ಜನಸ್ಪಂದನ ನ್ಯೂಸ್, ಆರೋಗ್ಯ : “ನಿಮ್ಮ ದೇಹದಲ್ಲಿ ಈ ರೀತಿಯ ಲಕ್ಷಣಗಳು ಕಾಣಿಸಿಕೊಂಡರೆ ಅದು ರಕ್ತನಾಳಗಳು ಬ್ಲಾಕ್ (Blocked) ಆಗಿರುವ ಎಚ್ಚರಿಕೆ.! ಮಾನವನ ದೇಹದಲ್ಲಿ ಪ್ರತಿಯೊಂದು ಹನಿ ರಕ್ತವು ರಕ್ತನಾಳಗಳ ಮೂಲಕ ಅಂಗಾಂಗಗಳಿಗೆ ತಲುಪುತ್ತದೆ. ಆದರೆ ರಕ್ತನಾಳಗಳಲ್ಲಿ ಅಡಚಣೆ (Blockage) ಉಂಟಾದಾಗ ರಕ್ತದ ಹರಿವು ಅಡ್ಡಿಯಾಗುತ್ತದೆ.
ರಕ್ತನಾಳಗಳು ಬ್ಲಾಕ್ (Blocked) ಆಗುವುದರಿಂದ ಹೃದಯಾಘಾತ, ಪಾರ್ಶ್ವವಾಯು, ಉಸಿರಾಟದ ತೊಂದರೆ, ಆಯಾಸ ಮುಂತಾದ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ವೈದ್ಯಕೀಯ ತಜ್ಞರ ಪ್ರಕಾರ, ಈ ಸಂದರ್ಭಗಳಲ್ಲಿ ಕೆಲವು ಆರಂಭಿಕ ಲಕ್ಷಣಗಳನ್ನು ಗಂಭೀರವಾಗಿ ಪರಿಗಣಿಸಬೇಕು.
ಮಳೆಗಾಲದಲ್ಲಿ ಬಟ್ಟೆಗಳಿಂದ bad-smell ಬರುತ್ತಿದೆಯೇ? ಈ 3 ಮನೆಮದ್ದುಗಳಿಂದ 5 ನಿಮಿಷದಲ್ಲಿ ಪರಿಹಾರ.!
ರಕ್ತನಾಳಗಳಲ್ಲಿ ಅಡಚಣೆ (Blocked) ಆದಾಗ ಕಾಣುವ ಲಕ್ಷಣಗಳು :
1. ಕೈಕಾಲುಗಳಲ್ಲಿ ಮರಗಟ್ಟುವಿಕೆ ಅಥವಾ ಜುಮ್ಮೆನಿಸುವಿಕೆ :
ರಕ್ತದ ಸರಿಯಾದ ಹರಿವು ಕಡಿಮೆ (Blocked) ಯಾದಾಗ ಕೈ ಅಥವಾ ಪಾದಗಳಲ್ಲಿ ಮರಗಟ್ಟುವಿಕೆ ಕಂಡುಬರುತ್ತದೆ. ಇದು ವಿಶೇಷವಾಗಿ ಹೆಚ್ಚು ಸಮಯ ಕುಳಿತಿದ್ದಾಗ ಅಥವಾ ನಡೆದಾಡಿದಾಗ ಸ್ಪಷ್ಟವಾಗುತ್ತದೆ.
2. ತಲೆತಿರುಗುವಿಕೆ ಮತ್ತು ಕೇಂದ್ರೀಕರಣದ ತೊಂದರೆ :
ರಕ್ತನಾಳಗಳಲ್ಲಿ ಅಡಚಣೆ (Blocked) ಮೆದುಳಿಗೆ ರಕ್ತದ ಪೂರೈಕೆಯನ್ನು ತಗ್ಗಿಸುತ್ತದೆ. ಇದರಿಂದ ತಲೆತಿರುಗುವಿಕೆ, ಗಾಬರಿಯಾಗುವಿಕೆ ಅಥವಾ ಗಮನ ಕೇಂದ್ರೀಕರಿಸಲು ಕಷ್ಟವಾಗುವುದು ಸಾಮಾನ್ಯ.
3. ಎದೆ ನೋವು ಅಥವಾ ಒತ್ತಡ :
ಹಠಾತ್ ಎದೆ ನೋವು, ಒತ್ತಡ ಅಥವಾ ಭಾರವಾಗಿರುವ ಅನುಭವವು ಹೃದಯ ಸಂಬಂಧಿತ ಸಮಸ್ಯೆಯ ಸೂಚನೆ ಆಗಿರಬಹುದು. ಈ ಲಕ್ಷಣವನ್ನು ನಿರ್ಲಕ್ಷಿಸುವುದು ಅಪಾಯಕಾರಿ.
Coaching ಸೆಂಟರ್‌ನಲ್ಲಿ ವಿದ್ಯಾರ್ಥಿನಿ ಜೊತೆ ಶಿಕ್ಷಕನ ಅಸಭ್ಯ ವರ್ತನೆ ; ವಿಡಿಯೋ ವೈರಲ್.!
4. ಉಸಿರಾಟದ ತೊಂದರೆ :
ರಕ್ತನಾಳಗಳಲ್ಲಿ ಅಡಚಣೆ ಉಂಟಾದಾಗ ಹೃದಯ ಹೆಚ್ಚು ಶ್ರಮಿಸಬೇಕಾಗುತ್ತದೆ. ಇದರಿಂದ ಶ್ವಾಸಕೋಶಗಳ ಮೇಲೆ ಒತ್ತಡ ಬಿದ್ದು ಉಸಿರಾಟದ ತೊಂದರೆ ಎದುರಾಗಬಹುದು.
5. ಶರೀರದಲ್ಲಿ ಆಯಾಸ ಮತ್ತು ದೌರ್ಬಲ್ಯ :
ಸಣ್ಣ ಚಟುವಟಿಕೆಗಳ ಬಳಿಕವೇ ದಣಿವು, ಶಕ್ತಿಯ ಕೊರತೆ ಅಥವಾ ಶರೀರ ಸುಸ್ತಾಗಿರುವುದು ರಕ್ತನಾಳಗಳಲ್ಲಿ ಬ್ಲಾಕ್ (Blocked) ಇರುವ ಸೂಚನೆ ಆಗಿರಬಹುದು.
6. ಪಾದಗಳಲ್ಲಿ ಊತ :
ಅಡಚಣೆಯ ಕಾರಣದಿಂದ ರಕ್ತ ಮತ್ತು ದ್ರವಗಳು ಪಾದಗಳಲ್ಲಿ ಸಂಗ್ರಹವಾಗುತ್ತವೆ. ಇದರಿಂದ ಪಾದಗಳು ಊದಿಕೊಳ್ಳುತ್ತವೆ ಮತ್ತು ಭಾರವಾಗಿರುವ ಅನುಭವ ಬರುತ್ತದೆ.
KSRTC Bus ಲಾರಿಗೆ ಡಿಕ್ಕಿ : ಮೂವರಿಗೆ ದುರ್ಮರಣ, 7 ಮಂದಿ ಗಂಭೀರ ಗಾಯ.!
ಸಂಪಾದಕೀಯ : ಈ ಲಕ್ಷಣಗಳು (blocked blood-vessels) ಕಂಡುಬಂದರೆ ತಕ್ಷಣವೇ ತಜ್ಞ ವೈದ್ಯರನ್ನು ಸಂಪರ್ಕಿಸುವುದು ಅತ್ಯಂತ ಮುಖ್ಯ. ಸರಿಯಾದ ಆಹಾರ, ನಿಯಮಿತ ವ್ಯಾಯಾಮ ಮತ್ತು ಆರೋಗ್ಯಕರ ಜೀವನಶೈಲಿ ಅನುಸರಿಸುವುದರಿಂದ ಹೃದಯ ಹಾಗೂ ರಕ್ತನಾಳಗಳನ್ನು ರಕ್ಷಿಸಬಹುದು.
Disclaimer : ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತವಿರುವ ವಿಡಿಯೋ/ಪೋಸ್ಟ್‌ನ್ನು ಆಧರಿಸಿದೆ. ಈ ಬಗ್ಗೆ ಜನಸ್ಪಂದನ ನ್ಯೂಸ್ ಯಾವುದೇ ರೀತಿಯ ಹಕ್ಕು ಮತ್ತು ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.
LIC Recruitment 2025 : 841 ಹುದ್ದೆಗಳಿಗೆ ಅರ್ಜಿ ಆಹ್ವಾನ.!

ಜನಸ್ಪಂದನ ನ್ಯೂಸ್, ನೌಕರಿ : ಭಾರತೀಯ ಜೀವ ವಿಮಾ ನಿಗಮ (LIC) 2025 ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ (Online) ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ ವೆಬ್‌ಸೈಟ್ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ. ಅಭ್ಯರ್ಥಿಗಳು ನಿಗದಿತ ದಿನಾಂಕಕ್ಕೊಳಗಾಗಿ ಅರ್ಜಿ ಸಲ್ಲಿಸುವುದು ಮುಖ್ಯವಾಗಿದೆ.
Kills : ಬೆಳಗಾವಿ ; ವಿವಾಹಿತ ಪ್ರೇಯಸಿಯನ್ನು ಹತ್ಯೆಗೈದು ಆತ್ಮಹತ್ಯೆಗೆ ಶರಣಾದ ವಿವಾಹಿತ.!
ಈ ನೇಮಕಾತಿ ಮೂಲಕ ಸಹಾಯಕ ಎಂಜಿನಿಯರ್‌ಗಳು ಹಾಗೂ ಸಹಾಯಕ ಆಡಳಿತಾಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಯ್ಕೆ ಪ್ರಕ್ರಿಯೆ, ವಯೋಮಿತಿ, ಶೈಕ್ಷಣಿಕ ಅರ್ಹತೆ, ಅರ್ಜಿ ಶುಲ್ಕ ಹಾಗೂ ಇತರ ಮುಖ್ಯ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.
ಹುದ್ದೆಗಳ ವಿವರ :
- ಸಹಾಯಕ ಆಡಳಿತ ಅಧಿಕಾರಿ – 350
- ಸಹಾಯಕ ಎಂಜಿನಿಯರ್ (ಸಿವಿಲ್) – 50
- ಸಹಾಯಕ ಎಂಜಿನಿಯರ್ (ವಿದ್ಯುತ್) – 31
- ಸಹಾಯಕ ಆಡಳಿತ ಅಧಿಕಾರಿ (CA) – 30
- ಸಹಾಯಕ ಆಡಳಿತ ಅಧಿಕಾರಿ (CS) – 10
- ಸಹಾಯಕ ಆಡಳಿತ ಅಧಿಕಾರಿ (ವಿಮಾಗಣಕ) – 30
- ಸಹಾಯಕ ಆಡಳಿತ ಅಧಿಕಾರಿ (ವಿಮಾ ತಜ್ಞರು) – 310
- ಸಹಾಯಕ ಆಡಳಿತ ಅಧಿಕಾರಿ (ಕಾನೂನು) – 30
ಒಟ್ಟು ಹುದ್ದೆಗಳು : 841
ಬೆಳಗಾವಿ : 30 beauty-parlour ಗಳ ಮೇಲೆ ಆರೋಗ್ಯ ಇಲಾಖೆಯ ದಾಳಿ ; 10 ಸೀಜ್, 20ಕ್ಕೆ ನೋಟಿಸ್.!
ವೇತನ (Salary) :
ಅಧಿಸೂಚನೆಯ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ರೂ.88,635/- ರಿಂದ ರೂ.1,69,025/- ರವರೆಗೆ ಪ್ರತಿ ತಿಂಗಳು ವೇತನ ನೀಡಲಾಗುತ್ತದೆ.
ವಯೋಮಿತಿ (Age Limit) :
- ಕನಿಷ್ಠ ವಯಸ್ಸು: 21 ವರ್ಷ
- ಗರಿಷ್ಠ ವಯಸ್ಸು: 32 ವರ್ಷ
ವಯೋಮಿತಿ ಸಡಿಲಿಕೆ (Age Relaxation):
- OBC ಅಭ್ಯರ್ಥಿಗಳು : 3 ವರ್ಷಗಳು.
- SC/ST ಅಭ್ಯರ್ಥಿಗಳು : 5 ವರ್ಷಗಳು.
- PwBD (ಸಾಮಾನ್ಯ) : 10 ವರ್ಷಗಳು.
- PwBD (OBC) : 13 ವರ್ಷಗಳು.
- PwBD (SC/ST) : 15 ವರ್ಷಗಳು.
ಶೈಕ್ಷಣಿಕ ಅರ್ಹತೆ (Education Qualification) :
ಅಭ್ಯರ್ಥಿಗಳು ಕೆಳಗಿನ ಪೈಕಿ ಯಾವುದಾದರೂ ಅರ್ಹತೆ ಹೊಂದಿರಬೇಕು,
- ಯಾವುದೇ ಪದವಿ (Any Degree).
- B.Tech / BE.
- LLB.
- CA, ICSI.
ಬೆಂಗಳೂರು : ನಿಗೂಢ blast ; 8 ವರ್ಷದ ಬಾಲಕನ ಸಾವು, ಹಲವರಿಗೆ ಗಾಯ.!
ಅರ್ಜಿ ಶುಲ್ಕ (Application Fees) :
- SC/ST/PwBD ಅಭ್ಯರ್ಥಿಗಳಿಗೆ : ರೂ.85 + GST.
- ಇತರ ಅಭ್ಯರ್ಥಿಗಳಿಗೆ : ರೂ.700 + GST.
ಆಯ್ಕೆ ಪ್ರಕ್ರಿಯೆ (Selection Process) :
- LIC ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳ ಆಯ್ಕೆ ಲಿಖಿತ ಪರೀಕ್ಷೆ ಹಾಗೂ ಸಂದರ್ಶನ ಆಧಾರಿತವಾಗಿರುತ್ತದೆ.
ಅರ್ಜಿ ಸಲ್ಲಿಸುವ ವಿಧಾನ (How to Apply) :
- ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
- ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿ ಮತ್ತು ಸಂಪೂರ್ಣ ಓದಿ.
- ಆನ್‌ಲೈನ್ ಅರ್ಜಿ ಲಿಂಕ್ ಕ್ಲಿಕ್ ಮಾಡಿ.
- ಅಗತ್ಯ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ.
- ಅಗತ್ಯವಿದ್ದರೆ ಅರ್ಜಿ ಶುಲ್ಕ ಪಾವತಿಸಿ.
- ಫೋಟೋ ಮತ್ತು ಸಹಿ ಅಪ್ಲೋಡ್ ಮಾಡಿ.
- ಫಾರ್ಮ್ ಸಲ್ಲಿಸುವ ಮೊದಲು ಪರಿಶೀಲಿಸಿ.
- ಕೊನೆಯಲ್ಲಿ ಪ್ರಿಂಟ್ ತೆಗೆದುಕೊಳ್ಳಿ.
Medicine : ಮಾತ್ರೆ ತೆಗೆದುಕೊಂಡ ನಂತರ ಖಂಡಿತ ಈ ತಪ್ಪುಗಳನ್ನು ಮಾಡಬೇಡಿ ; ಮಾಡಿದರೆ ಜೀವಕ್ಕೆ ಅಪಾಯ.!
ಪ್ರಮುಖ ದಿನಾಂಕಗಳು (Important Dates) :
- ಅರ್ಜಿ ಆರಂಭ ದಿನಾಂಕ: 16 ಆಗಸ್ಟ್ 2025
- ಅರ್ಜಿ ಕೊನೆಯ ದಿನಾಂಕ: 08 ಸೆಪ್ಟೆಂಬರ್ 2025
ಪ್ರಮುಖ ಲಿಂಕ್‌ಗಳು (Important Links) :
- ಅಧಿಕೃತ ಅಧಿಸೂಚನೆ PDF – [AE & AAO] : ಇಲ್ಲಿ ಕ್ಲಿಕ್ ಮಾಡಿ
- ಅಧಿಕೃತ ಅಧಿಸೂಚನೆ PDF – [Assistant Administrative Officers] : ಇಲ್ಲಿ ಕ್ಲಿಕ್ ಮಾಡಿ
- ಅರ್ಜಿ ಸಲ್ಲಿಸಲು ಲಿಂಕ್ : ಇಲ್ಲಿ ಕ್ಲಿಕ್ ಮಾಡಿ
- ಅಧಿಕೃತ ವೆಬ್‌ಸೈಟ್ ಲಿಂಕ್ : https://licindia.in/
Disclaimer : The above given information is available On online, candidates should check it properly before applying. This is for information only.






