Wednesday, September 17, 2025

Janaspandhan News

HomeHealth & Fitnessಮೂತ್ರನಾಳದ ಸೋಂಕು (UTI) : ಕಾರಣಗಳು, ಲಕ್ಷಣಗಳು ಮತ್ತು ತಡೆಗಟ್ಟುವ ಮಾರ್ಗಗಳು.!
spot_img
spot_img
spot_img

ಮೂತ್ರನಾಳದ ಸೋಂಕು (UTI) : ಕಾರಣಗಳು, ಲಕ್ಷಣಗಳು ಮತ್ತು ತಡೆಗಟ್ಟುವ ಮಾರ್ಗಗಳು.!

- Advertisement -

ಜನಸ್ಪಂದನ ನ್ಯೂಸ್‌, ಆರೋಗ್ಯ : ಮಾನವನ ದೇಹವು ಆರೋಗ್ಯವಾಗಿರಬೇಕಾದರೆ ಮೂತ್ರನಾಳದ ಸೋಂಕು (UTI) ಆಗದಂತೆ ನೋಡಿಕೊಳ್ಳಬೇಕು. ಬನ್ನಿ ಇಂದು ಮೂತ್ರನಾಳದ ಸೋಂಕು (UTI) ಗೆ ಕಾರಣಗಳು, ಲಕ್ಷಣಗಳು ಮತ್ತು ತಡೆಗಟ್ಟುವ ಮಾರ್ಗಗಳ ಬಗ್ಗೆ ತಿಳಿಯೋಣ.!

ಮಾನವನ ದೇಹದ ಮೂತ್ರಜನಕಾಂಗ ವ್ಯವಸ್ಥೆ ಮುಖ್ಯವಾಗಿ ಮೂತ್ರಪಿಂಡ, ಮೂತ್ರನಾಳಗಳು, ಮೂತ್ರಕೋಶ ಮತ್ತು ಮೂತ್ರನಳ್ಳಿಗಳಿಂದ ರೂಪುಗೊಂಡಿದೆ. ಈ ಅಂಗಾಂಗಗಳ ಪ್ರಮುಖ ಕಾರ್ಯ ದೇಹದಲ್ಲಿರುವ ತ್ಯಾಜ್ಯವನ್ನು ಶೋಧಿಸಿ ಮೂತ್ರದ ಮೂಲಕ ಹೊರಹಾಕುವುದು.

Bribe : ಲಂಚ ಸ್ವೀಕರಿಸುತ್ತಿದ್ದ ವೇಳೆ PI, PSI ಸೇರಿ 3 ಜನರ ಬಂಧನ.!
ಮೂತ್ರನಾಳದ ಸೋಂಕು (UTI) ಎಂದರೇನು?

ಮೂತ್ರಜನಕಾಂಗ ವ್ಯವಸ್ಥೆಯ ಯಾವುದೇ ಭಾಗದಲ್ಲಿ ಬ್ಯಾಕ್ಟೀರಿಯಾ ಅಥವಾ ವೈರಸ್‌ಗಳ ಪ್ರವೇಶದಿಂದ ಉಂಟಾಗುವ ಅಸ್ವಸ್ಥತೆಯನ್ನು ಮೂತ್ರನಾಳದ ಸೋಂಕು (UTI) ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಈ ಸೋಂಕು ಮೂತ್ರಕೋಶ ಮತ್ತು ಮೂತ್ರನಳ್ಳಿಯಲ್ಲೇ ಹೆಚ್ಚು ಕಂಡುಬರುತ್ತದೆ.

ಎಷ್ಟು ಸಾಮಾನ್ಯ?

ಇದು ಇಂದಿನ ಜೀವನಶೈಲಿಯಲ್ಲಿ ಅತ್ಯಂತ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದೆ.

