ಜನಸ್ಪಂದನ ನ್ಯೂಸ್, ಬೆಂಗಳೂರು : ಪೊಲೀಸ್ ಅಧಿಕಾರಿಯೊಬ್ಬರು (police officer) ರೈತನಿಂದ ಲಂಚ (bribe) ಸ್ವೀಕರಿಸುತ್ತಿದ್ದ ವೇಳೆ ಸಿಕ್ಕಿಬಿದ್ದ ಘಟನೆ ನಡೆದಿದೆ.
ಸಬ್ ಇನ್ಸ್ಪೆಕ್ಟರ್ ಕೃಷ್ಣಕುಮಾರ್ ಎಂಬುವವರು ರೈತ (Farmer) ಕೋಟಯ್ಯ ಕ್ಯಾಂಪ್ನಾಗರಾಜು ಎಂಬುವವರ ವಿವಾದಕ್ಕೆ ಸಂಬಂಧಿಸಿದಂತೆ 50 ಸಾವಿರ ರೂ. ಲಂಚಕ್ಕೆ ಬೇಡಿಕೆ (demand) ಇಟ್ಟಿದ್ದರು ಎಂದು ವರದಿಯಾಗಿದೆ.
ತೆಲಂಗಾಣದ ನಿಜಾಮಾಬಾದ್ (Nizamabad, Telangana) ಜಿಲ್ಲೆಯಲ್ಲಿ ಎಸ್ಐ ಒಬ್ಬರು ಸ್ಥಳೀಯ ರೈತನಿಂದ ಲಂಚ ಪಡೆದ ಆರೋಪದ ಮೇಲೆ ACB ವಶಕ್ಕೆ ತೆಗೆದುಕೊಂಡಿದೆ ಎಂದು ವರದಿಯಿಂದ ತಿಳಿದು ಬಂದಿದೆ.
50 ಸಾವಿರ ರೂಪಾಯಿಗಳಿಗೆ ಬೇಡಿಕೆ ಇಟ್ಟಿದ್ದ ಸಬ್ ಇನ್ಸ್ಪೆಕ್ಟರ್ ಬಳಿಕ 20 ಸಾವಿರ ರೂ.ಗೆ ಒಪ್ಪಿಕೊಂಡಿದ್ದರು. ರೈತ ನಾಗರಾಜು ಈ ಕುರಿತು ಭ್ರಷ್ಟಾಚಾರ ನಿಗ್ರಹ ದಳಕ್ಕೆ (Anti-Corruption Bureau) ದೂರು ನೀಡಿದ್ದರು.
ದೂರಿನ ಹಿನ್ನೆಲೆ ಫೀಲ್ಡ್ ಗಿಳಿದ ಎಸಿಬಿ ಅಧಿಕಾರಿಗಳು ಲಂಚ ಪಡೆಯುತ್ತಿದ್ದ ವೇಳೆ ರೆಡ್ ಹ್ಯಾಂಡ್ಆಗಿ ಎಸ್ಐನ್ನು ವಶಕ್ಕೆ (custody) ಪಡೆದರು ಎಂದು ವರದಿ ತಿಳಿಸಿದೆ