Wednesday, September 17, 2025

Janaspandhan News

HomeHealth & FitnessKidney : "ಬೆಳಿಗ್ಗೆಯ ಈ 4 ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ : ಅವು ಮೂತ್ರಪಿಂಡದ ಸಮಸ್ಯೆಯ ಆರಂಭಿಕ...
spot_img
spot_img
spot_img

Kidney : “ಬೆಳಿಗ್ಗೆಯ ಈ 4 ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ : ಅವು ಮೂತ್ರಪಿಂಡದ ಸಮಸ್ಯೆಯ ಆರಂಭಿಕ ಸೂಚನೆಗಳಾಗಿರಬಹುದು.!”

- Advertisement -

ಜನಸ್ಪಂದನ ನ್ಯೂಸ್‌, ಅರೋಗ್ಯ : ಬೆಳಿಗ್ಗೆಯ ಈ 4 ಲಕ್ಷಣಗಳು ಕಂಡು ಬಂದರೆ ಅವುಗಳನ್ನು ನಿರ್ಲಕ್ಷಿಸಬೇಡಿ, ಏಕೆಂದರೆ ಅವು ಮೂತ್ರಪಿಂಡ (Kidney) ದ ಆರಂಭಿಕ ಸಮಸ್ಯೆಯ ಸೂಚನೆಗಳಾಗಿರಬಹುದು.! ಹಾಗಾದ್ರೆ ಆ ಲಕ್ಷಣಗಳಾವವು.? ಬನ್ನಿ ಅದರ ಬಗ್ಗೆ ತಿಳಿಯೋಣ.

ದೈನಂದಿನ ಜೀವನಶೈಲಿಯಲ್ಲಿ ನಾವು ಅತ್ಯಂತ ಕಡಿಮೆ ಗಮನ ಕೊಡುವ ಅಂಗಗಳಲ್ಲಿ ಮೂತ್ರಪಿಂಡ (Kidney) ವೂ ಒಂದು. ರಕ್ತವನ್ನು ಶುದ್ಧಗೊಳಿಸುವ ಮೂಲಕ ದೇಹದಲ್ಲಿನ ತ್ಯಾಜ್ಯ ವಸ್ತುಗಳನ್ನು ಹೊರಹಾಕುವ ಪ್ರಮುಖ ಕೆಲಸ ಮಾಡುವುದೇ ಈ ಅಂಗ. ಆದರೆ, ಮೊತ್ತಮೊದಲಿಗೆ ಗುರುತಿಸಲಾಗದ ಕೆಲವು ಸಣ್ಣ ಲಕ್ಷಣಗಳೇ ಮುಂದೆ ಜೀವಘಾತಕ ಸಮಸ್ಯೆಗೆ ಕಾರಣವಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಇದನ್ನು ಓದಿ : Indian-woman : 100% ಉಪಯೋಗ, 0% ವ್ಯರ್ಥ ; ಭಾರತೀಯ ನಾರಿಯ ತಂತ್ರಕ್ಕೆ ನೆಟ್ಟಿಗರು ಶಾಕ್.!

ಫೋರ್ಟಿಸ್ ಆಸ್ಪತ್ರೆ, ನೋಯ್ಡಾದ ಮೂತ್ರಪಿಂಡ (Kidney) ವಿಭಾಗದ ಹೆಚ್ಚುವರಿ ನಿರ್ದೇಶಕಿ ಡಾ. ಅನುಜಾ ಪೋರ್ವಾಲ್ ಅವರ ಅಭಿಪ್ರಾಯದಂತೆ, ಕೆಟ್ಟ ಆಹಾರ ನಿಯಮಗಳು ಮತ್ತು ಅನಾರೋಗ್ಯಕರ ಜೀವನಶೈಲಿಯು ಮೂತ್ರಪಿಂಡದ ಮೇಲೆ ಹೆಚ್ಚಾದ ಒತ್ತಡ ಉಂಟುಮಾಡುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಈ ಕಾಯಿಲೆಯು ಶೀಘ್ರಗತಿಯಲ್ಲಿ ಹೆಚ್ಚುತ್ತಿದೆ.

ಮೂತ್ರಪಿಂಡ (Kidney) ದ ಆರೋಗ್ಯದಲ್ಲಿ ಏರುಪೇರುಗಳಾಗುತ್ತಿರುವ ಸೂಚನೆಗಳೇನು?

ಅನುಜಾ ಪೋರ್ವಾಲ್ ಅವರ ಪ್ರಕಾರ, ಮೂತ್ರಪಿಂಡ (Kidney) ದ ದೋಷಗಳು ದೇಹದಲ್ಲಿ ಕೆಲ ಸ್ಪಷ್ಟವಾದ ಬದಲಾವಣೆಗಳ ಮೂಲಕ ಸೂಚನೆ ನೀಡುತ್ತವೆ. ಅವುಗಳಲ್ಲಿ ಪ್ರಮುಖವಾಗಿರುವವು:

1. ಬೆಳಿಗ್ಗೆಯ ದೌರ್ಬಲ್ಯ ಮತ್ತು ಆಯಾಸ :

ನೀವು ಬೆಳಿಗ್ಗೆ ಎದ್ದ ಕೂಡಲೆ ಅಸಹಜ ದಣಿವನ್ನು ಅನುಭವಿಸುತ್ತಿದ್ದರೆ, ಅದು ಮೂತ್ರಪಿಂಡದ ಕಾರ್ಯನಿರ್ವಹಣೆಯಲ್ಲಿ ಸಮಸ್ಯೆಯ ಲಕ್ಷಣವಾಗಿರಬಹುದು. ವಿಷಕಾರಿ ತತ್ವಗಳು ರಕ್ತದಲ್ಲಿ ಸಂಗ್ರಹವಾಗುತ್ತಿದ್ದರಿಂದ ದೇಹದಲ್ಲಿ ಆಯಾಸ ಹಾಗೂ ಶಕ್ತಿ ಕೊರತೆಯುಂಟಾಗುತ್ತದೆ.

2. ಮೂತ್ರದಲ್ಲಿ ಬಣ್ಣ ಮತ್ತು ಪ್ರಮಾಣದ ಬದಲಾವಣೆ :

ಹಲವಾರು ಸಂದರ್ಭಗಳಲ್ಲಿ ಬೆಳಿಗ್ಗೆಯ ಮೊದಲ ಮೂತ್ರವೇ ನಿಮ್ಮ ಆರೋಗ್ಯದ ದೃಷ್ಟಿಯಿಂದ ಪ್ರಮುಖ ಸೂಚನೆ ನೀಡುತ್ತದೆ. ಮೂತ್ರದಲ್ಲಿ ಹಳದಿ ಬಣ್ಣ ತೀವ್ರವಾಗಿದ್ದರೆ ಅಥವಾ ಗಾಢವಾದ ನೊರೆ ಕಾಣುತ್ತಿದ್ದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

ಇದನ್ನು ಓದಿ : BOB ನೇಮಕಾತಿ : 2,500 ಲೋಕಲ್ ಬ್ಯಾಂಕ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.!
3. ಬಾಯಾರಿಕೆ ಮತ್ತು ಹೊಟ್ಟೆ ಸೆಳೆತ :

ಅತಿಯಾದ ಬಾಯಾರಿಕೆಯಾಗುವುದು ದೇಹದಲ್ಲಿ ನೀರಿನ ಅಸಮತೋಲನದ ಪ್ರತೀಕವಾಗಿದೆ. ಜೊತೆಗೆ ಹೊಟ್ಟೆ ಊತ ಅಥವಾ ಸೆಳೆತವೂ ಮೂತ್ರಪಿಂಡದ ಕಾರ್ಯದಲ್ಲಿ ಸಮಸ್ಯೆ ಉಂಟಾದಾಗ ಕಂಡುಬರುವ ಲಕ್ಷಣಗಳಾಗಿವೆ.

4. ಚರ್ಮದ ತುರಿಕೆ ಅಥವಾ ದದ್ದುಗಳು :

ವಿಷಕಾರಿ ತತ್ವಗಳ ಸಂಗ್ರಹಣೆಯಿಂದಾಗಿ ಚರ್ಮದ ಮೇಲೆ ಪ್ರತಿಕ್ರಿಯೆಗಳು ಕಾಣಿಸಿಕೊಳ್ಳಬಹುದು. ಬೆಳಿಗ್ಗೆ ಎದ್ದು ತುರಿಕೆ ಅಥವಾ ದದ್ದು ಕಾಣಿಸುತ್ತಿದ್ದರೆ, ಅದನ್ನು ನಿರ್ಲಕ್ಷಿಸದೇ ತಕ್ಷಣ ವೈದ್ಯಕೀಯ ಸಲಹೆ ಪಡೆಯುವುದು ಉತ್ತಮ.

ಸಮಯಕ್ಕೆ ಚಿಕಿತ್ಸೆ ಅತಿ ಮುಖ್ಯ :

ಮೂತ್ರಪಿಂಡ (Kidney) ಸಂಬಂಧಿತ ಯಾವುದೇ ಸಮಸ್ಯೆಯನ್ನು ಮುಂಚಿತವಾಗಿಯೇ ಗುರುತಿಸಿ ಚಿಕಿತ್ಸೆ ಪಡೆಯುವುದರಿಂದ ಗಂಭೀರ ಸ್ಥಿತಿಯನ್ನು ತಪ್ಪಿಸಬಹುದಾಗಿದೆ. ಆದ್ದರಿಂದ ದೈನಂದಿನ ಚಟುವಟಿಕೆಗಳಲ್ಲಿ ಈ ರೀತಿಯ ಲಕ್ಷಣಗಳನ್ನು ಗಮನಿಸಿ ಆರೋಗ್ಯದತ್ತ ಹೆಚ್ಚಿನ ಕಾಳಜಿ ವಹಿಸಬೇಕು.

> Disclaimer : ಈ ಲೇಖನದ ಉದ್ದೇಶ ಅರಿವು ಮೂಡಿಸುವುದು ಮಾತ್ರ. ಯಾವುದೇ ಚಿಕಿತ್ಸೆಯನ್ನು ಆರಂಭಿಸುವ ಮೊದಲು ಅಥವಾ ತಾವೇ ಸ್ವತಃ ಪರೀಕ್ಷಿಸಿ ತಿರ್ಮಾನಿಸುವ ಪೂರ್ವದಲ್ಲಿ ನುರಿತ ವೈದ್ಯರ ಸಲಹೆ ಅನಿವಾರ್ಯ. ಇಲ್ಲಿ ನೀಡಲಾದ ಮಾಹಿತಿ ಜನಸ್ಪಂದನ ನ್ಯೂಸ್‌ನ ದೃಷ್ಟಿಕೋಣವಲ್ಲ, ಇದು ವೈದ್ಯಕೀಯ ಸಲಹೆಯಾಗಿ ಪರಿಗಣಿಸಬಾರದು.


ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಹೈವೇಯಲ್ಲಿ ಬಿದ್ದ Plane ; ರಸ್ತೆಯಲ್ಲಿದ್ದ 2 ಕಾರುಗಳಿಗೆ ಬೆಂಕಿ, ಇಬ್ಬರ ದುರ್ಮರಣ.!

light-Plane-crash

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಹೈವೇಯಲ್ಲಿ ಲಘು ವಿಮಾನ (Plane) ಯೊಂದು ಬಿದ್ದ ಪರಿಣಾಮವಾಗಿ ರಸ್ತೆಯಲ್ಲಿದ್ದ ಸಂಚರಿಸುತ್ತಿದ್ದ 2 ಕಾರುಗಳು ಬೆಂಕಿಗೆ ಆಹುತಿಯಾಗಿದ್ದಲ್ಲದೇ ಇಬ್ಬರ ದುರ್ಮರಣ ಸಂಭವಿದ ಘಟನೆಯೊಂದು ನಡೆದಿದೆ.

ಹೌದು, ಮಧ್ಯ ಇಟಲಿಯಲ್ಲಿ ಜನನಿಬಿಡ ಹೈವೇ ಮೇಲೆಯೇ ಸಂಭವಿಸಿದ ಲಘು ವಿಮಾನ (Plane) ದುರಂತವು ಮತ್ತೊಮ್ಮೆ ವಿಮಾನಯಾನ ಸುರಕ್ಷತೆ ಕುರಿತು ಆತಂಕವನ್ನು ಮೂಡಿಸಿದೆ. ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ದೋಷದಿಂದಾಗಿ ವಿಮಾನ (Plane) ವು ನಿಯಂತ್ರಣ ತಪ್ಪಿ ನೇರವಾಗಿ ರಸ್ತೆಯತ್ತ ಸಾಗಿ ಬಂದು ಪತನಗೊಂಡಿದೆ.

ವಿಮಾನ ಅಪಘಾತದ ವೇಳೆ ಬ್ರೆಸಿಯಾ ಬಳಿಯ A21 ಕಾರ್ಡಮೊಲ್ಲೆ-ಆಸ್ಪಿಟೇಲ್ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಎರಡು ಕಾರುಗಳು ಈ ದುರಂತದಲ್ಲಿ ಸುಟ್ಟು ಕರಗಲಾಗಿದ್ದು, ಸ್ಥಳದಲ್ಲಿ ಭಾರೀ ಬಿಕ್ಕಟ್ಟು ಉಂಟಾಯಿತು. ಸದ್ಯ ಅದರ ವಿಮಾನ (Plane) ಅಪಘಾತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಇದನ್ನು ಓದಿ : NIMHANS ಬೆಂಗಳೂರು : ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಅರ್ಜಿ ಆಹ್ವಾನ.!

ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಬೆಂಕಿ ನಂದಿಸಲು ಶ್ರಮಿಸಿದರು. ಈ ದುರಂತದಲ್ಲಿ ಗಾಯಗೊಂಡಿದ್ದ ಕಾರು ಚಾಲಕರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಾರುಗಳಲ್ಲಿ ಇದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಅಪಘಾತದ ಪರಿಣಾಮ ವಿಮಾನ (Plane) ದಲ್ಲಿದ್ದ ಇಬ್ಬರೂ ಸಾವನ್ನಪ್ಪಿದ್ದಾರೆ. ಮೃತಪಟ್ಟವರನ್ನು 75 ವರ್ಷದ ವಕೀಲ ಸೆರ್ಗಿಯೊ ರಾವಗ್ಲಿಯಾ ಮತ್ತು ಅವರ 55 ವರ್ಷದ ಪತ್ನಿ ಅನ್ನಾ ಮಾರಿಯಾ ಡಿ ಸ್ಟೆಫಾನೊ ಎನ್ನಲಾಗಿದೆ. ವಿಮಾನವು ನಿಯಂತ್ರಣ ತಪ್ಪಿ ಜನನಿಬಿಡ ಹೆದ್ದಾರಿಗೆ ಡಿಕ್ಕಿ ಹೊಡೆಯುವ ಮೊದಲು ಕೆಲವೇ ಕ್ಷಣಗಳ ಮೊದಲು ಟೇಕ್ ಆಫ್ ಆಗಿತ್ತು ಎಂದು ವರದಿಯಾಗಿದೆ.

ಅಪಘಾತಕ್ಕೀಡಾದ ವಿಮಾನ (Plane) ದ ವಿಡಿಯೋ :

ಸಾರ್ವಜನಿಕರ ಆತಂಕ :

ಈ ಮಾದರಿಯ ಘಟನೆಗಳು ಪುನಃಪುನಃ ನಡೆಯುತ್ತಿರುವುದರಿಂದ, ಖಾಸಗಿ ವಿಮಾನ (Plane) ಸಂಸ್ಥೆಗಳ ತಾಂತ್ರಿಕ ಪರಿಶೀಲನೆ ಕುರಿತು ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ. “ವಿಮಾನ (Plane)ಗಳ ಶ್ರೇಣಿತ ಪರಿಶೀಲನೆ ಮತ್ತು ಸುರಕ್ಷಾ ಪ್ರಮಾಣೀಕರಣವನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದರೆ ಇಂಥ ದುರ್ಘಟನೆಗಳು ಮುಂದೆಯೂ ಸಂಭವಿಸಬಹುದೆಂಬ ಭೀತಿಯಿದೆ” ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

- Advertisement -
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments