Tuesday, September 16, 2025

Janaspandhan News

HomeBelagavi NewsPOCSO : ಅಪ್ರಾಪ್ತೆಯ ಮೇಲೆ ದೌರ್ಜನ್ಯ ಎಸಗಿದ ವ್ಯಕ್ತಿಗೆ 20 ವರ್ಷಗಳ ಜೈಲು ಶಿಕ್ಷೆ.!
spot_img
spot_img
spot_img

POCSO : ಅಪ್ರಾಪ್ತೆಯ ಮೇಲೆ ದೌರ್ಜನ್ಯ ಎಸಗಿದ ವ್ಯಕ್ತಿಗೆ 20 ವರ್ಷಗಳ ಜೈಲು ಶಿಕ್ಷೆ.!

- Advertisement -

ಜನಸ್ಪಂದನ ನ್ಯೂಸ್‌, ಬೆಳಗಾವಿ : ಅಪ್ರಾಪ್ತೆಯ ಮೇಲೆ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ, ಖಾನಾಪುರದ ಅಶೋಕ ನಗರ ನಿವಾಸಿ ಪ್ರಕಾಶ ಮಗದುಮ (25) ಅವರಿಗೆ ವಿಶೇಷ ಪೋಕ್ಸೊ (POCSO) ನ್ಯಾಯಾಲಯವು 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ರೂ.10,000 ದಂಡ ವಿಧಿಸಿದೆ.

ಮಾಹಿತಿಯ ಪ್ರಕಾರ, ಆರೋಪಿಯು ಅಪ್ರಾಪ್ತೆಗೆ “ನಿನ್ನನ್ನು ಮದುವೆಯಾಗುತ್ತೇನೆ” ಎಂದು ನಂಬಿಕೆ ಮೂಡಿಸಿ, ಮಹಾರಾಷ್ಟ್ರದ ರತ್ನಾಗಿರಿ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅಸಭ್ಯ ವರ್ತನೆ ನಡೆಸಿದ್ದ.

sex-racket ಜಾಲದಿಂದ ತಪ್ಪಿಸಿಕೊಂಡ ಬಾಂಗ್ಲಾದೇಶ ಮೂಲದ ಮಹಿಳೆ ; ಪೊಲೀಸರಿಂದ ರಕ್ಷಣೆ.!

ಈ ಹಿನ್ನೆಲೆಯಲ್ಲಿ ಖಾನಾಪುರ ಪೊಲೀಸ್ ಠಾಣೆಯಲ್ಲಿ ಪೋಕ್ಸೊ (POCSO) ಪ್ರಕರಣ ದಾಖಲಾಗಿತ್ತು. ತನಿಖಾಧಿಕಾರಿ ಪಿಎಸ್‌ಐ ಶರಣೇಶ ಜಾಲಿಹಾಳ ಮತ್ತು ಸಿಪಿಐ ಸುರೇಶ ತಿಂಗಿ ಅವರ ನೇತೃತ್ವದಲ್ಲಿ ತನಿಖೆ ಪೂರ್ಣಗೊಂಡಿದ್ದು, ಬಳಿಕ ದೋಷಾರೋಪಣ ಪತ್ರ ನ್ಯಾಯಾಲಯಕ್ಕೆ ಸಲ್ಲಿಸಲಾಯಿತು.

ನ್ಯಾಯಾಧೀಶೆ ಸಿ.ಎಂ. ಪುಷ್ಪಲತಾ ಅವರು ಪ್ರಕರಣದ ವಿಚಾರಣೆ ನಡೆಸಿ ಆರೋಪಿಯನ್ನು ಅಪರಾಧಿ ಎಂದು ಸಾಬೀತುಪಡಿಸಿದ್ದಾರೆ.

ಹೃದಯದಲ್ಲಿ Blood ಹೆಪ್ಪುಗಟ್ಟುವಿಕೆ : ಕಾರಣಗಳು, ಲಕ್ಷಣಗಳು ಮತ್ತು ತಡೆಗಟ್ಟುವ ವಿಧಾನಗಳು.!

ನ್ಯಾಯಾಲಯವು ಆರೋಪಿ ವಿರುದ್ಧ ತೀರ್ಪು ನೀಡುತ್ತಾ 20 ವರ್ಷಗಳ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸಿದ್ದು, ಸಂತ್ರಸ್ತೆಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ರೂ.4 ಲಕ್ಷ ಪರಿಹಾರ ಧನ ನೀಡಲು ಸೂಚಿಸಿದೆ. ಈ ಮೊತ್ತವನ್ನು ಐದು ವರ್ಷಗಳವರೆಗೆ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಠೇವಣಿಯಾಗಿ ಇಡಲು ಆದೇಶಿಸಲಾಗಿದೆ.

ಸರಕಾರದ ಪರವಾಗಿ ವಿಶೇಷ ಸಾರ್ವಜನಿಕ ಅಭಿಯೋಜಕ ಎಲ್.ವಿ. ಪಾಟೀಲ ವಾದ ಮಂಡಿಸಿದ್ದರು.

ಪೋಕ್ಸೊ (POCSO) :

ಪೋಕ್ಸೊ (POCSO) ಎಂದರೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (Protection of Children from Sexual Offences) ಕಾಯಿದೆ, 2012. ಈ ಕಾಯಿದೆಯು ಲೈಂಗಿಕ ದೌರ್ಜನ್ಯ, ಲೈಂಗಿಕ ಕಿರುಕುಳ ಮತ್ತು ಮಕ್ಕಳ ಅಶ್ಲೀಲತೆಯಂತಹ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ ಉದ್ದೇಶದಿಂದ ಭಾರತದಲ್ಲಿ ಜಾರಿಗೆ ತರಲಾಗಿದೆ.

ಕಾಯಿದೆಯು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ವ್ಯಕ್ತಿಯನ್ನು “ಮಗು” ಎಂದು ವ್ಯಾಖ್ಯಾನಿಸುತ್ತದೆ ಮತ್ತು ಮಕ್ಕಳ ಸ್ನೇಹಿ ಪ್ರಕ್ರಿಯೆಯನ್ನು ಒದಗಿಸುತ್ತದೆ. 2019 ರಲ್ಲಿ, ಈ ಕಾಯಿದೆಗೆ ತಿದ್ದುಪಡಿ ತಂದು ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳಿಗೆ (POCSO) ಗರಿಷ್ಠ ಶಿಕ್ಷೆಯನ್ನು ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆವರೆಗೆ ಹೆಚ್ಚಿಸಲಾಯಿತು. 


“Heart blockage ಆದಾಗ ಕಾಲಿನಲ್ಲಿ ಕಾಣುವ ಈ ಬದಲಾವಣೆ ; ನಿರ್ಲಕ್ಷಿಸಿದರೆ ಅಪಾಯ ಖಚಿತ.!”

heart blockage

ಜನಸ್ಪಂದನ ನ್ಯೂಸ್‌, ಆರೋಗ್ಯ : ಹೃದಯದ ಬ್ಲಾಕ್ ಅಥವಾ ಹಾರ್ಟ್‌ ಬ್ಲಾಕೇಜ್ (Heart blockage) ಬಹುಶಃ ಸಮಯಕ್ಕೆ ಪತ್ತೆಯಾಗುವುದಿಲ್ಲ. ಇದರಿಂದಾಗಿ ಲಕ್ಷಣಗಳು ಸ್ಪಷ್ಟವಾಗಿ ಕಾಣದಿದ್ದರೂ ಸಹ ಹೃದಯಾಘಾತ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.

ವೈದ್ಯಕೀಯ ತಜ್ಞರ ಪ್ರಕಾರ, ಹೃದಯದ ಬ್ಲಾಕೇಜ್ ಹೃದಯ ಸಂಬಂಧಿತ ಗಂಭೀರ ಕಾಯಿಲೆಗಳಿಗೆ ಪ್ರಮುಖ ಕಾರಣವಾಗಿದೆ.

“ಬೆಳಗ್ಗೆ ಎದ್ದಾಗ ಈ 3 ಲಕ್ಷಣಗಳು ಕಂಡು ಬಂದರೆ, ಅದು Kidney ಹಾನಿಯಾಗಿರುವ ಸಂಕೇತವಾಗಿರಬಹುದು”

ಹೃದಯ ಬ್ಲಾಕ್ (Heart blockage) ಎಂದರೆ ಏನು?
ಹೃದಯವು ಸಾಮಾನ್ಯ ಲಯದಲ್ಲಿ ಬಡಿಯದೇ ನಿಧಾನವಾಗಿ ಅಥವಾ ಅಸಹಜವಾಗಿ ಬಡಿಯುವ ಸ್ಥಿತಿಯನ್ನು ಹೃದಯ ಬ್ಲಾಕ್ (Heart blockage) ಎಂದು ಕರೆಯಲಾಗುತ್ತದೆ. ವಯಸ್ಸಾದಂತೆ, ಹೃದಯಾಘಾತ, ರಕ್ತನಾಳದ ಅಡಚಣೆ, ಪೊಟ್ಯಾಸಿಯಮ್ ಮಟ್ಟದ ಅಸಮತೋಲನ, ಅಥವಾ ಹೆಚ್ಚಿದ ಕೊಲೆಸ್ಟ್ರಾಲ್‌ಗಳಿಂದ ಹೃದಯದಲ್ಲಿ ತೊಂದರೆ ಉಂಟಾಗಬಹುದು.

download

ಮುಖ್ಯ ಲಕ್ಷಣಗಳು :
  • ಎದೆನೋವು (ಒತ್ತುವ, ಸುಡುವ ಅಥವಾ ತೀಕ್ಷ್ಣವಾದ ನೋವು).
  • ಸ್ವಲ್ಪ ಚಟುವಟಿಕೆಯಿಂದಲೂ ಉಸಿರಾಟದ ತೊಂದರೆ.
  • ವಿಶ್ರಾಂತಿಯ ನಂತರವೂ ನಿವಾರಣೆಯಾಗದ ಆಯಾಸ.
  • ತಲೆತಿರುಗುವಿಕೆ ಅಥವಾ ಮೂರ್ಛೆ ಬಂದಂತೆ ಭಾಸವಾಗುವುದು.
  • ನಡೆಯುವಾಗ ಕಾಲುಗಳಲ್ಲಿ ನೋವು.
  • ಯಾವುದೇ ಕಾರಣವಿಲ್ಲದೆ ಅತಿಯಾದ ಬೆವರುವುದು.
  • ಆಗಾಗ್ಗೆ ಅಜೀರ್ಣ ಅಥವಾ ಎದೆಯುರಿಯ ಭಾವನೆ.
Uric-acid : “ಕೇವಲ 2 ರೂ.ನ ಈ ಎಲೆ ಹರಳುಗಟ್ಟಿದ Uric Acid ನ್ನು ಕರಗಿಸುತ್ತದೆ.!”
ಹೃದಯದ ಬ್ಲಾಕೇಜ್ (Heart blockage) ಆಗಲು ಕಾರಣಗಳು :
  • ಅಧಿಕ ರಕ್ತದೊತ್ತಡ.
  • ಹೆಚ್ಚಿದ ಕೊಲೆಸ್ಟ್ರಾಲ್ ಮಟ್ಟ.
  • ಧೂಮಪಾನ.
  • ಮಧುಮೇಹ.
  • ಕುಟುಂಬದ ಇತಿಹಾಸ.
  • ಅತಿಯಾದ ಬೊಜ್ಜು.
ಹೃದಯ ಬ್ಲಾಕೇಜ್ (Heart blockage) ತಪ್ಪಿಸಲು ಕ್ರಮಗಳು :
  • ಆರೋಗ್ಯಕರ ಆಹಾರ ಸೇವನೆ ಮತ್ತು ನಿಯಮಿತ ವ್ಯಾಯಾಮ.
  • ಧೂಮಪಾನ ತ್ಯಜಿಸುವುದು.
  • ತೂಕ ನಿಯಂತ್ರಣದಲ್ಲಿ ಇಡುವುದು.
  • ವೈದ್ಯರು ಸೂಚಿಸಿದ ಔಷಧಿಗಳನ್ನು ಸರಿಯಾಗಿ ಬಳಸುವುದು.
  • ತೀವ್ರ ಪ್ರಕರಣಗಳಲ್ಲಿ ಶಸ್ತ್ರಚಿಕಿತ್ಸೆ ಅಥವಾ ಬೈಪಾಸ್ ಶಸ್ತ್ರಚಿಕಿತ್ಸೆ.
“Minor ನೊಂದಿಗೆ ಏಕಾಂತದಲ್ಲಿದ್ದ ತಾಯಿಯನ್ನು ನೋಡಿದ 6 ವರ್ಷದ ಮಗಳು” ; ಮುಂದೆನಾಯ್ತು.

👉 ಈ ಮಾಹಿತಿ ಆರೋಗ್ಯ ಜಾಗೃತಿಗಾಗಿ ಮಾತ್ರ. ಯಾವುದೇ ತೊಂದರೆ ಇದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅತ್ಯಂತ ಅಗತ್ಯ.

- Advertisement -
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments