ಜನಸ್ಪಂದನ ನ್ಯೂಸ್, ಬೆಂಗಳೂರು : ಕರ್ನಾಟಕ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) 2025 ನೇ ಸಾಲಿಗೆ ಹೊಸ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ವಿವಿಧ ಇಲಾಖೆಗಳಲ್ಲಿನ ಒಟ್ಟು 394 ಹುದ್ದೆಗಳ ಭರ್ತಿಗೆ ಈ ನೇಮಕಾತಿ ಪ್ರಕ್ರಿಯೆ ಆರಂಭಗೊಂಡಿದ್ದು, ರಾಜ್ಯದ ಅರ್ಹ ಅಭ್ಯರ್ಥಿಗಳಿಗೆ ಸರ್ಕಾರೀ ಉದ್ಯೋಗದ ಉತ್ತಮ ಅವಕಾಶ ದೊರೆತಿದೆ.
ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ದಿನಾಂಕ ಹಾಗೂ ಇತರೆ ವಿವರಗಳನ್ನು ಕೆಳಗೆ ನೀಡಲಾಗಿದೆ.
River : ಕೌಟುಂಭಿಕ ಕಲಹ ; 4 ಮಕ್ಕಳ ಜೊತೆ ನದಿಯಲ್ಲಿ ಕಾಣೆಯಾದ ಪತಿ, ಮುಂದುವರೆದ ಶೋಧ.!
KEA ಹುದ್ದೆಗಳ ವಿವರ :
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಈ ನೇಮಕಾತಿಯಲ್ಲಿ ವಿವಿಧ ಇಲಾಖೆಗಳಡಿ ಹುದ್ದೆಗಳು ಖಾಲಿ ಇದ್ದು, ಅವುಗಳ ಪಟ್ಟಿ ಹೀಗಿದೆ 👇
- ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) – 18 ಹುದ್ದೆಗಳು.
- ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (KSDL) – 14 ಹುದ್ದೆಗಳು.
- ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ (RGUHS) – 40 ಹುದ್ದೆಗಳು.
- ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KKRTC) – 63 ಹುದ್ದೆಗಳು
- ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) – 19 ಹುದ್ದೆಗಳು.
- ಕೃಷಿ ಮಾರಾಟ ಇಲಾಖೆ – 180 ಹುದ್ದೆಗಳು.
- ತಾಂತ್ರಿಕ ಶಿಕ್ಷಣ ಇಲಾಖೆ – 50 ಹುದ್ದೆಗಳು.
- ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) – 10 ಹುದ್ದೆಗಳು.
ಒಟ್ಟು 394 ಹುದ್ದೆಗಳು ವಿವಿಧ ವರ್ಗಗಳಲ್ಲಿ ಭರ್ತಿಯಾಗಲಿವೆ.
eSIM : ಸಿಮ್ ಕಾರ್ಡ್ ಇಲ್ಲದೆ ಕಾಲ್, ಇಂಟರ್ನೆಟ್ ಸೌಲಭ್ಯ ; BSNL ನಿಂದ ಬಂಪರ್ ಸೌಲಭ್ಯ.!
KEA ಅರ್ಜಿ ಸಲ್ಲಿಸುವ ವಿಧಾನ :
ಅರ್ಹ ಅಭ್ಯರ್ಥಿಗಳು ಕೆಳಗಿನ ಕ್ರಮಗಳನ್ನು ಅನುಸರಿಸಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು 👇
- ಅಧಿಕೃತ ವೆಬ್ಸೈಟ್ ಅಥವಾ ಕೆಳಗಿನ ಲಿಂಕ್ ಮೂಲಕ KEA ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿ.
- ಪ್ರಕಟಣೆಯಲ್ಲಿರುವ ಎಲ್ಲಾ ನಿಯಮಗಳು ಮತ್ತು ಅರ್ಹತೆಗಳನ್ನು ಎಚ್ಚರಿಕೆಯಿಂದ ಓದಿ.
- ಆನ್ಲೈನ್ ಅರ್ಜಿ ಲಿಂಕ್ ತೆರೆಯಿರಿ ಮತ್ತು ಅಗತ್ಯ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ.
- ಅಗತ್ಯವಿದ್ದಲ್ಲಿ ಅರ್ಜಿ ಶುಲ್ಕ ಪಾವತಿಸಿ.
- ಪಾಸ್ಪೋರ್ಟ್ ಸೈಸ್ ಫೋಟೋ ಹಾಗೂ ಸಹಿಯನ್ನು ಅಪ್ಲೋಡ್ ಮಾಡಿ.
- ಎಲ್ಲಾ ವಿವರಗಳನ್ನು ಪರಿಶೀಲಿಸಿದ ನಂತರ ಅರ್ಜಿಯನ್ನು ಸಲ್ಲಿಸಿ.
- ಭವಿಷ್ಯದಲ್ಲಿ ಉಪಯೋಗಿಸಲು ಅರ್ಜಿಯ ಪ್ರಿಂಟ್ಔಟ್ ತೆಗೆದುಕೊಳ್ಳಿ.
Young woman : ಯುವತಿಯೊಂದಿಗೆ ಡೆಲಿವರಿ ಬಾಯ್ ಅಸಭ್ಯ ವರ್ತನೆ ; ಘಟನೆ ವಿಡಿಯೋ ವೈರಲ್.!
KEA ಶೈಕ್ಷಣಿಕ ಅರ್ಹತೆ :
ಹುದ್ದೆಗಳ ಪ್ರಕಾರ ಶೈಕ್ಷಣಿಕ ಅರ್ಹತೆ ವಿಭಿನ್ನವಾಗಿದ್ದು, 10ನೇ ತರಗತಿ ಪಾಸ್ನಿಂದ ಹಿಡಿದು ಪದವಿ ಮತ್ತು ತಾಂತ್ರಿಕ ಶಿಕ್ಷಣ ಪಡೆದ ಅಭ್ಯರ್ಥಿಗಳಿಗೂ ಅವಕಾಶವಿದೆ. ವಿವರವಾದ ಮಾಹಿತಿಗಾಗಿ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಓದುವುದು ಅಗತ್ಯ.
KEA ವಯೋಮಿತಿ ಮತ್ತು ವೇತನ :
- KEA ಪ್ರಕಟಣೆಯ ಪ್ರಕಾರ ವಯೋಮಿತಿಯು ಹುದ್ದೆಗನುಗುಣವಾಗಿ ನಿಗದಿಪಡಿಸಲಾಗಿದ್ದು, ಸರ್ಕಾರದ ನಿಯಮಾವಳಿಗಳ ಪ್ರಕಾರ ಮೀಸಲಾತಿ ಸಡಿಲಿಕೆಗಳೂ ಇರುತ್ತವೆ.
- ವೇತನಶ್ರೇಣಿಯು ಇಲಾಖೆಯ ಹುದ್ದೆಗಳ ಪ್ರಕಾರ ವಿಭಿನ್ನವಾಗಿದ್ದು, ಸರ್ಕಾರದ ಪ್ರಮಾಣಿತ ವೇತನಮಾನವನ್ನು ಅನುಸರಿಸಲಾಗುತ್ತದೆ.
ಇಲ್ಲಿದೇ ನೋಡಿ “Kantara : Chapter 1” ಚಿತ್ರದ ಶೂಟಿಂಗ್ ನಡೆದ ಅದ್ಭುತ ಸ್ಥಳ.!
ಪ್ರಮುಖ ದಿನಾಂಕಗಳು :
- ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : ಶೀಘ್ರದಲ್ಲೇ ಲಭ್ಯ.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಶೀಘ್ರದಲ್ಲೇ ಲಭ್ಯ.
ಅಭ್ಯರ್ಥಿಗಳು ದಿನಾಂಕಗಳನ್ನು ತಪ್ಪದೇ ಅಧಿಕೃತ ವೆಬ್ಸೈಟ್ನಲ್ಲಿ ಪರಿಶೀಲಿಸಬೇಕು.
KEA ಪ್ರಮುಖ ಲಿಂಕ್ಗಳು :
- ಅಧಿಸೂಚನೆ PDF ಡೌನ್ಲೋಡ್ :ಇಲ್ಲಿ ಕ್ಲಿಕ್ ಮಾಡಿ.
- ಅಧಿಕೃತ ವೆಬ್ಸೈಟ್ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ.
- ಅರ್ಜಿ ಸಲ್ಲಿಸಲು ಲಿಂಕ್ : ಶೀಘ್ರದಲ್ಲೇ ಲಭ್ಯ.
ಸುಪ್ರೀಂ ಕೋರ್ಟ್ನಲ್ಲಿ ನಾಟಕೀಯ ಘಟನೆ ; CJI ಮೇಲೆ ಶೂ ತೂರಲು ಯತ್ನಿಸಿದ ವಕೀಲ.!
ಹೆಚ್ಚುವರಿ ಮಾಹಿತಿ :
KEA ನೇಮಕಾತಿ 2025 ರಾಜ್ಯದ ವಿವಿಧ ಸರ್ಕಾರಿ ಸಂಸ್ಥೆಗಳಲ್ಲಿ ಯುವಕರಿಗೆ ಸರ್ಕಾರಿ ಉದ್ಯೋಗದ ಬಾಗಿಲು ತೆರೆದಿದೆ. ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸುವ ಮೊದಲು ತಮ್ಮ ಶೈಕ್ಷಣಿಕ ದಾಖಲೆಗಳು, ಗುರುತಿನ ಪತ್ರಗಳು ಹಾಗೂ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಂಡಿರಬೇಕು.
ಮಹಿಳೆಯ ಮೇಲೆ sexual-assault ನಡೆಸಿ ಪರಾರಿಯಾದ ವ್ಯಕ್ತಿ ; ಸಿಸಿಟಿವಿಯಲ್ಲಿ ದೃಶ್ಯ ಸೆರೆ.!
ಜನಸ್ಪಂದನ ನ್ಯೂಸ್, ಡೆಸ್ಕ್ : ಅಮೆರಿಕದ ನ್ಯೂಯಾರ್ಕ್ನಲ್ಲಿ 36 ವರ್ಷದ ಮಹಿಳೆಯೊಬ್ಬಳ ಮೇಲೆ ನಡೆದ ಭೀಕರ ದಾಳಿ ಹಾಗೂ ಅತ್ಯಾಚಾರ (sexual-assault) ಪ್ರಕರಣ ಬೆಳಕಿಗೆ ಬಂದಿದೆ. ಸೆಪ್ಟೆಂಬರ್ 28ರ ಮುಂಜಾನೆ ಅಪಾರ್ಟ್ಮೆಂಟ್ ಕಟ್ಟಡದೊಳಗೆ ಈ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 21 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆ ವಿವರ :
ವರದಿಗಳ ಪ್ರಕಾರ, ಬೆಳಗ್ಗೆ 5 ಗಂಟೆ ಸುಮಾರಿಗೆ ನ್ಯೂಯಾರ್ಕ್ನ ನಾರ್ವುಡ್ ಪ್ರದೇಶದ ಪುಟ್ನಮ್ ಪ್ಲೇಸ್ ಬಳಿ ಇರುವ ವಸತಿ ಕಟ್ಟಡಕ್ಕೆ ಆರೋಪಿಯು ಪ್ರವೇಶಿಸಿದ್ದಾನೆ. ಕಟ್ಟಡದೊಳಗೆ ಮಹಿಳೆಯನ್ನು ಗುರಿಯಾಗಿಸಿಕೊಂಡು ಶಾರೀರಿಕ ದಾಳಿ ನಡೆಸಿ ನೆಲಕ್ಕೆ ತಳ್ಳಿದ ಬಳಿಕ ಆಕೆಯ ಮೇಲೆ ಅತ್ಯಾಚಾರ (sexual-assault) ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Relationships : “ಭಾರತದಲ್ಲಿ ಅತೀ ಹೆಚ್ಚು ಅಕ್ರಮ ಸಂಬಂಧವಿರುವ ನಗರಗಳ ಪಟ್ಟಿ ಪ್ರಕಟ: ಬೆಂಗಳೂರಿನ ಸ್ಥಾನವೇನು?”
ಈ ವೇಳೆ ಮಹಿಳೆ (woman) ತನ್ನನ್ನು ಬಿಡುವಂತೆ ಮನವಿ ಮಾಡಿದ್ದು, ತನ್ನ ಮೇಲೆ ಅತ್ಯಾಚಾರ (sexual-assault) ಮಾಡದಂತೆ ಮನವಿ ಮಾಡಿದ್ದಾಳೆ. ಅಲ್ಲದೆ ಎಷ್ಟು ಹಣ ಬೇಕೆಂದು ಕೇಳಿಕೊಂಡಿದ್ದಾಳೆ. ಆದರೆ ದಾಳಿಕೋರನು ಅತ್ಯಾಚಾರ (sexual-assault) ಮಾಡಿ, ಆಕೆಯ ಪರ್ಸ್ನ್ನು ಕಸಿದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ. ಆ ಪರ್ಸ್ನಲ್ಲಿ 250 ಡಾಲರ್ ನಗದು, ಆಕೆಯ ಗುರುತಿನ ಚೀಟಿ ಹಾಗೂ ಕೀಲಿಗಳು ಇದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿ ಮತ್ತು ಬಂಧನ :
ಘಟನೆಯ ನಂತರ ನ್ಯೂಯಾರ್ಕ್ ಪೊಲೀಸ್ ಇಲಾಖೆ (NYPD) ಕಟ್ಟಡದೊಳಗೆ ದಾಖಲಾಗಿದ್ದ ಸಿಸಿಟಿವಿ ದೃಶ್ಯಾವಳಿಯನ್ನು ಬಿಡುಗಡೆ ಮಾಡಿತು. ಆ ವಿಡಿಯೋದಲ್ಲಿ ಆರೋಪಿಯ (sexual-assault) ನ್ನು ಕುತ್ತಿಗೆಗೆ ಟವಲ್ ಸುತ್ತಿಕೊಂಡು, ಪ್ಯಾಂಟ್ ಎಳೆಯುತ್ತ ಓಡುತ್ತಿರುವ ದೃಶ್ಯಗಳು ದಾಖಲಾಗಿದ್ದವು.
Divorce from wife : ಸಂಭ್ರಮಕ್ಕೆ ಹಾಲಿನ ಸ್ನಾನ : ಟ್ರ್ಯಾಕ್ಟರ್ನಲ್ಲಿ ಮೆರವಣಿಗೆ, ಡ್ಯಾನ್ಸ್.!
ಮರುದಿನ ಮಧ್ಯಾಹ್ನ ಬ್ರಾಂಕ್ಸ್ನ ಮತ್ತೊಂದು ಕಟ್ಟಡದೊಳಗೆ ಅಡಗಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದರು. ಸ್ಥಳದಿಂದ ಸುಮಾರು ಎರಡು ಮೈಲು ದೂರದಲ್ಲಿ ಆತನನ್ನು ಪತ್ತೆ ಹಚ್ಚಲಾಯಿತು. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಅವನನ್ನು ಗುರುತಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಯ ವಿವರ :
ಬಂಧಿತನನ್ನು ಕೆನ್ನೆತ್ ಸಿರಿಬೋ ಎಂದು ಗುರುತಿಸಲಾಗಿದೆ. ಅವನು ನಿರಾಶ್ರಿತನಾಗಿದ್ದು, ನ್ಯೂಜೆರ್ಸಿಯ ಯೂನಿಯನ್ ಬೀಚ್ನಲ್ಲಿ ತಂಗಿದ್ದಾನೆ ಎಂದು ವರದಿಗಳು ತಿಳಿಸಿವೆ. ನ್ಯೂಯಾರ್ಕ್ನಲ್ಲಿ ಇದುವರೆಗೂ ಆತನ ವಿರುದ್ಧ ಯಾವುದೇ ಅಪರಾಧ ಪ್ರಕರಣ ದಾಖಲಾಗಿರಲಿಲ್ಲ.
ಹಣ್ಣು ಮಾರುತ್ತಿದ್ದ 25ರ ಯುವತಿ ಮೇಲೆ Police ದುರ್ವರ್ತನೆ ಆರೋಪ ; ಬಂಧನ.!
ಪೊಲೀಸರು ಆರೋಪಿಯ ವಿರುದ್ಧ ಲೈಂಗಿಕ ದಾಳಿ, ದರೋಡೆ, ಕಳ್ಳತನ ಹಾಗೂ ಕ್ರಿಮಿನಲ್ ಪ್ರಕರಣಗಳು ದಾಖಲಿಸಿದ್ದಾರೆ. ಪ್ರಸ್ತುತ ತನಿಖೆ ಮುಂದುವರಿದಿದ್ದು, ಪ್ರಕರಣದ ಕುರಿತು ಹೆಚ್ಚಿನ ಮಾಹಿತಿಯನ್ನು ಪೊಲೀಸರು ಶೀಘ್ರದಲ್ಲೇ ಹಂಚಿಕೊಳ್ಳುವ ನಿರೀಕ್ಷೆಯಿದೆ.
ಅತ್ಯಾಚಾರ (sexual-assault) ಮಾಡಿ ಓಡಿಹೋದ ನಿರಾಶ್ರಿತ ವ್ಯಕ್ತಿಯ ವಿಡಿಯೋ :
🚨WANTED FOR A Rape: on Sunday, September 28, 2025, at approximately 5:00 A.M., in the vicinity of East Gun Hill Road and Putnam Place, in the confines of the 52nd Precinct, a 36-year-old female victim was sexually assaulted by an unknown individual pic.twitter.com/hhkCCqUTZ3
— NYPD Crime Stoppers (@NYPDTips) September 29, 2025