ಜನಸ್ಪಂದನ ನ್ಯೂಸ್, ಡೆಸ್ಕ್ : ಹೋಟೆಲ್ ಒಂದರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿರುವ ಸ್ಪಷ್ಟ ಮಾಹಿತಿ ಪಡೆದ ಪೊಲೀಸರು ದಾಳಿ ಮಾಡಿ ಓರ್ವನನ್ನು ಬಂಧಿಸಿ, ನಟಿ – ಮಾಡೆಲ್ಗಳು (Actress – Models) ಸೇರಿ ನಾಲ್ವರ ರಕ್ಷಣೆ ಮಾಡಲಾದ ಘಟನೆ ನಡೆದಿದೆ.
ವೇಶ್ಯಾವಾಟಿಕೆ ದಂಧೆ (Prostitution racket) ನಡೆಯುತ್ತಿದ್ದ ಸುಳಿವು ಪಡೆದ ಪೊಲೀಸರು ಹೊಟೇಲ್ ಒಂದರ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ವೇಳೆಯಲ್ಲಿ ಹೋಟೆಲ್ (Hotel) ಕೊಠಡಿಗಳಿಂದ ಎಂಟು ಮೊಬೈಲ್ ಫೋನ್ಗಳು ಮತ್ತು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದನ್ನು ಓದಿ : ಸುಮ್ಮನೆ ನಿಂತಿದ್ದ ಯುವಕನನ್ನು ಗುಂಡಿ* ಕೊಂ* ದು*ರ್ಮಿಗಳ ಗ್ಯಾಂಗ್ ; Video ವೈರಲ್.!
ಪೊಲೀಸರು ನಕಲಿ ಗ್ರಾಹಕನನ್ನು ಬಳಸಿಕೊಂಡು ಮುಂಬೈ ನಗರದ ಪೊವೈ (Powai) ಪ್ರದೇಶದ ಹೋಟೆಲ್ ಒಂದರ ಮೇಲೆ ದಾಳಿ ಮಾಡಿರುವ ಮುಂಬೈ ಪೊಲೀಸರು (Mumbai Police) ವೇಶ್ಯಾವಾಟಿಕೆ ಜಾಲವನ್ನು ಭೇದಿಸಿದ್ದು, ನಟಿ ಸೇರಿ ನಾಲ್ವರನ್ನು ರಕ್ಷಿಸಿದ್ದಾರೆ.
ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ 60 ವರ್ಷದ ಶ್ಯಾಮ್ ಸುಂದರ್ ಅರೋರಾ ಎಂಬ ಆರೋಪಿಯನ್ನು ಬಂಧಿಸಿ ನಾಲ್ವರು ಮಹಿಳೆ (Four women) ಯರನ್ನು ರಕ್ಷಿಸಿದ್ದಾರೆ. ಅರೋರಾ ಚಾರ್ಕೋಪ್ ಪ್ರದೇಶದ ಮತ್ತೊಬ್ಬ ವ್ಯಕ್ತಿ ತನ್ನೊಂದಿಗೆ ಈ ದಂಧೆಯಲ್ಲಿ ಭಾಗಿಯಾಗಿದ್ದಾನೆ ಎಂದು ಆರೋಪಿ ಅರೋರಾ ತಿಳಿಸಿದ್ದು, ಆತನನ್ನು ಪೊಲೀಸರು ಹುಡುಕುತ್ತಿದ್ದಾರೆ.
ಇದನ್ನು ಓದಿ : ಕಾನ್ಸ್ಟೇಬಲ್ನಿಂದ ಮಹಿಳಾ PSI ಮೇಲೆ ಅತ್ಯಾಚಾರ, ಬ್ಲ್ಯಾಕ್ಮೇಲ್.?
ಪೊಲೀಸರ ಪ್ರಕಾರ, ಅರೋರಾ ಅವರನ್ನು ಬಂಧಿಸಿದ ನಂತರ 26 ರಿಂದ 35 ವರ್ಷ (26-35 Aged) ವಯಸ್ಸಿನ ನಾಲ್ವರು ಮಹಿಳೆಯರನ್ನು ರಕ್ಷಿಸಿದ್ದಾರೆ. ದಾಳಿಯ ಸಮಯದಲ್ಲಿ ಪೊಲೀಸರು ಹೋಟೆಲ್ ಕೊಠಡಿಗಳಿಂದ ಎಂಟು ಮೊಬೈಲ್ ಫೋನ್ಗಳು ಮತ್ತು ಹಣವನ್ನು ವಶಪಡಿಸಿಕೊಂಡಿದ್ದಾರೆ.
ಇನ್ನು ರಕ್ಷಿಸಲ್ಪಟ್ಟ ನಾಲ್ವರು ಸಂತ್ರಸ್ತೆಯರಲ್ಲಿ ಒಬ್ಬರು ಹಿಂದಿ ಧಾರಾವಾಹಿ (Hindi serial) ಯಲ್ಲಿ ಕೆಲಸ ಮಾಡಿದ್ದರೆ, ಉಳಿದವರು ಮಾಡೆಲ್ (Model) ಗಳಾಗಿ ಕೆಲಸ ಮಾಡುತ್ತಾರೆ ಎಂದುಹೇಳಲಾಗುತ್ತಿದೆ.
ಇದನ್ನು ಓದಿ : ರಸ್ತೆಯಲ್ಲಿ ರೀಲ್ಸ್ ಮಾಡಲು ಮುಂದಾದ ಹುಡುಗಿಯರು : ನಾಯಿಗಳ Entry ; ಮುಂದೆನಾಯ್ತು ವಿಡಿಯೋ ನೋಡಿ.!
ಭಾರತೀಯ ನ್ಯಾಯ ಸಂಹಿತಾ ಬಿಎನ್ಎಸ್ನ ಸೆಕ್ಷನ್ 143(2) ಮತ್ತು ಅನೈತಿಕ ಸಂಚಾರ (ತಡೆಗಟ್ಟುವಿಕೆ) ಕಾಯ್ದೆ, 1956 (ಐಟಿಪಿಎ) ಯ ಸೆಕ್ಷನ್ 4 ಮತ್ತು 5 ರ ಅಡಿಯಲ್ಲಿ ಅರೋರಾ ಅವರನ್ನು ಬಂಧಿಸಲಾಗಿದ್ದು ತನಿಖೆ ಪ್ರಗತಿಯಲ್ಲಿದೆ ಎಂದು ಪೊವೈ ಪೊಲೀಸ್ನ ಹಿರಿಯ ಇನ್ಸ್ಪೆಕ್ಟರ್ ಹೇಳಿದ್ದಾರೆ.
ಹಿಂದಿನ ಸುದ್ದಿ : ಕಾನ್ಸ್ಟೇಬಲ್ನಿಂದ ಮಹಿಳಾ PSI ಮೇಲೆ ಅತ್ಯಾಚಾರ, ಬ್ಲ್ಯಾಕ್ಮೇಲ್.?
ಜನಸ್ಪಂದನ ನ್ಯೂಸ್, ಡೆಸ್ಕ್ : ಕಾನ್ಸ್ಟೇಬಲ್ ಓರ್ವ ತನ್ನ ಮೇಲೆ ಅತ್ಯಾಚಾರವೆಸಗಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದಾರೆ ಎಂದು ಮಹಿಳಾ ಪೊಲೀಸ್ ಸಬ್-ಇನ್ಸ್ಪೆಕ್ಟರ್ (PSI) ಒಬ್ಬರು ಆರೋಪಿಸಿದ್ದಾರೆ.
ಈ ಬಗ್ಗೆ ಸಂತ್ರಸ್ತೆ ಪಿಎಸ್ಐ ಪಟೇಲ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ತಮ್ಮದೇ ಇಲಾಖೆಯ ಆರೋಪಿ ಕಾನ್ಸ್ಟೇಬಲ್ (Constable) ವಿರುದ್ಧ ಗಂಭೀರ ಆರೋಪಗಳಡಿಯಲ್ಲಿ ಪ್ರಕರಣ ದಾಖಲಾಗಿದ ಘಟನೆ ಉತ್ತರಖಂಡದ ಡೆಹ್ರಾಡೂನ್ನಲ್ಲಿ ನಡೆದಿದೆ.
ಇದನ್ನು ಓದಿ : ರಸ್ತೆಯಲ್ಲಿ ರೀಲ್ಸ್ ಮಾಡಲು ಮುಂದಾದ ಹುಡುಗಿಯರು : ನಾಯಿಗಳ Entry ; ಮುಂದೆನಾಯ್ತು ವಿಡಿಯೋ ನೋಡಿ.!
ಇದೀಗ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಪೊಲೀಸ್ ಕಾನ್ಸ್ಟೇಬಲ್ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ. ಶೀಘ್ರದಲ್ಲೇ ದೂರುದಾರ ಮಹಿಳಾ ಸಬ್ ಇನ್ಸ್ಪೆಕ್ಟರ್ ಹೇಳಿಕೆಯನ್ನೂ ಮ್ಯಾಜಿಸ್ಟ್ರೇಟ್ (Magistrate) ಮುಂದೆ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳಾ ಸಬ್ ಇನ್ಸ್ಪೆಕ್ಟರ್ ಕೆಲವು ಸಮಯದ ಹಿಂದೆ ಗುಡ್ಡಗಾಡು ಜಿಲ್ಲೆಯಲ್ಲಿ ಕೆಲಸ ಮಾಡಿ ಇದೀಗ ವೈಯಕ್ತಿಕ ಸಮಸ್ಯೆಗಳ ಹಿನ್ನೆಲೆಯಲ್ಲಿ ಉತ್ತರಖಂಡದ ಡೆಹ್ರಾಡೂನ್ನ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು.
ಇದನ್ನು ಓದಿ : Relationship : ಕಟ್ಟಿಕೊಂಡವಳನ್ನು ಬಿಟ್ಟು ಇಟ್ಟುಕೊಂಡವಳ ಹಿಂದೆ ಬಿದ್ದವ ಏನಾದ ಗೊತ್ತಾ.?
ಕಛೇರಿಗೆ ಬರುವುದು ತಡವಾದ ಹಿನ್ನೆಲೆಯಲ್ಲಿ
ಅಧಿಕಾರಿಗಳು ವಿವರಣೆ ಕೇಳಿದ್ದರು. ಹೀಗಾಗಿ ಮನೆ ಮತ್ತು ಕರ್ತವ್ಯ ಸ್ಥಳ (Service Place) ದೂರವಿದ್ದರಿಂದ ಕಛೇರಿಗೆ ಸರಿಯಾದ ಸಮಯಕ್ಕೆ ಹಾಜರಾಗುವ ದೃಷ್ಟಿಯಿಂದ ಹೋಟೆಲ್ನಲ್ಲಿ ತಂಗಲು ನಿರ್ಧರಿಸಿದ್ದೆ. ಅದಕ್ಕಾಗಿ ನನ್ನ ಸಹೋದ್ಯೋಗಿ ಕಾನ್ಸ್ಟೇಬಲ್ಗೆ ನನಗಾಗಿ ಕೊಠಡಿ ಕಾಯ್ದಿರಿಸುವಂತೆ ಕೇಳಿಕೊಂಡೆ ಎಂದು ಸಂತ್ರಸ್ತೆ ಹೇಳಿದ್ದಾರೆ.
ಅದರಂತೆ ಆರೋಪಿ ಕಾನ್ಸ್ಟೇಬಲ್ ಹೋಟೆಲ್ನಲ್ಲಿ ನನಗಾಗಿ ಕೊಠಡಿ ಕಾಯ್ದಿರಿಸಿದ್ದಾಗಿ ಹೇಳಿದ್ದ. ನನ್ನ ಕರ್ತವ್ಯ ಮುಗಿದ ನಂತರ ಆರೋಪಿ ನನ್ನನ್ನು ಕೊಠಡಿಗೆ ಕರೆದೊಯ್ದ. ಆತ ಕೊಠಡಿ (Room) ನೋಡುವ ನೆಪದಲ್ಲಿ ನನ್ನ ಕೋಣೆಗೆ ಬಂದಿದ್ದ.
ಇದನ್ನು ಓದಿ : SSLC ಪಾಸಾದವರಿಂದ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಈ ವೇಳೆ ಆರೋಪಿ ನನ್ನೊಂದಿಗೆ ಅನುಚಿತವಾಗಿ ವರ್ತಿಸಿದಲ್ಲದೆ ಅತ್ಯಾಚಾರವೆಸಗಿ (rape) ವಿಡಿಯೋ ಮಾಡಿದಾ. ನಂತರ ಯಾರಿಗಾದರೂ ಏನಾದರೂ ಹೇಳಿದರೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ಸಂತ್ರಸ್ತೆ ತಾನು ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
ಘಟನೆಯ ನಂತರ ನಾನು ತುಂಬಾ ಭಯಭೀತಳಾಗಿದ್ದೆ. ಏಳು ದಿನಗಳ ರಜೆ ತೆಗೆದುಕೊಂಡು ಮನೆಗೆ ಹೋಗಬೇಕು ಎಂದುಕೊಂಡಿದ್ದೆ. ಆದರೆ ಭಯದಿಂದಾಗಿ ಮನೆಗೆ ಹೋಗಲು ಸಾಧ್ಯವಾಗಲಿಲ್ಲ.
ಇದನ್ನು ಓದಿ : ಬೈಕ್ ಸವಾರನಿಗೆ ಗುದ್ದುವ ಬದಲು ಮಹಿಳೆಗೆ ಗುದ್ದಿದ ಕಾರು ; ಎದೆ ಝಲ್ ಎನ್ನುವ Video ವೈರಲ್.!
ಆರೋಪಿ ಕಾನ್ಸ್ಟೇಬಲ್ ವಿಡಿಯೋವನ್ನು ಉಲ್ಲೇಖಿಸಿ ಸಂತ್ರಸ್ತೆಯನ್ನು ಬ್ಲ್ಯಾಕ್ಮೇಲ್ (Blackmail) ಮಾಡಿದ್ದಾನೆ. ಇದು ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಲು ಕಾರಣವಾಗಿದ್ದು, ಇದೀಗ ಮಹಿಳಾ ಸಬ್ ಇನ್ಸ್ಪೆಕ್ಟರ್ ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ.