ಜನಸ್ಪಂದನ ನ್ಯೂಸ್, ಆರೋಗ್ಯ : ಮೆದುಳು ಮಾನವ ದೇಹದ ಅತ್ಯಂತ ಮುಖ್ಯ ಅಂಗಗಳಲ್ಲಿ ಒಂದಾಗಿದೆ. ಇದು ನಮ್ಮ ಚಿಂತನೆ, ಚಲನೆ, ಸ್ಮರಣೆ, ಸಂವೇದನೆ, ಭಾವನೆ ಮತ್ತು ಸ್ವಯಂಪ್ರೇರಿತ ಕ್ರಿಯೆಗಳನ್ನು ನಿಯಂತ್ರಿಸುತ್ತದೆ.
ಆದ್ದರಿಂದ, ಮೆದುಳಿನಲ್ಲಿನ ಯಾವುದೇ ಅಸಹಜ ಬೆಳವಣಿಗೆ ಅಥವಾ Tumor (ಗೆಡ್ಡೆ) ದೇಹದ ಹಲವಾರು ಕಾರ್ಯಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಟ್ಯೂಮರ್ ಯಾವ ಭಾಗದಲ್ಲಿ ಬೆಳೆಯುತ್ತದೆ ಎಂಬುದರ ಮೇಲೆ ಲಕ್ಷಣಗಳು ಬದಲಾಗುತ್ತವೆ.
“ಬಿಸಿನೀರಿನಲ್ಲಿ ಈ ಪುಡಿ ಬೆರೆಸಿ ಕುಡಿದರೆ ಕೆಟ್ಟ Cholesterol ಬೆಣ್ಣೆಯಂತೆ ಕರಗಿ ಮಾಯವಾಗುತ್ತದೆ.!”
🔹 ಪ್ಯಾರಿಯಟಲ್ ಲೋಬ್ (Parietal Lobe) :
ಈ ಭಾಗವು ಸ್ಪರ್ಶ, ತಾಪಮಾನ ಮತ್ತು ಪ್ರಾದೇಶಿಕ ಅರಿವು ನಿಯಂತ್ರಿಸುತ್ತದೆ. ಇಲ್ಲಿ ಟ್ಯೂಮರ್ (Tumor) ಉಂಟಾದರೆ ಕೈ-ಕಣ್ಣು ಸಮನ್ವಯ ಹದಗೆಡುವುದು, ಮರಗಟ್ಟುವಿಕೆ, ವಸ್ತುಗಳನ್ನು ಗುರುತಿಸುವಲ್ಲಿ ತೊಂದರೆ ಅಥವಾ ದೂರದ ವಸ್ತುಗಳನ್ನು ನೋಡುವಲ್ಲಿ ಕಷ್ಟವಾಗಬಹುದು.
🔹 ಟೆಂಪೊರಲ್ ಲೋಬ್ (Temporal Lobe) :
ಕಿವಿಗಳ ಹತ್ತಿರ ಇರುವ ಈ ಭಾಗವು ಶ್ರವಣ, ಭಾಷೆ ಮತ್ತು ಸ್ಮರಣೆಗಾಗಿ ಮುಖ್ಯ. ಟ್ಯೂಮರ್ ಬೆಳೆಯುವಲ್ಲಿ ಶ್ರವಣದೋಷ, ಮಾತು ಅರ್ಥಮಾಡಿಕೊಳ್ಳುವಲ್ಲಿ ತೊಂದರೆ, ಸ್ಮರಣೆ ಕುಸಿತ, ಮತ್ತು ಕೆಲವೊಮ್ಮೆ ಅಸಹಜ ಭಾವನಾತ್ಮಕ ಪ್ರತಿಕ್ರಿಯೆಗಳು ಕಾಣಿಸಿಕೊಳ್ಳಬಹುದು.
Lions : “ಜೀಪ್‌ನಿಂದ ಇಳಿದ ಸಿಬ್ಬಂದಿಯನ್ನು ಎಳೆದೊಯ್ದು ಬಲಿ ಪಡೆದ ಸಿಂಹಗಳ ಗುಂಪು.!”
