Tuesday, October 14, 2025

Janaspandhan News

HomeJobರಾಜ್ಯದಲ್ಲಿ 10 ಸಾವಿರಕ್ಕೂ ಹೆಚ್ಚು Constable ಹುದ್ದೆಗಳಿಗೆ ನೇಮಕಾತಿ ; ಸಚಿವ ಡಾ.ಪರಮೇಶ್ವರ.!
spot_img
spot_img
spot_img

ರಾಜ್ಯದಲ್ಲಿ 10 ಸಾವಿರಕ್ಕೂ ಹೆಚ್ಚು Constable ಹುದ್ದೆಗಳಿಗೆ ನೇಮಕಾತಿ ; ಸಚಿವ ಡಾ.ಪರಮೇಶ್ವರ.!

- Advertisement -

ಜನಸ್ಪಂದನ ನ್ಯೂಸ್‌, ಬೆಂಗಳೂರು : ಪೊಲೀಸ್ ಇಲಾಖೆಯಲ್ಲಿ ಸೇವೆ ಮಾಡಲು ಬಯಸುವ ಆಕಾಂಕ್ಷಿಗಳಿಗೆ ಶುಭಸುದ್ದಿಯೊಂದು ಬಂದಿದೆ. ರಾಜ್ಯದಲ್ಲಿ ಖಾಲಿ ಇರುವ ಸಾವಿರಾರು ಕಾನ್ಸ್‌ಟೇಬಲ್ (Constable) ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ಶೀಘ್ರದಲ್ಲೇ ನೇಮಕಾತಿ ಪ್ರಕ್ರಿಯೆ ಆರಂಭಿಸಲು ಸಜ್ಜಾಗಿದೆ.

ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ನೀಡಿದ ಮಾಹಿತಿಯ ಪ್ರಕಾರ, 10 ರಿಂದ 15 ಸಾವಿರ ಕಾನ್ಸ್‌ಟೇಬಲ್ (Constable) ಹುದ್ದೆಗಳು ಈಗ ಖಾಲಿ ಇದ್ದು, ಶೀಘ್ರದಲ್ಲೇ ಅದಕ್ಕೆ ಸಂಬಂಧಿಸಿದ ಆದೇಶ ಹೊರ ಬೀಳಲಿದೆ. ಈ ಮೂಲಕ ಸಿವಿಲ್, ಕೆಎಸ್ಆರ್‌ಪಿ ಹಾಗೂ ಸಶಸ್ತ್ರ ಮೀಸಲು ಪಡೆಗಳಲ್ಲಿ ಸಿಬ್ಬಂದಿ ಕೊರತೆ ನೀಗಲಿದೆ.

Snake : ಹಾವಿನ ಜೊತೆ ಸ್ಟಂಟ್ ಮಾಡಲು ಯತ್ನಿಸಿದ ಯುವಕ : ದಾರುಣ ಅಂತ್ಯದ ವಿಡಿಯೋ.!
ಪಿಎಸ್ಐ ಹುದ್ದೆಗಳು :
  • ಈಗಾಗಲೇ 545 ಪಿಎಸ್ಐ ಹುದ್ದೆಗಳ ಅಭ್ಯರ್ಥಿಗಳು ಮೈಸೂರಿನ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.
  • 402 ಪಿಎಸ್ಐ ಹುದ್ದೆಗಳ ನೇಮಕಾತಿ ಪೈಕಿ 398 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲಾಗಿದೆ.
  • ಕಾರಾಗೃಹ ಪಿಎಸ್ಐ ಹಾಗೂ ಪೊಲೀಸ್ ಪೇದೆ (Constable) ಹುದ್ದೆಗಳ ನೇಮಕಾತಿ ಕುರಿತು ಕೂಡ ಚರ್ಚೆ ನಡೆಯುತ್ತಿದೆ.
ಘಟಕವಾರು ಹುದ್ದೆಗಳ ಹಂಚಿಕೆ :
8 ತಿಂಗಳಲ್ಲೇ ವಿಚ್ಛೇದನಕ್ಕೆ ಅರ್ಜಿ ಹಾಕಿದ Couple ; ಸಂಸಾರಕ್ಕೆ ಹುಳಿ ಹಿಂಡಿದ್ದು ನಾಯಿ, ಬೆಕ್ಕು ಮತ್ತು ಮೀನು.!

ಕಲ್ಯಾಣ ಕರ್ನಾಟಕೇತರ ವೃಂದ :

  • ಬೆಂಗಳೂರು 1ನೇ ಪಡೆ – 134 ಹುದ್ದೆ (ಪುರುಷ).
  • ಬೆಳಗಾವಿ 2ನೇ ಪಡೆ – 140 ಹುದ್ದೆ (ಪುರುಷ) + 23 (ಮಹಿಳೆ).
  • ಬೆಂಗಳೂರು 3ನೇ ಪಡೆ – 113 ಹುದ್ದೆ (ಪುರುಷ).
  • ಬೆಂಗಳೂರು 4ನೇ ಪಡೆ – 134 ಹುದ್ದೆ (ಪುರುಷ) + 28 (ಮಹಿಳೆ).
  • ಮೈಸೂರು 5ನೇ ಪಡೆ – 103 ಹುದ್ದೆ (ಪುರುಷ) + 25 (ಮಹಿಳೆ).
  • ಮಂಗಳೂರು 7ನೇ ಪಡೆ – 335 ಹುದ್ದೆ (ಪುರುಷ).
  • ಶಿವಮೊಗ್ಗ 8ನೇ ಪಡೆ – 120 ಹುದ್ದೆ (ಪುರುಷ).
  • ಬೆಂಗಳೂರು 9ನೇ ಪಡೆ – 75 ಹುದ್ದೆ (ಪುರುಷ).
  • ಹಾಸನ 11ನೇ ಪಡೆ – 135 ಹುದ್ದೆ (ಪುರುಷ).
  • ತಮಕುರು 12ನೇ ಪಡೆ – 135 ಹುದ್ದೆ (ಪುರುಷ).
Belagavi : ಅಕ್ರಮ ಗೋಮಾಂಸ ಸಾಗಾಟ : ಲಾರಿಗೆ ಬೆಂಕಿ : 2 ಪ್ರಕರಣ ದಾಖಲು.!

ಕಲ್ಯಾಣ ಕರ್ನಾಟಕ ವೃಂದ :

  • ಬೆಂಗಳೂರು 1ನೇ ಪಡೆ – 33 ಹುದ್ದೆ (ಪುರುಷ).
  • ಬೆಂಗಳೂರು 3ನೇ ಪಡೆ – 34 ಹುದ್ದೆ (ಪುರುಷ).
  • ಬೆಂಗಳೂರು 4ನೇ ಪಡೆ – 33 ಹುದ್ದೆ (ಪುರುಷ) + 12 (ಮಹಿಳೆ).
  • ಕಲಬುರಗಿ 6ನೇ ಪಡೆ – 180 ಹುದ್ದೆ (ಪುರುಷ) + 41 (ಮಹಿಳೆ).
  • ಬೆಂಗಳೂರು 9ನೇ ಪಡೆ – 33 ಹುದ್ದೆ (ಪುರುಷ).

ಇದಲ್ಲದೆ, ಮುನಿರಾಬಾದ್‌ನ ಭಾರತ ಮೀಸಲು ಪಡೆಯಲ್ಲಿ 166 ಹುದ್ದೆಗಳ ಅಧಿಸೂಚನೆ ಹೊರಡಿಸಲು ತಯಾರಿ ನಡೆಯುತ್ತಿದೆ.

Lady : ವಿದೇಶಿ ಪ್ರವಾಸಿ ಮಹಿಳೆಯನ್ನು ನೋಡಿ ಭಯದಿಂದ ಓಡಿಹೋದ ಶಾಲಾ ಮಕ್ಕಳು.!

👉 ಈ ನೇಮಕಾತಿಯಿಂದ ರಾಜ್ಯದ ಪೊಲೀಸ್ ಇಲಾಖೆಯಲ್ಲಿ ದೀರ್ಘಕಾಲದಿಂದ ಇರುವ ಸಿಬ್ಬಂದಿ ಕೊರತೆಯ ಸಮಸ್ಯೆ ನಿವಾರಣೆಯಾಗುವ ನಿರೀಕ್ಷೆ ವ್ಯಕ್ತವಾಗಿದೆ.

constable is a person holding a particular office, most commonly in law enforcement. The office of constable can vary significantly in different jurisdictions. Constable is commonly the rank of an officer within a police service. Other people may be granted powers of a constable without holding this title.

Disclaimer : This article is based on reports and information available on the internet. Janaspandhan News is not affiliated with it and is not responsible for it.


Snake : ಹಾವಿನ ಜೊತೆ ಸ್ಟಂಟ್ ಮಾಡಲು ಯತ್ನಿಸಿದ ಯುವಕ : ದಾರುಣ ಅಂತ್ಯದ ವಿಡಿಯೋ.!

Snake

ಜನಸ್ಪಂದನ ನ್ಯೂಸ್‌, ಮುಜಾಫರ್‌ನಗರ (ಉ.ಪ್ರ) : ಸಾಮಾಜಿಕ ಜಾಲತಾಣಗಳಲ್ಲಿ ಹಾವಿ (Snake) ನೊಂದಿಗೆ ವಿಡಿಯೋ ಮಾಡುವ ಹುಚ್ಚಿನಲ್ಲಿ 24 ವರ್ಷದ ಯುವಕನೊಬ್ಬ ಜೀವ ಕಳೆದುಕೊಂಡಿರುವ ಘಟನೆ ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯ ಮೊರ್ನಾ ತಾಲೂಕಿನ ಭೊಪಾ ಪ್ರದೇಶದಲ್ಲಿ ನಡೆದಿದೆ.

ಮೃತ ಯುವಕನನ್ನು ಮೋಹಿತ್ ಕುಮಾರ್ ಅಲಿಯಾಸ್ ಬಂಟಿ ಎಂದು ಗುರುತಿಸಲಾಗಿದೆ. ಸ್ಥಳೀಯರ ಪ್ರಕಾರ, ಮಂಗಲ್ ಪ್ರಜಾಪತಿ ಎಂಬುವರ ಮನೆಯಲ್ಲಿ ಹಾವು (Snake) ಕಂಡುಬಂದಾಗ ಜನರು ಅಂಜಿ ಬೊಬ್ಬೆ ಹೊಡೆದಿದ್ದರು. ಅದೇ ವೇಳೆ ಅಲ್ಲಿಗೆ ಬಂದ ಮೋಹಿತ್ ತನ್ನ ಕೈಗಳಿಂದಲೇ ಹಾವನ್ನು ಹಿಡಿದಿದ್ದಾನೆ.

72 ವರ್ಷದ ವರ, 27 ವರ್ಷದ ವಧು ; ಹಿಂದೂ ಸಂಪ್ರದಾಯದಂತೆ Marriage ಆದ ಉಕ್ರೇನ್ ಜೋಡಿ.!

ಹಾವ (Snake) ನ್ನು ಹಿಡಿದ ನಂತರ ಆತ ಅದನ್ನು ಚೀಲಕ್ಕೆ ತುಂಬದೆ, ಜನರ ಮುಂದೆ ಸಾಹಸ ಪ್ರದರ್ಶಿಸಲು ಮುಂದಾಗಿದ್ದ. ಹಾವನ್ನು ಕೊರಳಿಗೆ ಸುತ್ತಿಕೊಂಡು, ಆ ದೃಶ್ಯವನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಸಲು ಪ್ರಾರಂಭಿಸಿದ್ದ. ಈ ವೇಳೆ ಬೆದರಿದ ಹಾವು ಆತನ ಕೈಗೆ ಎರಡು ಬಾರಿ ಕಚ್ಚಿತು.

ಕಚ್ಚಿದ ನಂತರವೂ ಹಾವ (Snake) ನ್ನು ಚೀಲಕ್ಕೆ ಹಾಕಿದ ಮೋಹಿತ್, ಕೆಲವು ನಿಮಿಷಗಳಲ್ಲಿ ಅಸ್ವಸ್ಥನಾದ. ತಕ್ಷಣವೇ ಕುಟುಂಬದವರು ಅವನನ್ನು ಆಸ್ಪತ್ರೆಗೆ ಸಾಗಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಮೋಹಿತ್ ಮೃತಪಟ್ಟಿದ್ದಾನೆ.

ಹೆಚ್ಚಿದ Uric ಆಮ್ಲದಿಂದ ಬಳಲುತ್ತಿದ್ದೀರಾ? ಈ ಸೂಪರ್ ಫುಡ್‌ ಸೇವಿಸಿ.!

ಪೊಲೀಸರು ಈ ಪ್ರಕರಣವನ್ನು ಆಕಸ್ಮಿಕ ಸಾವು ಎಂದು ಪರಿಗಣಿಸಿದ್ದು, “ಅವನು ಹಾವ (Snake) ನ್ನು ಹಿಡಿದು ನೇರವಾಗಿ ಕಾಡಿಗೆ ತೆರಳಿ ಬಿಟ್ಟು ಬಂದಿದ್ದರೆ ಬದುಕುಳಿಯಬಹುದಿತ್ತು. ಆದರೆ ಸ್ಟಂಟ್ ಮಾಡಲು ಹೋಗಿ ಜೀವ ಕಳೆದುಕೊಂಡಿದ್ದಾನೆ” ಎಂದು ತಿಳಿಸಿದ್ದಾರೆ.

ವೈರಲ್ ವೀಡಿಯೋ ಹುಚ್ಚಿನ ದುಷ್ಪರಿಣಾಮ :

ಇತ್ತೀಚೆಗೆ ವೈರಲ್ ಆಗಲು ಯುವಕರು ಅತಿಯಾದ ಸಾಹಸಗಳಿಗೆ ಮುಂದಾಗುತ್ತಿರುವುದರಿಂದ ಅನೇಕರು ಜೀವ ಕಳೆದುಕೊಳ್ಳುತ್ತಿದ್ದಾರೆ. ರಸ್ತೆಗಳು, ರೈಲು ಹಳಿ, ಕಟ್ಟಡಗಳ ಮೇಲ್ಛಾವಣಿ ಇತ್ಯಾದಿ ಅಪಾಯಕಾರಿ ಸ್ಥಳಗಳಲ್ಲಿ ವೀಡಿಯೋ ಮಾಡುವ ಪ್ರವೃತ್ತಿ ಹೆಚ್ಚಾಗಿದ್ದು, ತಾವು ಮಾತ್ರವಲ್ಲ ಇತರರ ಜೀವಕ್ಕೂ ಅಪಾಯ ಉಂಟುಮಾಡುತ್ತಿದ್ದಾರೆ.

8 ತಿಂಗಳಲ್ಲೇ ವಿಚ್ಛೇದನಕ್ಕೆ ಅರ್ಜಿ ಹಾಕಿದ Couple ; ಸಂಸಾರಕ್ಕೆ ಹುಳಿ ಹಿಂಡಿದ್ದು ನಾಯಿ, ಬೆಕ್ಕು ಮತ್ತು ಮೀನು.!

ಇದೇ ರೀತಿ, ಮೋಹಿತ್ ಹಾವಿನೊಂದಿಗೆ ಸ್ಟಂಟ್ ಮಾಡಲು ಹೋಗಿ ದುರ್ಭಾಗ್ಯವಶಾತ್ ಸಾವಿಗೀಡಾದ ಘಟನೆ ಇದೀಗ ಚರ್ಚೆಗೆ ಕಾರಣವಾಗಿದೆ.

ವಿಡಿಯೋ :

- Advertisement -
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments