Sunday, July 20, 2025

Janaspandhan News

HomeJobICF ಅಪ್ರೆಂಟಿಸ್ ನೇಮಕಾತಿ 2025 : 1,010 ಹುದ್ದೆಗಳಿಗೆ ಜುಲೈ 12 ರಿಂದ ಅರ್ಜಿ ಸಲ್ಲಿಕ್ಕೆ ಆರಂಭ.!
spot_img
spot_img

ICF ಅಪ್ರೆಂಟಿಸ್ ನೇಮಕಾತಿ 2025 : 1,010 ಹುದ್ದೆಗಳಿಗೆ ಜುಲೈ 12 ರಿಂದ ಅರ್ಜಿ ಸಲ್ಲಿಕ್ಕೆ ಆರಂಭ.!

- Advertisement -

ಜನಸ್ಪಂದನ ನ್ಯೂಸ್‌, ನೌಕರಿ : ಭಾರತೀಯ ರೈಲ್ವೆಯ ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ICF) ಯಲ್ಲಿ 2025ನೇ ಸಾಲಿನ ನೇಮಕಾತಿ ಅಭಿಯಾನ ಆರಂಭಿಸಿದ್ದು, ಇಲ್ಲಿ 1,010 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ (Online) ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ ವೆಬ್‌ಸೈಟ್‌ (Official website) ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳನ್ನು ಇಲ್ಲಿ ಕೊಡಲಾಗಿದೆ.

 ICF ಹುದ್ದೆಗಳ ವಿವರ :
  • ಒಟ್ಟು ಹುದ್ದೆಗಳು : 1,010
  • ಹುದ್ದೆಯ ಹೆಸರು : ಅಪ್ರೆಂಟಿಸ್
  • ಸ್ಥಳ : ಇಂಟಿಗ್ರಲ್ ಕೋಚ್ ಫ್ಯಾಕ್ಟರಿ, ಚೆನ್ನೈ.
ICF
ICF Coach Factory
ಇದನ್ನು ಓದಿ : RRB Recruitment : 6,238 ಹುದ್ದೆಗಳಿಗೆ ಅರ್ಜಿ ಆಹ್ವಾನ ; ಅರ್ಜಿ ಸಲ್ಲಿಸಲು ಜುಲೈ 28 ಕೊನೆಯ ದಿನ.!
ICF ಶೈಕ್ಷಣಿಕ ಅರ್ಹತೆ :
  • ಅನುಭವಿಗಳ (Ex-ITI) ಹುದ್ದೆಗಾಗಿ : 10ನೇ ತರಗತಿ ಪಾಸ್ (Min.50%) ಹಾಗೂ ಐಟಿಐ ಪ್ರಮಾಣಪತ್ರ (National/State Certificate).
  • Non-ITI ಅಭ್ಯರ್ಥಿಗಳಿಗೆ : 10ನೇ ತರಗತಿ ಪಾಸ್.
ICF ವಯೋಮಿತಿ‌ :

Ex-ITI ಅಭ್ಯರ್ಥಿಗಳು,

  • ಕನಿಷ್ಠ 15 ವರ್ಷ ಮತ್ತು
  • ಕನಿಷ್ಠ 24 ವರ್ಷ.

Non-ITI ಅಭ್ಯರ್ಥಿಗಳು : (ದಿನಾಂಕ: 30/06/2025 ಅನುಸಾರ)

  • ಕನಿಷ್ಠ 15 ವರ್ಷ ಮತ್ತು
  • ಕನಿಷ್ಠ 22 ವರ್ಷ.
ಇದನ್ನು ಓದಿ : IB ACIO II ನೇಮಕಾತಿ 2025 : 3,717 ಹುದ್ದೆಗಳಿಗೆ ಅರ್ಜಿ ಆಹ್ವಾನ.!
ವಯೋಮಿತಿ ಸಡಿಲಿಕೆ :
  • SC/ST ಅಭ್ಯರ್ಥಿಗಳು : 5 ವರ್ಷ ಸಡಿಲಿಕೆ.
  • OBC ಅಭ್ಯರ್ಥಿಗಳು : 3 ವರ್ಷ ಸಡಿಲಿಕೆ.
  • PwD ಅಭ್ಯರ್ಥಿಗಳು : ಸರ್ಕಾರದ ನಿಯಮಾನುಸಾರ ಸಡಿಲಿಕೆ.
ICF ಅರ್ಜಿ ಶುಲ್ಕ :
  • ಸಾಮಾನ್ಯ/ಒಬಿಸಿ ಅಭ್ಯರ್ಥಿಗಳು : ರೂ. 100/-
  • SC/ST/PWD/ಮಹಿಳಾ ಅಭ್ಯರ್ಥಿಗಳು : ಶುಲ್ಕವಿಲ್ಲ
  • ಪಾವತಿ ವಿಧಾನ : Online ಮೂಲಕ ಮಾತ್ರ.
ICF ಆಯ್ಕೆ ಪ್ರಕ್ರಿಯೆ :
  • ಅಭ್ಯರ್ಥಿಗಳ ಆಯ್ಕೆ: 10ನೇ ತರಗತಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ತಯಾರಾಗುವ ಮೆರಿಟ್ ಲಿಸ್ಟ್ ಆಧಾರದ ಮೇಲೆ ನಡೆಯಲಿದೆ.
  • ಯಾವುದೇ ಲಿಖಿತ ಪರೀಕ್ಷೆ ಅಥವಾ ಸಂದರ್ಶನವಿಲ್ಲ.
ಸ್ಟೈಫಂಡ್ ವಿವರ :
  • 10ನೇ ತರಗತಿ ಪಾಸಾದವರು (Non-ITI) : ರೂ.6,000/- (ಪ್ರತಿ ತಿಂಗಳು)
  • PUC ಅಥವಾ ITI ಪಾಸಾದವರು : ರೂ.7,000/- (ಪ್ರತಿ ತಿಂಗಳು)
ಅರ್ಜಿ ಸಲ್ಲಿಸಲು ಅಧಿಕೃತ ಲಿಂಕ್ :

👉 https://pb.icf.gov.in

ಮುಖ್ಯ ದಿನಾಂಕಗಳು :
  • ಅರ್ಜಿ ಪ್ರಾರಂಭ ದಿನಾಂಕ : ಜುಲೈ 12, 2025.
  • ಅರ್ಜಿ ಕೊನೆಯ ದಿನಾಂಕ : ಆಗಸ್ಟ್ 11, 2025.

Note : ಈ ಅವಕಾಶವು ICF ನ ಕಾರ್ಖಾನೆಯಲ್ಲಿ ತರಬೇತಿ ಪಡೆಯಲು ಬಯಸುವ ಯುವಕರಿಗೆ ಉತ್ತಮ ಅವಕಾಶವಾಗಿದೆ. ಸರ್ಕಾರಿ ತಾಣದಲ್ಲಿ ಹೆಚ್ಚಿನ ಮಾಹಿತಿ ಪರಿಶೀಲಿಸಿ ಅರ್ಜಿ ಸಲ್ಲಿಸಿ.

Disclaimer : This article is based on reports and information available on the internet. Janaspandhan News is not affiliated with it and is not responsible for it.


Tiger : ಬೋನಿನಿಂದ ನದಿಗೆ ಹಾರಿದ ಹುಲಿ ; ಭಾವುಕ ವಿಡಿಯೋ ವೈರಲ್‌.!

Tiger

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ರಕ್ಷಿಸಿದ ಹುಲಿ (Tiger) ಯೊಂದನ್ನು ಅರಣ್ಯ ಇಲಾಖೆ ಬೋನಿನಿಂದ ಪುನಃ ಕಾಡಿಗೆ ಬಿಟ್ಟಿರುವ ಭಾವುಕ ಕ್ಷಣದ ವಿಡಿಯೋ ಇದೀಗ ಇಂಟರ್ನೆಟ್‌ನಲ್ಲಿ ಭಾರೀ ಗಮನ ಸೆಳೆಯುತ್ತಿದೆ.

ಪಶ್ಚಿಮ ಬಂಗಾಳದ ಸುಂದರ್ಬನ್ಸ್‌ನ ಮ್ಯಾಂಗ್ರೋವ್ ಕಾಡುಗಳಿಂದ ಆಗಮಿಸಿದ ಹುಲಿ (Tiger) ಯೊಂದನ್ನು ಕೇವಲ ರಕ್ಷಿಸಲ್ಪಡದೆ ಮತ್ತೆ ತನ್ನ ನೈಸರ್ಗಿಕ ವಾತಾವರಣಕ್ಕೆ ಹಿಂತಿರುಗಿದ ಮತ್ತು ಹೃದಯವಿದ್ರಾವಕ ಕ್ಷಣದ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.

ವಿಡಿಯೋದಲ್ಲಿ ಏನೆಿದೆ?

ಬೋನಿನಲ್ಲಿದ್ದ ಹುಲಿ (Tiger) ಯನ್ನು ದೋಣಿಯ ಮೂಲಕ ಕಾಡಿನ ನದಿಗೆ ತರಲಾವುದರಿಂದ ವಿಡಿಯೋ ಪ್ರರಂಭವಾಗುತ್ತದೆ. ನಂತರ ಅರಣ್ಯ ಇಲಾಖೆ ಸಿಬ್ಬಂದಿ ಪಂಜರ (ಬೋನಿನ) ದ ಬಾಗಿಲು ತೆಗೆಯುತ್ತಾರೆಯಷ್ಟೆ.

ಇದನ್ನು ಓದಿ : ಮಾಲ್‌ನಲ್ಲಿ Fire disaster : ಮಹಿಳೆಯರು, ಮಕ್ಕಳು ಸೇರಿ 50ಕ್ಕೂ ಹೆಚ್ಚು ಮಂದಿ ಸಾವು.!

ಅದು ಕ್ಷಣಕ್ಕೆ ಕಾಯುತ್ತಿದ್ದ ಹುಲಿ (Tiger) ಒಮ್ಮಲೇ ನದಿಗೆ ಹಾರಿ, ಅದ್ಭುತ ಈಜುವ ಕಲೆಯೊಂದಿಗೆ ನೇರವಾಗಿ ಕಾಡಿನ ದಿಕ್ಕಿನಲ್ಲಿ ನಿರ್ಭಯವಾಗಿ ಸಾಗುತ್ತದೆ. ನದಿಯಲ್ಲಿ ಈಜುತ್ತ ಹುಲಿ (Tiger) ತನ್ನ ಸ್ವಸ್ಥಾನಕ್ಕೆ ಖುಷಿಯಿಂದ ಮರಳುತ್ತಿರುವ ದೃಶ್ಯವು ನೋಡುಗರಿಗೆ ಭಾವನಾತ್ಮಕ ಅನುಭವವಾಗುತ್ತದೆ.

ಈ ಅಪೂರ್ವ ದೃಶ್ಯವನ್ನು ನಿವೃತ್ತ ಐಎಫ್‌ಎಸ್ ಅಧಿಕಾರಿ ಸುಶಾಂತ್ ನಂದಾ ʼXʼ (ಹಿಂದಿನ ಟ್ವಿಟ್ಟರ್) ನಲ್ಲಿ ಹಂಚಿಕೊಂಡಿದ್ದು, “ಇದು ಕೇವಲ ಬಿಡುಗಡೆ ಅಲ್ಲ, ಪ್ರಕೃತಿಗೆ ಹಿಂತಿರುಗುವ ಮುಕ್ತಜೀವನದ ಕಥೆ” ಎಂದು ಅಭಿಪ್ರಾಯ ಪಟ್ಟಿದ್ದಾರೆ. ಅವರು ಈ ಹುಲಿ ಸುಂದರ್ಬನ್ಸ್‌ನಲ್ಲಿ ಚಿಕಿತ್ಸೆ ನಂತರ ಬಿಡುಗಡೆ ಮಾಡಲಾಗಿದೆ ಎಂಬುದನ್ನೂ ತಿಳಿಸಿದ್ದಾರೆ.

ಸುಂದರ್ಬನ್ಸ್‌ ಹುಲಿಗಳ ವಿಶೇಷತೆ ಏನು?

ಇಲ್ಲಿನ ಹುಲಿ (Tiger) ಗಳು ಮ್ಯಾಂಗ್ರೋವ್ ಪರಿಸರ ವ್ಯವಸ್ಥೆಗೆ ಹೊಂದಿಕೊಂಡಿವೆ ಮತ್ತು ಅವುಗಳ ರಕ್ಷಣೆ ಮತ್ತು ಬಿಡುಗಡೆಗೆ ಅಳವಡಿಸಿಕೊಂಡ ವಿಧಾನಗಳೂ ಸಹ ಇವೆ. ಅಂತಹ ಕಠಿಣ ಪರಿಸ್ಥಿತಿಗಳಲ್ಲಿ ಕೆಲಸ ಮಾಡುವ ಹಸಿರು ಸೈನಿಕರ ಸಂರಕ್ಷಣೆ ಮತ್ತು ಕಾರ್ಯಗಳ ವಿಶಿಷ್ಟ ಕಥೆ.

ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 18 ರ ದ್ವಾದಶ ರಾಶಿಗಳ ಫಲಾಫಲ.!
ನೆಟ್ಟಿಗರ ಪ್ರತಿಕ್ರಿಯೆ :

ಈ ವಿಡಿಯೋವನ್ನು ಜುಲೈ 16 ರಂದು ಹಂಚಿಕೊಳ್ಳಲಾಗಿದ್ದು, ಇಲ್ಲಿಯವರೆಗೆ 78.9K Views ಪಡೆದುಕೊಂಡಿದೆ. ಬಳಕೆದಾರರು ಪ್ರತಿಯೊಂದು ದೃಶ್ಯವನ್ನು ಮೆಚ್ಚಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅನೇಕರು “ಮಾನವೀಯತೆ ಮತ್ತು ಪ್ರಕೃತಿಯ ಶ್ರೇಷ್ಠ ಸಂಯೋಜನೆ” ಎಂದು ಕೊಂಡಾಡಿದ್ದಾರೆ.

ಬೋನಿನಿಂದ ನದಿಗೆ ಹಾರಿದ ಹುಲಿ (Tiger) ಯ ವಿಡಿಯೋ :

- Advertisement -
spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments