ಜನಸ್ಪಂದನ ನ್ಯೂಸ್, ಡೆಸ್ಕ್ : ಅಪಾರ್ಟ್‌ಮೆಂಟ್‌ವೊಂದರಲ್ಲಿ ನಟಿ ಹುಮೈರಾ (Humaira) ಅಸ್ಗರ್ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ವಯಕ್ತಿಕ ಕಾರಣ : Councilor ಪತ್ನಿಯನ್ನೇ ಕೊಚ್ಚಿ ಕೊಂದ ಪತಿ.!
ಜನಸ್ಪಂದನ ನ್ಯೂಸ್, ಡೆಸ್ಕ್ : ವಿಸಿಕೆ ಮಹಿಳಾ ಕೌನ್ಸಿಲರ್ (Councilor) ಓರ್ವರನ್ನು ಅವರ ಪತಿಯೇ ಕೊಚ್ಚಿ ಕೊಂದಿರುವ ಆಘಾತಕಾರಿ ಘಟನೆಯೊಂದು ತಮಿಳುನಾಡಿನ ಅವಡಿ ಜಿಲ್ಲೆಯಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.
ಪತಿಯಿಂದ ಹತ್ಯೆಗೊಳಗಾದ ವಿಸಿಕೆ ಮಹಿಳಾ ಕೌನ್ಸಿಲರ್ (Councilor) ಗೋಮತಿ ಎಂದು ಗುರುತಿಸಲಾಗಿದ್ದು, ಕೌನ್ಸಿಲರ್ (Councilor) ಗೋಮತಿ ಹತ್ಯೆಯ ಆರೋಪಿತ ಪತಿ ಸ್ಟೀಫನ್ ರಾಜ್ ಎಂದು ತಿಳಿದು ಬಂದಿದೆ. ಸ್ಟೀಫನ್ ರಾಜ್ ಚೆನ್ನೈ ಬಳಿಯ ತಿರುನಿರುವೂರು ಪ್ರದೇಶದವರಾಗಿದ್ದು, ಅವರು ವಿಸಿಕೆ ತಿರುನಿರುವೂರು ನಗರ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದರು.
ಹತ್ಯೆಯದ ಅವರ ಪತ್ನಿ ಗೋಮತಿ ವಿಸಿಕೆ ಕೌನ್ಸಿಲರ್ (Councilor) ಮತ್ತು ತಿರುನಿರುವೂರು ಪುರಸಭೆಯ ತೆರಿಗೆ ವಿಧಿಸುವ ಅಧ್ಯಕ್ಷರಾಗಿದ್ದಾರೆ. ಸ್ಟೀಫನ್ ರಾಜ್ ಮತ್ತು ಗೋಮತಿ 10 ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿದ್ದರೆಂದು ಮತ್ತು ಈಗ ಅವರಿಗೆ 4 ಗಂಡು ಮಕ್ಕಳಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನು ಓದಿ : Food : ಈ ಆಹಾರ ಪದಾರ್ಥಗಳನ್ನು ಅತಿಯಾಗಿ ತಿನ್ನಲೇಬೇಡಿ.!
ಕೌನ್ಸಿಲರ್ (Councilor) ಗೋಮತಿ ಹಾಗೂ ಅವರ ಪತಿ ಸ್ಟೀಫನ್ ರಾಜ್ ನಡುವೆ ವಯಕ್ತಿಕ ಕಾರಣದಿಂದ ಜಗಳ ಪ್ರಾರಂಭವಾಗಿದೆ. ಈ ವೇಳೆ ಇಬ್ಬರ ನಡುವೆ ತೀವ್ರ ವಾಗ್ಗಾದ ನಡೆದಿದ್ದು, ಸಿಟ್ಟಿನ ಭರದಲ್ಲಿ ಕೌನ್ಸಿಲರ್ ಗೋಮತಿ ಮೇಲೆ ಅವರ ಪತಿ ಚಾಕುವಿನಿಂದ ಸರಣಿ ಹಲ್ಲೆ ನಡೆಸಿದ್ದಾರೆ.
ರಸ್ತೆ ಮಧ್ಯದಲ್ಲಿ ನಡೆದ ದಾಳಿಯಲ್ಲಿ ಕೌನ್ಸಿಲರ್ (Councilor) ಗೋಮತಿ ಅವರ ತಲೆ, ಮುಖ ಮತ್ತು ಕುತ್ತಿಗೆ ಸೇರಿದಂತೆ ವಿವಿಧ ಸ್ಥಳಗಳಲ್ಲಿ ತೀವ್ರ ಗಾಯಗಳಾಗಿದ್ದು, ಗೋಮತಿ ರಕ್ತದ ಮಡುವಿನಲ್ಲಿ ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನಾ ನಂತರ ಸ್ಟೀಫನ್ ರಾಜ್ ಹತ್ತಿರದ ತಿರುನಿನ್ರವೂರ್ ಪೊಲೀಸ್ ಠಾಣೆಗೆ ಹೋಗಿ ಶರಣಾದರು. ಘಟನಾ ಸ್ಥಳಕ್ಕೆ ಹೋದ ಪೊಲೀಸರು Councilor ಗೋಮತಿ ಅವರ ಶವವನ್ನು ಶವಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಿದರು. ಈ ಮಧ್ಯೆ, ಸ್ಟೀಫನ್ ಅವರನ್ನು ಬಂಧಿಸಿದ ಪೊಲೀಸರು ಕೊಲೆಯ ಬಗ್ಗೆ ತೀವ್ರ ತನಿಖೆ ನಡೆಸುತ್ತಿದ್ದಾರೆ. (ಏಜೇನ್ಸಿಸ್)