Tuesday, September 16, 2025

Janaspandhan News

HomeJobಗುಪ್ತಚರ ಇಲಾಖೆ (IB) ಯಲ್ಲಿ 394 ಹುದ್ದೆಗಳ ಭರ್ತಿ, ತಕ್ಷಣ ಅರ್ಜಿ ಸಲ್ಲಿಸಿ.!
spot_img
spot_img
spot_img

ಗುಪ್ತಚರ ಇಲಾಖೆ (IB) ಯಲ್ಲಿ 394 ಹುದ್ದೆಗಳ ಭರ್ತಿ, ತಕ್ಷಣ ಅರ್ಜಿ ಸಲ್ಲಿಸಿ.!

- Advertisement -

ಜನಸ್ಪಂದನ ನ್ಯೂಸ್‌, ನೌಕರಿ : ಗುಪ್ತಚರ ಇಲಾಖೆ (Intelligence Bureau – IB) ಯಲ್ಲಿ 394 ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್ ಗ್ರೇಡ್-II (ಟೆಕ್) ಹುದ್ದೆಗಳ ನೇಮಕಾತಿ ಪ್ರಕಟಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ (Online) ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ IB ವೆಬ್‌ಸೈಟ್‌ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ.

KSCCF : ಕರ್ನಾಟಕ ರಾಜ್ಯ ಸಹಕಾರಿ ಗ್ರಾಹಕ ಒಕ್ಕೂಟ ನಿಯಮಿತದಲ್ಲಿ ಉದ್ಯೋಗವಕಾಶ.!

ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ. ಅಭ್ಯರ್ಥಿಗಳು ನಿಗದಿತ ದಿನಾಂಕಕ್ಕೊಳಗಾಗಿ ಅರ್ಜಿ ಸಲ್ಲಿಸುವುದು ಮುಖ್ಯವಾಗಿದೆ.

ಹುದ್ದೆಗಳ ವಿವರ :
  • ಇಲಾಖೆ : ಗುಪ್ತಚರ ಇಲಾಖೆ (IB).
  • ಹುದ್ದೆಗಳ ಹೆಸರು : ಜೂನಿಯರ್ ಇಂಟೆಲಿಜೆನ್ಸ್ ಆಫೀಸರ್ ಗ್ರೇಡ್-II (ಟೆಕ್).
  • ಹುದ್ದೆಗಳ ಸಂಖ್ಯೆ : 394.
  • ಕೆಲಸದ ಸ್ಥಳ : ಅಖಿಲ ಭಾರತ.
  • ಅರ್ಜಿ ಸಲ್ಲಿಸುವ ವಿಧಾನ : ಆನ್‌ಲೈನ್.
ವಯೋಮಿತಿ :
  • ಕನಿಷ್ಠ ವಯಸ್ಸು : 18 ವರ್ಷ.
  • ಗರಿಷ್ಠ ವಯಸ್ಸು : 27 ವರ್ಷ.
Lemon ಫ್ರಿಡ್ಜ್‌ನಲ್ಲಿಡುವುದರಿಂದ ಎಷ್ಟೊಂದು ಅದ್ಭುತ ಪ್ರಯೋಜನಗಳಿವೇ ಗೊತ್ತಾ.?
ವೇತನ ಶ್ರೇಣಿ :
  • ರೂ. 25,500 ರಿಂದ ರೂ. 81,100 ವರೆಗೆ (7ನೇ ವೇತನ ಆಯೋಗ ಪ್ರಕಾರ)

ಶೈಕ್ಷಣಿಕ ಅರ್ಹತೆ:

  • ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (B.Sc/BCA) ಅಥವಾ ಸಮಾನ ವಿದ್ಯಾರ್ಹತೆ ಪೂರ್ಣಗೊಳಿಸಿರಬೇಕು.
ಅರ್ಜಿ ಶುಲ್ಕ :
  • ಸಾಮಾನ್ಯ/ಒಬಿಸಿ/EWS ಅಭ್ಯರ್ಥಿಗಳು : ರೂ. 550/-
  • ಇತರ ಅಭ್ಯರ್ಥಿಗಳು (SC/ST/ಮಹಿಳಾ/ಮಾಜಿ ಸೈನಿಕರು) : ರೂ. 100/-
ಆಯ್ಕೆ ಪ್ರಕ್ರಿಯೆ :
  1. ಆನ್‌ಲೈನ್ ಪರೀಕ್ಷೆ.
  2. ಲಿಖಿತ (ವಿವರಣಾತ್ಮಕ) ಪರೀಕ್ಷೆ.
  3. ಸಂದರ್ಶನ / ವ್ಯಕ್ತಿತ್ವ ಪರೀಕ್ಷೆ.
  4. ದಾಖಲೆ ಪರಿಶೀಲನೆ.
  5. ವೈದ್ಯಕೀಯ ಪರೀಕ್ಷೆ.
Women : 25 ವರ್ಷದ ಯುವತಿ ಜೊತೆ ಓಡಿ ಹೋದ 16 ರ ಅಪ್ರಾಪ್ತ ; ಮುಂದೆನಾಯ್ತು.?
ಅರ್ಜಿ ಸಲ್ಲಿಸುವ ವಿಧಾನ :
  1. ಅಧಿಕೃತ IB ವೆಬ್‌ಸೈಟ್ mha.gov.in ಗೆ ಭೇಟಿ ನೀಡಿ.
  2. ಅಧಿಕೃತ ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ ಓದಿ.
  3. ಆನ್‌ಲೈನ್ ಅರ್ಜಿ ಲಿಂಕ್ ಕ್ಲಿಕ್ ಮಾಡಿ.
  4. ಫಾರ್ಮ್ ಸರಿಯಾಗಿ ಭರ್ತಿ ಮಾಡಿ ಹಾಗೂ ಅಗತ್ಯ ದಾಖಲೆಗಳನ್ನು ಲಗತ್ತಿಸಿ.
  5. ಅರ್ಜಿ ಶುಲ್ಕ ಪಾವತಿಸಿ (ಅಗತ್ಯವಿದ್ದರೆ).
  6. ಅಂತಿಮವಾಗಿ ಫಾರ್ಮ್ ಸಲ್ಲಿಸಿ ಮತ್ತು ಮುದ್ರಣ ತೆಗೆದುಕೊಳ್ಳಿ.
ಪ್ರಮುಖ ದಿನಾಂಕಗಳು :
  • ಅರ್ಜಿ ಪ್ರಾರಂಭ ದಿನಾಂಕ : 23 ಆಗಸ್ಟ್ 2025.
  • ಕೊನೆಯ ದಿನಾಂಕ : 14 ಸೆಪ್ಟೆಂಬರ್ 2025.
Dharmasthala ಪ್ರಕರಣಕ್ಕೆ ಟ್ವಿಸ್ಟ್ : ಸುಜಾತಾ ಭಟ್ ಬಾಯ್ಬಿಟ್ಟ ಸತ್ಯ, ಮಾಸ್ಕ್ ಮ್ಯಾನ್ ಬಂಧನ.!
ಪ್ರಮುಖ ಲಿಂಕ್‌ಗಳು :

Disclaimer : The above given information is available On online, candidates should check it properly before applying. This is for information only.


Fire : 36 ಲಕ್ಷ ವರದಕ್ಷಿಣೆ ಬೇಡಿಕೆ : ಪತ್ನಿ ಸುಟ್ಟು ಹಾಕಿದ ಪತಿ ; ಸತ್ಯ ಬಿಚ್ಚಿಟ್ಟ ಮಗ.!

Fire

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ವರದಕ್ಷಿಣೆ ವಿಚಾರವಾಗಿ ಪತಿಯೋರ್ವ ಪತ್ನಿಗೆ ಬೆಂಕಿ (Fire) ಹಚ್ಚಿ ಕೊಲೆ ಮಾಡಿರುವ ಘಟನೆಯೋದು ನಡೆದಿರುವ ಬಗ್ಗೆ ವರದಿಯಾಗಿದೆ.

ಗ್ರೇಟರ್ ನೋಯ್ಡಾದ ಕಸ್ನಾ ಪೊಲೀಸ್ ಠಾಣೆ ವ್ಯಾಪ್ತಿಯ ಸಿರ್ಸಾ ಗ್ರಾಮದಲ್ಲಿ ನಡೆದ ದಾರುಣ ಘಟನೆಯಲ್ಲಿ, ಬೆಂಕಿ (Fire) ಹಚ್ಚಿ ಸುಟ್ಟ ಸ್ಥಿತಿಯಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾಗಿದೆ. ಈ ಪ್ರಕರಣದಲ್ಲಿ 6 ವರ್ಷದ ಮಗ ನೀಡಿದ ಹೇಳಿಕೆ ಪೊಲೀಸರಿಗೆ ಪ್ರಮುಖ ಸುಳಿವು ಒದಗಿಸಿದೆ.

ಮಗನ ಹೇಳಿಕೆಯ ಪ್ರಕಾರ, ತನ್ನ ಅಪ್ಪನೇ ತಾಯಿಯನ್ನು ತನ್ನ ಮುಂದೆಯೇ ಹಲ್ಲೆ ಮಾಡಿ ಬೆಂಕಿ (Fire) ಹಚ್ಚಿದ್ದಾನೆ. ಆಕೆ ಹಲವು ದಿನಗಳಿಂದ ಹಿಂಸೆಗೆ ಒಳಗಾಗುತ್ತಿದ್ದಾಳೆ ಎಂಬುದನ್ನೂ ಬಾಲಕ ಬಿಚ್ಚಿಟ್ಟಿದ್ದಾನೆ.

Dharmasthala ಪ್ರಕರಣಕ್ಕೆ ಟ್ವಿಸ್ಟ್ : ಸುಜಾತಾ ಭಟ್ ಬಾಯ್ಬಿಟ್ಟ ಸತ್ಯ, ಮಾಸ್ಕ್ ಮ್ಯಾನ್ ಬಂಧನ.!

ಘಟನೆಯ ವಿಡಿಯೋಗಳು ಕೂಡಾ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅವುಗಳಲ್ಲಿ ಮಹಿಳೆಯ ಮೇಲೆ ಹಲ್ಲೆ ನಡೆಸಿದ ದೃಶ್ಯಗಳು ಹಾಗೂ ಬೆಂಕಿ (Fire) ಹೊತ್ತಿಕೊಂಡ ನಂತರ ಆಕೆ ಮೆಟ್ಟಿಲುಳಿದು ಬರುತ್ತಿರುವ ದೃಶ್ಯಗಳು ಕಾಣಿಸಿವೆ.

ಮೃತಳ ಅಕ್ಕ ಕಾಂಚನ್ ಮಾತನಾಡಿ, ತಮ್ಮ ತಂಗಿಯ ಪತಿ ವಿಪಿನ್ ಹಾಗೂ ಆತನ ಮನೆಯವರು 36 ಲಕ್ಷ ರೂ. ವರದಕ್ಷಿಣೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿದ್ದಾರೆ. ಇದೇ ಕಾರಣಕ್ಕೆ ತಂಗಿ ನಿರಂತರ ಹಿಂಸೆಗೆ ಒಳಗಾಗುತ್ತಿದ್ದರು ಎಂದು ಅವರು ಹೇಳಿದ್ದಾರೆ.

KSCCF : ಕರ್ನಾಟಕ ರಾಜ್ಯ ಸಹಕಾರಿ ಗ್ರಾಹಕ ಒಕ್ಕೂಟ ನಿಯಮಿತದಲ್ಲಿ ಉದ್ಯೋಗವಕಾಶ.!

ಕಾಂಚನ್ ಅವರ ಪ್ರಕಾರ, ತಂಗಿಯನ್ನು ಹಲ್ಲೆ ಮಾಡಿದ ನಂತರ ಬೆಂಕಿ (Fire) ಹಚ್ಚಲಾಯಿತು. ತಂಗಿಯ ಮಕ್ಕಳೂ ಆ ಸಮಯದಲ್ಲಿ ಅಲ್ಲೇ ಇದ್ದರು. ತಮಗೂ ಹಲ್ಲೆ ನಡೆಸಲಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ಪ್ರಕರಣದಲ್ಲಿ ಪೊಲೀಸರು ದೂರು ದಾಖಲಿಸಿ, ತನಿಖೆ ಮುಂದುವರೆಸಿದ್ದಾರೆ.

- Advertisement -
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments