ಜನಸ್ಪಂದನ ನ್ಯೂಸ್, ಆರೋಗ್ಯ : ಯಕೃತ್ತು (Liver) ದೇಹದ ಪ್ರಮುಖ ಅಂಗ. ದೇಹದಿಂದ ವಿಷಗಳನ್ನು ಹೊರಹಾಕಿ ಆರೋಗ್ಯವನ್ನು ಕಾಪಾಡುತ್ತದೆ. ಆದರೆ ಕೆಲವೊಮ್ಮೆ ಲಿವರ್ (Liver) ನಲ್ಲೂ ಕೊಳೆ ಮತ್ತು ವಿಷದ ಅಂಶಗಳು ಜಮಾಗುತ್ತವೆ. ಇದನ್ನು ಶುದ್ಧೀಕರಿಸಲು ಸರಳವಾದ ಮನೆಮದ್ದು ಶುಂಠಿ-ಪುದೀನಾ ನೀರು ಉತ್ತಮ ಆಯ್ಕೆ.
ಶುಂಠಿಯ ಲಾಭಗಳು :
- ಶುಂಠಿಯಲ್ಲಿ ಜಿಂಜರಾಲ್ ಮತ್ತು ಶೋಗೋಲ್ ಎಂಬ ಜೈವಿಕ ಅಂಶಗಳಿವೆ.
- ಲಿವರ್ (Liver) ನಲ್ಲಿ ಉರಿಯೂತ ಕಡಿಮೆ ಮಾಡಲು ಮತ್ತು ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ.
- ಜೀರ್ಣಕ್ರಿಯೆಯನ್ನು ಸುಧಾರಿಸಿ ದೇಹವನ್ನು ಡಿಟಾಕ್ಸ್ ಮಾಡುತ್ತದೆ.
RRB : ಭಾರತೀಯ ರೈಲ್ವೆ ಇಲಾಖೆಯಲ್ಲಿ ಸ್ಟೇಷನ್ ಮಾಸ್ಟರ್ ಸೇರಿ 30,307 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಪುದೀನದ ಲಾಭಗಳು :
- ಪುದೀನಾದಲ್ಲಿ ಇರುವ ಮೆಂಥಾಲ್ ಜೀರ್ಣಾಂಗ ವ್ಯವಸ್ಥೆಗೆ ಶಾಂತಿ ನೀಡುತ್ತದೆ.
- ಲಿವರ್ (Liver) ನಲ್ಲಿ ಪಿತ್ತರಸ ಉತ್ಪಾದನೆ ಹೆಚ್ಚಿಸಿ ಕೊಬ್ಬು ಕರಗಿಸಲು ನೆರವಾಗುತ್ತದೆ.
- ಆಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವುದರಿಂದ ಲಿವರ್ ಕಾರ್ಯ ಸುಧಾರಿಸುತ್ತದೆ.
ಪ್ರತಿದಿನ ಕುಡಿಯುವುದರಿಂದ ಲಾಭ :
- ಲಿವರ್ (Liver) ಶುದ್ಧೀಕರಣ : ವಿಷ ಮತ್ತು ಕೊಳೆಯ ನಿವಾರಣೆ, ಕೊಬ್ಬಿನ ಲಿವರ್ ತಡೆಯಲು ಸಹಕಾರಿ.
- ಜೀರ್ಣಕ್ರಿಯೆ ಸುಧಾರಣೆ : ಅಜೀರ್ಣ, ಅನಿಲ, ಹೊಟ್ಟೆ ನೋವು ನಿವಾರಣೆ.
- ತೂಕ ನಿಯಂತ್ರಣ : ಚಯಾಪಚಯ ಕ್ರಿಯೆ ವೇಗಗೊಳಿಸಿ ತೂಕ ಇಳಿಸಲು ಸಹಾಯ.
- ರೋಗನಿರೋಧಕ ಶಕ್ತಿ ಹೆಚ್ಚಳ : ವಿಟಮಿನ್ ಮತ್ತು ಆಂಟಿಆಕ್ಸಿಡೆಂಟ್‌ಗಳಿಂದ ದೇಹ ಬಲಪಡುತ್ತದೆ.
- ಹೈಡ್ರೇಷನ್ : ದೇಹ ತಂಪಾಗಿ, ಬೇಸಿಗೆಯಲ್ಲಿ ತಾಜಾತನ ನೀಡುತ್ತದೆ.
harassing : ಯುವತಿಯರನ್ನು ಅಸಭ್ಯವಾಗಿ ಸ್ಪರ್ಶಿಸಲು ಯತ್ನಿಸಿದ 2 ಜನ ಯುವಕರು ; ಮುಂದೆನಾಯ್ತು.?
ಶುಂಠಿ-ಪುದೀನಾ ನೀರು ತಯಾರಿಸುವ ವಿಧಾನ :
ಬೇಕಾಗುವ ಸಾಮಗ್ರಿಗಳು :
- 1 ಇಂಚಿನ ಶುಂಠಿ ತುಂಡು.
- 10–15 ಪುದೀನ ಎಲೆಗಳು.
- 1 ಗ್ಲಾಸ್ ನೀರು.
- ½ ನಿಂಬೆ ರಸ.
- ಸ್ವಲ್ಪ ಕಪ್ಪು ಉಪ್ಪು.
ತಯಾರಿಸುವ ವಿಧಾನ :
- ಒಂದು ಪಾತ್ರೆಯಲ್ಲಿ ನೀರಿಗೆ ಶುಂಠಿ ತುಂಡು ಮತ್ತು ಪುದೀನ ಎಲೆ ಹಾಕಿ ಕುದಿಸಿ.
- ಅರ್ಧ ನೀರು ಉಳಿದಾಗ ಉರಿ ಆರಿಸಿ, ತಣ್ಣಗಾಗಲು ಬಿಡಿ.
- ಸೋಸಿ ಲೋಟಕ್ಕೆ ಸುರಿದು, ಬೇಕಿದ್ದರೆ ನಿಂಬೆ ರಸ ಮತ್ತು ಕಪ್ಪು ಉಪ್ಪು ಸೇರಿಸಿ.
- ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಉತ್ತಮ.
Murder :ವಿವಾಹಿತೆ ಮತ್ತು ಆಕೆಯ ಪ್ರೇಮಿಯನ್ನು ಕೊಂದು ಬಾವಿಗೆ ಎಸೆದ ಕುಟುಂಬ.!
👉 ಗಮನಿಸಿ : ಇದು ಮನೆಮದ್ದು ಮತ್ತು ಸಾಮಾನ್ಯ ಮಾಹಿತಿ ಆಧಾರಿತವಾಗಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ಪಡೆಯುವುದು ಮುಖ್ಯ.
ಸೆಪ್ಟೆಂಬರ್ 1 ರಿಂದ ಈ Health Insurance ಕಂಪನಿಗಳ ವಿಮೆ ಕೊಂಡವರಿಗೆ ಕ್ಯಾಶ್ ಲೆಸ್ ಟ್ರೀಟ್ಮೆಂಟ್ ಇಲ್ಲ.!
ಜನಸ್ಪಂದನ ನ್ಯೂಸ್, ಡೆಸ್ಕ್ : ಸೆಪ್ಟೆಂಬರ್ 1 ರಿಂದ ಈ ಆರೋಗ್ಯ ವಿಮಾ (Health Insurance) ಕಂಪನಿಗಳ ವಿಮೆ ಕೊಂಡವರಿಗೆ ಕ್ಯಾಶ್ ಲೆಸ್ ಟ್ರೀಟ್ಮೆಂಟ್ ಇಲ್ಲ ಎಂದು ಮುಖ ಆರೋಗ್ಯ ವಿಮಾ ಕಂಪನಿಗಳು ತಿಳಿಸಿವೆ. ಬನ್ನಿ. ಅದರ ಬಗ್ಗೆ ತಿಳಿಯೋಣ.!
ಹೌದು, ಪ್ರಮುಖ ಆರೋಗ್ಯ ವಿಮಾ ಕಂಪನಿಗಳಾದ ಬಜಾಜ್ ಅಲಯನ್ಸ್ ಜನರಲ್ ಇನ್ಶೂರೆನ್ಸ್ ಹಾಗೂ ಕೇರ್ ಹೆಲ್ತ್ ಇನ್ಶೂರೆನ್ಸ್ (Health Insurance) ಸೇವೆಗಳನ್ನು ಬಳಸುತ್ತಿರುವ ಗ್ರಾಹಕರಿಗೆ ಹೊಸ ಸೂಚನೆ ಜಾರಿಯಾಗಲಿದೆ.
36 ಜನರಿದ್ದ ಇಲಕಲ್ ಮಂಗಳೂರ KSRTC ಬಸ್ ಅಪಘಾತ.!
ಆರೋಗ್ಯ ವಿಮಾ (Health Insurance) ಸೇವಾದಾರರ ಸಂಸ್ಥೆ (Association of Healthcare Providers of India – AHPI) ತನ್ನ ನೆಟ್‌ವರ್ಕ್‌ನಲ್ಲಿರುವ ದೇಶದ 20,000ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ಸೆಪ್ಟೆಂಬರ್ 1ರಿಂದ ಕ್ಯಾಶ್‌ಲೆಸ್ ಸೌಲಭ್ಯ ನಿಲ್ಲಿಸಲು ನಿರ್ಧರಿಸಿದೆ.
ಇದರ ಪರಿಣಾಮ ಏನು?
➡️ ಈ ಬದಲಾವಣೆಯಿಂದ ಬಜಾಜ್ ಅಲಯನ್ಸ್ ಮತ್ತು ಕೇರ್ ಹೆಲ್ತ್ ಇನ್ಶೂರೆನ್ಸ್ (Health Insurance) ಪಾಲಿಸೀ ಹೊಂದಿರುವವರಿಗೆ ಕ್ಯಾಶ್‌ಲೆಸ್ ಚಿಕಿತ್ಸೆ ಸಿಗುವುದಿಲ್ಲ.
➡️ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾದಲ್ಲಿ ಮೊದಲು ಸ್ವಂತವಾಗಿ ಹಣ ಪಾವತಿಸಿ, ನಂತರ ವಿಮಾ ಕ್ಲೇಮ್ ಸಲ್ಲಿಸಬೇಕಾಗುತ್ತದೆ.
Vicky ತಂಡದಿಂದ ಹೊಸ ಗಾರೆ ಕೆಲ್ಸದ ನಿಂಗಿ ಹಾಡು ಬಿಡುಗಡೆ – ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಶನ್.!
ಯಾವ ಆಸ್ಪತ್ರೆಗಳು ಒಳಗೊಂಡಿವೆ?
AHPI ನೆಟ್‌ವರ್ಕ್‌ನಡಿ ದೇಶದ ಅನೇಕ ಪ್ರಮುಖ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ.
- ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ.
- ಫೋರ್ಟಿಸ್ ಎಸ್ಕಾರ್ಟ್ಸ್ ಆಸ್ಪತ್ರೆ.
- ಹಲವಾರು ಖಾಸಗಿ ಹಾಗೂ ಸ್ಥಳೀಯ ಆಸ್ಪತ್ರೆಗಳು.
ಇವೆಲ್ಲವೂ ಈ ಆದೇಶದ ವ್ಯಾಪ್ತಿಗೆ ಒಳಪಡುತ್ತವೆ.
Udupi : ಲಾಡ್ಜ್ ಮೇಲೆ ಪೊಲೀಸರು ದಾಳಿ ; ಮಹಿಳೆ ರಕ್ಷಣೆ, ಓರ್ವ ವ್ಯಕ್ತಿ ಬಂಧನ.!
ದಕ್ಷಿಣ ಭಾರತಕ್ಕೂ ಅನ್ವಯವಾಗುತ್ತದೆಯೇ?
ಪ್ರಸ್ತುತ ಮಾಹಿತಿ ಪ್ರಕಾರ, ಈ ನಿಯಮವು ಕೇವಲ ಉತ್ತರ ಭಾರತದಲ್ಲಿ ಮಾತ್ರ ಜಾರಿಯಾಗುತ್ತದೆ. ದಕ್ಷಿಣ ಭಾರತದ ಆಸ್ಪತ್ರೆಗಳ ಕುರಿತು ಇನ್ನೂ ಯಾವುದೇ ಸ್ಪಷ್ಟನೆ ನೀಡಲಾಗಿಲ್ಲ.
ವಿದೇಶಗಳಲ್ಲಿ ಭಾರತೀಯರಿಗೆ ಆರೋಗ್ಯ ವಿಮೆ (Health Insurance) ಯ ಮಹತ್ವ :
ಯುಕೆ, ಅಮೆರಿಕಾ ಮತ್ತು ಗಲ್ಫ್ ರಾಷ್ಟ್ರಗಳಲ್ಲಿ ವಾಸಿಸುವ ಅನೇಕ ಭಾರತೀಯರು ಸ್ಥಳೀಯ ಆರೋಗ್ಯ ಸೇವೆಯಿಂದ ಅಸಮಾಧಾನಗೊಂಡಿದ್ದಾರೆ.
ಹೆಚ್ಚಿನ ವೆಚ್ಚ, ಚಿಕಿತ್ಸೆಗಾಗಿ ಉದ್ದವಾದ ನಿರೀಕ್ಷೆ ಹಾಗೂ ಅಪಾಯಿಂಟ್‌ಮೆಂಟ್ ಸಮಸ್ಯೆಯಿಂದ ಬಳಲುವ ಕಾರಣ, ಅನೇಕರು ಭಾರತದಲ್ಲಿ ಚಿಕಿತ್ಸೆ ಪಡೆಯುವುದನ್ನೇ ಆಯ್ಕೆಮಾಡುತ್ತಾರೆ. ಇದರ ಜೊತೆಗೆ, ಎನ್‌ಆರ್‌ಐ ಸಮುದಾಯದಲ್ಲಿ ಭಾರತದಲ್ಲೇ ಆರೋಗ್ಯ ವಿಮೆ ಖರೀದಿಸುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ.