Tuesday, September 16, 2025

Janaspandhan News

HomeJobHAL ನಲ್ಲಿ 588 ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ನೇಮಕಾತಿ ; ಈಗಲೇ ಅರ್ಜಿ ಹಾಕಿ!
spot_img
spot_img
spot_img

HAL ನಲ್ಲಿ 588 ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ನೇಮಕಾತಿ ; ಈಗಲೇ ಅರ್ಜಿ ಹಾಕಿ!

- Advertisement -

ಜನಸ್ಪಂದನ ನ್ಯೂಸ್‌, ನೌಕರಿ : ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ತನ್ನ ವಿವಿಧ ಘಟಕಗಳಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅಭ್ಯರ್ಥಿಗಳು HAL ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ (Online) ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ HAL ವೆಬ್‌ಸೈಟ್‌ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.

ಇದನ್ನು ಓದಿ : ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ambulance ನಲ್ಲಿ ಯುವತಿಯ ಮೇಲೆ ದೌರ್ಜನ್ಯ ; ಇಬ್ಬರ ಬಂಧನ.!
ಹುದ್ದೆಗಳ ಕುರಿತಾದ ಮಾಹಿತಿ :
  • ವಿಭಾಗದ ಹೆಸರು : ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL).
  • ಒಟ್ಟು ಹುದ್ದೆಗಳ ಸಂಖ್ಯೆ : 588.
  • ಹುದ್ದೆಗಳ ಹೆಸರು : ಅಪ್ರೆಂಟಿಸ್ (Apprentice).
  • ಉದ್ಯೋಗ ಸ್ಥಳ : ಮಹಾರಾಷ್ಟ್ರ.
  • ಅರ್ಜಿ ಸಲ್ಲಿಸುವ ವಿಧಾನ : ಆನ್‌ಲೈನ್‌.
ಇದನ್ನು ಓದಿ : heart-attack ವಾದ ಕೂಡಲೇ ತಕ್ಷಣದ ಪರಿಹಾರಕ್ಕೆ ನಾಲಿಗೆ ಮೇಲೆ ಈ ಎಲೆಯ ರಸ ಹಿಂಡಿ.!
HAL ಹುದ್ದೆಗಳ ವಿಭಾಗವಾರು ವಿವರ :
  • ಪೇಂಟರ್ (ಸಾಮಾನ್ಯ) : 07
  • ಆಪರೇಟರ್ ಸುಧಾರಿತ ಯಂತ್ರ ಪರಿಕರಗಳು : 03
  • ಬಡಗಿ : 04
  • ಶೀಟ್ ಮೆಟಲ್ ಕೆಲಸಗಾರ : 06
  • COPA : 50
  • ವೆಲ್ಡರ್ : 10
  • ಸ್ಟೆನೋಗ್ರಾಫರ್ (ಇಂಗ್ಲಿಷ್) : 03
  • ಆಹಾರ ಉತ್ಪಾದನೆ : 01
  • ವಿವಿಧ ಎಂಜಿನಿಯರಿಂಗ್ ವಿಭಾಗಗಳು (AE, CE, ME, ECE, etc.) : 183
  • ಫಿಟ್ಟರ್ : 128
  • ಟೂಲ್ & ಡೈಮೇಕರ್ : 08
  • ಟರ್ನರ್:  20
  • ಯಂತ್ರಶಿಲ್ಪಿ : 24
  • ಎಲೆಕ್ಟ್ರಿಷಿಯನ್ : 27
  • ಡ್ರಾಫ್ಟ್ಸ್‌ಮನ್, ಮೆಕ್ಯಾನಿಕ್, ಔಷಧಾಲಯ, ನರ್ಸಿಂಗ್, ಹೋಟೆಲ್ ನಿರ್ವಹಣೆ : ವಿವಿಧ ಹುದ್ದೆಗಳು
  • BA, B.Com, BBA, B.Sc ಪದವೀಧರರು : 83
ಶೈಕ್ಷಣಿಕ ಅರ್ಹತೆ :
  • ಪದವಿ, ಡಿಪ್ಲೋಮಾ, ಐಟಿಐ, ಬಿಇ/ಬಿ.ಟೆಕ್, ಬಿಎ, ಬಿಕಾಂ, ಬಿಬಿಎ, ಬಿಎಸ್ಸಿ, ನರ್ಸಿಂಗ್ ಅಥವಾ ಸಮಾನ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಇದನ್ನು ಓದಿ : heart-attack ವಾದ ಕೂಡಲೇ ತಕ್ಷಣದ ಪರಿಹಾರಕ್ಕೆ ನಾಲಿಗೆ ಮೇಲೆ ಈ ಎಲೆಯ ರಸ ಹಿಂಡಿ.!
ಆಯ್ಕೆ ವಿಧಾನ :
  • ಅರ್ಹತಾ ಪಟ್ಟಿ (Merit List).
  • ದಾಖಲೆ ಪರಿಶೀಲನೆ.
  • ಸಂದರ್ಶನ (ಅಗತ್ಯವಿದ್ದರೆ).
ಸ್ಟೈಪೆಂಡ್ (Stipend) :
  • ಎಂಜಿನಿಯರಿಂಗ್ ಅಪ್ರೆಂಟಿಸ್ : ರೂ.9,000/-
  • ಡಿಪ್ಲೋಮಾ ಅಪ್ರೆಂಟಿಸ್ : ರೂ.8,000/-
  • ತಾಂತ್ರಿಕೇತರ ಪದವೀಧರ ಅಪ್ರೆಂಟಿಸ್ : ರೂ.9,000/-
  • ಐಟಿಐ ಟ್ರೇಡ್ ಅಪ್ರೆಂಟಿಸ್ : ರೂ.7,700 ರಿಂದ ರೂ.8,050/-
ಇದನ್ನು ಓದಿ : Belagavi : “ನೀನು ಸತ್ತರೆ ಅಕ್ಕ ಚೆನ್ನಾಗಿರ್ತಾಳೆ” ಎಂಬ ಮಾತಿಗೆ ವ್ಯಕ್ತಿ ಆತ್ಮಹತ್ಯೆ.!
ಪ್ರಮುಖ ದಿನಾಂಕಗಳು :
  • ಅರ್ಜಿ ಪ್ರಾರಂಭ ದಿನಾಂಕ : 16 ಜುಲೈ 2025.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 02 ಸೆಪ್ಟೆಂಬರ್ 2025.
ಪ್ರಮುಖ ಲಿಂಕ್‌ಗಳು :

ಸಂಪಾದಕೀಯ : ಯಾವುದೇ ಅರ್ಜಿ ಶುಲ್ಕವಿಲ್ಲ. ಇದು ಸರ್ಕಾರದ ಪ್ರಸಿದ್ಧ ಉದ್ಯೋಗಾವಕಾಶವಾಗಿದೆ. ಅರ್ಜಿ ಸಲ್ಲಿಸಲು ವಿಳಂಬ ಮಾಡದೇ, ಅರ್ಹ ಅಭ್ಯರ್ಥಿಗಳು ತಕ್ಷಣವೇ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ.

Disclaimer : The above given information is available On online, candidates should check it properly before applying. This is for information only.


Schoolನ 4ನೇ ಮಹಡಿಯಿಂದ ಹಾರಿ 10ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ.!

School

ಜನಸ್ಪಂದನ ನ್ಯೂಸ್‌, ಡೆಸ್ಕ್‌ : 10ನೇ ತರಗತಿ ವಿದ್ಯಾರ್ಥಿನಿಯೋರ್ವಳು ಶಾಲೆ (School) ಯ 4 ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಧಾರಣ ಘಟನೆಯೊಂದು ನಡೆದಿರುವ ಬಗ್ಗೆ ವರದಿಯಾಗಿದೆ.

ಗುಜರಾತ್‌ನ ಅಹಮದಾಬಾದ್ ನವರಂಗಪುರ ಪ್ರದೇಶದಲ್ಲಿ ನಡೆದ ಈ ದುರ್ಘಟನೆಯು ಆತಂಕ ಸೃಷ್ಟಿಸಿದೆ. ಸ್ಥಳೀಯ ಸೋಮ್ ಲಲಿತ್ ಶಾಲೆ (School) ಯ 10ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ನೇರವಾಗಿ ಶಾಲೆಯ ನಾಲ್ಕನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇದನ್ನು ಓದಿ : Belagavi : “ನೀನು ಸತ್ತರೆ ಅಕ್ಕ ಚೆನ್ನಾಗಿರ್ತಾಳೆ” ಎಂಬ ಮಾತಿಗೆ ವ್ಯಕ್ತಿ ಆತ್ಮಹತ್ಯೆ.!

Schoolನ 4ನೇ ಮಹಡಿಯಿಂದ ಹಾರಿದ ಪರಿಣಾಮವಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮತ್ತು ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿಯನ್ನು ತಕ್ಷಣವೇ ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕೊಂಡೊಯ್ಯಲಾದರೂ, ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ ಎಂದು ಹೇಳಲಾಗುತ್ತಿದೆ.

ವಿದ್ಯಾರ್ಥಿನಿ ಶಾಲೆ (School) ಯಲ್ಲಿ ಮಧ್ಯಾಹ್ನದ ಲಂಚ್ ಬ್ರೇಕ್ ಸಮಯದಲ್ಲಿ ಆವರಣದಲ್ಲಿ ಸುತ್ತಾಡುತ್ತಿದ್ದಾಳೆ. ತುಂಬಾ ಸಾಮಾನ್ಯವಾಗಿ ಶಾಲೆಯ 4ನೇ ಅಂತಸ್ತಿನಲ್ಲಿ ನಡೆದುಕೊಂಡು ಬಂದಿದ್ದ ಈ ವಿದ್ಯಾರ್ಥಿನಿ ಕೈಯಲ್ಲಿ ಕೀಚೈನ್ ತಿರುಗಿಸುತ್ತಾ ಬಾಲ್ಕನಿ ಬಳಿ ಬಂದು ನೋಡ ನೋಡುತ್ತಲೇ ಕಬ್ಬಿಣದ ತಡೆಗೋಡೆ ಮೇಲೇರಿ ಕೆಳಗೆ ಹಾರಿದ್ದಾಳೆ.

ಇದನ್ನು ಓದಿ : Wife : ಪತಿಯ ಹತ್ಯೆಗೈದು ಮೃತದೇಹ ಮನೆ ಮುಂದೆ ಎಸೆದ ಪತ್ನಿ.!

ವಿದ್ಯಾರ್ಥಿನಿ ಇದ್ದಕ್ಕಿದಂತೆ ಕೆಳಕ್ಕೆ ಜಿಗಿದಿರುವ ದೃಶ್ಯವು ಶಾಲೆ (School) ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ವೇಳೆ ಆಕೆಯ ಸ್ನೇಹಿತೆಯರು ತಡೆಹಿಡಿಯಲು ಯತ್ನಿಸಿದರೂ ಸಾಧ್ಯವಾಗಿಲ್ಲ.

ಜಿಗಿತದ ನಂತರ ತಕ್ಷಣವೇ ಶಾಲೆ (School) ಯೊಳಗೆ ವಿದ್ಯಾರ್ಥಿಗಳ ಕೂಗಾಟ ಜೋರಾದ ಪರಿಣಾಮ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ತೀವ್ರ ಗಾಯಗೊಂಡಿದ್ದ ಆಕೆಯನ್ನು ನಿಧಿ ಆಸ್ಪತ್ರೆಗೂ, ಬಳಿಕ ತಲ್ತೇಜ್‌ನ ಇನ್ನೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ದುರ್ದೈವಶಾತ್ ಚಿಕಿತ್ಸೆಯ ನಡುವೆ ವಿದ್ಯಾರ್ಥಿನಿ ಉಸಿರು ನಿಲ್ಲಿಸಿದ್ದಾಳೆ.

ತೀವ್ರ ಆಘಾತಗೊಂಡ ಕುಟುಂಬ : ಮುಂದುವರೆದ ತನಿಖೆ :

ಘಟನೆಯಿಂದ ಪಾಲಕರು ತೀವ್ರ ಆಘಾತಗೊಳಗಾಗಿದ್ದು, ಸದ್ಯಕ್ಕೆ ವಿದ್ಯರ್ಥಿನಿ ಯಾಕೆ ಹೀಗೆ ಮಾಡಿಕೊಂಡಳು ಎಂಬ ವಿಷಯದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಪ್ರಾಥಮಿಕ ತನಿಖೆಯಲ್ಲಿ ಯಾವುದೇ ದುಷ್ಕೃತ್ಯದ ಅಂಶಗಳು ಕಂಡುಬಂದಿಲ್ಲ, ಆದರೆ ಎಲ್ಲಾ ಆಯಾಮಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇದನ್ನು ಓದಿ : ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ambulance ನಲ್ಲಿ ಯುವತಿಯ ಮೇಲೆ ದೌರ್ಜನ್ಯ ; ಇಬ್ಬರ ಬಂಧನ.!

ಶಾಲಾ ಆಡಳಿತದ ಪ್ರಕಾರ, ವಿದ್ಯಾರ್ಥಿನಿ ಕಳೆದ ಐದು ವರ್ಷಗಳಿಂದ ಈ ಶಾಲೆಯಲ್ಲಿ ಓದುತ್ತಿದ್ದರು. ಅನಾರೋಗ್ಯದ ಹಿನ್ನಲೆಯಲ್ಲಿ ಒಂದು ತಿಂಗಳ ರಜೆಯ ನಂತರ, 10 ದಿನಗಳ ಹಿಂದೆಯೇ ಮತ್ತೆ ಶಾಲೆ (School) ಗೆ ಹಾಜರಾಗಿದ್ದಳು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನವರಂಗಪುರ ಪೊಲೀಸರು ಮೆಡಿಕೋ-ಲೀಗಲ್ ಕೇಸ್ ದಾಖಲಾಗಿದ್ದು, ಶಿಕ್ಷಕರು, ಸಿಬ್ಬಂದಿ ಹಾಗೂ ಕೆಲವು ವಿದ್ಯಾರ್ಥಿಗಳ ಹೇಳಿಕೆಗಳನ್ನು ಪಡೆದುಕೊಂಡಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ವಿಶ್ಲೇಷಣೆಗೂ ಒಳಪಡಿಸಲಾಗಿದೆ.

ವಿಡಿಯೋ :

Disclaimer : ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತವಿರುವ ವಿಡಿಯೋ/ಪೋಸ್ಟ್‌ನ್ನು ಆಧರಿಸಿದೆ. ಈ ಬಗ್ಗೆ ಜನಸ್ಪಂದನ ನ್ಯೂಸ್‌ ಯಾವುದೇ ರೀತಿಯ ಹಕ್ಕು ಮತ್ತು ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.

- Advertisement -
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments