Wednesday, September 17, 2025

Janaspandhan News

HomeHealth & Fitnessಮಹಿಳೆಯರಲ್ಲಿ ಹೆಚ್ಚುತ್ತಿರುವ heart attack ಪ್ರಕರಣಗಳು : ತಕ್ಷಣ ಗಮನ ಕೊಡುವ ಅಗತ್ಯ!
spot_img
spot_img
spot_img

ಮಹಿಳೆಯರಲ್ಲಿ ಹೆಚ್ಚುತ್ತಿರುವ heart attack ಪ್ರಕರಣಗಳು : ತಕ್ಷಣ ಗಮನ ಕೊಡುವ ಅಗತ್ಯ!

- Advertisement -

ಜನಸ್ಪಂದನ ನ್ಯೂಸ್‌, ಆರೋಗ್ಯ : ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಮಹಿಳೆಯರಲ್ಲಿ ಹೃದಯ (heart attack) ಸಂಬಂಧಿತ ಕಾಯಿಲೆಗಳ ಸಂಖ್ಯೆ ಆತಂಕಕಾರಿ ಮಟ್ಟದಲ್ಲಿ ಏರಿಕೆಯಾಗುತ್ತಿದೆ. ಅಮೇರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿಯ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಭಾರತೀಯ ಮಹಿಳೆಯರಲ್ಲಿ 3% ರಿಂದ 13% ರಷ್ಟು ಜನರು ತಮ್ಮ ವಯಸ್ಸಿಗೆ ಅನುಗುಣವಾಗಿ ಪರಿಧಮನಿಯ ಕಾಯಿಲೆಯಿಂದ ಬಳಲುತ್ತಿದ್ದಾರೆ.

20 ವರ್ಷಗಳಲ್ಲಿ 300% ಏರಿಕೆ.!

ಅದಕ್ಕಿಂತಲೂ ಭಯಾನಕ ಸಂಗತಿಯೆಂದರೆ, ಕಳೆದ ಎರಡು ದಶಕಗಳಲ್ಲಿ ಹೃದಯ (heart attack) ಸಂಬಂಧಿತ ಕಾಯಿಲೆಗಳ ಪ್ರಮಾಣ ಸುಮಾರು 300% ರಷ್ಟು ಏರಿಕೆಯಾಗಿದೆ. ಇದು ಆರೋಗ್ಯತಜ್ಞರ ಮತ್ತು ಮಹಿಳೆಯರ ದೈನಂದಿನ ಜೀವನದ ಮೇಲೆ ಭಾರೀ ಪರಿಣಾಮ ಬೀರುತ್ತಿದೆ.

ಮಹಿಳೆಯರಲ್ಲಿನ ಲಕ್ಷಣಗಳು ವಿಭಿನ್ನ :

ಹೃದಯಾಘಾತದ ಲಕ್ಷಣಗಳು ಪುರುಷರು ಅನುಭವಿಸುವ ಲಕ್ಷಣಗಳಿಗೆ ಹೋಲಿಸಿದರೆ ಮಹಿಳೆಯರಲ್ಲಿ ಸಂಪೂರ್ಣವಾಗಿ ವಿಭಿನ್ನವಾಗಿರುತ್ತವೆ. ಪುರುಷರು ಸಾಮಾನ್ಯವಾಗಿ ತೀವ್ರ ಎದೆ ನೋವಿಗೆ ತುತ್ತಾಗುವರೆ, ಮಹಿಳೆಯರು ಹೃದಯಾಘಾತ (heart attack) ದ ವೇಳೆ ಬೆನ್ನು ನೋವು, ದವಡೆ ನೋವು, ಹೊಟ್ಟೆಯಲ್ಲಿ ಅಸ್ವಸ್ಥತೆ, ಉಸಿರಾಟದ ತೊಂದರೆ, ತಲೆ ತಿರುಗುವುದು, ವಾಕರಿಕೆ ಮತ್ತು ಆಯಾಸ ಅನುಭವಿಸುತ್ತಾರೆ.

ಇದನ್ನು ಓದಿ : Fake SI : 2 ವರ್ಷಗಳಿಂದ ಅಸಲಿ ಪೊಲೀಸರನ್ನೇ ಯಾಮಾರಿಸಿದ್ದ ನಕಲಿ SI.!

ಬಹುತೇಕ ಮಹಿಳೆಯರು ಈ ಲಕ್ಷಣಗಳನ್ನು ಗಂಭೀರವಾಗಿ ಪರಿಗಣಿಸದೇ, ದೈನಂದಿನ ಒತ್ತಡ ಅಥವಾ ದೌರ್ಬಲ್ಯ ಎಂಬ ದೃಷ್ಠಿಯಿಂದ ನಿರ್ಲಕ್ಷಿಸುತ್ತಾರೆ. ಇದರ ಪರಿಣಾಮವಾಗಿ, ಅವರಿಗೆ ಸಮಯಕ್ಕೆ ಸರಿಯಾದ ಚಿಕಿತ್ಸೆ ಸಿಗದ ಸ್ಥಿತಿಯು ನಿರ್ಮಾಣವಾಗುತ್ತಿದೆ.

ಋತುಬಂಧ, ಗರ್ಭಾವಸ್ಥೆ ಮತ್ತು ಪಿಸಿಓಎಸ್ ನ ಭೂಮಿಕಾ :

ಮಹಿಳೆಯರಿಗೆ ಋತುಬಂಧ ತಲುಪಿದ ನಂತರ ದೇಹದ ಹಾರ್ಮೋನು ಸಮತೋಲನದಲ್ಲಿ ಬದಲಾವಣೆ ಆಗುತ್ತದೆ. ಇದು ಹೃದಯ ಸಂಬಂಧಿತ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಗರ್ಭಾವಸ್ಥೆಯಲ್ಲಿ ರಕ್ತದೊತ್ತಡ ಅಥವಾ ಮಧುಮೇಹ ಸಮಸ್ಯೆ ಬಂದಿದ್ದರೆ, ಭವಿಷ್ಯದಲ್ಲಿ ಹೃದಯಾಘಾತ (heart attack) ದ ಸಾಧ್ಯತೆ ಹೆಚ್ಚಾಗುತ್ತದೆ. ಅದರಂತೆ, ಪಿಸಿಓಎಸ್ (PCOS)‌ನಿಂದ ಬಳಲುತ್ತಿರುವ ಮಹಿಳೆಯರು ಕೂಡ ಹೃದಯಸಂಬಂಧಿ ಸಮಸ್ಯೆಗಳ ಅಪಾಯದಲ್ಲಿದ್ದಾರೆ.

ನಿತ್ಯದ ಜೀವನದಲ್ಲಿ ಏನು ಮಾಡಬೇಕು.?

ಮಹಿಳೆಯರು ತಮ್ಮ ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಮುಂದಿನಂತೆ ಎಚ್ಚರಿಕೆ ವಹಿಸಬೇಕು:

  • ಆರೋಗ್ಯಕರ ಆಹಾರ : ಸಿಹಿ ಹಾಗೂ ಉಪ್ಪು ಹೆಚ್ಚಿನ ಆಹಾರ ಸೇವನೆಯನ್ನು ತಗ್ಗಿಸಿ, ಸಮತೋಲಿತ ಆಹಾರ ಸೇವನೆ ಮಾಡಬೇಕು.
  • ವ್ಯಾಯಾಮ : ದಿನನಿತ್ಯ ಸ್ವಲ್ಪ ಸಮಯ ನಡಿಗೆ ಅಥವಾ ಯೋಗ ಮಾಡುವುದು ಬಹುಪಯುಕ್ತ.
  • ಆರೋಗ್ಯ ತಪಾಸಣೆ : 40-50ರ ವಯಸ್ಸಿನ ನಂತರ ನಿಯಮಿತವಾಗಿ ರಕ್ತದೊತ್ತಡ, ಶುಗರ್ ಹಾಗೂ ಕೊಲೆಸ್ಟ್ರಾಲ್ ಮಟ್ಟವನ್ನು ಪರೀಕ್ಷಿಸಿಕೊಳ್ಳಬೇಕು.
  • ಮಾನಸಿಕ ಶಾಂತಿ : ಯೋಗ, ಧ್ಯಾನ ಮತ್ತು ಹವ್ಯಾಸಗಳ ಮೂಲಕ ಒತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅವಶ್ಯಕ.
ಅಂತಿಮ ಮಾತು :

ಹೃದಯಸಂಬಂಧಿ (heart attack) ಕಾಯಿಲೆಗಳು ಇತ್ತೀಚೆಗೆ ಮಹಿಳೆಯರ ಆರೋಗ್ಯಕ್ಕೆ ದೊಡ್ಡ ಸವಾಲಾಗಿ ಪರಿಣಮಿಸುತ್ತಿವೆ. ಆದ್ದರಿಂದ ಎಚ್ಚರಿಕೆಯಿಂದ ಇರುವುದು, ಆರೋಗ್ಯಕರ ಜೀವನಶೈಲಿಯ ಅನುಸರಣೆ ಮತ್ತು ಸಮಯಕ್ಕೆ ತಪಾಸಣೆ ಮೂಲಕ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಜಲಪಾತದ ಬಂಡೆ ಮೇಲೆ Proposing ಮಾಡುತ್ತಿದ್ದ ಯುವಕ ; ಮುಂದೆ.?

Proposing

ಜನಸ್ಪಂದನ ನ್ಯೂಸ್‌, ಡೆಸ್ಕ್‌ : ಪ್ರತಿಯೊಬ್ಬರೂ ತಮ್ಮ ಗೆಳತಿಗೆ ವಿಶೇಷ ರೀತಿಯಲ್ಲಿ ಪ್ರಪೋಸ್ (Proposing) ಮಾಡಲು ಬಯಸುತ್ತಾರೆ. ಇದಕ್ಕಾಗಿ ಹಲವು ಜನರು ವಿಭಿನ್ನ ಸಿದ್ಧತೆಗಳನ್ನು ಮಾಡಿಕೊಂಡು, ಆ ಕ್ಷಣವನ್ನು ಜೀವಮಾನವಿಡೀ ನೆನಪಿಟ್ಟುಕೊಳ್ಳಲು ಪ್ರಯತ್ನಿಸುತ್ತಾರೆ.

ಆದರೆ ಕೆಲವೊಮ್ಮೆ ಈ ಕ್ಷಣಗಳು ದುರ್ಘಟನೆಯ ರೂಪದಲ್ಲಿ ಬದಲಾಗುತ್ತವೆ. ಅದಕ್ಕೆ ಉದಾಹರಣೆ ಎಂಬಂತೆ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಒಂದು ವಿಡಿಯೋ, ನೂರಾರು ಜನರ ಹೃದಯವನ್ನು ಕೆಣಕಿದೆ.

ಇದನ್ನು ಓದಿ : PSI : ಲಾಡ್ಜ್‌ನಲ್ಲಿ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾದ PSI.!

ಈ ವೈರಲ್ ವಿಡಿಯೋದಲ್ಲಿ, ಜಲಪಾತದ ನಡುವೆ ಬಂಡೆಗಳ ಮೇಲೆ ನಿಂತು ಪ್ರೇಮಪ್ರಸ್ತಾವನೆ (Proposing) ಮಾಡಲು ಒಬ್ಬ ಯುವಕ ಯತ್ನಿಸುತ್ತಿದ್ದಾನೆ. ಪ್ರೇಮಪ್ರಸ್ತಾವನೆ (Proposing) ಮಾಡುವ ಈ ವೇಳೆ ಆತ ಅವನ ಗೆಳತಿಗೆ ಮೊಣಕಾಲು ಬಾಗಿ ಪ್ರಪೋಸ್ (Proposing) ಮಾಡಲು ಹೋಗುವಾಗ ಅಕಸ್ಮಾತ್ತಾಗಿ ಕಾಲುಜಾರಿ ಜಲಪಾತಕ್ಕೆ ಬೀಳುತ್ತಾನೆ.

ಜಲಪಾತದಲ್ಲಿ ತೀವ್ರವಾಗಿ ಹರಿಯುತ್ತಿರುವ ನೀರಿನಲ್ಲಿ ಪ್ರಪೋಸ್ (Proposing) ಮಾಡುತ್ತಿದ್ದ ಯುವಕ ಕೊಚ್ಚಿಕೊಂಡು ಹೋಗುತ್ತಾನೆ. ಈ ದೃಶ್ಯಗಳು ಕಣ್ಣೆದುರು ಸಂಭವಿಸಿದರೂ, ಅವನ ಗೆಳತಿ ಏನು ಮಾಡಲು ಸಾಧ್ಯವಾಗದೇ ಮೌನವಾಗಿ ನೋಡುವುದು ಮಾತ್ರ ಸಾಧ್ಯವಾಗುತ್ತದೆ.

ಇದನ್ನು ಓದಿ : Prostitution racket busted : 6 ಮಹಿಳೆಯರ ರಕ್ಷಣೆ, 4 ಆರೋಪಿಗಳ ಬಂಧನ.!

ಈ ವಿಷಾದನಾಯಕ ಘಟನೆಯ ವಿಡಿಯೋವನ್ನು @MarchUnofficial ಎಂಬ “X” ಖಾತೆಯಲ್ಲಿ ಹಂಚಿಕೊಂಡಿದ್ದು, ಇದನ್ನು ಈಗಾಗಲೇ 12.1K ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ನೂರಾರು ಮಂದಿ ತಮ್ಮ ಭಾವನಾತ್ಮಕ ಪ್ರತಿಕ್ರಿಯೆಗಳನ್ನು ಕಾಮೆಂಟ್ ವಿಭಾಗದಲ್ಲಿ ನೀಡಿದ್ದಾರೆ.

ವಿಡಿಯೋ ನೋಡಿದ ಕೆಲವರು “ಹುಡುಗಿ ಏಕೆ ಸಹಾಯ ಮಾಡಲಿಲ್ಲ?” ಎಂದು ಪ್ರಶ್ನಿಸುತ್ತಿದ್ದಾರೆ, ಮತ್ತೊಂದು ಕಡೆ “ಮಳೆಗಾಲದಲ್ಲಿ ಜಲಪಾತದಂತಹ ಅಪಾಯದ ಸ್ಥಳಗಳಿಗೆ ಹೋಗುವುದೇ ತಪ್ಪು” ಎಂಬ ಎಚ್ಚರಿಕೆಯ ಮಾತುಗಳನ್ನೂ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ : Astrology : ಹೇಗಿದೆ ಗೊತ್ತಾ.? ಜುಲೈ 07 ರ ದ್ವಾದಶ ರಾಶಿಗಳ ಫಲಾಫಲ.!

ಹೀಗೆ ಯುವತಿಗೆ ಪ್ರಪೋಸ್ (Proposing) ಮಾಡುವ ಘಟನೆ ನಿಖರವಾಗಿ ಎಲ್ಲಿ, ಯಾವಾಗ ನಡೆದದ್ದು, ಯುವಕನ ಸ್ಥಿತಿ ಹೇಗಿದೆ ಎಂಬ ಮಾಹಿತಿಗಳು ಇನ್ನೂ ಬಹಿರಂಗವಾಗಿಲ್ಲ. ಆದರೆ ಈ ಘಟನೆ ಬಹುಮಾನ್ಯ ಕ್ಷಣವನ್ನು ನೋವಿನ ನೆನಪಾಗಿ ಬದಲಿಸುವುದು ಹೇಗೆ ಎಂಬುದಕ್ಕೆ ಜೀವಂತ ಉದಾಹರಣೆ.

ಪ್ರೇಮಪ್ರಸ್ತಾವನೆ (Proposing) ಮಾಡುತ್ತಿರುವ ವಿಡಿಯೋ :

- Advertisement -
spot_img
spot_img
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments