 ನಿಮಿಷದ ಕಾಲ ಉಪ್ಪು ಮತ್ತು ನಿಂಬೆ ರಸ ಹಾಕಿದ ಬೆಚ್ಚಗಿನ ನೀರಿನಲ್ಲಿ ನೆನೆಸಿರಿ. ವಾರಕ್ಕೆ ಎರಡು ಬಾರಿ ಇದನ್ನು ಮಾಡುವುದು ಉತ್ತಮ.
- ಸ್ಕ್ರಬ್ ಮತ್ತು ಫುಟ್ ಕ್ರೀಮ್ : ಒಣ ಚರ್ಮವನ್ನು ನಿಧಾನವಾಗಿ ಸ್ಕ್ರಬ್ ಮಾಡಿ, ತಕ್ಷಣ ಫುಟ್ ಕ್ರೀಮ್ ಹಚ್ಚಿ. ನೈಸರ್ಗಿಕ ಸ್ಕ್ರಬ್ ಸಿದ್ಧಪಡಿಸಲು ಸಕ್ಕರೆ ಮತ್ತು ತೆಂಗಿನ ಎಣ್ಣೆ ಬಳಸಬಹುದು.
- ತೇವಾಂಶ ಹೆಚ್ಚಿಸಲು ಕ್ರೀಮ್ : ಶುಷ್ಕ ಚರ್ಮಕ್ಕೆ ವಿಶೇಷ ಫುಟ್ ಕ್ರೀಮ್ ಹಚ್ಚಿ. ಮಲಗುವ ಮೊದಲು ಪ್ರತಿದಿನ ರಾತ್ರಿ ಹಚ್ಚಿದರೆ ಉತ್ತಮ ಫಲಿತಾಂಶ ಸಿಗುತ್ತದೆ.
- ಐಲ್ ಮಸಾಜ್ : ತೆಂಗಿನ ಎಣ್ಣೆ, ತುಪ್ಪ, ಬಾದಾಮಿ ಎಣ್ಣೆ ಅಥವಾ ಎಳ್ಳಿನ ಎಣ್ಣೆಯಿಂದ ಪಾದವನ್ನು ಮಸಾಜ್ ಮಾಡಿ. ಇದು ರಕ್ತ ಪರಿಚಲನೆಯನ್ನು ಉತ್ತಮಗೊಳಿಸುತ್ತದೆ ಮತ್ತು ತ್ವಚೆಯ ತೇವಾಂಶವನ್ನು ಕಾಯ್ದುಕೊಳ್ಳುತ್ತದೆ.
- ಪೆಟ್ರೋಲಿಯಂ ಜೆಲ್ಲಿ ಬಳಕೆ : ಹಿಮ್ಮಡಿ (Heels) ಬಿರುಕು ಬಿದ್ದ ಹಿಮ್ಮಡಿಗೆ ಪೆಟ್ರೋಲಿಯಂ ಜೆಲ್ಲಿ ಹಚ್ಚಿ, ರಾತ್ರಿ ಸಮಯದಲ್ಲಿ ಸಾಕ್ಸ್ ಹಾಕಿ ಮಲಗಿದರೆ ತೇವಾಂಶ ಲಾಕ್ ಆಗುತ್ತದೆ ಮತ್ತು ಚರ್ಮ ನೈರ್ಮಲ್ಯ ಪಡೆಯುತ್ತದೆ.
ಇದನ್ನು ಓದಿ : “Ants ಕಾಟದಿಂದ ಬೇಸತ್ತಿದ್ದೀರಾ? ಇಲ್ಲಿದೆ ಸರಳ ಮನೆಮದ್ದುಗಳ ಪರಿಹಾರ”.!
ಈ ಸುಲಭ ಮನೆಮದ್ದುಗಳನ್ನು ಅನುಸರಿಸುವುದರಿಂದ ಚಳಿಗಾಲದಲ್ಲಿ ಹಿಮ್ಮಡಿ (Heels) ಒಡೆಯುವ ಸಮಸ್ಯೆ ಕಡಿಮೆಯಾಗುತ್ತದೆ, ಪಾದಗಳು ಮೃದು, ಆರಾಮದಾಯಕವಾಗುತ್ತವೆ ಮತ್ತು ದೀರ್ಘಕಾಲ ಸೌಂದರ್ಯ ಮತ್ತು ಆರೋಗ್ಯ ಕಾಪಾಡಬಹುದು.
ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ







