ಜನಸ್ಪಂದನ ನ್ಯೂಸ್, ಅಥಣಿ : ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅನಂತಪುರ (Anantapur in Athani Taluk) ಗ್ರಾಮದ ಸಮೀಪ ಬೈಕ್‌ಗೆ ಹಿಂಬದಿಯಿಂದ ಕಾರು ಡಿಕ್ಕಿಯಾದ ಪರಿಣಾಮ (A car hit the bike from behind) ತಂದೆ ಹಾಗೂ ಮಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಸಾವಿಗೀಡಾದವರು ಮಹಾರಾಷ್ಟ್ರದ ಜತ್ತ ತಾಲೂಕಿನ ಗ್ರಾಮವೊಂದರ ನಿವಾಸಿಗಳಾದ (Residents of a village in Jatta Taluk, Maharashtra) ರಾಮು ಕರ್ಣಿ (28) ಹಾಗೂ ಮಗಳು ಜಾಹ್ನವಿ ಕರ್ಣಿ (11) ಎಂದು ತಿಳಿದು ಬಂದಿದೆ.
ಇದನ್ನು ಓದಿ : ಯುನೈಟೆಡ್ ಇಂಡಿಯಾ ಇನ್ಶುರೆನ್ಸ್ ಕಂಪನಿ ಲಿಮಿಟೆಡ್‌ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನ.!
ಇನ್ನು ಅಪಘಾತದಲ್ಲಿ ರಾಮು ಪತ್ನಿಗೆ ಗಂಭೀರವಾದ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಅನಂತಪುರ ಗ್ರಾಮದ ಸೋದರ ಸಂಬಂಧಿ ಮದುವೆಗೆ ಇವರು ಬಂದಿದ್ದರು. ಈ ವೇಳೆ ಬೈಕ್‌ನ ಹಿಂಬದಿಗೆ ವೇಗವಾಗಿ ಬಂದ ಕಾರು (The fastest car) ಡಿಕ್ಕಿ ಹೊಡೆದು ಈ ದುರ್ಘಟನೆ ನಡೆದಿದೆ.
ಇದನ್ನು ಓದಿ : ಪೋನ್ ಪೇ ಮೂಲಕ ಲಂಚ ಪಡೆದ ಮಹಿಳಾ ಪೊಲೀಸ್ ಇನ್ಸ್‌ಪೆಕ್ಟರ್ ಲೋಕಾಯುಕ್ತ ಬಲೆಗೆ.!
ಅಪಘಾತದ ಬಳಿಕ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.