🔹 ಮುಂಭಾಗದ ಲೋಬ್ (Frontal Lobe) :
ವ್ಯಕ್ತಿತ್ವ, ನಿರ್ಧಾರ ಸಾಮರ್ಥ್ಯ ಮತ್ತು ಚಲನೆಯನ್ನು ನಿಯಂತ್ರಿಸುವ ಭಾಗ ಇದಾಗಿದೆ. ಇಲ್ಲಿನ ಟ್ಯೂಮರ್ (Tumor) ವ್ಯಕ್ತಿತ್ವದಲ್ಲಿ ಬದಲಾವಣೆ, ಮನಸ್ಥಿತಿ ವ್ಯತ್ಯಾಸ, ನಿರ್ಧಾರ ತಾಳುವಲ್ಲಿ ತೊಂದರೆ ಹಾಗೂ ದೇಹದ ಒಂದು ಭಾಗದಲ್ಲಿ ಪಾರ್ಶ್ವವಾಯು ಅಥವಾ ದೌರ್ಬಲ್ಯ ಉಂಟುಮಾಡಬಹುದು.
🔹 ಸೆರೆಬೆಲ್ಲಮ್ (Cerebellum) :
ಭಂಗಿ, ಸಮತೋಲನ ಮತ್ತು ಚಲನೆ ನಿಯಂತ್ರಿಸುವ ಈ ಭಾಗದಲ್ಲಿ ಟ್ಯೂಮರ್ (Tumor) ಬೆಳೆಯುವುದರಿಂದ ತಲೆತಿರುಗುವಿಕೆ, ಸಮತೋಲನ ಕಳೆದುಕೊಳ್ಳುವುದು, ಅಸ್ಪಷ್ಟ ಮಾತು ಮತ್ತು ನಡೆಯಲು ತೊಂದರೆ ಉಂಟಾಗುತ್ತದೆ.
ಬಿಳಿ ಶರ್ಟ್ Collar ಕಲೆ ತೆಗೆಯಲು ಬ್ರಷ್-ಡಿಟರ್ಜೆಂಟ್ ಬೇಡ ; ಈ ಸರಳ ಟ್ರಿಕ್ ಪ್ರಯತ್ನಿಸಿ!
🔹 ಆಕ್ಸಿಪಿಟಲ್ ಲೋಬ್ (Occipital Lobe) :
ಮೆದುಳಿನ ಹಿಂಭಾಗದಲ್ಲಿರುವ ಈ ಭಾಗ ದೃಷ್ಟಿಗೆ ಪ್ರಮುಖ. ಇಲ್ಲಿ ಟ್ಯೂಮರ್ (Tumor)ಕಂಡುಬಂದರೆ ಮಸುಕಾದ ದೃಷ್ಟಿ, ಕಣ್ಣುಗಳಲ್ಲಿ ಕುರುಡು ಕಲೆಗಳು ಅಥವಾ ಸಂಪೂರ್ಣ ದೃಷ್ಟಿ ನಷ್ಟ ಸಂಭವಿಸಬಹುದು.
🔹 ಮೆದುಳು ಕಾಂಡ (Brain Stem) :
ಉಸಿರಾಟ, ಹೃದಯ ಬಡಿತ, ನುಂಗುವುದು ಮುಂತಾದ ಜೀವ ಉಳಿಸುವ ಸ್ವಯಂಚಾಲಿತ ಕ್ರಿಯೆಗಳನ್ನು ಈ ಭಾಗ ನಿಯಂತ್ರಿಸುತ್ತದೆ. ಕಾಂಡದಲ್ಲಿ ಟ್ಯೂಮರ್ (Tumor) ಬೆಳೆದುಹೋದರೆ ಅತೀ ಅಪಾಯಕಾರಿಯಾಗಿ, ಸಣ್ಣ ಬೆಳವಣಿಗೆಯೇ ಜೀವಕ್ಕೆ ಅಪಾಯ ಉಂಟುಮಾಡಬಹುದು.
Ganesh ಮೆರವಣಿಗೆ ವೇಳೆ ಭೀಕರ ದುರಂತ : 6 ಸಾವು, 20ಕ್ಕೂ ಹೆಚ್ಚು ಮಂದಿ ಗಾಯ.!
👉 ಹೀಗಾಗಿ, ಮೆದುಳಿನ ವಿಭಿನ್ನ ಭಾಗಗಳಲ್ಲಿ ಟ್ಯೂಮರ್ (Tumor) ಬೆಳೆಯುವ ಪ್ರಕಾರ ಲಕ್ಷಣಗಳು ಬದಲಾಗುತ್ತವೆ. ತಲೆನೋವು, ತಲೆತಿರುಗುವಿಕೆ, ದೃಷ್ಟಿ ವ್ಯತ್ಯಾಸ, ಚಲನೆಯಲ್ಲಿ ಬದಲಾವಣೆ ಅಥವಾ ಸ್ಮರಣೆ ಸಮಸ್ಯೆ ಕಂಡುಬಂದರೆ ತಕ್ಷಣ ವೈದ್ಯಕೀಯ ಸಲಹೆ ಪಡೆಯುವುದು ಅತ್ಯಂತ ಮುಖ್ಯ. ಮುಂಚಿತ ಪತ್ತೆ ಮತ್ತು ಚಿಕಿತ್ಸೆ ಜೀವನವನ್ನು ಉಳಿಸಬಹುದು.
Disclaimer : This article is based on reports and information available on the internet. Janaspandhan News is not affiliated with it and is not responsible for it.
Lions : “ಜೀಪ್‌ನಿಂದ ಇಳಿದ ಸಿಬ್ಬಂದಿಯನ್ನು ಎಳೆದೊಯ್ದು ಬಲಿ ಪಡೆದ ಸಿಂಹಗಳ ಗುಂಪು.!”
ಜನಸ್ಪಂದನ ನ್ಯೂಸ್, ಡೆಸ್ಕ್ : ಥಾಯ್ಲೆಂಡ್‌ನ ರಾಜಧಾನಿ ಬ್ಯಾಂಕಾಕ್‌ನಲ್ಲಿರುವ ಜನಪ್ರಿಯ ಪ್ರವಾಸಿ ತಾಣ ಸಫಾರಿ ವರ್ಲ್ಡ್ ಮೃಗಾಲಯದಲ್ಲಿ ಭಯಾನಕ ಘಟನೆ ನಡೆದಿದೆ. ಪ್ರವಾಸಿಗರ ಎದುರೇ ಮೃಗಾಲಯದ ಹಿರಿಯ ಸಿಬ್ಬಂದಿ ಸಿಂಹಗಳ (Lions) ದಾಳಿಗೆ ಬಲಿಯಾದ ಘಟನೆ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಮಾಹಿತಿಯ ಪ್ರಕಾರ, ಜಿಯಾನ್ ರಂಗ್ಖರಸಾಮೀ ಎಂಬ ಸಿಬ್ಬಂದಿ ಸಫಾರಿ ಜೀಪ್‌ನಿಂದ ಇಳಿದ ಕೆಲವೇ ಕ್ಷಣಗಳಲ್ಲಿ, ಸಿಂಹಗಳ (Lions) ಗುಂಪು ಆತನ ಮೇಲೆ ದಾಳಿ ನಡೆಸಿದೆ. ಸುಮಾರು 15 ನಿಮಿಷಗಳ ಕಾಲ ಮುಂದುವರಿದ ಈ ದಾಳಿಯನ್ನು ನೂರಾರು ಪ್ರವಾಸಿಗರು ತಮ್ಮ ಕಣ್ಣಾರೆ ನೋಡಿದ್ದರು.
SBI : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ 122 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಕೆಲವರು ಈ ಭೀಕರ ದೃಶ್ಯವನ್ನು ತಮ್ಮ ಮೊಬೈಲ್ ಫೋನ್‌ನಲ್ಲಿ ದಾಖಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಆಸ್ಪತ್ರೆಗೆ ಕರೆದೊಯ್ದರೂ ಉಳಿಸಲಿಲ್ಲ :
ದಾಳಿಯ ನಂತರ ಗಂಭೀರವಾಗಿ ಗಾಯಗೊಂಡ ರಂಗ್ಖರಸಾಮೀ ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಆಗಲೇ ಹೆಚ್ಚು ರಕ್ತಸ್ರಾವವಾಗಿದ್ದರಿಂದ ವೈದ್ಯರು ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ.
ಬಿಳಿ ಶರ್ಟ್ Collar ಕಲೆ ತೆಗೆಯಲು ಬ್ರಷ್-ಡಿಟರ್ಜೆಂಟ್ ಬೇಡ ; ಈ ಸರಳ ಟ್ರಿಕ್ ಪ್ರಯತ್ನಿಸಿ!
ಮೃಗಾಲಯದ ಪ್ರತಿಕ್ರಿಯೆ :
ಘಟನೆಯ ಕುರಿತು ಆಘಾತ ವ್ಯಕ್ತಪಡಿಸಿರುವ ಸಫಾರಿ ವರ್ಲ್ಡ್ ಆಡಳಿತ ಮಂಡಳಿ, ಮೃತ ಸಿಬ್ಬಂದಿಯ ಕುಟುಂಬಕ್ಕೆ ಸಂತಾಪ ಸೂಚಿಸಿದೆ. ಜೊತೆಗೆ ಮೃಗಾಲಯದಲ್ಲಿನ ಸುರಕ್ಷತಾ ಕ್ರಮಗಳನ್ನು ಮರುಪರಿಶೀಲನೆ ಮಾಡಿ ಇನ್ನಷ್ಟು ಬಲಪಡಿಸುವುದಾಗಿ ಭರವಸೆ ನೀಡಿದೆ. ಕಳೆದ 40 ವರ್ಷಗಳಲ್ಲಿ ಇಂತಹ ಘಟನೆ ಸಂಭವಿಸಿರಲಿಲ್ಲ ಎಂದು ಆಡಳಿತ ಸ್ಪಷ್ಟಪಡಿಸಿದೆ.
ಬೆಳಿಗ್ಗೆ ಎದ್ದ ಕೂಡಲೇ ಕಾಣಿಸುವ ಈ 7 ಲಕ್ಷಣಗಳು Kidney ಹಾನಿಯ ಎಚ್ಚರಿಕೆ ; ನಿರ್ಲಕ್ಷ್ಯ ಮಾಡಿದರೆ ಅಪಾಯ ಖಚಿತ.!
ಶಿಷ್ಟಾಚಾರ ಉಲ್ಲಂಘನೆ ಕಾರಣವೇ?
ಮೂಲಗಳ ಪ್ರಕಾರ, ಸುಮಾರು 20 ವರ್ಷಗಳಿಗೂ ಹೆಚ್ಚು ಕಾಲ ಮೃಗಾಲಯದಲ್ಲಿ ಕೆಲಸ ಮಾಡುತ್ತಿದ್ದ ರಂಗ್ಖರಸಾಮೀ, ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ ಸಿಂಹಗಳ ಆವರಣದೊಳಗೆ ಕಾಲಿಟ್ಟಿದ್ದಾರೆ. ಇದೇ ವೇಳೆ ಸಿಂಹಗಳ (Lions) ಗುಂಪು ಅವರ ಮೇಲೆ ಏಕಾಏಕಿ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.
B12 : ವಿಪರೀತ ಮರೆವು, ಕಣ್ಣಿನ ದೃಷ್ಟಿ ಮಂದಾಗಲು ಕಾರಣವೇನು ಗೊತ್ತೇ.?
ಪ್ರತ್ಯಕ್ಷದರ್ಶಿಗಳ ವಿವರ :
ಅಂದು ಪ್ರವಾಸಿಗರಿಂದ ತುಂಬಿದ್ದ ಹತ್ತುಕ್ಕಿಂತ ಹೆಚ್ಚು ಸಫಾರಿ ವಾಹನಗಳು ಸಿಂಹಗಳ (Lions) ವಲಯದಲ್ಲಿ ನಿಂತಿದ್ದವು. ಆ ಸಂದರ್ಭದಲ್ಲಿ ಸಿಬ್ಬಂದಿ ಜೀಪ್‌ನಿಂದ ಇಳಿದಾಗ, ಸಿಂಹಗಳು ತಕ್ಷಣವೇ ದಾಳಿ ನಡೆಸಿದವು. ಪ್ರವಾಸಿಗರು ಕೂಗಾಡುತ್ತ ಕಾರಿನ ಹಾರ್ನ್ ಒತ್ತಿ ಸಿಂಹಗಳನ್ನು ಓಡಿಸಲು ಯತ್ನಿಸಿದರೂ ಅದು ಫಲಿಸಲಿಲ್ಲ.
ಅಧಿಕಾರಿಗಳ ಅಭಿಪ್ರಾಯ :
ಘಟನೆಯ ಕುರಿತು ಪ್ರತಿಕ್ರಿಯಿಸಿದ ವನ್ಯಜೀವಿ ಇಲಾಖೆಯ ಮಹಾನಿರ್ದೇಶಕ ಅಟ್ಟಪೋಲ್ ಚರೋಯೆಂಚನ್ಸಾ, “ಸಿಂಹಗಳಿಗೆ ಆಹಾರ ನೀಡುವ ಸಮಯದಲ್ಲಿ ದಾಳಿ ನಡೆದಿದೆ. ಅವುಗಳಲ್ಲಿ ಒಂದರ ಆರೋಗ್ಯ ಸಮಸ್ಯೆಯಿಂದಾಗಿ ಅದು ಅಸಹಜವಾಗಿ ವರ್ತಿಸಿದೆ” ಎಂದು ತಿಳಿಸಿದ್ದಾರೆ.
Ganesh ಮೆರವಣಿಗೆ ವೇಳೆ ಭೀಕರ ದುರಂತ : 6 ಸಾವು, 20ಕ್ಕೂ ಹೆಚ್ಚು ಮಂದಿ ಗಾಯ.!
ಇದೇ ವೇಳೆ, ಪ್ರಾಣಿ ಹಕ್ಕುಗಳ ಸಂಸ್ಥೆ ಪೆಟಾ ಈ ಪ್ರಕರಣದ ಬಳಿಕ ಸಿಂಹಗಳನ್ನು (Lions) ಕಾಡಿನ ಅಭಯಾರಣ್ಯಕ್ಕೆ ಸ್ಥಳಾಂತರಿಸುವಂತೆ ಒತ್ತಾಯಿಸಿದೆ. ಕಾಡುಪ್ರಾಣಿಗಳನ್ನು ಕೃತಕ ಪರಿಸರದಲ್ಲಿ ನಿರ್ವಹಿಸುವುದು ಅಪಾಯಕಾರಿಯಾಗಿದೆ ಎಂಬುದನ್ನು ಈ ಘಟನೆ ಮತ್ತೊಮ್ಮೆ ನೆನಪಿಸಿದೆ.
ಸಿಂಹಗಳ (Lions) ದಾಳಿಯ ವಿಡಿಯೋ :
ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್ ನಲ್ಲಿರುವ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾದ ಸಫಾರಿ ವರ್ಲ್ಡ್ ಮೃಗಾಲಯದಲ್ಲಿ ಸಫಾರಿ ಜೀಪ್ ನಿಂದ ಇಳಿದ ಸಿಬ್ಬಂದಿಯನ್ನೇ ಸಿಂಹಗಳ ಗುಂಪು ಎಳೆದೊಯ್ದು ಕೊಂದು ತಿಂದು ಹಾಕಿವೆ.#Bangkok #Thailand #SafariWorld #lions #ಬ್ಯಾಂಕಾಕ್ #ಥಾಯ್ಲೆಂಡ್ #ಸಫಾರಿವರ್ಲ್ಡ್ #ಸಿಂಹಗಳು
Read more here:… pic.twitter.com/qV20CQvty9— kannadaprabha (@KannadaPrabha) September 14, 2025