  • ಮಹಿಳೆಯರಲ್ಲಿ ಸುಮಾರು 50% ಜನರು ತಮ್ಮ ಜೀವನದಲ್ಲಿ ಕನಿಷ್ಠ ಒಂದು ಬಾರಿ ಈ ಸೋಂಕಿಗೆ ಒಳಗಾಗುತ್ತಾರೆ.
  • ಪುರುಷರಲ್ಲಿ ಇದರ ಪ್ರಮಾಣ ಕಡಿಮೆ ಇದ್ದರೂ, ಸುಮಾರು 12% ಪುರುಷರು ಜೀವನದಲ್ಲಿ ಕನಿಷ್ಠ ಒಂದು ಬಾರಿ ಇದನ್ನು ಅನುಭವಿಸುತ್ತಾರೆ.
  • ಮಕ್ಕಳಲ್ಲಿ ಇದು ಅಪರೂಪವಾಗಿದ್ದು, ಕೇವಲ 1-2% ಮಕ್ಕಳಿಗೆ ಮಾತ್ರ ಮೂತ್ರನಾಳದ ಸೋಂಕು ಕಾಣಿಸಿಕೊಳ್ಳುತ್ತದೆ.
Kills : ಬೆಳಗಾವಿ ; ವಿವಾಹಿತ ಪ್ರೇಯಸಿಯನ್ನು ಹತ್ಯೆಗೈದು ಆತ್ಮಹತ್ಯೆಗೆ ಶರಣಾದ ವಿವಾಹಿತ.!
ಮೂತ್ರನಾಳದ ಸೋಂಕಿ (UTI) ನ ಮುಖ್ಯ ಲಕ್ಷಣಗಳು :
  • ಮೂತ್ರ ಮಾಡುವಾಗ ಉರಿಯೂತ ಅಥವಾ ನೋವು
  • ಆಗಾಗ ಮೂತ್ರ ವಿಸರ್ಜನೆ ಮಾಡುವ ಅಗತ್ಯ
  • ದುರ್ವಾಸನೆಯ ಮೂತ್ರ
  • ಮೂತ್ರದಲ್ಲಿ ರಕ್ತದ ಚಿಹ್ನೆಗಳು
  • ಹೊಟ್ಟೆಯ ಕೆಳಭಾಗ, ಬೆನ್ನು ಅಥವಾ ಸೊಂಟದಲ್ಲಿ ನೋವು
  • ಜ್ವರ, ಚಳಿ ಅಥವಾ ನಿಶ್ಶಕ್ತಿ ಅನುಭವ
  • ಮಕ್ಕಳಲ್ಲಿ ಹಸಿವು ಕಡಿಮೆಯಾಗುವುದು ಮತ್ತು ಆಲಸ್ಯ
ಮೂತ್ರನಾಳದ ಸೋಂಕು (UTI) ಪತ್ತೆಹಚ್ಚುವುದು ಹೇಗೆ?

ವೈದ್ಯಕೀಯ ಮಾಹಿತಿ, ದೈಹಿಕ ಪರೀಕ್ಷೆ, ಮೂತ್ರ ಮತ್ತು ರಕ್ತ ಪರೀಕ್ಷೆ, ಜೊತೆಗೆ ಅಲ್ಟ್ರಾಸೌಂಡ್ ಪರೀಕ್ಷೆ ಮೂಲಕ ಸೋಂಕು ದೃಢಪಡಿಸಲಾಗುತ್ತದೆ.

ಮೂತ್ರನಾಳದ ಸೋಂಕಿ (UTI) ಗೆ ಕಾರಣಗಳು :
  • ಸಮರ್ಪಕ ಸ್ವಚ್ಛತೆಯ ಕೊರತೆ
  • ಸಾಕಷ್ಟು ನೀರು ಕುಡಿಯದಿರುವುದು
  • ಹೆಚ್ಚು ಸಮಯ ಮೂತ್ರವನ್ನು ತಡೆದಿಡುವುದು
  • ಗರ್ಭಾವಸ್ಥೆಯ ಹಾರ್ಮೋನ್ ಬದಲಾವಣೆಗಳು
  • ಸಾರ್ವಜನಿಕ ಶೌಚಾಲಯಗಳ ಬಳಕೆ
  • ಬಿಗಿಯಾದ ಅಥವಾ ಸಿಂಥೆಟಿಕ್ ಒಳಉಡುಪು ಧರಿಸುವುದು
  • ನಿಯಂತ್ರಣವಿಲ್ಲದ ಮಧುಮೇಹ
  • ವಯೋಸಹಜ ಪ್ರೋಸ್ಟೇಟ್ ಸಮಸ್ಯೆ (ಪುರುಷರಲ್ಲಿ)
  • ಮೂತ್ರಕೋಶಕ್ಕೆ ಕೊಳವೆ (ಕ್ಯಾಥೆಟರ್) ಹಾಕಿದಾಗ
  • ಮೂತ್ರಕಲ್ಲುಗಳು ಅಥವಾ ಅಡಚಣೆಗಳು
  • ಲೈಂಗಿಕ ಚಟುವಟಿಕೆ ನಂತರ ಮೂತ್ರನಾಳಕ್ಕೆ ಸೋಂಕು ಹರಡುವುದು
ಈ ಲಕ್ಷಣಗಳು ಕಾಣಿಸಿಕೊಂಡರೆ ಅದು ರಕ್ತನಾಳಗಳು Blocked ಆಗಿರುವ ಎಚ್ಚರಿಕೆ.!
ಮೂತ್ರನಾಳದ ಸೋಂಕು (UTI) ತಡೆಗಟ್ಟುವ ಮಾರ್ಗಗಳು :
  • ದಿನಕ್ಕೆ ಕನಿಷ್ಠ 2.5 ಲೀಟರ್ ನೀರು ಕುಡಿಯುವುದು
  • ಶೌಚಾಲಯ ಬಳಸಿ ಮುಗಿದ ಬಳಿಕ ಮುಂಭಾಗದಿಂದ ಹಿಂಭಾಗಕ್ಕೆ ಸ್ವಚ್ಛತೆ ಕಾಪಾಡುವುದು
  • ಮಹಿಳೆಯರು ಮುಟ್ಟಿನ ಸಮಯದಲ್ಲಿ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡುವುದು
  • ಸಾರ್ವಜನಿಕ ಶೌಚಾಲಯ ಬಳಸುವಾಗ ಮುನ್ನೆಚ್ಚರಿಕೆ ವಹಿಸುವುದು
  • ಹತ್ತಿಯ ಒಳ ಉಡುಪು ಧರಿಸುವುದು ಮತ್ತು ಸಿಂಥೆಟಿಕ್ ಬಟ್ಟೆಗಳನ್ನು ತಪ್ಪಿಸುವುದು
  • ಒಳ ಉಡುಪುಗಳನ್ನು ಚೆನ್ನಾಗಿ ತೊಳೆದು ಬಿಸಿಲಿನಲ್ಲಿ ಒಣಗಿಸುವುದು
  • ತುರ್ತು ಸ್ಥಿತಿಯಲ್ಲಿ ಮೂತ್ರ ತಡೆದಿಡದೆ ತಕ್ಷಣ ವಿಸರ್ಜನೆ ಮಾಡುವುದು
  • ಲೈಂಗಿಕ ಕ್ರಿಯೆಯ ನಂತರ ಮೂತ್ರ ವಿಸರ್ಜನೆ ಮಾಡಿ, ಭಾಗಗಳನ್ನು ಸ್ವಚ್ಛಗೊಳಿಸುವುದು
  • ಮಕ್ಕಳಿಗೆ ಶೌಚದ ಸ್ವಚ್ಛತೆಯ ಅಭ್ಯಾಸ ಕಲಿಸುವುದು
  • ಮಸಾಲೆಯುಕ್ತ, ಎಣ್ಣೆಯುಕ್ತ, ಹೆಚ್ಚು ಸಕ್ಕರೆ ಇರುವ ಆಹಾರ ಹಾಗೂ ಮದ್ಯಪಾನ, ಕಾಫಿ ಮತ್ತು ಕಾರ್ಬೊನೇಟೆಡ್ ಪಾನೀಯಗಳನ್ನು ನಿಯಂತ್ರಿಸುವುದು
  • ಸುಗಂಧ ದ್ರವ್ಯಗಳು ಅಥವಾ ರಾಸಾಯನಿಕ ಇರುವ ಉತ್ಪನ್ನಗಳನ್ನು ಗುಪ್ತಾಂಗಗಳ ಬಳಿ ಬಳಸುವುದನ್ನು ತಪ್ಪಿಸುವುದು

ಸಂಪಾದಕೀಯ : ಮೂತ್ರನಾಳದ ಸೋಂಕು (UTI) ಸಾಮಾನ್ಯವಾದರೂ, ಸರಿಯಾದ ಸ್ವಚ್ಛತೆ, ಸಮರ್ಪಕ ನೀರಿನ ಸೇವನೆ ಮತ್ತು ಜೀವನಶೈಲಿಯಲ್ಲಿ ಬದಲಾವಣೆಗಳ ಮೂಲಕ ಇದನ್ನು ತಡೆಗಟ್ಟಬಹುದು. ಸಮಸ್ಯೆ ಗಂಭೀರವಾಗಿ ಕಂಡುಬಂದಲ್ಲಿ ವೈದ್ಯರ ಸಲಹೆ ಪಡೆಯುವುದು ಅಗತ್ಯ.


LIC Recruitment 2025 : 841 ಹುದ್ದೆಗಳಿಗೆ ಅರ್ಜಿ ಆಹ್ವಾನ.!

LIC

ಜನಸ್ಪಂದನ ನ್ಯೂಸ್‌, ನೌಕರಿ : ಭಾರತೀಯ ಜೀವ ವಿಮಾ ನಿಗಮ (LIC) 2025 ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ (Online) ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ ವೆಬ್‌ಸೈಟ್‌ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ. ಅಭ್ಯರ್ಥಿಗಳು ನಿಗದಿತ ದಿನಾಂಕಕ್ಕೊಳಗಾಗಿ ಅರ್ಜಿ ಸಲ್ಲಿಸುವುದು ಮುಖ್ಯವಾಗಿದೆ.

Kills : ಬೆಳಗಾವಿ ; ವಿವಾಹಿತ ಪ್ರೇಯಸಿಯನ್ನು ಹತ್ಯೆಗೈದು ಆತ್ಮಹತ್ಯೆಗೆ ಶರಣಾದ ವಿವಾಹಿತ.!

ಈ ನೇಮಕಾತಿ ಮೂಲಕ ಸಹಾಯಕ ಎಂಜಿನಿಯರ್‌ಗಳು ಹಾಗೂ ಸಹಾಯಕ ಆಡಳಿತಾಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಯ್ಕೆ ಪ್ರಕ್ರಿಯೆ, ವಯೋಮಿತಿ, ಶೈಕ್ಷಣಿಕ ಅರ್ಹತೆ, ಅರ್ಜಿ ಶುಲ್ಕ ಹಾಗೂ ಇತರ ಮುಖ್ಯ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.

ಹುದ್ದೆಗಳ ವಿವರ :
  • ಸಹಾಯಕ ಆಡಳಿತ ಅಧಿಕಾರಿ – 350
  • ಸಹಾಯಕ ಎಂಜಿನಿಯರ್ (ಸಿವಿಲ್) – 50
  • ಸಹಾಯಕ ಎಂಜಿನಿಯರ್ (ವಿದ್ಯುತ್) – 31
  • ಸಹಾಯಕ ಆಡಳಿತ ಅಧಿಕಾರಿ (CA) – 30
  • ಸಹಾಯಕ ಆಡಳಿತ ಅಧಿಕಾರಿ (CS) – 10
  • ಸಹಾಯಕ ಆಡಳಿತ ಅಧಿಕಾರಿ (ವಿಮಾಗಣಕ) – 30
  • ಸಹಾಯಕ ಆಡಳಿತ ಅಧಿಕಾರಿ (ವಿಮಾ ತಜ್ಞರು) – 310
  • ಸಹಾಯಕ ಆಡಳಿತ ಅಧಿಕಾರಿ (ಕಾನೂನು) – 30

ಒಟ್ಟು ಹುದ್ದೆಗಳು : 841

ಬೆಳಗಾವಿ : 30 beauty-parlour ಗಳ ಮೇಲೆ ಆರೋಗ್ಯ ಇಲಾಖೆಯ ದಾಳಿ ; 10 ಸೀಜ್, 20ಕ್ಕೆ ನೋಟಿಸ್.!
ವೇತನ (Salary) :

ಅಧಿಸೂಚನೆಯ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.88,635/- ರಿಂದ ರೂ.1,69,025/- ರವರೆಗೆ ಪ್ರತಿ ತಿಂಗಳು ವೇತನ ನೀಡಲಾಗುತ್ತದೆ.

ವಯೋಮಿತಿ (Age Limit) :
  • ಕನಿಷ್ಠ ವಯಸ್ಸು: 21 ವರ್ಷ
  • ಗರಿಷ್ಠ ವಯಸ್ಸು: 32 ವರ್ಷ

ವಯೋಮಿತಿ ಸಡಿಲಿಕೆ (Age Relaxation):

  • OBC ಅಭ್ಯರ್ಥಿಗಳು : 3 ವರ್ಷಗಳು.
  • SC/ST ಅಭ್ಯರ್ಥಿಗಳು : 5 ವರ್ಷಗಳು.
  • PwBD (ಸಾಮಾನ್ಯ) : 10 ವರ್ಷಗಳು.
  • PwBD (OBC) : 13 ವರ್ಷಗಳು.
  • PwBD (SC/ST) : 15 ವರ್ಷಗಳು.
ಶೈಕ್ಷಣಿಕ ಅರ್ಹತೆ (Education Qualification) :

ಅಭ್ಯರ್ಥಿಗಳು ಕೆಳಗಿನ ಪೈಕಿ ಯಾವುದಾದರೂ ಅರ್ಹತೆ ಹೊಂದಿರಬೇಕು,

  • ಯಾವುದೇ ಪದವಿ (Any Degree).
  • B.Tech / BE.
  • LLB.
  • CA, ICSI.
ಬೆಂಗಳೂರು : ನಿಗೂಢ blast ; 8 ವರ್ಷದ ಬಾಲಕನ ಸಾವು, ಹಲವರಿಗೆ ಗಾಯ.!
ಅರ್ಜಿ ಶುಲ್ಕ (Application Fees) :
  • SC/ST/PwBD ಅಭ್ಯರ್ಥಿಗಳಿಗೆ : ರೂ.85 + GST.
  • ಇತರ ಅಭ್ಯರ್ಥಿಗಳಿಗೆ : ರೂ.700 + GST.
ಆಯ್ಕೆ ಪ್ರಕ್ರಿಯೆ (Selection Process) :
  • LIC ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳ ಆಯ್ಕೆ ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ಆಧಾರಿತವಾಗಿರುತ್ತದೆ.
ಅರ್ಜಿ ಸಲ್ಲಿಸುವ ವಿಧಾನ (How to Apply) :
  1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  2. ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ ಮತ್ತು ಸಂಪೂರ್ಣ ಓದಿ.
  3. ಆನ್‌ಲೈನ್ ಅರ್ಜಿ ಲಿಂಕ್ ಕ್ಲಿಕ್ ಮಾಡಿ.
  4. ಅಗತ್ಯ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ.
  5. ಅಗತ್ಯವಿದ್ದರೆ ಅರ್ಜಿ ಶುಲ್ಕ ಪಾವತಿಸಿ.
  6. ಫೋಟೋ ಮತ್ತು ಸಹಿ ಅಪ್ಲೋಡ್ ಮಾಡಿ.
  7. ಫಾರ್ಮ್ ಸಲ್ಲಿಸುವ ಮೊದಲು ಪರಿಶೀಲಿಸಿ.
  8. ಕೊನೆಯಲ್ಲಿ ಪ್ರಿಂಟ್ ತೆಗೆದುಕೊಳ್ಳಿ.
Medicine : ಮಾತ್ರೆ ತೆಗೆದುಕೊಂಡ ನಂತರ ಖಂಡಿತ ಈ ತಪ್ಪುಗಳನ್ನು ಮಾಡಬೇಡಿ ; ಮಾಡಿದರೆ ಜೀವಕ್ಕೆ ಅಪಾಯ.!
ಪ್ರಮುಖ ದಿನಾಂಕಗಳು (Important Dates) :
  • ಅರ್ಜಿ ಆರಂಭ ದಿನಾಂಕ: 16 ಆಗಸ್ಟ್ 2025
  • ಅರ್ಜಿ ಕೊನೆಯ ದಿನಾಂಕ: 08 ಸೆಪ್ಟೆಂಬರ್ 2025
ಪ್ರಮುಖ ಲಿಂಕ್‌ಗಳು (Important Links) :

Disclaimer : The above given information is available On online, candidates should check it properly before applying. This is for information only.

- Advertisement -
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments