Tuesday, September 16, 2025

Janaspandhan News

HomeHealth & Fitnessbrain tumor : ಯಾರಿಗೆ ಬರುವ ಸಾಧ್ಯತೆ? ಈ ಲಕ್ಷಣಗಳಿದ್ದರೆ ಎಚ್ಚರಿಕೆಯಾಗಿರಿ.!
spot_img
spot_img
spot_img

brain tumor : ಯಾರಿಗೆ ಬರುವ ಸಾಧ್ಯತೆ? ಈ ಲಕ್ಷಣಗಳಿದ್ದರೆ ಎಚ್ಚರಿಕೆಯಾಗಿರಿ.!

- Advertisement -

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಬ್ರೈನ್ ಟ್ಯೂಮರ್ (brain tumor) ಅಥವಾ ಮೆದುಳಿನ ಗೆಡ್ಡೆ ಎಂದು ಕರೆಯುವ ಈ ರೋಗ ಯಾರಿಗೆ ಬರುವ ಸಾಧ್ಯತೆ ಹೆಚ್ಚು.! ಒಂದು ವೇಳೆ ಈ ಲಕ್ಷಣಗಳಿದ್ದರೆ ಎಚ್ಚರಿಕೆಯಾಗಿರಿ, ಏಕೆಂದರೆ ಇದು ಬ್ರೈನ್ ಟ್ಯೂಮರ್ (brain tumor)  ಆಗಿರಬಹುದು.

ವಿಶ್ವದಾದ್ಯಂತ ಆರೋಗ್ಯ ಸಮಸ್ಯೆಗಳ ಪೈಕಿ ಅತ್ಯಂತ ಗಂಭೀರ ಮತ್ತು ಜೀವಘಾತಕವಾದವುಗಳಲ್ಲಿ ಮೆದುಳಿನ ಗೆಡ್ಡೆ (brain tumor) ನ್ನು  ಒಂದು ಎಂದು ಪರಿಗಣಿಸಲಾಗಿದೆ. ಮೆದುಳಿನ ಜೀವಕೋಶಗಳು ನಿಯಂತ್ರಣವಿಲ್ಲದಂತೆ ಬೆಳೆಯಲು ಪ್ರಾರಂಭವಾದಾಗ ಈ ರೋಗ ರೂಪುಗೊಳ್ಳುತ್ತದೆ. ತಕ್ಷಣ ಪತ್ತೆಯಾಗದಿದ್ದರೆ ಇದು ಜೀವಕ್ಕೆ ತುಂಬಾ ಅಪಾಯಕಾರಿ. ಆದುದ್ದರಿಂದ ಸರಿಯಾದ ಸಮಯದಲ್ಲಿ ಚಿಕಿತ್ಸೆ ಅತ್ಯಾವಶ್ಯಕ.

ಹೆಚ್ಚುತ್ತಿರುವ ನರ ರೋಗಗಳ ಪ್ರಮಾಣ :

ಇತ್ತೀಚಿನ ವರ್ಷಗಳಲ್ಲಿ ಬ್ರೈನ್ ಟ್ಯೂಮರ್, ಬ್ರೈನ್ ಸ್ಟ್ರೋಕ್, ಡಿಮೆಂಚಿಯಾ, ಆಲ್ಝೈಮರ್ (Brain tumor, brain stroke, dementia, Alzheimer’s) ನಂತಹ ಮುಂತಾದ ನರವೈಜ್ಞಾನಿಕ (Neurological) ಕಾಯಿಲೆಗಳ ಪ್ರಮಾಣ ಗಣನೀಯವಾಗಿ ಹೆಚ್ಚಿದೆ. ಮೆದುಳು (brain) ನಮ್ಮ ದೇಹದ ಕಂಟ್ರೋಲ್ ಸೆಂಟರ್ (Control Center) ಆಗಿರುವುದರಿಂದ, ಇದಕ್ಕೆ ಸಂಬಂಧಿಸಿದ ಯಾವುದೇ ಕಾಯಿಲೆಗಳನ್ನು ನಿರ್ಲಕ್ಷ್ಯ ಮಾಡುವುದು ಖಂಡಿತಾ ತಪ್ಪು.

ಬ್ರೈನ್ ಟ್ಯೂಮರ್ (brain tumor) ಲಕ್ಷಣಗಳೆವು? 
ಹೆಚ್ಚಾಗಿ ಕಂಡುಬರುವ ಪ್ರಮುಖ ಲಕ್ಷಣಗಳು ಇಂತಿವೆ :
  • ನಿರಂತರ ತಲೆನೋವು.
  • ತೀವ್ರವಾದ ಸ್ಮರಣಶಕ್ತಿ ನಷ್ಟ.
  • ತಲೆಯ ಗಾತ್ರದಲ್ಲಿ ಅನಿಯಮಿತ ಬದಲಾವಣೆ.
  • ಅಪಘಾತದಿಂದ ತಲೆಗೆ ಗಾಯ ಅಥವಾ ಗೊಂದಲ.
  • ವಾಕ್ ತೊಂದರೆ, ದೃಷ್ಟಿದೋಷಗಳು.

ಈ ರೀತಿಯ ಲಕ್ಷಣಗಳು ಕಂಡುಬಂದಾಗ ವೈದ್ಯಕೀಯ ತಪಾಸಣೆ ಮತ್ತು ಸಕಾಲಿಕ ಚಿಕಿತ್ಸೆ ಅತ್ಯಗತ್ಯ.

ಯಾರಿಗೆ ಹೆಚ್ಚು ಬರಬಹುದು.?
  • ಆನುವಂಶಿಕತೆಯ ಪ್ರಭಾವ : ಕುಟುಂಬದಲ್ಲಿ ಯಾರಿಗಾದರೂ ಈ ಕಾಯಿಲೆ ಇದ್ದಿದ್ದರೆ, ಇತರ ಸದಸ್ಯರಿಗೂ ಇದರ ಅಪಾಯ ಹೆಚ್ಚಿರುತ್ತದೆ.

  • ವಿಕಿರಣ ಚಿಕಿತ್ಸೆಯ ಇತಿಹಾಸ : ದೀರ್ಘಕಾಲದವರೆಗೆ ರೇಡಿಯೇಶನ್ ಅಥವಾ ಕ್ಯಾನ್ಸರ್ ಚಿಕಿತ್ಸೆಗೆ ಒಳಪಟ್ಟವರು ಅಪಾಯಕ್ಕೆ ಗುರಿಯಾಗಬಹುದು.

  • ರಾಸಾಯನಿಕದ ಒಡಕು : ಕೈಗಾರಿಕಾ ಪ್ರದೇಶಗಳಲ್ಲಿ ಕೆಲಸಮಾಡುವವರು, ಅದರಲ್ಲೂ ವಿಶೇಷವಾಗಿ ಕೀಟನಾಶಕ, ರಬ್ಬರ್, ತೈಲ ಉತ್ಪನ್ನಗಳ ಸಂಪರ್ಕದಲ್ಲಿರುವವರು ಈ ರೋಗದ ಅಪಾಯದ ವಲಯದಲ್ಲಿರುತ್ತಾರೆ.

  • ಅನಾರೋಗ್ಯಕರ ಜೀವನಶೈಲಿ : ಹೆಚ್ಚು ಕೊಬ್ಬಿರುವ ಆಹಾರ, ವ್ಯಾಯಾಮದ ಕೊರತೆ, ಧೂಮಪಾನ, ನಿಯಮಿತ ಆಹಾರಪದ್ಧತಿಯ ಕೊರತೆ.

  • ಆನುವಂಶಿಕ ಅಸ್ವಸ್ಥತೆಗಳು : ಲಿ-ಫ್ರಾಮಿನಿ ಸಿಂಡ್ರೋಮ್, ನ್ಯೂರೋಫೈಬ್ರೊಮಾಟೋಸಿಸ್, ಟ್ಯೂಬರ್ ಸ್ಕ್ಲೆರೋಸಿಸ್ (Li-Framini syndrome, neurofibromatosis, tuberous sclerosis) ಮುಂತಾದ ಜನನಪೂರ್ವ ಸ್ಥಿತಿಗಳು ಕೂಡ ಕಾರಣವಾಗಬಹುದು.

ವಯಸ್ಸು ಮತ್ತು ಲಿಂಗದ ಪ್ರಭಾವ :

ಸಂಶೋಧನೆಗಳ ಪ್ರಕಾರ, ಪುರುಷರಲ್ಲಿ ಮಹಿಳೆಯರಿಗಿಂತ ಈ ಕಾಯಿಲೆಯ ಸಂಭವನೀಯತೆ ಸ್ವಲ್ಪ ಹೆಚ್ಚಾಗಿದೆ. ಹೆಚ್ಚಾಗಿ 15 ರಿಂದ 39 ವರ್ಷದ ನಡುವೆ ಈ ರೋಗ (brain tumor) ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು. ವಯಸ್ಸು ಹೆಚ್ಚಾದಂತೆ ಅಪಾಯವೂ ಅಧಿಕವಾಗುತ್ತದೆ.

ರಕ್ಷಣೆ ಸಾಧ್ಯ :

ಆರೋಗ್ಯಕರ ಆಹಾರ ಸೇವನೆ, ನಿತ್ಯ ವ್ಯಾಯಾಮ, ಪರಿಸರದ ಮೇಲೆ ಎಚ್ಚರಿಕೆ ಮತ್ತು ಸಮಯಕ್ಕೆ ತಕ್ಕ ವೈದ್ಯಕೀಯ ತಪಾಸಣೆಗಳ ಮೂಲಕ ಮೆದುಳಿನ ಗೆಡ್ಡೆ (brain tumor) ಯ ಅಪಾಯವನ್ನು ತಡೆಯಬಹುದಾಗಿದೆ. ಕುಟುಂಬದ ಇತಿಹಾಸವಿದ್ದರೆ ನಿಯಮಿತವಾಗಿ ತಜ್ಞರ ಬಳಿ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ.

> Disclaimer : ಈ ಲೇಖನದ ಉದ್ದೇಶ ಅರಿವು ಮೂಡಿಸುವುದು ಮಾತ್ರ. ಯಾವುದೇ ಚಿಕಿತ್ಸೆಯನ್ನು ಆರಂಭಿಸುವ ಮೊದಲು ಅಥವಾ ತಾವೇ ಸ್ವತಃ ಪರೀಕ್ಷಿಸಿ ತಿರ್ಮಾನಿಸುವ ಪೂರ್ವದಲ್ಲಿ ನುರಿತ ವೈದ್ಯರ ಸಲಹೆ ಅನಿವಾರ್ಯ. ಇಲ್ಲಿ ನೀಡಲಾದ ಮಾಹಿತಿ ಜನಸ್ಪಂದನ ನ್ಯೂಸ್‌ನ ದೃಷ್ಟಿಕೋಣವಲ್ಲ, ಇದು ವೈದ್ಯಕೀಯ ಸಲಹೆಯಾಗಿ ಪರಿಗಣಿಸಬಾರದು.


“ಈ ಲಕ್ಷಣಗಳು ಕಂಡುಬಂದರೆ ನಿಮ್ಮ Kidney ಅಪಾಯದಲ್ಲಿದೆ ಎಂದೇ ಅರ್ಥ.!”

Kidney

ಜನಸ್ಪಂದನ ನ್ಯೂಸ್, ಆರೋಗ್ಯ : ಮೂತ್ರಪಿಂಡ (Kidney) ಗಳು ನಮ್ಮ ದೇಹದಲ್ಲಿ ಉಂಟಾಗುವ ಕಶ್ಮಲಗಳನ್ನು ಶೋಧಿಸುವ ಪ್ರಮುಖ ಅಂಗಾಂಗಗಳಲ್ಲೊಂದು. ರಕ್ತದಲ್ಲಿರುವ ತ್ಯಾಜ್ಯಗಳನ್ನು ಮತ್ತು ಅಗತ್ಯವಿಲ್ಲದ ದ್ರವಗಳನ್ನು ಶುದ್ಧಗೊಳಿಸಿ, ಅವುಗಳನ್ನು ಮೂತ್ರದ ಮೂಲಕ ಹೊರಹಾಕುವ ಕಾರ್ಯ ಈ ಅಂಗಾಂಗ (Kidney) ಗಳು ನಿರ್ವಹಿಸುತ್ತವೆ.

ಒಂದು ವೇಳೆ ಮೂತ್ರಪಿಂಡ (Kidney) ಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ, ದೇಹದಲ್ಲಿ ಕಶ್ಮಲಗಳು ಸಂಗ್ರಹವಾಗಲು ಆರಂಭವಾಗುತ್ತವೆ. ಇದು ವಿವಿಧ ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದು.

ಇದನ್ನು ಓದಿ : Girl : ಶಾಲೆಯಿಂದ ಮನೆಗೆ ಹೊರಟ 10 ವರ್ಷದ ಬಾಲಕಿ ಅಪಹರಿಸಿ ದೌರ್ಜನ್ಯಕ್ಕೆ ಯತ್ನ.!

ಈ ರೀತಿಯ ಸ್ಥಿತಿಯನ್ನು ದೀರ್ಘಕಾಲದ ಮೂತ್ರಪಿಂಡ (Kidney) ಕಾಯಿಲೆ ಅಥವಾ ಕ್ರೋನಿಕ್ ಕಿಡ್ನಿ ಡಿಸೀಸ್ (CKD) ಎಂದು ಕರೆಯಲಾಗುತ್ತದೆ.

ಇದು ನಿಧಾನವಾಗಿ ಬೆಳೆಯುವ ರೋಗವಾಗಿದ್ದು, ಆರಂಭಿಕ ಹಂತದಲ್ಲಿಯೇ ಗುರುತಿಸಿದರೆ ಪರಿಣಾಮಕಾರಿ ಚಿಕಿತ್ಸೆ ನೀಡಲು ಸಾದ್ಯವಾಗಬಹುದು.

ಇದನ್ನು ಓದಿ : DRDO ನೇಮಕಾತಿ 2025 : 148 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ.!
ಇವು ಮೂತ್ರಪಿಂಡ (Kidney) ವೈಫಲ್ಯವನ್ನು ಸೂಚಿಸಬಹುದಾದ ಕೆಲವು ಪ್ರಮುಖ ಸಂಕೇತಗಳು :
1. ಮೂತ್ರದಲ್ಲಿ ಬದಲಾವಣೆಗಳು :
  • ಸಾಮಾನ್ಯಕ್ಕಿಂತ ಹೆಚ್ಚು ಅಥವಾ ಕಡಿಮೆ ಪ್ರಮಾಣದಲ್ಲಿ ಮೂತ್ರ ವಿಸರ್ಜನೆ.
  • ರಾತ್ರಿಯ ವೇಳೆ ಮಿಕ್ಕಷ್ಟು ಬಾರಿ ಮೂತ್ರದ ಅವಶ್ಯಕತೆ.
  • ಮೂತ್ರದಲ್ಲಿ ನೊರೆ, ರಕ್ತ ಅಥವಾ ಬದಲಾಗಿದ ಬಣ್ಣ.
  • ಮೂತ್ರ ವಿಸರ್ಜನೆ ವೇಳೆ ಗಂಭೀರ ತೊಂದರೆ.
2. ದೇಹದ ಅವಯವಗಳಲ್ಲಿ ಊತ :
  • ಕಾಲುಗಳು, ಪಾದಗಳು, ಕೈಗಳು ಮತ್ತು ಕಣ್ಣುಗಳ ಸುತ್ತಲೂ ಉಂಟಾಗುವ ಊತ.
  • ದೇಹದಲ್ಲಿ ನೀರಿನ ಶೇಖರಣೆಯಿಂದ ಉಂಟಾಗುವ ಶ್ವಾಸದ ತೊಂದರೆ.
ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 20 ರ ದ್ವಾದಶ ರಾಶಿಗಳ ಫಲಾಫಲ.!
3. ದಣಿವು ಮತ್ತು ಅಶಕ್ತತತೆ :
  • ಮೂತ್ರಪಿಂಡಗಳ ಕಾರ್ಯ ಕ್ಷೀಣಗೊಂಡಾಗ, ರಕ್ತಹೀನತೆ ಉಂಟಾಗಬಹುದು.
  • ಕಡಿಮೆ ಶ್ರಮದಲ್ಲಿಯೇ ದಣಿವು ಅನುಭವಿಸುವುದು.
4. ತುರಿಕೆ ಮತ್ತು ಸ್ನಾಯು ಸೆಳೆತ :
  • ರಕ್ತದಲ್ಲಿ ತ್ಯಾಜ್ಯ ಪದಾರ್ಥಗಳು ಮತ್ತು ಖನಿಜಗಳ ಅಸಮತೋಲನದಿಂದ ತುರಿಕೆ.
  • ವಿಶೇಷವಾಗಿ ರಾತ್ರಿ ವೇಳೆ ಹೆಚ್ಚು ಕಿರಿಕಿರಿ.
  • ಕಾಲುಗಳಲ್ಲಿ ಸ್ನಾಯು ಸೆಳೆತ ಮತ್ತು ನೋವು.
5. ಇತರ ಲಕ್ಷಣಗಳು :
  • ಊಟದ ಮೇಲೆ ಆಸೆ ಕಡಿಮೆಯಾಗುವುದು.
  • ವಾಕರಿಕೆ ಅಥವಾ ಒಮ್ಮೆ ಎದೆಯಲ್ಲಿ ತೀವ್ರ ಒತ್ತಡ.
  • ಏಕಾಏಕಿ ತೂಕ ಇಳಿಕೆ ಅಥವಾ ಹೆಚ್ಚಳ.
ಇದನ್ನು ಓದಿ : ಕೋರ್ಟ್ ಆವರಣದಲ್ಲೇ ಪರಸ್ಪರ ಜುಟ್ಟು ಹಿಡಿದು ಎಳೆದಾಡಿಕೊಂಡ ಮಹಿಳಾ Lawyers ; ವಿಡಿಯೋ.!

ಆರೋಗ್ಯ ಸಲಹೆ : ಮೇಲ್ಕಂಡ ಲಕ್ಷಣಗಳಲ್ಲಿ ಯಾವುದಾದರೂ ಕಾಣಿಸಿದರೆ ವೈದ್ಯರ ಸಲಹೆ ಪಡೆಯುವುದು ಅತ್ಯಂತ ಅಗತ್ಯ. ಆರಂಭಿಕ ಹಂತದಲ್ಲಿಯೇ ಚಿಕಿತ್ಸೆ ಪ್ರಾರಂಭಿಸಿದರೆ, ಮೂತ್ರಪಿಂಡ (Kidney) ದ ಸಮಸ್ಯೆಗಳನ್ನು ನಿಯಂತ್ರಣದಲ್ಲಿರಿಸಬಹುದು.

Kidney : In humans, the kidneys are two reddish-brown bean-shaped blood-filtering organs that are a multilobar, multipapillary form of mammalian kidneys, usually without signs of external lobulation.

> Disclaimer : ಈ ಲೇಖನದ ಉದ್ದೇಶ ಅರಿವು ಮೂಡಿಸುವುದು ಮಾತ್ರ. ಯಾವುದೇ ಚಿಕಿತ್ಸೆಯನ್ನು ಆರಂಭಿಸುವ ಮೊದಲು ನುರಿತ ವೈದ್ಯರ ಸಲಹೆ ಅನಿವಾರ್ಯ. ಇಲ್ಲಿ ನೀಡಲಾದ ಮಾಹಿತಿ ಜನಸ್ಪಂದನ ನ್ಯೂಸ್‌ನ ದೃಷ್ಟಿಕೋಣವಲ್ಲ, ಇದು ವೈದ್ಯಕೀಯ ಸಲಹೆಯಾಗಿ ಪರಿಗಣಿಸಬಾರದು.

- Advertisement -
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments