ಶುಕ್ರವಾರ, ಜನವರಿ 2, 2026

Janaspandhan News

HomeState NewsVideo : ಶ್ರೀಕೃಷ್ಣ ದೇವರಾಯನ ಸಮಾಧಿಯ ಮೇಲೆ ಮಾಂಸ ಕಟ್ ; ಭಾರೀ ಆಕ್ರೋಶ.!
spot_img
spot_img
spot_img

Video : ಶ್ರೀಕೃಷ್ಣ ದೇವರಾಯನ ಸಮಾಧಿಯ ಮೇಲೆ ಮಾಂಸ ಕಟ್ ; ಭಾರೀ ಆಕ್ರೋಶ.!

- Advertisement -

ಜನಸ್ಪಂದನ ನ್ಯೂಸ್, ಗಂಗಾವತಿ : ಕನ್ನಡ ರಾಜ್ಯ ರಮಾರಮಣ ಎಂದೇ ಬಿರುದಾಂಕಿತ ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿಯಾಗಿ ಮೆರೆದಿದ್ದ ಶ್ರೀಕೃಷ್ಣ ದೇವರಾಯನ ಸಮಾಧಿಯ ಮೇಲೆ ಮಾಂಸ ಕಟ್ ಮಾಡಿ ಅಪಚಾರ ಎಸಗಿದ ಘಟನೆ ನಡೆದಿದೆ.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಈ ಘಟನೆಯನ್ನು ಖಂಡಿಸಿ ತಮ್ಮ “X” ಖಾತೆಯಲ್ಲಿ ಈ ಬಗ್ಗೆ ಹಂಚಿಕೊಂಡಿದ್ದು, ಘಟನೆಯ ಬಗ್ಗೆ ಅವರು ಭಾರೀ ಆಘಾತ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ : ‌Real Hero : ವಿದ್ಯುತ್​ ಶಾಕ್​ನಿಂದ ಬಾಲಕನನ್ನು ರಕ್ಷಿಸಿದ ಯುವಕ, ವಿಡಿಯೋ ವೈರಲ್.!

ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿಯಾಗಿ 1509 ರಿಂದ 1529ರವರೆಗೆ ಮಹಾನ್ ಹಿಂದೂ ಸಾಮ್ರಾಜ್ಯವನ್ನು ಸ್ಥಾಪಿಸಿ ಮೆರೆದಿದ್ದ ಈ ಚಕ್ರವರ್ತಿಯ ಸಮಾಧಿಗೆ ಮಾಡಿರುವ ಅಪಮಾನ, ತಕ್ಷಣವೇ ಸಮಾಧಿಯನ್ನು ಕ್ಲೀನ್‌ ಮಾಡಬೇಕೆಂದಿದ್ದಾರೆ.

ಭಾರತೀಯ ಇತಿಹಾಸದಲ್ಲಿ ಶ್ರೇಷ್ಠ ಆಡಳಿತಗಾರನಾಗಿದ್ದ ಶ್ರೀ ಕೃಷ್ಣದೇವರಾಯರ ಸಮಾಧಿ ಕೊಪ್ಪಳ‌ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿಯ ತುಂಗಭದ್ರಾ ನದಿಯ ತಟದಲ್ಲಿದೆ.

ಇದನ್ನು ಓದಿ : ಮನೆ ಬಿಟ್ಟು ಓಡಿಹೋಗಿ ಮದುವೆಯಾದ ಸರಿಗಮಪ ಖ್ಯಾತಿಯ Singer ಪೃಥ್ವಿ ಭಟ್

ಇಂತಹ ಮಹಾನ್ ವ್ಯಕ್ತಿಯ ಸಮಾಧಿಯ ಈ ಸ್ಥಳವನ್ನು ಅಕ್ಷರಶಃ ಮಾಂಸದ ಮಾರುಕಟ್ಟೆಯಾಗಿ ಪರಿವರ್ತನೆ ಮಾಡಿದ್ದು ಕೃಷ್ಣದೇವರಾಯರಿಗೆ ಮಾಡಿದ ಅಪಮಾನ.

ಅನೇಕ ಹಿಂದೂ ದೇವಾಲಯಗಳನ್ನು ಕೆಡವಿ ದೇಶದ ಸಂಪತ್ತು ದೋಚಿದ ಔರಂಗಜೇಬನ ಸಮಾಧಿಯನ್ನು ಭಾರತೀಯ ಪುರಾತತ್ವ ಇಲಾಖೆ ರಕ್ಷಣೆ ಮಾಡುತ್ತದೆ. ಆದರೆ, ಇಂತಹ ಮಹಾ ಪರಾಕ್ರಮಿ,ಕಲೆ ಸಾಹಿತ್ಯ ಪೋಷಕ ದೇವರಾಯರ ಸಮಾಧಿಗೆ ಯಾಕೆ ನಿರ್ಲಕ್ಷ್ಯ.?

ಇದನ್ನು ಓದಿ : Ex ಲವರ್‌ನಿಂದ ಬ್ಲ್ಯಾಕ್‌ಮೇಲ್‌ ; ಮದುವೆ ಸಂಭ್ರಮದಲ್ಲಿದ್ದ ಯುವತಿ ಆತ್ಮಹತ್ಯೆ.!

ಈ ಘಟನೆ ಕನ್ನಡಿಗರಿಗಷ್ಟೇ ಅಲ್ಲ, ರಾಷ್ಟ್ರಕ್ಕೆ ಮಾಡಿದ ಅಪಮಾನ ಮಾಂಸವನ್ನು ಮಾರುವ ಮೂಲಕ ಸ್ಥಳದ ಪಾವಿತ್ರ್ಯ ಹಾಳು ಮಾಡುತ್ತಿರೋ ಜಾಗ ಖಾಲಿ ಮಾಡಲು ಸೂಚಿಸಬೇಕು ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಡಳಿತ ಕೂಡಲೇ ಜಾಗ ಖಾಲಿ ಮಾಡಲು ಸೂಚಿಸಬೇಕು ಹಾಗೂ ಇಲ್ಲಿ ನೈರ್ಮಲ್ಯ ಮತ್ತು ಸಮಾಧಿಯ ಪಾವಿತ್ರ್ಯತೆಯನ್ನು ಕಾಪಾಡುವ ಕೆಲಸವನ್ನು ಸರ್ಕಾರ ತುರ್ತಾಗಿ ಮಾಡಲಿ. (ಏಜೇನ್ಸಿಸ್)

ವಿಡಿಯೋ ನೋಡಿ : 

- Advertisement -
Janaspandhan News
Janaspandhan Newshttp://WWW.janaspandhan.com
Janaspandana News is a digital news platform that reports crime and local news from Karnataka.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments