Wednesday, September 17, 2025

Janaspandhan News

HomeHealth & Fitnessಒಬ್ಬಂಟಿಯಾಗಿದ್ದಾಗ Heart-Attack ಬಂದರೆ ತಕ್ಷಣ ಹೀಗೆ ಮಾಡಿ.!
spot_img
spot_img
spot_img

ಒಬ್ಬಂಟಿಯಾಗಿದ್ದಾಗ Heart-Attack ಬಂದರೆ ತಕ್ಷಣ ಹೀಗೆ ಮಾಡಿ.!

- Advertisement -

ಜನಸ್ಪಂದನ ನ್ಯೂಸ್‌, ಆರೋಗ್ಯ : ಮನೆಯಲ್ಲಿಯೋ ಅಥವಾ ಇನ್ನಾವದೋ ಸ್ಥಳದಲ್ಲಿ ಒಬ್ಬಂಟಿಯಾಗಿದ್ದಾಗ ಹೃದಯಾಘಾತ (Heart-Attack) ಬಂದರೆ ಏನು ಮಾಡುವುದು.? ನಮ್ಮ ಪ್ರಾಣ ಉಳಿಸಿಕೊಳ್ಳೊದು ಹೇಗೆ.? ಬನ್ನಿ ಇಂದು ಆ ಬಗ್ಗೆ ತಿಳಿಯೋಣ.!

ಭಾರತದಲ್ಲಿ ಹೃದಯ ಸಂಬಂಧಿ ಕಾಯಿಲೆಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಇತ್ತೀಚಿನ ದಿನಗಳಲ್ಲಿ ಯುವಕರಷ್ಟೇ ಅಲ್ಲದೆ ಮಕ್ಕಳಿಗೂ ಹೃದಯಾಘಾತದ ಅಪಾಯ ಎದುರಾಗುತ್ತಿರುವುದು ಆತಂಕಕಾರಿ ಸಂಗತಿ.

Belagavi ಯಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು: ಪೊಲೀಸ್ ಪೇದೆಗೆ ಚಾಕು ಇರಿದ ಆರೋಪಿ ಮೇಲೆ ಫೈರಿಂಗ್

ಈ ಪರಿಸ್ಥಿತಿಯನ್ನು ತಪ್ಪಿಸಲು ಜೀವನಶೈಲಿ ಹಾಗೂ ಆಹಾರ ಪದ್ಧತಿಯಲ್ಲಿ ಸರಿಯಾದ ಬದಲಾವಣೆಗಳನ್ನು ಮಾಡುವುದು ಅತ್ಯಂತ ಅಗತ್ಯ. ಜೊತೆಗೆ, ತುರ್ತು ಪರಿಸ್ಥಿತಿಯಲ್ಲಿ ನೆರವಾಗುವ ಪ್ರಥಮ ಚಿಕಿತ್ಸೆಯ ಜ್ಞಾನವೂ ಬಹಳ ಮುಖ್ಯ.

ಹೃದಯಾಘಾತ (Heart-Attack) ದ ಲಕ್ಷಣಗಳು :

ಹೃದಯಾಘಾತ (Heart-Attack) ವು ಸಂಭವಿಸುವ ಮುನ್ನ ದೇಹವು ಕೆಲವು ಸೂಚನೆಗಳನ್ನು ನೀಡುತ್ತದೆ. ಸಾಮಾನ್ಯವಾಗಿ ಎದೆಯಲ್ಲಿ ತೀವ್ರ ನೋವು ಅಥವಾ ಒತ್ತಡ ಕಾಣಿಸಿಕೊಳ್ಳುತ್ತದೆ. ಈ ನೋವು ಎದೆ ಭಾಗದಿಂದ ಭುಜ, ದವಡೆ ಮತ್ತು ಬೆನ್ನಿನವರೆಗೂ ಹರಡಬಹುದು. ಉಸಿರಾಟದಲ್ಲಿ ತೊಂದರೆ, ಅತಿಯಾದ ಬೆವರು, ಅಸ್ವಸ್ಥತೆ ಮತ್ತು ದೌರ್ಬಲ್ಯವು ಸಹ ಸಾಮಾನ್ಯ ಲಕ್ಷಣಗಳಾಗಿವೆ.

Cardamom ಚಹಾ ಎಲ್ಲರಿಗೂ ಒಳ್ಳೆಯದೇ? ಈ ಆರೋಗ್ಯ ಸಮಸ್ಯೆಗಳಿದ್ದವರು ಎಚ್ಚರಿಕೆ.!
ಆಸ್ಪಿರಿನ್ ಟ್ಯಾಬ್ಲೆಟ್‌ನ ಮಹತ್ವ :

ಆರೋಗ್ಯ ತಜ್ಞರ ಸಲಹೆಯಂತೆ ಪ್ರತಿಯೊಬ್ಬರ ಮನೆಯಲ್ಲಿ ಆಸ್ಪಿರಿನ್ ಮಾತ್ರೆ ಇರಿಸುವುದು ಉತ್ತಮ. ಹೃದಯಾಘಾತ (Heart-Attack) ದ ಅನುಮಾನ ಕಂಡುಬಂದರೆ, ತಕ್ಷಣ ಆಸ್ಪಿರಿನ್ ಸೇವಿಸುವುದು ರಕ್ತ ಹೆಪ್ಪುಗಟ್ಟುವಿಕೆಯನ್ನು ನಿಧಾನಗೊಳಿಸಿ ಹೃದಯಕ್ಕೆ ರಕ್ತಪ್ರವಾಹ ತಲುಪಲು ಸಹಾಯಕವಾಗುತ್ತದೆ.

ಕಫ್ CPR ತಂತ್ರ :

ಒಬ್ಬ ವ್ಯಕ್ತಿ ಒಬ್ಬರೇ ಇದ್ದಾಗ ಹೃದಯಾಘಾತ (Heart-Attack) ಉಂಟಾದರೆ, ತಕ್ಷಣ ಕಫ್ CPR ಪ್ರಯತ್ನಿಸಬಹುದು. ಇದರಲ್ಲಿ ಬಲವಾಗಿ ಉಸಿರೆಳೆದು ನಿರಂತರವಾಗಿ ಕೆಮ್ಮುವುದರಿಂದ ಹೃದಯಕ್ಕೆ ಒತ್ತಡ ಬೀಳುತ್ತದೆ ಮತ್ತು ರಕ್ತ ಪೂರೈಕೆ ಮುಂದುವರಿಯುತ್ತದೆ. ತುರ್ತು ಚಿಕಿತ್ಸೆಯ ನೆರವು ಸಿಗುವವರೆಗೂ ಈ ವಿಧಾನವನ್ನು ಅನುಸರಿಸುವುದು ಬದುಕುಳಿಯಲು ಸಹಾಯಕ.

Police : ನಡುರಸ್ತೆಯಲ್ಲಿ ತಲವಾರ್‌ ಝಳಪಿಸುತ್ತಿದ್ದ ವ್ಯಕ್ತಿಯ ಕತೆ ಮುಗಿಸಿದ ಪೊಲೀಸರು.!

ಸಂಪಾದಕೀಯ : ಜೀವನಶೈಲಿಯಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಿಕೊಂಡು, ಹೃದಯ ಆರೋಗ್ಯದ ಬಗ್ಗೆ ಎಚ್ಚರಿಕೆಯಿಂದಿರುವುದು ಮಾತ್ರವಲ್ಲದೆ ಇಂತಹ ತುರ್ತು ಪರಿಸ್ಥಿತಿಗಳ ಕುರಿತು ಜ್ಞಾನ ಹೊಂದಿರುವುದೂ ಜೀವ ಉಳಿಸಲು ಬಹಳ ಮುಖ್ಯ.

👉 Disclaimer : ಈ ಲೇಖನದ ಉದ್ದೇಶ ಅರಿವು ಮೂಡಿಸುವುದು ಮಾತ್ರ. ಯಾವುದೇ ಚಿಕಿತ್ಸೆಯನ್ನು ಆರಂಭಿಸುವ ಮೊದಲು ಅಥವಾ ತಾವೇ ಸ್ವತಃ ಪರೀಕ್ಷಿಸಿ ತಿರ್ಮಾನಿಸುವ ಪೂರ್ವದಲ್ಲಿ ನುರಿತ ವೈದ್ಯರ ಸಲಹೆ ಅನಿವಾರ್ಯ. ಇಲ್ಲಿ ನೀಡಲಾದ ಮಾಹಿತಿ ಜನಸ್ಪಂದನ ನ್ಯೂಸ್‌ನ ದೃಷ್ಟಿಕೋಣವಲ್ಲ, ಇದು ವೈದ್ಯಕೀಯ ಸಲಹೆಯಾಗಿ ಪರಿಗಣಿಸಬಾರದು.


Police : ನಡುರಸ್ತೆಯಲ್ಲಿ ತಲವಾರ್‌ ಝಳಪಿಸುತ್ತಿದ್ದ ವ್ಯಕ್ತಿಯ ಕತೆ ಮುಗಿಸಿದ ಪೊಲೀಸರು.!

Police

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಅಮೆರಿಕಾದ ಲಾಸ್ ಏಂಜಲೀಸ್‌ನಲ್ಲಿ ನಡುರಸ್ತೆಯಲ್ಲೇ ಗಟ್ಕಾ (ಸಿಖ್ ಸಮರಕಲೆ) ಪ್ರದರ್ಶಿಸುತ್ತಿದ್ದ ವ್ಯಕ್ತಿ ಮೇಲೆ ಪೊಲೀಸ (Police) ರು ಗುಂಡಿನ ದಾಳಿ ನಡೆಸಿದ ಘಟನೆ ವರದಿಯಾಗಿದೆ. ಬಾಡಿಕ್ಯಾಮ್‌ನಲ್ಲಿ ಸಂಪೂರ್ಣ ಘಟನೆಯ ದೃಶ್ಯಾವಳಿ ದಾಖಲಾಗಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪೊಲೀಸ (Police) ರ ಗುಂಡೇಟಿಗೆ ಬಲಿಯಾದ ವ್ಯಕ್ತಿಯನ್ನು 36 ವರ್ಷದ ಗುರುಪ್ರೀತ್ ಸಿಂಗ್ ಎಂದು ಗುರುತಿಸಲಾಗಿದೆ. ಲಾಸ್ ಏಂಜಲೀಸ್‌ನ ಕ್ರಿಪ್ಟೊ ಡಾಟ್ ಕಾಮ್ ಅರೇನಾ ಬಳಿಯ ಜನನಿಬಿಡ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

Vegetable ಮಾರ್ತಿರೋ ಯುವಕನ ಸ್ಟೈಲ್’ಗೆ ಹೆಣ್ಮಕ್ಕಳು ಹೆದರೋದು ಗ್ಯಾರಂಟಿ.!

ಗುರುಪ್ರೀತ್ ಸಿಂಗ್ ನಡುರಸ್ತೆಯಲ್ಲಿ ಖಡ್ಗವನ್ನು (ಭಾರತೀಯ ಸಮರಕಲೆಯಲ್ಲಿ ಬಳಸುವ ಕತ್ತಿ) ಝಳಪಿಸುತ್ತಿದ್ದನು. ಹಲವಾರು ಬಾರಿ ಎಚ್ಚರಿಕೆ ನೀಡಿದರೂ ಆತ ನಿಲ್ಲಿಸದೆ, ಪೊಲೀಸರ ಮೇಲೆಯೇ ದಾಳಿ ಮಾಡಲು ಮುಂದಾದ ಹಿನ್ನೆಲೆಯಲ್ಲಿ ಗುಂಡು ಹಾರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸ (Police) ರ ಹೇಳಿಕೆ :

ಲಾಸ್ ಏಂಜಲೀಸ್ ಪೊಲೀಸ (Police) ಇಲಾಖೆಗೆ ಸ್ಥಳೀಯರಿಂದ ಹಲವಾರು ಕರೆಗಳು ಬಂದ ಹಿನ್ನೆಲೆಯಲ್ಲಿ ಘಟನೆ ನಡೆದಿರುವುದಾಗಿ ತಿಳಿಸಲಾಗಿದೆ. ವರದಿಯ ಪ್ರಕಾರ, ಸಿಂಗ್ ತನ್ನ ವಾಹನವನ್ನು ರಸ್ತೆಯ ಮಧ್ಯದಲ್ಲಿ ಬಿಟ್ಟು, ನಂತರ ತನ್ನನ್ನು ತಾನೇ ಗಾಯಗೊಳಿಸಿಕೊಳ್ಳಲು ಯತ್ನಿಸಿದ್ದ. ಪೊಲೀಸರು ಆತ ಶರಣಾಗುವಂತೆ ಅನೇಕ ಬಾರಿ ಸೂಚಿಸಿದರೂ, ಆತ ನಿರಾಕರಿಸಿದ್ದನು.

Cardamom ಚಹಾ ಎಲ್ಲರಿಗೂ ಒಳ್ಳೆಯದೇ? ಈ ಆರೋಗ್ಯ ಸಮಸ್ಯೆಗಳಿದ್ದವರು ಎಚ್ಚರಿಕೆ.!

ಅವನ ಮೇಲೆ ನಿಯಂತ್ರಣ ಸಾಧಿಸಲು ಹೋದ ಪೊಲೀಸ (Police) ರ ಕಡೆ ಬಾಟಲ್ ಎಸೆದು, ಬ್ಲೇಡ್ ಹಿಡಿದು ದಾಳಿ ಮಾಡಲು ಮುಂದಾದ ಹಿನ್ನೆಲೆಯಲ್ಲಿ ಗುಂಡಿನ ದಾಳಿ ನಡೆದಿದೆ. ಬಳಿಕ ಅವನ ಬಳಿಯಿಂದ ಎರಡು ಅಡಿ ಉದ್ದದ ಮಚ್ಚನ್ನು ವಶಪಡಿಸಿಕೊಳ್ಳಲಾಗಿದೆ.

ಆಸ್ಪತ್ರೆಗೆ ಸಾಗಿಸಿದರೂ ಜೀವ ಉಳಿಯಲಿಲ್ಲ :

ಗುಂಡೇಟಿನಿಂದ ಗಾಯಗೊಂಡ ಸಿಂಗ್‌ನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಯಾವುದೇ ಪೊಲೀಸರು ಅಥವಾ ನಾಗರಿಕರು ಗಾಯಗೊಂಡಿಲ್ಲ.

Belagavi ಯಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು: ಪೊಲೀಸ್ ಪೇದೆಗೆ ಚಾಕು ಇರಿದ ಆರೋಪಿ ಮೇಲೆ ಫೈರಿಂಗ್

ಈ ಪ್ರಕರಣದ ಕುರಿತು ತನಿಖೆ ನಡೆಯುತ್ತಿದ್ದು, ಪೊಲೀಸ (Police) ರು ಸಂಬಂಧಿತ ದೃಶ್ಯಾವಳಿಯನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಿದ್ದಾರೆ.

ವಿಡಿಯೋ :

- Advertisement -
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments