ಜನಸ್ಪಂದನ ನ್ಯೂಸ್, ಡೆಸ್ಕ್ : ಮಹಿಳೆಯೋರ್ವಳ ಬಳಿ ಬೌದ್ಧ ಸನ್ಯಾಸಿ (ಭಿಕ್ಷು) ಗಳ ಲೈಂಗಿಕ ಸಂಬಂಧಗಳ (relationship) ಫೋಟೋ (ವಿಡಿಯೋ) ಗಳು ಸೇರಿದಂತೆ 80,000ಕ್ಕೂ ಅಧಿಕ ನಗ್ನ ಫೋಟೊಗಳು ಮತ್ತು 100 ಕೋಟಿಗೂ ಹೆಚ್ಚಿನ ಹಣ ಪತ್ತೆಯಾಗಿರುವ ಘಟನೆಯಿಂದ ಥಾಯ್ಲೆಂಡ್ ಬೆಚ್ಚಿಬಿದ್ದಿದೆ.
ಮೊಬೈಲ್‌ನಲ್ಲಿ ಬೌದ್ಧ ಸನ್ಯಾಸಿಗಳ ಜೊತೆಗಿನ ರಾಸಲೀಲೆಯ (relationship) ಫೋಟೋ ಹೊರ ಬರುತ್ತಿದ್ದಂತೆ ಬುದ್ದರ ಪ್ರಾಬಲ್ಯವಿರುವ ಥಾಯ್ಲೆಂಡ್ ದೇಶದ ಜನತೆ ಬೆಚ್ಚಿಬಿದ್ದಿದ್ದು, ಪ್ರಕರಣದಲ್ಲಿ ಪಾಲ್ಗೊಂಡ 9 ಬೌದ್ಧ ಭಿಕ್ಷುಗಳನ್ನು ಸನ್ಯಾಸತ್ವದಿಂದ ವಜಾಗೊಳಿಸಲಾಗಿದೆ. ಈ ಪ್ರಕರಣ ಥಾಯ್ ಸಾರ್ವಜನಿಕರಲ್ಲಿ ಆಕ್ರೋಶವನ್ನು ಹುಟ್ಟುಹಾಕಿದ್ದು, ಧರ್ಮಗುರುಗಳ ಸಂನ್ಯಾಸ ಶೀಲತೆ ಕುರಿತಂತೆ ಗಂಭೀರ ಚರ್ಚೆ ಆರಂಭವಾಗಿದೆ.
ಇದನ್ನು ಓದಿ : ICF ಅಪ್ರೆಂಟಿಸ್ ನೇಮಕಾತಿ 2025 : 1,010 ಹುದ್ದೆಗಳಿಗೆ ಜುಲೈ 12 ರಿಂದ ಅರ್ಜಿ ಸಲ್ಲಿಕ್ಕೆ ಆರಂಭ.!
ಈ ಮಹಿಳೆ ಅನೇಕ ಪ್ರಭಾವಿಗಳನ್ನು ಮತ್ತು ಬೌದ್ಧ ಸನ್ಯಾಸಿ (ಭಿಕ್ಷು) ಗಳನ್ನು ಪಟಾಯಿಸಿ (relationship ಇಟ್ಟುಕೊಂಡು) ಅವರ ಜೊತೆಗೆ ಹಾಸಿಗೆ ಹಂಚಿಕೊಂಡಿದ್ದಾಳೆ. ಆಗ ಆ ಪ್ರಣಯದ ದೃಶ್ಯಗಳನ್ನು ಗುಟ್ಟಾಗಿ ಫೋಟೋ ತಗೆಯಿಸಿಕೊಂಡು ನಂತರ ಅವರನ್ನು ಬ್ಲ್ಯಾಕ್ ಮೇಲ್ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದಳು.
ಜು. 17ರಂದು ಆಕೆಯ ಮನೆಯ ಮೇಲೆ ಪೊಲೀಸರು ರೈಡ್ ಮಾಡಿದ್ದಾಗ ಈ ಪ್ರಕರಣ ಬೆಳಕಿಗೆ ಬಂದಿದ್ದು, ಸದ್ಯ ಈ ಸುಂದರಿ ಪೊಲೀಸರ ಅತಿಥಿಯಾಗಿದ್ದಾಳೆ.
ಮನೆಯಲ್ಲಿ ಆಕೆಯೊಂದಿಗೆ ಸಂಬಂಧ (relationship) ಇಟ್ಟುಕೊಂಡವರ ಸುಮಾರು 80 ಸಾವಿರಕ್ಕೂ ಹೆಚ್ಚು ಫೋಟೋ (ವಿಡಿಯೋ) ಗಳು ಮತ್ತು 100 ಕೋಟಿ ರೂ. ಮೌಲ್ಯದ ಕರೆನ್ಸಿ ಇಟ್ಟುಕೊಂಡ ಮಹಿಳೆಯ ಹೆಸರು ವಿಲಾವನ್ ಎಮ್ಸಾವಟ್ (30) ಎಂದು ಗುರುತಿಸಲಾಗಿದೆ.
ಇದನ್ನು ಓದಿ : Tiger : ಬೋನಿನಿಂದ ನದಿಗೆ ಹಾರಿದ ಹುಲಿ ; ಭಾವುಕ ವಿಡಿಯೋ ವೈರಲ್.!
ರಾಯಲ್ ಥಾಯ್ ಪೊಲೀಸ್‌ಗಳ ಕೇಂದ್ರ ತನಿಖಾ ವಿಭಾಗದ ಮಾಹಿತಿ ಪ್ರಕಾರ, ಈ ಪ್ರಕರಣದಲ್ಲಿ ಒಂಬತ್ತು ಹಿರಿಯ ಭಿಕ್ಷುಗಳು ಮತ್ತು ಆಬಾಟ್‌ಗಳು ಸಂನ್ಯಾಸ ಸ್ಥಾನದಿಂದ ವಜಾಗೊಳಿಸಲ್ಪಟ್ಟಿದ್ದಾರೆ.
ಯಾರು ಈ ವಿಲಾವನ್ ಎಮ್ಸಾವತ್ :
30 ವಯಸ್ಸಿನ ವಿಲಾವನ್ ಎಮ್ಸಾವತ್, ಥಾಯ್ಲೆಂಡ್‌ನ ನಾಂತಾಬುರಿಯಲ್ಲಿ ಐಷಾರಾಮಿ ಮನೆಯಲ್ಲಿ ವಾಸವಾಗಿದ್ದು, ಪೊಲೀಸರು ಆಕೆಯನ್ನು “ಮಿಸ್ ಗಾಲ್ಫ್” ಎಂಬ ನಾಮದಿಂದ ಗುರುತಿಸಿದ್ದಾರೆ. ಆಕೆಯ ವಿರುದ್ಧ ವಂಚನೆ, ಹಣದ ಅಕ್ರಮ ವರ್ಗಾವಣೆ ಮತ್ತು ಕಳ್ಳತನದ ವಸ್ತುಗಳ ಸಂಬಂಧಿಸಿದ ಆರೋಪಗಳು ಹೊರಡಿಸಲಾಗಿವೆ.
ಆಕೆ ಕನಿಷ್ಠ ಒಂಬತ್ತು ಭಿಕ್ಷುಗಳೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಯ ಮೊಬೈಲ್‌ಗಳಲ್ಲಿ ದೊರೆತ ಸಂದೇಶಗಳು ಮತ್ತು ಫೋಟೋಗಳು ಈ ಸಂಬಂಧವನ್ನು ದೃಢಪಡಿಸುತ್ತವೆ. ಆಕೆಯು ಬ್ಲ್ಯಾಕ್ ಮೇಲ್ ಮೂಲಕ ಸಂಗ್ರಹಿಸಿದ ಹಣವನ್ನು ಅನಧಿಕೃತ ಆನ್‌ಲೈನ್ ಜೂಜಾಟಗಳಲ್ಲಿ ಬಳಸಿದ್ದಳೆಂಬ ಮಾಹಿತಿ ಬಹಿರಂಗವಾಗಿದೆ.
ಇದನ್ನು ಓದಿ : Bloating : ನಿತ್ಯವೂ ಗ್ಯಾಸ್ಟ್ರಿಕ್ ಕಾಡುತ್ತಿದೆಯಾ? ನೀವು ಸೇವಿಸುತ್ತಿರುವ ಈ ಆಹಾರಗಳೇ ಕಾರಣವಾಗಬಹುದು!
100 ಕೋಟಿ ರೂ. ಮೌಲ್ಯದ ಹಗರಣ :
ಪೊಲೀಸ್ ಮೂಲಗಳ ಪ್ರಕಾರ, ವಿಲಾವನ್ ಕಳೆದ ಮೂರು ವರ್ಷಗಳಲ್ಲಿ ಸುಮಾರು 385 ಮಿಲಿಯನ್ ಥಾಯ್ ಬಾಟ್ (ಅಂದಾಜು ರೂ.102 ಕೋಟಿ) ಗಳಿಸಿದ್ದಾಳೆ. ಮಹಿಳೆ ಕೇವಲ 3 ವರ್ಷದಲ್ಲಿ ಇಷ್ಟೊಂದು ಗಳಿಸಬೇಕಾದರೆ ಅವಳು ಎಷ್ಟೊಂದು ಶ್ರಮ ಹಾಕಿರಬಹುದೆಂದು ಅಂದಾಜಿಸಬಹುದು. ಇನ್ನು ಆಕೆಯ ನಿವಾಸದಲ್ಲಿ 80,000ಕ್ಕೂ ಅಧಿಕ ಚಿತ್ರಗಳು ಮತ್ತು ವಿಡಿಯೋಗಳು ಪತ್ತೆಯಾಗಿದ್ದು, ಇವು ಭಿಕ್ಷುಗಳೊಂದಿಗೆ ಆಕೆಯ ನಿಕಟತೆಯನ್ನು ತೋರಿಸುತ್ತವೆ.
ಭಿಕ್ಷುಗಳೊಂದಿಗೆ ಸಂಬಂಧ (relationship) ಸಾರ್ವಜನಿಕ ಆಕ್ರೋಶ :
ಈ ಪ್ರಕರಣವು (Allegations of relationship with monks) ಬಹಿರಂಗವಾದಾಗಿನಿಂದಲೇ ಥಾಯ್ಲೆಂಡ್‌ನಾದ್ಯಂತ ಭಾರೀ ವಿರೋಧ ವ್ಯಕ್ತವಾಗಿದೆ. ಬೌದ್ಧ ಸಂಪ್ರದಾಯದಲ್ಲಿ ಬ್ರಹ್ಮಚರ್ಯ, ಶಾಂತಿ, ಮತ್ತು ಶುದ್ಧ ಜೀವನವಿಧಾನದ ಮೇಲೆ ಭಾರೀ ಗೌರವವಿದೆ. ಇಂತಹ ಜೀವನವಿಧಾನವನ್ನು ಅನುಸರಬೇಕಾದ ಭಿಕ್ಷುಗಳೇ ತಮ್ಮ ಧರ್ಮದ ತತ್ವಗಳನ್ನು ಗಾಳಿಗೆ ತೂರಿದ ಹಿನ್ನಲೆಯಲ್ಲಿ ಜನತೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Tiger : ಬೋನಿನಿಂದ ನದಿಗೆ ಹಾರಿದ ಹುಲಿ ; ಭಾವುಕ ವಿಡಿಯೋ ವೈರಲ್.!
ಜನಸ್ಪಂದನ ನ್ಯೂಸ್, ಡೆಸ್ಕ್ : ರಕ್ಷಿಸಿದ ಹುಲಿ (Tiger) ಯೊಂದನ್ನು ಅರಣ್ಯ ಇಲಾಖೆ ಬೋನಿನಿಂದ ಪುನಃ ಕಾಡಿಗೆ ಬಿಟ್ಟಿರುವ ಭಾವುಕ ಕ್ಷಣದ ವಿಡಿಯೋ ಇದೀಗ ಇಂಟರ್ನೆಟ್‌ನಲ್ಲಿ ಭಾರೀ ಗಮನ ಸೆಳೆಯುತ್ತಿದೆ.
ಪಶ್ಚಿಮ ಬಂಗಾಳದ ಸುಂದರ್ಬನ್ಸ್‌ನ ಮ್ಯಾಂಗ್ರೋವ್ ಕಾಡುಗಳಿಂದ ಆಗಮಿಸಿದ ಹುಲಿ (Tiger) ಯೊಂದನ್ನು ಕೇವಲ ರಕ್ಷಿಸಲ್ಪಡದೆ ಮತ್ತೆ ತನ್ನ ನೈಸರ್ಗಿಕ ವಾತಾವರಣಕ್ಕೆ ಹಿಂತಿರುಗಿದ ಮತ್ತು ಹೃದಯವಿದ್ರಾವಕ ಕ್ಷಣದ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ಏನೆಿದೆ?
ಬೋನಿನಲ್ಲಿದ್ದ ಹುಲಿ (Tiger) ಯನ್ನು ದೋಣಿಯ ಮೂಲಕ ಕಾಡಿನ ನದಿಗೆ ತರಲಾವುದರಿಂದ ವಿಡಿಯೋ ಪ್ರರಂಭವಾಗುತ್ತದೆ. ನಂತರ ಅರಣ್ಯ ಇಲಾಖೆ ಸಿಬ್ಬಂದಿ ಪಂಜರ (ಬೋನಿನ) ದ ಬಾಗಿಲು ತೆಗೆಯುತ್ತಾರೆಯಷ್ಟೆ.
ಇದನ್ನು ಓದಿ : Bloating : ನಿತ್ಯವೂ ಗ್ಯಾಸ್ಟ್ರಿಕ್ ಕಾಡುತ್ತಿದೆಯಾ? ನೀವು ಸೇವಿಸುತ್ತಿರುವ ಈ ಆಹಾರಗಳೇ ಕಾರಣವಾಗಬಹುದು!
ಅದು ಕ್ಷಣಕ್ಕೆ ಕಾಯುತ್ತಿದ್ದ ಹುಲಿ (Tiger) ಒಮ್ಮಲೇ ನದಿಗೆ ಹಾರಿ, ಅದ್ಭುತ ಈಜುವ ಕಲೆಯೊಂದಿಗೆ ನೇರವಾಗಿ ಕಾಡಿನ ದಿಕ್ಕಿನಲ್ಲಿ ನಿರ್ಭಯವಾಗಿ ಸಾಗುತ್ತದೆ. ನದಿಯಲ್ಲಿ ಈಜುತ್ತ ಹುಲಿ (Tiger) ತನ್ನ ಸ್ವಸ್ಥಾನಕ್ಕೆ ಖುಷಿಯಿಂದ ಮರಳುತ್ತಿರುವ ದೃಶ್ಯವು ನೋಡುಗರಿಗೆ ಭಾವನಾತ್ಮಕ ಅನುಭವವಾಗುತ್ತದೆ.
ಈ ಅಪೂರ್ವ ದೃಶ್ಯವನ್ನು ನಿವೃತ್ತ ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ʼXʼ (ಹಿಂದಿನ ಟ್ವಿಟ್ಟರ್) ನಲ್ಲಿ ಹಂಚಿಕೊಂಡಿದ್ದು, “ಇದು ಕೇವಲ ಬಿಡುಗಡೆ ಅಲ್ಲ, ಪ್ರಕೃತಿಗೆ ಹಿಂತಿರುಗುವ ಮುಕ್ತಜೀವನದ ಕಥೆ” ಎಂದು ಅಭಿಪ್ರಾಯ ಪಟ್ಟಿದ್ದಾರೆ. ಅವರು ಈ ಹುಲಿ ಸುಂದರ್ಬನ್ಸ್‌ನಲ್ಲಿ ಚಿಕಿತ್ಸೆ ನಂತರ ಬಿಡುಗಡೆ ಮಾಡಲಾಗಿದೆ ಎಂಬುದನ್ನೂ ತಿಳಿಸಿದ್ದಾರೆ.
ಸುಂದರ್ಬನ್ಸ್ ಹುಲಿಗಳ ವಿಶೇಷತೆ ಏನು?
ಇಲ್ಲಿನ ಹುಲಿ (Tiger) ಗಳು ಮ್ಯಾಂಗ್ರೋವ್ ಪರಿಸರ ವ್ಯವಸ್ಥೆಗೆ ಹೊಂದಿಕೊಂಡಿವೆ ಮತ್ತು ಅವುಗಳ ರಕ್ಷಣೆ ಮತ್ತು ಬಿಡುಗಡೆಗೆ ಅಳವಡಿಸಿಕೊಂಡ ವಿಧಾನಗಳೂ ಸಹ ಇವೆ. ಅಂತಹ ಕಠಿಣ ಪರಿಸ್ಥಿತಿಗಳಲ್ಲಿ ಕೆಲಸ ಮಾಡುವ ಹಸಿರು ಸೈನಿಕರ ಸಂರಕ್ಷಣೆ ಮತ್ತು ಕಾರ್ಯಗಳ ವಿಶಿಷ್ಟ ಕಥೆ.
ಇದನ್ನು ಓದಿ : Car – bike collision : ಒಂದೇ ಕುಟುಂಬದ 3 ಮಂದಿ ಸೇರಿ 7 ಜನರ ದುರ್ಮರಣ.!
ನೆಟ್ಟಿಗರ ಪ್ರತಿಕ್ರಿಯೆ :
ಈ ವಿಡಿಯೋವನ್ನು ಜುಲೈ 16 ರಂದು ಹಂಚಿಕೊಳ್ಳಲಾಗಿದ್ದು, ಇಲ್ಲಿಯವರೆಗೆ 78.9K Views ಪಡೆದುಕೊಂಡಿದೆ. ಬಳಕೆದಾರರು ಪ್ರತಿಯೊಂದು ದೃಶ್ಯವನ್ನು ಮೆಚ್ಚಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅನೇಕರು “ಮಾನವೀಯತೆ ಮತ್ತು ಪ್ರಕೃತಿಯ ಶ್ರೇಷ್ಠ ಸಂಯೋಜನೆ” ಎಂದು ಕೊಂಡಾಡಿದ್ದಾರೆ.
ಬೋನಿನಿಂದ ನದಿಗೆ ಹಾರಿದ ಹುಲಿ (Tiger) ಯ ವಿಡಿಯೋ :
A tiger being released after it was rescued in Sunderbans, WB.
The tigers here have adapted to the mangrove ecosystem & so have the methods adopted for their rescue & release. A unique story of conservation & the works of green soldiers working in such difficult conditions🙏🙏 pic.twitter.com/8vDE1tr5du
— Susanta Nanda IFS (Retd) (@susantananda3) July 16, 2025