ಜನಸ್ಪಂದನ ನ್ಯೂಸ್, ಬೆಳಗಾವಿ : ಬೆಳಗಾವಿ ನಗರದಲ್ಲಿ ನಿಯಮ ಉಲ್ಲಂಘನೆ ನಡೆಸುತ್ತಿದ್ದ ಬ್ಯೂಟಿ ಪಾರ್ಲರ್ (beauty-parlour) ಗಳ ವಿರುದ್ಧ ಆರೋಗ್ಯ ಇಲಾಖೆ ಬೃಹತ್ ದಾಳಿ ನಡೆಸಿದ್ದು, ಶುಕ್ರವಾರ (ಆ.15) ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರ ನಿರ್ದೇಶನದಂತೆ, ಡಿಎಚ್‌ಒ ಡಾ. ಈಶ್ವರ ಗಡಾದಿ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ 30 ಬ್ಯೂಟಿ ಪಾರ್ಲರ್‌ಗಳನ್ನು ಪರಿಶೀಲಿಸಲಾಯಿತು.
ದಾಳಿಯ ವೇಳೆ ಕೆಲವು ಪಾರ್ಲರ್ (beauty-parlour) ಗಳಲ್ಲಿ ಮೇಕಪ್, ಟ್ರೆಡಿಂಗ್, ವ್ಯಾಕ್ಸಿಂಗ್ ಸೇವೆಗಳ ಬದಲು ಕೂದಲು ಕಸಿ, ಚರ್ಮರೋಗ ಚಿಕಿತ್ಸೆ, ಮತ್ತು ಚರ್ಮದ ಕಾಂತಿ ಹೆಚ್ಚಿಸಲು ಹಾನಿಕಾರಕ ಕೆಮಿಕಲ್ ಹಾಗೂ ಸಿರೈಡ್‌ಗಳಂತಹ ಔಷಧಿಗಳನ್ನು ಬಳಸುತ್ತಿರುವುದು ಪತ್ತೆಯಾಯಿತು.
ಬೆಂಗಳೂರು : ನಿಗೂಢ blast ; 8 ವರ್ಷದ ಬಾಲಕನ ಸಾವು, ಹಲವರಿಗೆ ಗಾಯ.!
ಪರಿಶೀಲನೆಯ ನಂತರ, 10 ಪಾರ್ಲರ್ (beauty-parlour) ಗಳನ್ನು ತಕ್ಷಣ ಸೀಜ್ ಮಾಡಲಾಗಿದ್ದು, 20 ಪಾರ್ಲರ್‌ಗಳಿಗೆ ನೋಟಿಸ್ ನೀಡಲಾಗಿದೆ. ಅಧಿಕಾರಿಗಳ ಪ್ರಕಾರ, ಕೂದಲು ಕಸಿ ಹಾಗೂ ಚರ್ಮ ಚಿಕಿತ್ಸೆಯನ್ನು ಮಾತ್ರ ನುರಿತ ತಜ್ಞ ವೈದ್ಯರು ನಡೆಸಬೇಕು ಎಂಬ ನಿಯಮಗಳಿದ್ದರೂ, ಅನರ್ಹ ಸಿಬ್ಬಂದಿ ಈ ಸೇವೆಗಳನ್ನು ನೀಡುತ್ತಿರುವುದು ಗಂಭೀರ ಆರೋಗ್ಯ ಅಪಾಯವನ್ನು ಉಂಟುಮಾಡುತ್ತಿದೆ.
ಸಾರ್ವಜನಿಕರು ಕೂಡ, “ಅಮಾಯಕ ಮಹಿಳೆಯರು ಮತ್ತು ಯುವತಿಯರ ಮೇಲೆ ಪಾರ್ಲರ್ ಸಿಬ್ಬಂದಿ ಮೋಸ ಮಾಡುತ್ತಿದ್ದಾರೆ. ಹಾನಿಕಾರಕ ಕೆಮಿಕಲ್‌ಗಳಿಂದ ಬ್ಲೀಚಿಂಗ್ ಮತ್ತು ಫೇಸ್‌ವಾಶ್ ಮಾಡುವುದರಿಂದ ಚರ್ಮರೋಗ ತಗುಲುವ ಸಾಧ್ಯತೆ ಹೆಚ್ಚು” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
Student : ಕೇವಲ 2 ಅಂಕ ಕಡಿಮೆ ನೀಡಿದಕ್ಕೆ ವಿದ್ಯಾರ್ಥಿಯಿಂದ ಶಿಕ್ಷಕಿಗೆ ಹಲ್ಲೆ ; ಸಿಸಿಟಿವಿ ದೃಶ್ಯ ವೈರಲ್!”
ಜಿಲ್ಲಾಧಿಕಾರಿ ಅವರ ನಿರ್ಧಾರಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಅವರು, “ನಿಯಮ ಉಲ್ಲಂಘಿಸಿದ ಪಾರ್ಲರ್ (beauty-parlour) ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಸ್ಪಷ್ಟಪಡಿಸಿದ್ದಾರೆ.
“ಸಾರ್ವಜನಿಕರೂ ಪಾರ್ಲರ್ ಆಯ್ಕೆ ಮಾಡುವಾಗ ಎಚ್ಚರಿಕೆ ವಹಿಸಬೇಕು. ಇಲ್ಲವಾದರೆ ಹಣ ಕಳೆದುಕೊಳ್ಳುವುದರ ಜೊತೆಗೆ, ಚರ್ಮದ ಆರೋಗ್ಯಕ್ಕೂ ಹಾನಿಯಾಗುವ ಸಾಧ್ಯತೆ ಇದೆ” ಎಂದು ಅಧಿಕಾರಿಗಳ ಎಚ್ಚರಿಕೆ ನೀಡಿದ್ದಾರೆ.
ಪ್ರೇಯಸಿಯ ಮನೆಯಲ್ಲಿ ಅರೆನಗ್ನನಾಗಿ ಸಿಕ್ಕಿಬಿದ್ದ Man : ತಪ್ಪಿಸಿಕೊಳ್ಳಲು ಹರಸಾಹಸ ; ವಿಡಿಯೋ ವೈರಲ್.!
ಜನಸ್ಪಂದನ ನ್ಯೂಸ್, ಡೆಸ್ಕ್ : ವ್ಯಕ್ತಿ (A Man) ಯೋರ್ವ ಪ್ರೇಯಸಿಯ ಮನೆಯಲ್ಲಿ ಅರೆನಗ್ನನಾಗಿ ಸಿಕ್ಕಿಬಿದ್ದಿದ್ದು, ಅಲ್ಲಿಂದ ತಪ್ಪಿಸಕೊಳ್ಳಲು ಹರ ಸಾಹಸ ಪಡುತ್ತಿರುವ ವಿಡಿಯೋ ಒಂದು ಸದ್ಯ ಸಾಮಾಜಿಕ ಜಾಲತಣದಲ್ಲಿ ವೈರಲ್ ಆಗುತ್ತಿದೆ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಒಂದು ಹಾಸ್ಯಾಸ್ಪದ ಘಟನೆಗೆ ಸಂಬಂಧಿಸಿದ ವಿಡಿಯೋ ವೇಗವಾಗಿ ಹರಿದಾಡುತ್ತಿದೆ. ಇದರಲ್ಲಿ ವ್ಯಕ್ತಿ (A Man) ಯೊಬ್ಬನು ಅರೆನಗ್ನ ಸ್ಥಿತಿಯಲ್ಲಿ ಕಟ್ಟಡದಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವ ದೃಶ್ಯಗಳು ದಾಖಲಾಗಿವೆ.
Yallamma : ಸವದತ್ತಿ ಯಲ್ಲಮ್ಮದೇವಿ ಗುಡಿಗೆ ನುಗ್ಗಿದ್ದ ಮಳೆನೀರು ; ಹುಂಡಿಯಲ್ಲಿದ್ದ ತೊಯ್ದ ನೋಟುಗಳನ್ನು ಒಣ ಹಾಕಿದ ಸಿಬ್ಬಂದಿ.!
ಮಾಹಿತಿಯ ಪ್ರಕಾರ, ಆ ವ್ಯಕ್ತಿ (A Man) ತನ್ನ ಪರಿಚಿತ ಮಹಿಳೆಯನ್ನು ಭೇಟಿ ಮಾಡಲು ಆಕೆಯ ಮನೆಯಲ್ಲಿ ಹೋದಾಗ, ಆಕೆಯ ಗಂಡ ಅಕಸ್ಮಾತ್ ಮನೆಗೆ ಬಂದಿದ್ದಾನೆ. ಗಂಡನನ್ನು ಕಂಡ ವ್ಯಕ್ತಿ ತಡಬಡಾಯಿಸಿಕೊಂಡು ಅಲ್ಲಿಂದ ತಪ್ಪಿಸಿಕೊಳ್ಳಲು ಹರಸಾಹಸ ಪಟ್ಟುಕೊಂಡಿದ್ದಾನೆ. ಈ ಸಂದರ್ಭದಲ್ಲಿ, ಮಹಿಳೆಯ ಗಂಡನು ಆತನ ಬೆನ್ನಟ್ಟುತ್ತಿರುವುದೂ ವಿಡಿಯೋದಲ್ಲಿ ಸ್ಪಷ್ಟವಾಗಿದೆ.
ಕಟ್ಟಡದ ಹೊರಗೆ ಜಮಾಯಿಸಿದ ಕೆಲವರು ಈ ಘಟನೆಯನ್ನು ತಮ್ಮ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ಆ ದೃಶ್ಯಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ಘಟನೆ ಕೆಲಕಾಲ ಸ್ಥಳೀಯರಲ್ಲಿ ಚರ್ಚೆಗೆ ಗ್ರಾಸವಾಗಿತ್ತು.
Astrology : ಹೇಗಿದೆ ಗೊತ್ತಾ.? ಅಗಷ್ಟ 12 ರ ದ್ವಾದಶ ರಾಶಿಗಳ ಫಲಾಫಲ.!
ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಕುರಿತು ಹಲವರು ಪ್ರತಿಕ್ರಿಯಿಸಿದ್ದು, “ಯಾವುದೇ ಕೆಲಸವನ್ನು ಮುಚ್ಚುಮರೆ ಮಾಡಿ ಮಾಡಿದರೆ, ಒಂದು ದಿನ ಸತ್ಯ ಹೊರಬರುತ್ತದೆ” ಎಂಬುದಾಗಿ ಟೀಕೆ ಮಾಡಿದ್ದಾರೆ.
ಪ್ರೇಯಸಿಯ ಮನೆಯಲ್ಲಿ ಅರೆನಗ್ನನಾಗಿ ಸಿಕ್ಕಿಬಿದ್ದ ವ್ಯಕ್ತಿ (Man) ಯ ವಿಡಿಯೋ :
गर्लफ्रेंड से मिलने पंहुचा बॉयफ्रेंड अचानक पति आ गया और पूरा खेल बिगड़ गया!
अर्ध नग्न अवस्था में बालकनी कूद भगा आशिक लोगो ने बनाये विडियो I एरिया मे हड़कंप मच गया I pic.twitter.com/ghOLa4QBmu
— Gajanan Lokhande (@lok62678) August 12, 2025
Disclaimer : ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತವಿರುವ ವಿಡಿಯೋ/ಪೋಸ್ಟ್‌ನ್ನು ಆಧರಿಸಿದೆ. ಈ ಬಗ್ಗೆ ಜನಸ್ಪಂದನ ನ್ಯೂಸ್ ಯಾವುದೇ ರೀತಿಯ ಹಕ್ಕು ಮತ್ತು ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.