Wednesday, September 17, 2025

Janaspandhan News

HomeAstrologyAstrology : ಹೇಗಿದೆ ಗೊತ್ತಾ.? ಜುಲೈ 28 ರ ದ್ವಾದಶ ರಾಶಿಗಳ ಫಲಾಫಲ.!
spot_img
spot_img
spot_img

Astrology : ಹೇಗಿದೆ ಗೊತ್ತಾ.? ಜುಲೈ 28 ರ ದ್ವಾದಶ ರಾಶಿಗಳ ಫಲಾಫಲ.!

- Advertisement -

ಜನಸ್ಪಂದನ ನ್ಯೂಸ್, ಜೋತಿಷ್ಯ (Astrology) : 2025 ಜುಲೈ 28, ಸೋಮವಾರ ದಿನವಾದ ಇಂದು, ನಿಮ್ಮ ದಿನವು ಹೇಗಿರಲಿದೆ..? ಇಂದು ಯಾವ ರಾಶಿಯವರಿಗೆ ಶುಭ.? ಯಾವ ರಾಶಿಯವರು ಎಚ್ಚರಿಕೆ.? ಇಂದಿನ ದ್ವಾದಶ ರಾಶಿಗಳ ಫಲಾಫಲ (Astrology) ಹೇಗಿದೆ ನೋಡಿ.

ದೈನಂದಿನ ದ್ವಾದಶ ರಾಶಿಗಳ ಫಲಾಫಲ (ಜಾತಕ) ದ ಮೂಲಕ ಭವಿಷ್ಯ (Astrology) ವನ್ನು ಊಹಿಸುವುದು ಪ್ರಾಚೀನ ಕಾಲದಿಂದಲೂ ಇಂದಿನವರೆಗೆ ಪ್ರಸ್ತುತವಾಗಿದೆ. ಗ್ರಹಗಳ ಸ್ಥಾನಗಳು, ನಕ್ಷತ್ರಗಳು, ತಿಥಿ ಮತ್ತು ಇತರ ಜ್ಯೋತಿಷ್ಯ (Astrology) ಅಂಶಗಳ ಆಧಾರದ ಮೇಲೆ ರಾಶಿಗಳ ಫಲಾಫಲ (ಜಾತಕ) ವು ವ್ಯಕ್ತಿಯ ಭವಿಷ್ಯ (Astrology) ವನ್ನು ಮುನ್ಸೂಚಿಸುತ್ತದೆ.

ಇದನ್ನು ಓದಿ : Plane AA3023 : ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನದಲ್ಲಿ ಬೆಂಕಿ : ವಿಡಿಯೋ.!
ಇಂದಿನ ದ್ವಾದಶ ರಾಶಿಗಳ ಫಲಾಫಲ (Astrology) ಹೇಗಿದೆ :

results of the twelve zodiac signs

*ಮೇಷ ರಾಶಿ*

ಇಂದು ನಿಮಗೆ ಧನಾತ್ಮಕ ಫಲಿತಾಂಶಗಳು ಬರುತ್ತದೆ. ಇಂದು ವಿದ್ಯಾರ್ಥಿಗಳಿಗೆ ಉತ್ತಮ ದಿನವಾಗಿದೆ ಏಕೆಂದರೆ ಅವರು ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸಿದ್ದರೆ ಉತ್ತಮ ಫಲಿತಾಂಶಗಳು ಬರಬಹುದು. ನಿಮ್ಮ ಒಡಹುಟ್ಟಿದವರಿಂದ ಸಹಾಯ ಪಡೆಯುವಿರಿ. ಇಂದು ಸೃಜನಾತ್ಮಕ ಕೆಲಸದ ಕಡೆಗೆ ನಿಮ್ಮ ಆಸಕ್ತಿಯು ಮತ್ತಷ್ಟು ಹೆಚ್ಚಾಗುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮ ಸಲಹೆಗಳನ್ನು ಗೌರವಿಸಲಾಗುತ್ತದೆ.

*ವೃಷಭ ರಾಶಿ*

ಇಂದು ನೀವು ಕೆಲಸದ ಕ್ಷೇತ್ರದಲ್ಲಿ ಅಪೇಕ್ಷಿತ ಫಲಿತಾಂಶಗಳನ್ನು ಕಾಣುತ್ತಿರ. ಕೆಲಸದ ಸ್ಥಳದಲ್ಲಿ ನೀವು ಯಾವುದೇ ಜವಾಬ್ದಾರಿಯನ್ನು ಶ್ರದ್ಧೆಯಿಂದ ನಿರ್ವಹಿಸಬೇಕಾಗುತ್ತದೆ. ನಿಮ್ಮ ಸ್ನೇಹಿತರೊಂದಿಗೆ ಹೊರಗಡೆ ಹೋಗಬಹುದು ಹಾಗು ನೀವು ಕೆಲವು ವಿಶೇಷ ವಿಷಯಗಳನ್ನು ತಿಳಿಯುತ್ತಿರ. ಕುಟುಂಬದ ಸದಸ್ಯರಿಗೆ ಸಹಾಯ ಮಾಡಲು ನಿಮಗೆ ಅವಕಾಶ ಸಿಕ್ಕರೆ ಅದನ್ನು ಮಾಡಿ. ಅಧ್ಯಯನ ಮತ್ತು ಆಧ್ಯಾತ್ಮಿಕತೆಯಲ್ಲಿ ನಿಮ್ಮ ಆಸಕ್ತಿಯನ್ನು ಹೆಚ್ಚಿಕೊಳ್ಳಿ, ಸಾಮಾಜಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿರಿ.

*ಮಿಥುನ ರಾಶಿ*

ಎಲ್ಲಾ ವಿಚಾರಕ್ಕೂ ಪರರ ಸಲಹೆಯನ್ನು ಕೇಳುತ್ತಾ ಕೂತರೆ ಉತ್ತಮ ಅವಕಾಶ ತಪ್ಪಿ ಹೋಗುವುದು. ಅಂಜಿಕೆ, ಅಧೈರ್ಯ ಬದಿಗಿಟ್ಟು ಕಾರ್ಯವನ್ನು ಮುನ್ನುಗ್ಗಿ ಮಾಡಿ. ದೈವಬಲವಿದೆ. ನೀವು ಯಶಸ್ಸನ್ನು ಹೊಂದುವಿರಿ. ನಿಮ್ಮ ಬಡ್ತಿಯ ಬಗ್ಗೆ ಶುಭ ಸಮಾಚಾರ ಕೇಳುವ ಅವಕಾಶಗಳು ಹೆಚ್ಚಿವೆ.

*ಕಟಕ ರಾಶಿ*

ಹಣಕಾಸಿನ ವ್ಯವಹಾರದ ನಿಮ್ಮ ನಿರ್ವಹಣಾ ಸಾಮರ್ಥ್ಯ‌ವು ನಿಮಗೆ ಹೆಚ್ಚಿನ ಪ್ರಶಂಸೆಯನ್ನು ತಂದುಕೊಡುವುದು. ನಿಮ್ಮಂತಹ ಮನಸ್ಥಿತಿಯುಳ್ಳವರೇ ದೊಡ್ಡ ದೊಡ್ಡ ಕಾರ್ಯಗಳನ್ನು ಲೀಲಾಜಾಲವಾಗಿ ಮಾಡಿ ಮುಗಿಸುವಂತವರು. ಈ ದಿನ ನಿಮ್ಮ ಆಹಾರದ ಕಡೆ ಗಮನವಿರಲಿ.

ಇದನ್ನು ಓದಿ : RRB : ಭಾರತೀಯ ರೈಲ್ವೆ ಇಲಾಖೆಯಲ್ಲಿ ಸ್ಟೇಷನ್ ಮಾಸ್ಟರ್ ಸೇರಿ 30,307 ಹುದ್ದೆಗಳಿಗೆ ಅರ್ಜಿ ಆಹ್ವಾನ.!
*ಸಿಂಹ ರಾಶಿ*

ಬಾಳಸಂಗಾತಿಯ ಜೊತೆಯಲ್ಲಿನ ಒಂದು ಸುತ್ತಾಟ ನಿಮ್ಮ ಮನಸ್ಸಿನ ಭಾವನೆಗಳು ಬದಲಾಗಲು ಸಹಕಾರಿಯಾಗುವುದು. ನಿಮ್ಮಲ್ಲಿ ವೈವಿಧ್ಯಮಯ ಚೈತನ್ಯ ಮೂಡಿ ಬರಲಿದೆ. ಹಣಕಾಸಿನ ಸ್ಥಿತಿ ಈ ದಿನ ಉತ್ತಮವಾಗಿರುತ್ತದೆ. ಪ್ರಯಾಣದಲ್ಲಿ ಜಾಗ್ರತೆ.

*ಕನ್ಯಾ ರಾಶಿ*

ನಿಮ್ಮ ಮೇಲಧಿಕಾರಿಗಳ ಇಲ್ಲವೆ ಮನೆಯ ಹಿರಿಯರ ಒಲುಮೆ ಹೇಗೆ ಗಳಿಸಿಕೊಳ್ಳಬೇಕೆಂದು ನಿಮಗೆ ಪ್ರತ್ಯೇಕವಾಗಿ ಹೇಳಿಕೊಡುವ ಅವಶ್ಯಕತೆಯಿಲ್ಲ. ಆದಾಗ್ಯೂ ನಿಮ್ಮ ನಡತೆಯು ಹೆಚ್ಚು ಪ್ರಶಂಸೆಗೆ ಒಳಪಡುವುದು. ಈ ದಿನ ನಿಮ್ಮ ಆರೋಗ್ಯದ ಕಡೆ ಗಮನ ಹರಿಸುವುದು ಉತ್ತಮ.

*ತುಲಾ ರಾಶಿ*

ಒಂದು ದೊಡ್ಡದಾದ ಯೋಜನೆಯೊಂದು ನಿಮ್ಮ ಬುದ್ಧಿ ಕೌಶಲ್ಯಕ್ಕೆ ಎದುರಾಗುವುದು. ದೈವಕೃಪೆಯಿಂದ ಮತ್ತು ಮೇಲಧಿಕಾರಿಗಳ ಸಹಾಯದಿಂದ ಆ ಕಾರ್ಯದ ಸೂಕ್ಷಮತೆಯನ್ನು ನೀವು ಕಂಡು ಹಿಡಿಯುವಿರಿ. ಇದರಿಂದ ಪ್ರಶಂಸೆ ಸಿಗುವುದು. ವ್ಯವಹಾರದಲ್ಲಿ ಪಾಲುದಾರರು ಹಾಗು ಸಹೋದ್ಯೋಗಿಗಳ ಕಡೆ ಗಮನವಿರಲಿ.

*ವೃಶ್ಚಿಕ ರಾಶಿ*

ಇಂದು ನಿಮಗೆ ಆರ್ಥಿಕವಾಗಿ ಉತ್ತಮ ದಿನವಾಗಲಿದೆ. ಕೆಲವು ಸ್ಥಗಿತಗೊಂಡ ಕೆಲಸವನ್ನು ಪೂರ್ಣಗೊಳಿಸುವಲ್ಲಿ ಮಿತ್ರರ ಸಹಾಯದಿಂದ ನಿಮ್ಮ ಕೆಲಸವು ಪೂರ್ಣಗೊಳ್ಳುತ್ತದೆ ಮತ್ತು ನೀವು ಯಾವುದೇ ಹೂಡಿಕೆಯನ್ನು ಮಾಡಿದ್ದರೆ ಅದರಲ್ಲಿ ನಿಮಗೆ ಇಂದು ವಿಶೇಷ ಲಾಭವಾಗುವುದು, ವ್ಯಾಪಾರ ಮಾಡುವ ಜನರು ಇತರ ಕೆಲವು ಜನರೊಂದಿಗೆ ಒಪ್ಪಂದಗಳನ್ನು ಮಾಡುವಾಗ ಜಾಗ್ರತೆ. ಹಣದ ಲಾಭದ ಪರಿಸ್ಥಿತಿಯು ಉತ್ತಮವಾಗಿ ಕಾಣುತ್ತಿದೆ, ಆದರೆ ಯಾರಿಗೂ ಸಾಲ ನೀಡುವುದು ಬೇಡ.

ಇದನ್ನು ಓದಿ : Schoolನ 4ನೇ ಮಹಡಿಯಿಂದ ಹಾರಿ 10ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ.!
*ಧನುಸ್ಸು ರಾಶಿ*

ಇಂದು ನಿಮಗೆ ಸವಾಲಿನ ದಿನವಾಗಿದೆ, ಹಣಕಾಸಿ ವಿಚಾರವಾಗಿ ನಷ್ಟ ಆಗುವುದು. ಉದ್ಯೋಗ ಅರಸಿ ಅಲೆದಾಡುವ ಜನರಿಗೆ ಉತ್ತಮ ಅವಕಾಶ ಬರಬಹುದು. ಕಷ್ಟಪಟ್ಟು ಕೆಲಸ ಮಾಡುವ ಮೂಲಕ ನೀವು ಅಧಿಕಾರಿಗಳ ಕಣ್ಮಣಿಯಾಗುತ್ತೀರಿ. ಇಂದು ನಿಮ್ಮ ಹಣಕಾಸಿನ ವ್ಯವಹಾರದಲ್ಲಿ ಜಾಗರೂಕರಾಗಿರಬೇಕು ಮತ್ತು ಪ್ರತಿಕೂಲ ಪರಿಸ್ಥಿತಿಯಲ್ಲಿ ಸಹ ತಾಳ್ಮೆಯಿಂದಿರಬೇಕು, ಇಲ್ಲದಿದ್ದರೆ ನಡೆಯುವ ಸಮಸ್ಯೆಗೆ ನೀವು ಕಾರಣರಾಗಬೇಕಾಗಬಹುದು.

*ಮಕರ ರಾಶಿ*

ಜೀವನದಲ್ಲಿ ಕಷ್ಟ ಸುಖಗಳು ಬೆಳಕು ಕತ್ತಲೆಯಂತೆ. ಕತ್ತಲು ಕಳೆದು ಬೆಳಕು ಹರಿವಂತೆ ಸದ್ಯದ ಕಷ್ಟಗಳು ಕರಗಿ ಬೆಳಕೆಂಬ ಸುಖದ ಜೀವನವು ನಿಮ್ಮ ಪಾಲಿಗಿದೆ ಚಿಂತಿಸದಿರಿ. ಈ ದಿನ ನಿಮ್ಮ ಸ್ವ ಕುಟುಂಬದವರೊಂದಿಗೆ ಸಂತೋಷದಿಂದ ಕಾಲ ಕಳೆಯುವಿರಿ.

*ಕುಂಭ ರಾಶಿ*

ನಿಮಗೆ ಇಂದು ಮಿಶ್ರ ದಿನವಾಗಲಿದೆ. ಉದ್ಯೋಗವನ್ನು ಹುಡುಕುತ್ತಿರುವ ಜನರಿಗೆ ಉತ್ತಮ ಉದ್ಯೋಗವನ್ನು ಪಡೆಯಬಹುದು. ನಿಮ್ಮ ಶ್ರಮದ ಫಲವನ್ನು ನೀವು ಇಂದು ಪಡೆಯುತ್ತಿರ ಮತ್ತು ನೀವು ದೀರ್ಘಕಾಲದವರೆಗೆ ಯಾವುದೇ ಸಮಸ್ಯೆಯಿಂದ ಬಳಲುತ್ತಿದ್ದರೆ ಇಂದು ನೀವು ಅದರಿಂದ ಮುಕ್ತರಾಗುತ್ತೀರಿ. ಈ ದಿನ ಯಾವುದೇ ಕೋರ್ಟು ಕಚೇರಿ ಕೆಲಸಗಳಿಗೆ ಹೋಗದಿರಿ ನಿಮಗೆ ದಕ್ಕಬೇಕಾದ ಫಲ ದಕ್ಕದೆ ಹೋಗಬಹುದು. ಈ ದಿನ ತಂದೆಯೊಂದಿಗೆ ಯಾವುದೇ ರೀತಿಯ ವಾದವನ್ನು ಮಾಡಬೇಡಿ.

*ಮೀನ ರಾಶಿ*

ನಿಮ್ಮ ಕೋಪತಾಪಗಳನ್ನು ಬದಿಗಿಟ್ಟು ಅನ್ಯರೊಡನೆ ಬೆರೆತಲ್ಲಿ ಅತ್ಯಂತ ಸಂತಸದ ದಿನವನ್ನಾಗಿಸಿಕೊಳ್ಳಬಹುದು ಮತ್ತು ಹಮ್ಮಿಕೊಂಡ ಕಾರ್ಯಗಳಲ್ಲಿ ಯಶಸ್ಸನ್ನು ಹೊಂದಲು ಮನಸ್ಸಿನ ಶಾಂತತೆಯನ್ನು ಕಾಯ್ದುಕೊಳ್ಳವುದು ಒಳ್ಳೆಯದು. ಅನ್ಯ ವಿಚಾರಗಳ ಕಡೆ ಗಮನ ಹರಿಸುವದು ಬೇಡ.

Astrology

Disclaimer : ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು ಮತ್ತು ಮಾಹಿತಿಗಳನ್ನು ಆಧರಿಸಿ ಈ ಲೇಖನವನ್ನು ಬರೆಯಲಾಗಿದೆ. ಹೀಗಾಗಿ ಜನಸ್ಪಂದನ ನ್ಯೂಸ್‌ಗೂ, ಈ ಲೇಖನಕ್ಕೂ (Astrology) ಸಂಬಂಧವಿಲ್ಲ ಮತ್ತು ಇದಕ್ಕೆ ನಾವು ಜವಾಬ್ದಾರಿಯಲ್ಲ.

- Advertisement -
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments