ಶುಕ್ರವಾರ, ಜನವರಿ 2, 2026

Janaspandhan News

HomeHealth & Fitnessಚಳಿಗಾಲದಲ್ಲಿ ಒಡೆಯುವ Heels ಸಮಸ್ಯೆಯೇ? ಇಲ್ಲಿದೆ ಸುಲಭ ಪರಿಹಾರ.!
spot_img
spot_img
spot_img

ಚಳಿಗಾಲದಲ್ಲಿ ಒಡೆಯುವ Heels ಸಮಸ್ಯೆಯೇ? ಇಲ್ಲಿದೆ ಸುಲಭ ಪರಿಹಾರ.!

- Advertisement -

ಜನಸ್ಪಂದನ ನ್ಯೂಸ್‌, ಆರೋಗ್ಯ : ಸೌಂದರ್ಯವು ಕೇವಲ ಮುಖದ ಮೇಲೆ ಸೀಮಿತವಾಗಿರುವುದಿಲ್ಲ. ಕೈಕಾಲುಗಳು, ಪಾದಗಳು ಕೂಡ ಶರೀರದ ಸೌಂದರ್ಯಕ್ಕೆ ಮಹತ್ವ ನೀಡುತ್ತವೆ.

ಆದರೆ ಹೆಚ್ಚಿನವರು ಮುಖದ ಆರೈಕೆಗೆ ಹೆಚ್ಚು ಗಮನ ಕೊಡುವುದರಿಂದ ಪಾದಗಳ ಆರೈಕೆ ಅನಾಗರಿಕವಾಗಿ ಕಡೆಗಣಿಸಲಾಗುತ್ತದೆ. ಪರಿಣಾಮವಾಗಿ ಚಳಿಗಾಲದಲ್ಲಿ ಹಿಮ್ಮಡಿ ಒಡೆಯುವ ಸಮಸ್ಯೆ ಹೆಚ್ಚಾಗುತ್ತದೆ. ಒಡೆಯುವ ಹಿಮ್ಮಡಿ (Heels) ನೋವನ್ನುಂಟು ಮಾಡುತ್ತದೆ ಮತ್ತು ಪಾದದ ರೂಪವನ್ನು ಹಾಳು ಮಾಡಬಹುದು.

Kiwi ಹಣ್ಣು ‌ತಿಂದರೆ ಎಷ್ಟೇ ಮಂದ ದೃಷ್ಟಿಯಿದ್ದರೂ ಶಾರ್ಪ್‌ ಆಗುತ್ತೆ ; ಬರುವುದೇ ಇಲ್ಲ ಪೊರೆ ಸಮಸ್ಯೆ.
ಒಡೆಯುವ ಹಿಮ್ಮಡಿ (Heels) ಸಮಸ್ಯೆ ತಡೆಯಲು ಇಲ್ಲಿವೆ ಕೆಲವು ಸರಳ ಮನೆಮದ್ದು :
  1. ಬೆಚ್ಚಗಿನ ನೀರಿನ ನೆನೆಪ : ಪಾದಗಳನ್ನು 10 ನಿಮಿಷದ ಕಾಲ ಉಪ್ಪು ಮತ್ತು ನಿಂಬೆ ರಸ ಹಾಕಿದ ಬೆಚ್ಚಗಿನ ನೀರಿನಲ್ಲಿ ನೆನೆಸಿರಿ. ವಾರಕ್ಕೆ ಎರಡು ಬಾರಿ ಇದನ್ನು ಮಾಡುವುದು ಉತ್ತಮ.
  2. ಸ್ಕ್ರಬ್ ಮತ್ತು ಫುಟ್ ಕ್ರೀಮ್ : ಒಣ ಚರ್ಮವನ್ನು ನಿಧಾನವಾಗಿ ಸ್ಕ್ರಬ್ ಮಾಡಿ, ತಕ್ಷಣ ಫುಟ್ ಕ್ರೀಮ್ ಹಚ್ಚಿ. ನೈಸರ್ಗಿಕ ಸ್ಕ್ರಬ್ ಸಿದ್ಧಪಡಿಸಲು ಸಕ್ಕರೆ ಮತ್ತು ತೆಂಗಿನ ಎಣ್ಣೆ ಬಳಸಬಹುದು.
  3. ತೇವಾಂಶ ಹೆಚ್ಚಿಸಲು ಕ್ರೀಮ್ : ಶುಷ್ಕ ಚರ್ಮಕ್ಕೆ ವಿಶೇಷ ಫುಟ್ ಕ್ರೀಮ್ ಹಚ್ಚಿ. ಮಲಗುವ ಮೊದಲು ಪ್ರತಿದಿನ ರಾತ್ರಿ ಹಚ್ಚಿದರೆ ಉತ್ತಮ ಫಲಿತಾಂಶ ಸಿಗುತ್ತದೆ.
  4. ಐಲ್ ಮಸಾಜ್ : ತೆಂಗಿನ ಎಣ್ಣೆ, ತುಪ್ಪ, ಬಾದಾಮಿ ಎಣ್ಣೆ ಅಥವಾ ಎಳ್ಳಿನ ಎಣ್ಣೆಯಿಂದ ಪಾದವನ್ನು ಮಸಾಜ್ ಮಾಡಿ. ಇದು ರಕ್ತ ಪರಿಚಲನೆಯನ್ನು ಉತ್ತಮಗೊಳಿಸುತ್ತದೆ ಮತ್ತು ತ್ವಚೆಯ ತೇವಾಂಶವನ್ನು ಕಾಯ್ದುಕೊಳ್ಳುತ್ತದೆ.
  5. ಪೆಟ್ರೋಲಿಯಂ ಜೆಲ್ಲಿ ಬಳಕೆ : ಹಿಮ್ಮಡಿ (Heels) ಬಿರುಕು ಬಿದ್ದ ಹಿಮ್ಮಡಿಗೆ ಪೆಟ್ರೋಲಿಯಂ ಜೆಲ್ಲಿ ಹಚ್ಚಿ, ರಾತ್ರಿ ಸಮಯದಲ್ಲಿ ಸಾಕ್ಸ್ ಹಾಕಿ ಮಲಗಿದರೆ ತೇವಾಂಶ ಲಾಕ್ ಆಗುತ್ತದೆ ಮತ್ತು ಚರ್ಮ ನೈರ್ಮಲ್ಯ ಪಡೆಯುತ್ತದೆ.
ಇದನ್ನು ಓದಿ : “Ants ಕಾಟದಿಂದ ಬೇಸತ್ತಿದ್ದೀರಾ? ಇಲ್ಲಿದೆ ಸರಳ ಮನೆಮದ್ದುಗಳ ಪರಿಹಾರ”.!

ಈ ಸುಲಭ ಮನೆಮದ್ದುಗಳನ್ನು ಅನುಸರಿಸುವುದರಿಂದ ಚಳಿಗಾಲದಲ್ಲಿ ಹಿಮ್ಮಡಿ (Heels) ಒಡೆಯುವ ಸಮಸ್ಯೆ ಕಡಿಮೆಯಾಗುತ್ತದೆ, ಪಾದಗಳು ಮೃದು, ಆರಾಮದಾಯಕವಾಗುತ್ತವೆ ಮತ್ತು ದೀರ್ಘಕಾಲ ಸೌಂದರ್ಯ ಮತ್ತು ಆರೋಗ್ಯ ಕಾಪಾಡಬಹುದು.


ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರ ; 20ಕ್ಕೂ ಹೆಚ್ಚು Tractors ಟ್ರಾಲಿಗಳಿಗೆ ಬೆಂಕಿ.!

sugarcane-farmers-protest-tractors-burned

ಜನಸ್ಪಂದನ ನ್ಯೂಸ್‌, ಬಾಲಗಕೋಟೆ : ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದ್ದು, ರೈತರು ತಮ್ಮ ಬೇಡಿಕೆಯನ್ನು ಸರಕಾರಕ್ಕೆ ತಿಳಿಸಲು ಆಕ್ರಮಣಾತ್ಮಕ ಕ್ರಮಕ್ಕೆ ಹೋಗಿದ್ದಾರೆ.

ಕಬ್ಬು ಸಾಗಿಸುತ್ತಿದ್ದ ಟ್ರಾಕ್ಟರ್ (Tractors) ಟ್ರಾಲಿಗಳಿಗೆ ಬೆಂಕಿ :

ಫ್ಯಾಕ್ಟರಿಗೆ ಕಬ್ಬು ಸಾಗಿಸುತ್ತಿದ್ದ ಟ್ರಾಕ್ಟರ್ (Tractors) ಟ್ರಾಲಿಗಳಿಗೆ ರೈತರು ನೆಲಕ್ಕೆ ಉರುಳಿಸಿ, ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಧೋಳದ ರಾಯಣ್ಣ ವೃತ್ತದಿಂದ ಹೊರಟ ಪ್ರತಿಭಟನಾಕಾರರು ಟ್ರಾಕ್ಟರ್ (Tractors) ಮತ್ತು ಬೈಕ್ (Bike) ಮೂಲಕ ಸಮೀರವಾಡಿಯ ಗೋದಾವರಿ ಸಕ್ಕರೆ ಕಾರ್ಖಾನೆ ಕಡೆಗೆ ಸಾಗಿದರು.

ರಬಕವಿ-ಬನಹಟ್ಟಿ ತಾಲೂಕಿನ ಸಮೀರವಾಡಿಯ ಸೋಮಯ್ಯಾ ಶುಗಸ್೯ ಕಾರ್ಖಾನೆ ಮಾಲೀಕರು ಬಾಕಿ ಬಿಲ್ ಪಾವತಿಸದೇ ಕಾರ್ಖಾನೆ ಆರಂಭಿಸಿರುವುದು ರೈತರಲ್ಲಿ ಮತ್ತಷ್ಟು ಆಕ್ರೋಶವನ್ನು ಉಂಟು ಮಾಡಿದ ಹಿನ್ನಲೆಯಲ್ಲಿ ಕಬ್ಬು ತುಂಬಿದ್ದ ಟ್ರ್ಯಾಕ್ಟರ್‌ (Tractors) ಗಳ ಮೇಲೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ : ಕರ್ನಾಟಕದ ಈ 4 Railway ನಿಲ್ದಾಣಗಳಿಗೆ ಹೊಸ ಹೆಸರು ; ನಿಮ್ಮ ನಿಲ್ದಾಣದ ಹೆಸರೇನು?

ಹೀಗಾಗಿ ಗೋದಾವರಿ ಸಕ್ಕರೆ  ಕಾರ್ಖಾನೆ ಬಳಿ ನಿಂತಿದ್ದ ಸುಮಾರು 20 ಕ್ಕೂ ಅಧಿಕ ಟ್ರ್ಯಾಕ್ಟರ್‌ (Tractors) ಟ್ರಾಲಿಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು.

ರೈತರ ಮುಖ್ಯ ಬೇಡಿಕೆ ಪ್ರತಿ ಟನ್ ಕಬ್ಬಿಗೆ 3500 ರೂ. ದರ ನಿಗದಿಮಾಡುವಂತೆ ಆಗಿದ್ದು, ಸರ್ಕಾರ ಈ ಮೊತ್ತವನ್ನು 3300 ರೂ. ಒಪ್ಪಿದೆ. ಆದರೆ ರೈತರು ತಮ್ಮ ವೆಚ್ಚ, ಶ್ರಮ ಮತ್ತು ಮಾರುಕಟ್ಟೆ ಬೆಲೆಗಳನ್ನು ಪರಿಗಣಿಸಿ 3500 ರೂ. ದರಕ್ಕೆ ಒತ್ತಾಯಿಸುತ್ತಿದ್ದಾರೆ.

ಮುಧೋಳದಲ್ಲಿ ನಡೆದ ಪ್ರತಿಭಟನೆ ಅಂಗಡಿ ಮತ್ತು ಮಾರುಕಟ್ಟೆ ಬಂದ್ ಮೂಲಕ ಕೂಡ ಬೆಂಬಲಿಸಲ್ಪಟ್ಟಿತು. ರೈತರು ಧರಣಿ ನಡೆಸಿ, ಸಮೀರವಾಡಿಯ ಕಾರ್ಖಾನೆ ಮೇಲೆ ಮುತ್ತಿಗೆ ಹಾಕಿದರು. ಕೆಲವು ಪ್ರತಿಭಟನಾಕಾರರು ಕಬ್ಬು ಸಾಗಿಸುತ್ತಿದ್ದ ಟ್ರಾಕ್ಟರ್‌ಗಳನ್ನು (Tractors) ಉರುಳಿಸಿ ಬೆಂಕಿ ಹಚ್ಚುವ ಮೂಲಕ ಆಕ್ರೋಶ ತೋರಿಸಿದರು.

ಈ ಪ್ರತಿಭಟನೆ ಕೇಂದ್ರ ಸರಕಾರ ಮತ್ತು ರಾಜ್ಯ ಸರ್ಕಾರದ ಗಮನ ಸೆಳೆಯುವಂತೆ ಮಾಡಿದ್ದು, ರೈತರು ಕಬ್ಬಿಗೆ ಸಮರ್ಪಕ ಬೆಲೆ ನಿಗದಿಗೆ ಒತ್ತಾಯಿಸುತ್ತಿದ್ದಾರೆ.

ಹೆಚ್ಚಿನ ಸುದ್ದಿ ಓದಲು janaspandhan.com ಕ್ಲಿಕ್ ಮಾಡಿ

- Advertisement -
Janaspandhan News
Janaspandhan Newshttp://WWW.janaspandhan.com
Janaspandana News is a digital news platform that reports crime and local news from Karnataka.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments