Sunday, July 20, 2025

Janaspandhan News

HomeHealth & FitnessHome remedies : "ನೈಸರ್ಗಿಕವಾಗಿ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಮನೆಮದ್ದುಗಳಿವು.!"
spot_img
spot_img

Home remedies : “ನೈಸರ್ಗಿಕವಾಗಿ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವ ಮನೆಮದ್ದುಗಳಿವು.!”

- Advertisement -

ಜನಸ್ಪಂದನ ನ್ಯೂಸ್‌, ಆರೋಗ್ಯ : ಕೊಲೆಸ್ಟ್ರಾಲ್ (Cholesterol) ಮಟ್ಟ ಹೆಚ್ಚಾದರೆ ತುಂಬಾ ಅಪಾಯಕಾರಿ, ಈ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಇಲ್ಲಿವೆ ಕೆಲ ಮನೆಮದ್ದು (Home remedies) ಗಳು.

ಹೃದಯ ಸಂಬಂಧಿ ಕಾಯಿಲೆಗಳು, ಸ್ಟ್ರೋಕ್ ಹಾಗೂ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವ ಕೊಲೆಸ್ಟ್ರಾಲ್ (Cholesterol) ಅಂದರೆ ಕೆಟ್ಟ ಕೊಬ್ಬಿನ ಪ್ರಮಾಣ ಜಾಸ್ತಿಯಾದರೆ ದೇಹಕ್ಕೆ ತುಂಬಾ ಅಪಾಯಕಾರಿ. ಕೆಲವು ಸಂದರ್ಭಗಳಲ್ಲಿ ಈ ಸಮಸ್ಯೆಗೆ ಔಷಧೋಪಚಾರ ಅನಿವಾರ್ಯವಾದರೂ, ಸರಳ ಮತ್ತು ಆರೋಗ್ಯಕರ ಜೀವನಶೈಲಿ ಬದಲಾವಣೆಯ (Home remedies) ಮೂಲಕ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸಬಹುದಾಗಿದೆ.

ಇದನ್ನು ಓದಿ : Private video threat : ಪೋಲೀಸ್ ಕಾನ್ಸ್‌ಟೇಬಲ್ ಮತ್ತು ಮಹಿಳೆಯ ಪತಿ ಬಂಧನ.!

ನಿಮ್ಮ ಬ್ಲಡ್ ಟೆಸ್ಟ್‌ನಲ್ಲಿ ಕೊಲೆಸ್ಟ್ರಾಲ್ (Cholesterol) ಮಟ್ಟ ಹೆಚ್ಚಾಗಿರುವುದು ಕಂಡುಬಂದರೆ ಆತಂಕಪಡುವ ಅಗತ್ಯವಿಲ್ಲ. ಆದರೆ, ಒಂದು ವೇಳೆ ಸಕಾಲದಲ್ಲಿ ಗಮನಹರಿಸದೇ ಬಿಟ್ಟರೆ ಇದು ಹೃದಯಾಘಾತ ಅಥವಾ ಸ್ಟ್ರೋಕ್‌ಗೆ ದಾರಿ ಮಾಡಿಕೊಡಬಹುದು. ಈಗ ಮನೆಮದ್ದು (Home remedies) ಗಳ ಬಗ್ಗೆ ತಿಳಿಯೋಣ.

ಈ ಆಹಾರ ಪದ್ಧತಿಗಳು (Home remedies) ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುತ್ತವೆ :
  • ಹೆಚ್ಚು ಕೊಬ್ಬು ಇರುವ ಆಹಾರಗಳಿಂದ ದೂರಿರಿ : ರೆಡ್ ಮೀಟ್, ಸಂಪೂರ್ಣ ಹಾಲು, ಚೀಸ್, ಮೊಸರು, ತೆಂಗಿನ ಎಣ್ಣೆ, ಪಾಮ್ ಆಯಿಲ್ ಇವುಗಳಲ್ಲಿ ಸ್ಯಾಚುರೇಟೆಡ್ ಮತ್ತು ಟ್ರಾನ್ಸ್ ಫ್ಯಾಟ್ ಹೆಚ್ಚು ಇರುತ್ತದೆ. ಇವುಗಳ ಸೇವನೆಯನ್ನು ನಿಯಂತ್ರಿಸಿ.
  • ಬೇಕರಿ ತಿನಿಸುಗಳನ್ನು ತಗ್ಗಿಸಿ : ಕೇಕ್, ಫ್ರೆಂಚ್ ಫ್ರೈಸ್, ಬಿಸ್ಕತ್ತುಗಳಲ್ಲಿ ಟ್ರಾನ್ಸ್ ಕೊಬ್ಬುಗಳು ಇರುತ್ತವೆ. ನಿಯಂತ್ರಿತ ಸೇವನೆಯೇ ಆರೋಗ್ಯಕ್ಕೆ ಲಾಭದಾಯಕ.
  • ಸೊಲ್ಯುಬಲ್ ಫೈಬರ್ ಆಹಾರ ಸೇವನೆ : ಓಟ್ಸ್, ಬೀನ್ಸ್, ಬೇಳೆ, ಸೇಬು, ಕ್ಯಾರೆಟ್, ಸಿಹಿಗೆಣಸು, ಅವಕಾಡೋ, ಬೀಜಗಳು ಇತ್ಯಾದಿಗಳನ್ನು ದಿನಚರಿಯಲ್ಲಿ ಸೇರಿಸಿ. ಇವು ದೇಹದಲ್ಲಿ ಕೊಲೆಸ್ಟ್ರಾಲ್ ಹೀರಿಕೊಳ್ಳುವುದನ್ನು ತಡೆಯುತ್ತವೆ.
ಇದನ್ನು ಓದಿ : Stray dogs : ಕಾಲೇಜು ಯುವತಿಯ ಮೇಲೆ ಬೀದಿ ನಾಯಿಗಳ ಅಟ್ಟಹಾಸ.!
ವ್ಯಾಯಾಮದ ಮಾಡಿ :

ಪ್ರತಿ ವಾರ ಕನಿಷ್ಠ 150 ನಿಮಿಷಗಳ ಏರೋಬಿಕ್ ವ್ಯಾಯಾಮ ಮಾಡುವ ಗುರಿ ಇಟ್ಟುಕೊಳ್ಳಿ. ಬಿರುಸು ನಡಿಗೆ, ಈಜು, ಸೈಕ್ಲಿಂಗ್, ಜಾಗಿಂಗ್‌ನಂತಹ ವ್ಯಾಯಾಮಗಳು ಕೆಟ್ಟ ಕೊಬ್ಬು ಕರಗಿಸಿ ತೂಕವನ್ನು ಸಹ ತಗ್ಗಿಸುತ್ತವೆ.

ಆಲ್ಕೋಹಾಲ್ ಸೇವನೆ ತಪ್ಪಿಸಿ :

2024ರಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ಆಲ್ಕೋಹಾಲ್ ಸೇವನೆ ಕಡಿಮೆ ಮಾಡಿದವರಿಗೆ ಹೃದಯರೋಗದ ಅಪಾಯ ಶೇಕಡಾ 23ರಷ್ಟು ಇಳಿದಿದೆ. ಆದ್ದರಿಂದ, ಮದ್ಯಪಾನವನ್ನ ಸಂಪೂರ್ಣವಾಗಿ ತ್ಯಜಿಸುವುದು ಆರೋಗ್ಯಕರ ಆಯ್ಕೆಯಾಗಿದೆ.

ಬೆಳ್ಳುಳ್ಳಿ ಸೇವನೆ :

ಬೆಳ್ಳುಳ್ಳಿಯಲ್ಲಿ ಇರುವ ನೈಸರ್ಗಿಕ ಸಂಯುಕ್ತಗಳು LDL ಕೊಲೆಸ್ಟ್ರಾಲ್‌ (Cholesterol) ನ್ನು ಕಡಿಮೆ ಮಾಡಲು ನೆರವಾಗುತ್ತವೆ. ದಿನಕ್ಕೆ ಒಂದು ಅಥವಾ ಎರಡು ಬೆಳ್ಳುಳ್ಳಿ ಹವನಗಳನ್ನು ಆಹಾರದಲ್ಲಿ ಬಳಸುವುದು ಉತ್ತಮ.

ಹೀಗೆ ಕೆಲ ಸರಳ ಪದ್ದತಿ (Home remedies) ಯಿಂದ ನಮ್ಮ ದೇಹದಲ್ಲಿ ಹೆಚ್ಚಾಗಿರುವ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಬಹುದು.

ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 17 ರ ದ್ವಾದಶ ರಾಶಿಗಳ ಫಲಾಫಲ.!
ಸಂಪಾದಕೀಯ :

ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಯಾವಾಗಲೂ ಮಾತ್ರೆಗಳ ಅವಲಂಬನೆಯ ಅಗತ್ಯವಿಲ್ಲ. ಸರಿಯಾದ ಆಹಾರ ಪದ್ಧತಿ, ವ್ಯಾಯಾಮ, ನಶಾ ಪದಾರ್ಥಗಳಿಂದ ದೂರವಿರುವುದು ಮತ್ತು ನೈಸರ್ಗಿಕ ಮನೆಮದ್ದುಗಳ (Home remedies) ಸಹಾಯದಿಂದ ದೀರ್ಘಕಾಲಿಕ ಫಲಿತಾಂಶಗಳನ್ನು ಪಡೆಯಬಹುದು.

ಆರೋಗ್ಯದಲ್ಲಿ ತೊಂದರೆ ಹೆಚ್ಚು ಆಗುತ್ತಿರುವುದು ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸುವುದು ಅತ್ಯಅಗತ್ಯ.


Stray dogs : ಕಾಲೇಜು ಯುವತಿಯ ಮೇಲೆ ಬೀದಿ ನಾಯಿಗಳ ಅಟ್ಟಹಾಸ.!

Stray dogs

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಕಾಲೇಜು ಯುವತಿಯ ಮೇಲೆ ಬೀದಿ ನಾಯಿಗಳು (Stray dogs) ಅಟ್ಟಹಾಸ ಮೆರೆದಿರುವ ಘಟನೆಯೊಂದು ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ. ಪರೀಕ್ಷೆಗಾಗಿ ಬೆಳಗ್ಗೆ ಕಾಲೇಜಿಗೆ ಹೋಗುತ್ತಿದ್ದ ವೇಳೆ ಯುವತಿ (ವಿದ್ಯಾರ್ಥಿನಿ) ಯೊಬ್ಬಳ ಮೇಲೆ ನಾಲ್ಕೈದು ಬೀದಿ ನಾಯಿಗಳ ಗುಂಪು ದಾಳಿ ನಡೆಸಿವೆ.

ಬೀದಿ ನಾಯಿಗಳ (Stray dogs) ದಾಳಿಯಿಂದ ಯುವತಿಗೆ ಗಾಯಗಳಾಗಿದ್ದು, ಸ್ಥಳೀಯ ನಿವಾಸಿಗಳ ಸಹಾಯದಿಂದ ಯುವತಿಯನ್ನು ಸಮೀಪದ ಆಸ್ಪತ್ರೆಗೆ ಕಯೆದೊಯ್ಯಲಾಗಿದೆ.

ಇದನ್ನು ಓದಿ : ಮದುವೆಯ ಮೊದಲ ದಿನದಂದೇ ತಲೆತಿರುಗುವಿಕೆ ಎಂದ ಪತ್ನಿ ; Pregnancy kit ಕೊಟ್ಟ ಪತಿ.!

ಭಯಾನಕ ಘಟನೆಯ ಸಂಪೂರ್ಣ ದೃಶ್ಯ CCTV ಯಲ್ಲಿ ಸೆರೆಯಾಗಿದ್ದು, ಸದ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡುತ್ತಿದೆ.

ಘಟನೆಯ ಹಿನ್ನಲೆ :

ಕಾಲೇಜು ಯುವತಿಯೋರ್ವಳು ಪರೀಕ್ಷೆಗೆ ತೆರಳಲ್ಲೆಂದು ಬೆಳಗ್ಗೆ ರಸ್ತೆ ಮಧ್ಯೆ ಸಾಗುತ್ತಿದ್ದಾಗ, ಒಮ್ಮೇಲೆ ನಾಲ್ಕೈದು ಬೀದಿ ನಾಯಿಗಳ (Stray dogs) ಗುಂಪು ದಾಳಿ ನಡೆಸಿವೆ. ಬೀದಿ ನಾಯಿಗಳ ಗುಂಪುನಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಒಂದು ಮನೆಯ ಹತ್ತಿರ ತೆರಳಿ ಹೇಗೋ ಪಾರಾಗಿದ್ದಾಳೆ.

ಕೆಲ ಸಮಯದ ನಂತರ ಅವೇ ನಾಲ್ಕೈದು ಬೀದಿ ನಾಯಿಗಳ (Stray dogs) ಗುಂಪು ಪುನಃ ಯುವತಿಯ ಮೇಲೆ ದಾಳಿಗೆ ಮುಂದಾಗಿವೆ. ಸುದೈವಶಾತ್‌ ಇದೇ ವೇಳೆ ಅದೆ ರಸ್ತೆಯಲ್ಲಿ ಇನ್ನೋಬ್ಬ ಯುವತಿ (ವಿದ್ಯಾರ್ಥಿನಿಯ ಸ್ನೇಹಿತೆ) ಬರುತ್ತಿರಬೇಕಾದರೆ ನಾಲ್ಕೈದು ಬೀದಿ ನಾಯಿಗಳ (Stray dogs) ಗುಂಪು ದಾಳಿ ಮಾಡಲು ಮುಂದಾಗಿರುವುದನ್ನು ಗಮನಿಸಿದ್ದಾಳೆ.

ಇದನ್ನು ಓದಿ : NIMHANS ಬೆಂಗಳೂರು : ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಅರ್ಜಿ ಆಹ್ವಾನ.!

ಈ ವೇಳೆ ಸ್ನೇಹಿತೆ ಧೈರ್ಯದಿಂದ ಆಕೆಯ ನೆರವಿಗೆ ಧಾವಿಸಿ, ಕೈಯಲ್ಲಿ ಕಲ್ಲು ಹಿಡಿಯುತ್ತಲೇ ಬೀದಿ ನಾಯಿಗಳು ಅಲ್ಲಿಂದ ಓಡಿ ಹೋಗಿವೆ. ಸ್ನೇಹಿತೆಯ ಸಮಯಪ್ರಜ್ಷೆಯಿಂದ ಯುವತಿ ಬೀದಿ ನಾಯಿ (Stray dogs) ಗಳಿಂದ ಪಾರಾಗಿದಾಳೆ.

ಗಂಭೀರ ಗಾಯ, ತಕ್ಷಣ ಆಸ್ಪತ್ರೆಗೆ ಕೊಂಡೊಯ್ಯಲಾಯಿತು :

ನಾಯಿಗಳ ಹಲ್ಲೆಯಿಂದ ಯುವತಿಗೆ ದೇಹದ ವಿವಿಧ ಭಾಗಗಳಲ್ಲಿ ಗಾಯಗಳಾಗಿದ್ದು, ಸ್ಥಳೀಯರು ತಕ್ಷಣ ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಗಾಯಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನು ಓದಿ : Private video threat : ಪೋಲೀಸ್ ಕಾನ್ಸ್‌ಟೇಬಲ್ ಮತ್ತು ಮಹಿಳೆಯ ಪತಿ ಬಂಧನ.!
ವೈರಲ್ ವಿಡಿಯೋ: ಆತಂಕ ಮೂಡಿಸಿದ ದೃಶ್ಯ :

ಜುಲೈ 15ರಂದು @Incognito_qfs ಎಂಬ ಫ್ಲಾಟ್‌ಪಾರಂನಲ್ಲಿ ಈ ವಿಡಿಯೋ ಶೇರ್ ಮಾಡಲಾಗಿದ್ದು, 7.8 ಮಿಲಿಯನ್‌ವೇಳೆ ವೀಕ್ಷಣೆ ಪಡೆದಿದೆ. ವಿಡಿಯೋದಲ್ಲಿ, ತನ್ನ ಪಾಡಿಗೆ ನಡೆಯುತ್ತಿದ್ದ ಯುವತಿಯ ಮೇಲೆ ಬೀದಿ ನಾಯಿಗಳ ಗುಂಪು ದಾಳಿ ಮಾಡುವ ದೃಶ್ಯ ಸ್ಪಷ್ಟವಾಗಿ ಕಾಣಿಸುತ್ತಿದ್ದು, ದಾಳಿ ವೇಳೆ ಯುವತಿ ಕೆಳಗೆ ಬಿದ್ದು ನಾಯಿಗಳನ್ನು ಓಡಿಸಲು ಪಯತ್ನಿಸುತ್ತಿರುವುದು ನೋಡಬಹುದು.

ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರ ಪ್ರತಿಕ್ರಿಯೆ :

ಈ ವಿಡಿಯೋ ಕುರಿತು ನೆಟ್ಟಿಗರು ತೀವ್ರ ಆತಂಕ ವ್ಯಕ್ತಪಡಿಸಿದ್ದು, “ಈ ಸ್ಥಳದಲ್ಲಿ ಮಕ್ಕಳಿದ್ದರೆ ಅವರ ಪ್ರಾಣಕ್ಕೂ ಅಪಾಯವಾಗಬಹುದಿತ್ತು” ಎಂದು ಒಬ್ಬ ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ.

Note : ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾಜಿಕ ಮಾಧ್ಯಮದಲ್ಲಿ ಪ್ರಸ್ತುತವಿರುವ ವಿಡಿಯೋ/ಪೋಸ್ಟ್‌ನ್ನು ಆಧರಿಸಿದೆ. ಈ ಬಗ್ಗೆ ಜನಸ್ಪಂದನ ನ್ಯೂಸ್‌ ಯಾವುದೇ ರೀತಿಯ ಹಕ್ಕು ಮತ್ತು ಸತ್ಯಾಸತ್ಯತೆಯನ್ನು ದೃಢೀಕರಿಸುವುದಿಲ್ಲ.

ಬೀದಿ ನಾಯಿಗಳ (Stray dogs) ದಾಳಿಯ ವಿಡಿಯೋ :

https://x.com/i/status/1945043277796815117

- Advertisement -
spot_img
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments