ಶುಕ್ರವಾರ, ಜನವರಿ 2, 2026

Janaspandhan News

HomeHealth & FitnessPapaya : ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ 1 ಹಣ್ಣು ತಿನ್ನಿ ; ಲಿವರ್ ಡಿಟಾಕ್ಸ್,...
spot_img
spot_img
spot_img

Papaya : ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ 1 ಹಣ್ಣು ತಿನ್ನಿ ; ಲಿವರ್ ಡಿಟಾಕ್ಸ್, ಜೀರ್ಣಕ್ರಿಯೆ, ತೂಕ ನಿಯಂತ್ರಣ, ಮತ್ತು ರೋಗನಿರೋಧಕ ಶಕ್ತಿ ಪಡೆಯಿರಿ.!

- Advertisement -

ಜನಸ್ಪಂದನ ನ್ಯೂಸ್‌, ಆರೋಗ್ಯ : ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಹಣ್ಣು (Papaya) ತಿನ್ನುವುದರಿಂದ ಲಿವರ್ ಡಿಟಾಕ್ಸ್, ಜೀರ್ಣಕ್ರಿಯೆ, ತೂಕ ನಿಯಂತ್ರಣ, ಮತ್ತು ರೋಗನಿರೋಧಕ ಶಕ್ತಿಯನ್ನು ಪಡೆಯಬಹುದು. ಹಾಗಾದ್ರೆ ಈಗ ಆ ಹಣ್ಣಿನ ಬಗ್ಗೆ ತಿಳಿಯೋಣ ಬನ್ನಿ.!

ಆರೋಗ್ಯವಂತರಾಗಿ ಬಾಳಬೇಕೆಂದರೆ, ನಮ್ಮ ದೈನಂದಿನ ಆಹಾರದಲ್ಲಿ ಪೋಷಕಾಂಶಗಳ ಸಮತೋಲನ ಅತೀ ಅತ್ಯವಶ್ಯಕ. ವಿಶೇಷವಾಗಿ ಹಣ್ಣುಗಳನ್ನು ತಿನ್ನುವ ಮೂಲಕ ದಿನದ ಪ್ರಾರಂಭ ಉತ್ತಮ ಆಯ್ಕೆ. ಇಂತಹ ಆರೋಗ್ಯಕರ ಹಣ್ಣುಗಳಲ್ಲಿ ಪಪ್ಪಾಯಿ (Papaya) ಒಂದು ಪ್ರಮುಖ ಸ್ಥಾನ ಹೊಂದಿದೆ. ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಈ ಹಣ್ಣು, ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ದೇಹಕ್ಕೆ ಅನೇಕ ರೀತಿಯಲ್ಲಿ ಲಾಭ ನೀಡುತ್ತದೆ.

ಫ್ಯಾಟಿ ಲಿವರ್‌ಗೆ ಪಪ್ಪಾಯಿ (Papaya) ರಕ್ಷಕ :

ಪಪ್ಪಾಯಿಯಲ್ಲಿರುವ ಪಪೈನ್ ಎನ್‌ಜೈಮ್ ಮತ್ತು ಉತ್ಕೃಷ್ಟ ಆಂಟಿಆಕ್ಸಿಡೆಂಟ್‌ಗಳು ಲಿವರ್‌ನಲ್ಲಿರುವ ಅತಿರೇಕ ಕೊಳೆಯನ್ನು ಹೊರಹಾಕಲು ಸಹಾಯಕ. ಇದು ಲಿವರ್‌ಗೆ ಡಿಟಾಕ್ಸ್ (Detox) ಆಗಿ ಕೆಲಸವನ್ನು ಮಾಡುತ್ತಿದ್ದು, ಫ್ಯಾಟಿ ಲಿವರ್‌ನಂತಹ ಸಮಸ್ಯೆಗಳಿಂದ ಮುಕ್ತಗೊಳ್ಳಲು ಸಹಾಯ ಮಾಡುತ್ತದೆ.

ಜೀರ್ಣಕ್ರಿಯೆಗೆ ಪಪ್ಪಾಯಿ ಸಹಾಯಕ :

ಪಪ್ಪಾಯಿಯಲ್ಲಿರುವ ನಾರು ಮತ್ತು ಎಂಜೈಮ್‌ಗಳು ಜೀರ್ಣಕ್ರಿಯೆಯನ್ನು ಶೀಘ್ರಗೊಳಿಸುತ್ತವೆ. ವಿಶೇಷವಾಗಿ ಮಲಬದ್ಧತೆ ಅಥವಾ ಬೊಜ್ಜು ಸಂಬಂಧಿತ ಸಮಸ್ಯೆಗಳಿಂದ ಬಳಲುವವರಿಗೆ ಇದೊಂದು ಉಪಯುಕ್ತ ಪರಿಹಾರ.

ತೂಕ ನಿಯಂತ್ರಣದಲ್ಲಿ ಸಹಾಯ :

ಫೈಬರ್ ಅಂಶ ಹೆಚ್ಚು ಇರುವುದರಿಂದ, ಪಪ್ಪಾಯಿ (Papaya) ಹೆಚ್ಚು ಹೊತ್ತಿನವರೆಗೂ ತೃಪ್ತಿ ನೀಡುತ್ತದೆ. ಇದರಿಂದ ಹಸಿವಿನ ಕಡಿಮೆಯಾಗುತ್ತದೆ. ಇದನ್ನು ನಿತ್ಯ ಸೇವಿಸುವುದರಿಂದ ತೂಕ ನಿಯಂತ್ರಣ ಸಾಧ್ಯವಾಗುತ್ತದೆ.

ರೋಗನಿರೋಧಕ ಶಕ್ತಿ ಬಲಪಡಿಸಲು ಸಹಾಯ :

ಪಪ್ಪಾಯಿಯಲ್ಲಿ ವಿಟಮಿನ್ ‘ಸಿ’ ಅಧಿಕವಿದ್ದು, ಅದು ದೇಹದ ರೋಗನಿರೋಧಕ ಶಕ್ತಿಯನ್ನು ಉತ್ಕೃಷ್ಟಪಡಿಸುತ್ತದೆ. ವಿಶೇಷವಾಗಿ ಮಳೆಗಾಲದಲ್ಲಿ ಶೀತ, ಕೆಮ್ಮು ಮುಂತಾದ ಸೋಂಕುಗಳಿಂದ ದೇಹವನ್ನು ರಕ್ಷಿಸಲು ಪಪ್ಪಾಯಿ ತುಂಬಾ ಪರಿಣಾಮಕಾರಿ.

ಪಪ್ಪಾಯಿ ತಿನ್ನುವುದು ಹೇಗೆ ಉತ್ತಮ?

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಬಟ್ಟಲು ಮಾಗಿದ ಪಪ್ಪಾಯಿ (Papaya) ತಿನ್ನುವುದು ಅತ್ಯುತ್ತಮ. ಇದಕ್ಕೆ ಸ್ವಲ್ಪ ನಿಂಬೆ ರಸವನ್ನು ಸೇರಿಸಿದರೆ ಇನ್ನಷ್ಟು ಲಾಭ ಪಡೆಯಬಹುದು.

ಸಂಪಾದಕೀಯ : ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಪಪ್ಪಾಯಿ ತಿನ್ನುವುದರಿಂದ ಲಿವರ್ ಡಿಟಾಕ್ಸ್, ಜೀರ್ಣಕ್ರಿಯೆ ಸುಧಾರಣೆ, ತೂಕ ನಿಯಂತ್ರಣ, ಮತ್ತು ರೋಗನಿರೋಧಕ ಶಕ್ತಿ (Liver detox, improved digestion, weight control, and immunity) ಬಲಪಡಿಸುವಂತಹ ಹಲವಾರು ಆರೋಗ್ಯ ಲಾಭಗಳನ್ನು ಪಡೆಯಬಹುದು.


Yawning : ನೀವೂ ಹಾವೂಗಳು ಆಕಳಿಸುವುದನ್ನು ನೋಡಿದಿರಾ.? ಇಲ್ವಾ, ಹಾಗಾದ್ರೆ ಈ ವಿಡಿಯೋ ನೋಡಿ.!

Snake yawning

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ನೀವೂ ಹಾವೂಗಳು ಆಕಳಿಸುವು (yawning) ದನ್ನು ನೋಡಿದಿರಾ.? ಇಲ್ವಾ, ಹಾಗಾದ್ರೆ ಇಲ್ಲಿದೆ ನೋಡಿ ಹಾವೂ ಆಕಳಿಸುವ ವಿಡಿಯೋ. ಇಲ್ಲಿ ನಿಮಗೆ ಕೆಲ ಪ್ರಶ್ನೆಗಳು ಉದ್ಭವಿಸಿಬಹುದು.

ಹಾವುಗಳು ಮನುಷ್ಯರಂತೆ ಆಕಳಿಸುತ್ತವೆಯಾ? ಈ ಪ್ರಶ್ನೆಗೆ ನೇರ ಉತ್ತರ ಇಲ್ಲದಿದ್ದರೂ, ಇತ್ತೀಚೆಗೆ ವೈರಲ್ ಆದ ಒಂದು ವೀಕ್ಷಣೀಯ ದೃಶ್ಯವು ಎಲ್ಲರ ದೃಷ್ಠಿಯನ್ನು ಸೆಳೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಆಗುತ್ತಿರುವ ಈ ವಿಡಿಯೋದಲ್ಲಿ, ಒಂದು ದೈತ್ಯ ಹೆಬ್ಬಾವು ಬಾಯಿಯನ್ನು ತುಂಬಾ ಅಗಲವಾಗಿ ತೆರೆದು ಆಕಳಿಸು (yawning) ತ್ತಿರುವಂತೆ ಕಾಣಿಸುತ್ತದೆ.

ಹಾಗಾದ್ರೆ ವೈರಲ್ ವಿಡಿಯೋದಲ್ಲಿ ಏನಿದೆ?

ಈ ಅಪರೂಪದ ದೃಶ್ಯವನ್ನು @lauraisabelaleon ಎಂಬ Instagram ಸಾಮಾಜಿಕ ಜಾಲತಾಣದಲ್ಲಿ ಬಳಕೆದಾರರು ಪೋಸ್ಟ್ ಮಾಡಿದ್ದಾರೆ. ವೈರಲ್‌ ಆಗಿರುವ ವಿಡಿಯೋದಲ್ಲಿ ದೈತ್ಯ ಹೆಬ್ಬಾವು ಬಾಯಿಯನ್ನು ವಿಶಾಲವಾಗಿ ತೆರೆದು ನಿಟ್ಟುಸಿರೆ ಬಿಟ್ಟಂತೆ ಕಾಣಿಸುತ್ತಿರುವುದು ವಿಡಿಯೋ ಸ್ಪಷ್ಟವಾಗಿದೆ. ಈ ದೃಶ್ಯ ಮನುಷ್ಯರ ಆಕಳಿಸುವ ಹಾವಭಾವಕ್ಕೆ ಹತ್ತಿರವಾಗಿದ್ದು, ಹಲವಾರು ಬಳಕೆದಾರರು ಆಶ್ಚರ್ಯ ವ್ಯಕ್ತ ಪಡಿಸಿದ್ದಾರೆ.

ಇದನ್ನು ಓದಿ : NIMHANS ಬೆಂಗಳೂರು : ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಅರ್ಜಿ ಆಹ್ವಾನ.!

ವೈರಲ್‌ ವಿಡಿಯೋವನ್ನು ಈವರೆಗೆ 34 ಸಾವಿರಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದು, ಸಾವಿರಾರು ಜನರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್‌ನಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಓರ್ವರು, “ನಾನು ಹಾವುಗಳು ಹೀಗೆ ಆಕಳಿಸುತ್ತವೆ ಎಂದು ಇದೇ ಮೊದಲು ನೋಡಿದ್ದೇನೆ” ಎಂದಿದ್ದಾರೆ. ಮತ್ತೋಬ್ಬ ಬಳಕೆದಾರರು, “ಇದು ನಿಜವೋ ಅಥವಾ AI ಕ್ರಿಯೇಷನ್ನಾ?” ಎಂಬ ಪ್ರಶ್ನೆಯನ್ನು ಎತ್ತಿದ್ದಾರೆ. ಹೀಗೆ ಹಲವಾರು ಬಾಳಕೆದಾರರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

ಹಾವುಗಳು ನಿಜವಾಗಿಯೂ ಆಕಳಿಸು (yawning) ತ್ತವೆಯೇ?

ಜೀವಶಾಸ್ತ್ರಜ್ಞರ ಪ್ರಕಾರ, ಹಾವುಗಳು ದೊಡ್ಡ ಆಹಾರವನ್ನು ನುಂಗಿದ ನಂತರ ತಮ್ಮ ದವಡೆಗಳ ಜೋಡಣೆಯನ್ನು ಮತ್ತೆ ಸರಿಹೊಂದಿಸಲು ಬಾಯಿಯನ್ನು ಅಗಲವಾಗಿ ತೆರೆದು ನಿರ್ವಹಣೆಯ ಕ್ರಿಯೆಯನ್ನು ನಡೆಸುತ್ತವೆ. ಈ ಸಂದರ್ಭ ಮನುಷ್ಯನಂತೆ “ಆಕಳಿಸುತ್ತಿರುವ (yawning)” ಭಾವನೆ ಉಂಟಾಗಬಹುದು.

ಹಾಗಾದರೆ, ಇದು ನಿಜವಾದ ಆಕಳಿಕೆ (yawning) ಯಲ್ಲ. ಆದರೆ ಈ “Snake Yawning” ಎಂಬ ದೃಶ್ಯ ಮಾನವ ಕಣ್ಣಿಗೆ ಆಕರ್ಷಕವಾಗಿ ಕಾಣಿಸುತ್ತದೆ.

ವೈರಲ್‌ ವಿಡಿಯೋ :

Note : ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತವಿರುವ ವಿಡಿಯೋ/ಪೋಸ್ಟ್‌ನ್ನು ಆಧರಿಸಿದೆ. ಈ ಬಗ್ಗೆ ಜನಸ್ಪಂದನ ನ್ಯೂಸ್‌ ಯಾವುದೇ ರೀತಿಯ ಹಕ್ಕು ಮತ್ತು ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.

- Advertisement -
Janaspandhan News
Janaspandhan Newshttp://WWW.janaspandhan.com
Janaspandana News is a digital news platform that reports crime and local news from Karnataka.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments